ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಆಶೀರ್ವದಿಸಿದ ಮುಗಳಖೋಡ ಜಿಡಗಾ ಮಠಾಧೀಶರು- ಇವರು ಮಾಡಿದ ಮನವಿ ಏನು ಗೊತ್ತಾ?

ಬೆಂಗಳೂರು: ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಮಾಡಿದರು. ಬೆಂಗಳೂರಿನಲ್ಲಿ ವಿಧಾನ ಸಭೆಯಲ್ಲಿ ಸಿಎಂ ಭೇಟಿ ಮಾಡಿದ ಸ್ವಾಮೀಜಿ ಆಶೀರ್ವಾದ ಮಾಡಿದರು. ಇದೇ ಸಂದರ್ಭದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ. ರಾಜೀವ, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್, ಶಾಸಕರಾದ ದೊಡ್ಡಣ್ಣಗೌಡ ಜಿ. ಪಾಟೀಲ, ಸುಭಾಷ […]

ಗುಡ್ಡಾಪುರದಲ್ಲಿ ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಮುಜರಾಯಿ, ಹಜ್ ಮತ್ತು ವಕ್ಪ ಸಚಿವೆ ಶಶಿಕಲಾ ಜೊಲ್ಲೆ ದಾನಮ್ಮದೇವಿಯ ಭಕ್ತರಾಗಿ ಪೂರ್ಣಕುಂಭ ಹೊತ್ತು ಕುಂಭಮೇಳದಲ್ಲಿ ಪಾಲ್ಗೊಂಡು ಗಮನ ಸೆಳೆಸಿದ್ದಾರೆ.   ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಸುಕ್ಷೇತ್ರ ಗುಡ್ಡಾಪುರ ದಾನಮ್ಮ ಉತ್ತರ ಕರ್ನಾಟಕದ ಆರಾಧ್ಯ ದೈವೆ. ಗಡಿದಾಟ ಲಕ್ಷಾಂತರ ಭಕ್ತರು ಗುಡ್ಡಾಪುರಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಗುಡ್ಡಾಪುರದಲ್ಲಿ ರೂ. 5 ಕೋ. ವೆಚ್ಚದಲ್ಲಿ ಕರ್ನಾಟಕ ಭವನ ನಿರ್ನಿಸುತ್ತಿದೆ. ಈ ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭ ನಡೆಯಿತು. […]

ವಿಜಯಪುರ ಜಿಲ್ಲಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಣೆ

ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಸಂತ ಸೇವಾಲಾಲ ಜಯಂತಿಯನ್ನು ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ವಿಜಯಪುರದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಸಂತ ಸೇವಾಲಾಲ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿ, ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ […]

ಬಂಜಾರ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಅಗತ್ಯ ನೆರವು ನೀಡಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಂಜಾರ ಸಮುದಾಯ ಒಗ್ಗಟ್ಟಿನಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಅಗತ್ಯ ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  ಸಂತ ಸೇವಾಲಾಲರ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಸಿಎಂ ಮಾತನಾಡಿದರು. ಸಂತ ಸೇವಾಲಾಲರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಆಶಯ ನಮ್ಮದು.  ಲಂಬಾಣಿ, ಬಂಜಾರ ಸಮುದಾಯಕ್ಕೆ ದೊಡ್ಡ ಪರಂಪರೆ ಇದೆ.  ಅವರದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಸಮಾಜವಾಗಿದೆ.  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ಕೆಲವೇ ಕೆಲವು ಸಮುದಾಯಗಳಲ್ಲಿ […]

ಫೆ. 16 ಬುಧವಾರ ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ ದೇವಸ್ಥಾನದಲ್ಲಿ ಕರ್ನಾಟಕ ಸರಕಾರದಿಂದ ರೂ. 5 ಕೋ. ವೆಚ್ಚದ ಕರ್ನಾಟಕ ಭವನಕ್ಕೆ ಅಡಿಗಲ್ಲು ಸಮಾರಂಭ

ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯ ದೈವ ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮ ದೇವಿ ಆವರಣದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಫೆ. 16 ರಂದು ಬುಧವಾರ ಅಡಿಗಲ್ಲು ಹಾಕಲಿದ್ದಾರೆ.ರೆ.  ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನಲ್ಲಿ ಗುಡ್ಡಾಪುರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಕರ್ನಾಟಕ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.  ಗುಡ್ಡಾಪುರಕ್ಕೆ ಕರ್ನಾಟಕದಿಂದ ಅಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.  ಈಗಾಗಲೇ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಶ್ರೀ ದೇವಾಲಯದ […]

ಹರಿಹರ ಪೀಠವೇ ಪಂಚಮಸಾಲಿಗಳಿಗೆ ಮೂಲಪೀಠ- ಫೆ. 12, 13 ರಂದು ನೂತನ ಪೀಠದ ಕಾರ್ಯಕ್ರಮದ ಮಾಹಿತಿ ನೀಡಿದ ಶ್ರೀ ಸಂಗನಬಸವ ಶಿವಾಚಾರ್ಯರು

ವಿಜಯಪುರ: ಪಂಚಮಸಾಲಿ ಸಮಾಜಕ್ಕೆ ಹರಿಹರ ಮೂಲ ಪೀಠವಾಗಿದೆ ಹೊರತು ಬೇರೆ ಪೀಠಗಳು ಮೂಲಪೀಠವಲ್ಲ ಎಂದು ವಿಜಯಪುರ ಜಿಲ್ಲೆಯ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಹರಿಹರ ಮೂಲ ಪೀಠವಾಗಿದೆ.  10 ಲಕ್ಷ ಭಕ್ತರ ಸಮ್ಮುಖದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಡಾ. ಮಹಾಂತ ಸ್ವಾಮೀಜಿಗಳನ್ನು ಮೊದಲ ಜಗದ್ಗುರಗಳನ್ನಾಗಿ ಮಾಡಲಾಗಿತ್ತು ಎಂದು ಶ್ರೀ ಅಭಿನವ ಸಂಗನಬಸವ ಮಹಾಸ್ವಾಮೀಜಿ ಅವರು ಯತ್ನಾಳ ಮತ್ತು ಕೂಡಲ ಸಂಗಮ ಪೀಠದ ಶ್ರೀ […]

ಬಸವ ನಾಡಿಗೆ ಭೇಟಿ ನೀಡಿ ಐತಿಹಾಸಿಕ ಗೋಳಗುಮ್ಮಟ ವೀಕ್ಷಿಸಿದ ನಿರ್ಮಲಾನಂದನಾಥ ಸ್ವಾಮೀಜಿ- ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು

ವಿಜಯಪುರ: ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಸವ ನಾಡು ವಿಜಯಪುರಕ್ಕೆ ಭೇಟಿ ನೀಡಿದ್ದು, ಐತಿಹಾಸಿಕ ಗೋಳಗುಮ್ಮಟ ವೀಕ್ಷಿಸಿದ್ದಾರೆ. ಬೆಂಗಳೂರಿನಿಂದ ಕಲಬುರಗಿ ಮಾರ್ಗವಾಗಿ ವಿಜಯಪುರಕ್ಕೆ ಆಗಮಿಸಿದ ಅವರು ಬುಧವಾರ ಸಂಜೆ ಐತಿಹಾಸಿಕ ಗೋಳಗುಮ್ಮಟಕ್ಕೆ ಭೇಟಿ ನೀಡಿ ಪ್ರಾಚೀನ ಸ್ಮಾರಕ ವೀಕ್ಷಿಸಿದರು.  ಈ ಸಂದರ್ಭದಲ್ಲಿ ನಾನಾ ಸ್ವಾಮೀಜಿಗಳೂ ಕೂಡ ಉಪಸ್ಥಿತರಿದ್ದರು. ನಂತರ ವಿಜಯಪುರದ ಖ್ಯಾತ ಉದ್ಯಮಿ ಮತ್ತು ಪ್ರತಿಷ್ಠಿತ ಹೊಟೇಲ್ ಮಧುವನ ಇಂಟರನ್ಯಾಶನಲ್ ಮಾಲಿಕ ಬಾಬುಗೌಡ ಬಿರಾದಾರ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, […]

ನೆರೆದ ಜನರ ಮೈ ನವಿರೇಳಿಸಿದ ಕಿತ್ತೂರು ರಾಣಿ ಚೆನ್ನಮ್ಮಳ ಯಶೋಗಾಥೆ ರೂಪಕ- ಶಾಲೆಯ 120 ವಿದ್ಯಾರ್ಥಿಗಳಿಂದ ಪಾತ್ರಾಭಿನಯ

ವಿಜಯಪುರ: ಕಿತ್ತೂರು ರಾಣಿ ಎಂದರೆ ಸಾಕು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ಮಹಿಳೆ ವೀರ ರಾಣಿ ಎಂದೇ ಎಲ್ಲರೂ ಸ್ಮರಿಸುತ್ತಾರೆ.  ಅಲ್ಲದೇ, ಕಿತ್ತೂರು ಚೆನ್ನಮ್ಮಳನ್ನು ಎಲ್ಲ ಮಹಿಳೆಯರು ಆರಾಧಿಸುವುದು ಉಂಟು.  ಇಂಥ ವೀರ ರಾಣಿ ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಯಶೋಗಾಥೆಯನ್ನು ಗೊತ್ತಿಲ್ಲದವರು ಬಹಳ ಕಡಿಮೆ.  ಪುಸ್ತಕಗಳಲ್ಲಿ ಸಿನೇಮಾಗಳಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಬಲಗೈ ಭಂಟ ಸಂಗೊಳ್ಳಿ ರಾಯಣ್ಣನ ಹೋರಾಟದ ಜೀವನವನ್ನು ನೋಡಿರಬಹುದು. ಆದರೆ, ಅಂದಿನ ಹೋರಾಟದ ರೋಚಕತೆಯನ್ನು ಮಕ್ಕಳು […]

ಅಂಬೇಡ್ಕರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ನಿರ್ಧಾರ ಸಂತಸದಾಯಕ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಅಗಷ್ಟ-15 ಸ್ವಾತಂತ್ರ್ಯ ದಿನ ಹಾಗೂ ನವೆಂಬರ 26 ರ ಸಂವಿಧಾನ ದಿನ ಹಾಗೂ ಜನೇವರಿ-26 ರ ಗಣರಾಜ್ಯೋತ್ಸವ ದಿನಗಳಂದು ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ಹೈಕೋರ್ಟ ನಿರ್ಧಾರ ಸಂತಸ ತಂದಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಕುರಿತು ಪ್ರತ್ರಿಕಾ ಪ್ರಕಟಣೆ ನೀಡಿರುವ ಅವರು, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನ್ಯಾಯ ಒದಗಿಸಿದಂತಾಗಿದೆ.  ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಅವರ […]

ಡಾ. ಮೃತ್ಯುಂಜಯಸ್ವಾಮಿ ರಚಿಸಿರುವ ಎನ್ಸಿಯಂಟ್ ಟು ರಿವರ್ಸ್ ಡಯಾಬಿಟಿಸ್ ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಡಾ. ಮೃತ್ಯುಂಜಯಸ್ವಾಮಿ ಅವರು ರಚಿಸಿರುವ ಎನ್ಸಿಯಂಟ್ ಟು ರಿವರ್ಸ್ ಡಯಾಬಿಟೀಸ್(Ancient to Reverse Diabetes) ಪುಸ್ತಕವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಪುಸ್ತಕದ ಲೇಖಕ ಡಾ, ಮೃತ್ಯುಂಜಯ ಸ್ವಾಮಿ, ಯುವ ಬ್ರಿಗೇಡ್ ಸಂಸ್ಥೆಯ ಚಕ್ರವರ್ತಿ ಸೂಲಿಬೆಲೆ ಮುಂತಾದವರು ಉಪಸ್ಥಿತರಿದ್ದರು.