ಬಸವ ನಾಡಿಗೆ ಭೇಟಿ ನೀಡಿ ಐತಿಹಾಸಿಕ ಗೋಳಗುಮ್ಮಟ ವೀಕ್ಷಿಸಿದ ನಿರ್ಮಲಾನಂದನಾಥ ಸ್ವಾಮೀಜಿ- ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀಗಳು

ವಿಜಯಪುರ: ಶ್ರೀ ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬಸವ ನಾಡು ವಿಜಯಪುರಕ್ಕೆ ಭೇಟಿ ನೀಡಿದ್ದು, ಐತಿಹಾಸಿಕ ಗೋಳಗುಮ್ಮಟ ವೀಕ್ಷಿಸಿದ್ದಾರೆ. ಬೆಂಗಳೂರಿನಿಂದ ಕಲಬುರಗಿ ಮಾರ್ಗವಾಗಿ ವಿಜಯಪುರಕ್ಕೆ ಆಗಮಿಸಿದ ಅವರು ಬುಧವಾರ ಸಂಜೆ ಐತಿಹಾಸಿಕ ಗೋಳಗುಮ್ಮಟಕ್ಕೆ ಭೇಟಿ ನೀಡಿ ಪ್ರಾಚೀನ ಸ್ಮಾರಕ ವೀಕ್ಷಿಸಿದರು.  ಈ ಸಂದರ್ಭದಲ್ಲಿ ನಾನಾ ಸ್ವಾಮೀಜಿಗಳೂ ಕೂಡ ಉಪಸ್ಥಿತರಿದ್ದರು. ನಂತರ ವಿಜಯಪುರದ ಖ್ಯಾತ ಉದ್ಯಮಿ ಮತ್ತು ಪ್ರತಿಷ್ಠಿತ ಹೊಟೇಲ್ ಮಧುವನ ಇಂಟರನ್ಯಾಶನಲ್ ಮಾಲಿಕ ಬಾಬುಗೌಡ ಬಿರಾದಾರ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, […]

ನೆರೆದ ಜನರ ಮೈ ನವಿರೇಳಿಸಿದ ಕಿತ್ತೂರು ರಾಣಿ ಚೆನ್ನಮ್ಮಳ ಯಶೋಗಾಥೆ ರೂಪಕ- ಶಾಲೆಯ 120 ವಿದ್ಯಾರ್ಥಿಗಳಿಂದ ಪಾತ್ರಾಭಿನಯ

ವಿಜಯಪುರ: ಕಿತ್ತೂರು ರಾಣಿ ಎಂದರೆ ಸಾಕು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಧೀರ ಮಹಿಳೆ ವೀರ ರಾಣಿ ಎಂದೇ ಎಲ್ಲರೂ ಸ್ಮರಿಸುತ್ತಾರೆ.  ಅಲ್ಲದೇ, ಕಿತ್ತೂರು ಚೆನ್ನಮ್ಮಳನ್ನು ಎಲ್ಲ ಮಹಿಳೆಯರು ಆರಾಧಿಸುವುದು ಉಂಟು.  ಇಂಥ ವೀರ ರಾಣಿ ಬ್ರಿಟಿಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಯಶೋಗಾಥೆಯನ್ನು ಗೊತ್ತಿಲ್ಲದವರು ಬಹಳ ಕಡಿಮೆ.  ಪುಸ್ತಕಗಳಲ್ಲಿ ಸಿನೇಮಾಗಳಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಬಲಗೈ ಭಂಟ ಸಂಗೊಳ್ಳಿ ರಾಯಣ್ಣನ ಹೋರಾಟದ ಜೀವನವನ್ನು ನೋಡಿರಬಹುದು. ಆದರೆ, ಅಂದಿನ ಹೋರಾಟದ ರೋಚಕತೆಯನ್ನು ಮಕ್ಕಳು […]

ಅಂಬೇಡ್ಕರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ನಿರ್ಧಾರ ಸಂತಸದಾಯಕ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಅಗಷ್ಟ-15 ಸ್ವಾತಂತ್ರ್ಯ ದಿನ ಹಾಗೂ ನವೆಂಬರ 26 ರ ಸಂವಿಧಾನ ದಿನ ಹಾಗೂ ಜನೇವರಿ-26 ರ ಗಣರಾಜ್ಯೋತ್ಸವ ದಿನಗಳಂದು ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರವನ್ನು ಎಲ್ಲ ಕೋರ್ಟಗಳಲ್ಲಿ ಇರಿಸುವ ಹೈಕೋರ್ಟ ನಿರ್ಧಾರ ಸಂತಸ ತಂದಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಕುರಿತು ಪ್ರತ್ರಿಕಾ ಪ್ರಕಟಣೆ ನೀಡಿರುವ ಅವರು, ಇದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನ್ಯಾಯ ಒದಗಿಸಿದಂತಾಗಿದೆ.  ಹೈಕೋರ್ಟ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಅವರ […]

ಡಾ. ಮೃತ್ಯುಂಜಯಸ್ವಾಮಿ ರಚಿಸಿರುವ ಎನ್ಸಿಯಂಟ್ ಟು ರಿವರ್ಸ್ ಡಯಾಬಿಟಿಸ್ ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಡಾ. ಮೃತ್ಯುಂಜಯಸ್ವಾಮಿ ಅವರು ರಚಿಸಿರುವ ಎನ್ಸಿಯಂಟ್ ಟು ರಿವರ್ಸ್ ಡಯಾಬಿಟೀಸ್(Ancient to Reverse Diabetes) ಪುಸ್ತಕವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಪುಸ್ತಕದ ಲೇಖಕ ಡಾ, ಮೃತ್ಯುಂಜಯ ಸ್ವಾಮಿ, ಯುವ ಬ್ರಿಗೇಡ್ ಸಂಸ್ಥೆಯ ಚಕ್ರವರ್ತಿ ಸೂಲಿಬೆಲೆ ಮುಂತಾದವರು ಉಪಸ್ಥಿತರಿದ್ದರು.

ಗಾಂಧೀಜಿ ಕನಸು ನನಸು ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ- ಜಾವೀದ ಜಮಾದಾರ

ವಿಜಯಪುರ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಮತ್ತು ಜವಾಬ್ದಾರಿ ಮಹತ್ವದ್ದಾಗಿದೆ. ಯುವಕರು ದೇಶದ ಪ್ರಗತಿಯಲ್ಲಿ ಸಕ್ರೀಯರಾಗಬೇಕು. ರಾಷ್ಟ್ರೀಯ ಏಕತೆ ಸಮಗ್ರತೆ ಕಾಪಾಡಲು ಪಣತೊಡಬೇಕ ಉ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್‌ದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದ್ದಾರೆ. ವಿಜಯಪುರದಲ್ಲಿ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇಂದ್ರ ನೆಹರು ಯುವಕ ಕೇಂದ್ರ, ವಿಜಯಪುರ ಜಿಲ್ಲಾಡಳಿತ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್., ಕ್ಷೇತ್ರ ಜನಸಂಪರ್ಕ ಇಲಾಖೆ, ಬಿ ಎಲ್ ಡಿ […]

ಅಂಬೇಡ್ಕರ ಓರ್ವ ಮಹಾನ ಸಾಮಾಜಿಕ ಚಿಂತಕರು, ಸಮಾನತೆಯ ಹರಿಕಾರರು- ರಿಯಾಜ್ ಫಾರೂಕಿ

ವಿಜಯಪುರ: ಸಂವಿಧಾನ ಕತೃ ಡಾ. ಬಾಬಾಸಾಹೇಬ್ ಅಂಬೇಡ್ಕರ ಓರ್ವ ಸಾಮಾಜಿಕ ಚಿಂತಕಕರು.  ಸಮಾನತೆಯ ಹರಿಕಾರಾಗಿದ್ದರು ಎಂದು ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷ ಡಾ. ರಿಯಾಜ ಫಾರೂಕಿ ಹೇಳಿದರು. ವಿಜಯಪುರ ನಗರದ ಜಲನಗರದಲ್ಲಿರುವ ಸಿಕ್ಯಾಬ್ ಎ ಆರ್ ಎಸ್ ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿದ್ಯಾರ್ಥಿನಿಯರಿಗೆ ಆಯೋಜಿಸಲಾದ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ […]

ಮಹಾತ್ಮಾ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ವಿಜಯಪುರ ಹುತಾತ್ಮ ವೃತ್ತದಲ್ಲಿ ಹುತಾತ್ಮರ ದಿನ ಆಚರಣೆ

ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸಂಸ್ಮರಣೆ ಹಿನ್ನೆಲೆಯಲ್ಲಿ ವಿಜಯಪುರ ನಗರದ ಹುತಾತ್ಮ ವೃತ್ತದಲ್ಲಿ ನಗರದ  ಹುತಾತ್ಮ ವೃತ್ತದಲ್ಲಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಯುವ ಜನಸೇವೆ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಭಾರತ ಸೇವಾ ದಳ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹುತಾತ್ಮರ ದಿನವನ್ನು ಶ್ರದ್ಧಾ ಭಕ್ತಿಯಿಂದ  ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಉಪವಿಭಾಗಾಧಿಕಾರಿ […]

11 ಗೋವುಗಳನ್ನು ಅಜೀವ ದತ್ತು ಪಡೆದು ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ 62ನೇ ಹುಟ್ಟುಹಬ್ಬದ ಅಂಗವಾಗಿ ಒಟ್ಟು 11 ಹಸುಗಳನ್ನು ಆಜೀವ ದತ್ತು ಪಡೆಯುವ ಮೂಲಕ ಗೋರಕ್ಷಣೆಗೆ ಮೇಲ್ಪಂಕ್ತಿ ಹಾಕಿದ್ದಾರೆ.  ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಗೋ ಶಾಲೆಯ 11 ಹಸುಗಳನ್ನು ಅವರು ತಮ್ಮ ಜನ್ಮದಿನದ ಅಂಗವಾಗಿ ದತ್ತು ಪಡೆದರು.  ಹುಟ್ಟುಹಬ್ಬದ ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಪತ್ನಿ ಚೆನ್ನಮ್ಮ ಜೊತೆ ಮುಂಜಾನೆ ಹಸು ಮತ್ತು ಕರುವನ್ನು ಪೂಜೆ ನೆರವೇರಿಸಿದರು. ನಂತರ ಹಸುವನ್ನು ಮನೆಯಲ್ಲಿ ಕರೆದುಕೊಂಡು ಗೋವಿಗೆ ಗ್ರಾಸ ಹಾಕಿದರು.  ಈ ಮೂಲಕ ಗೋವುಗಳ […]

ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ರೂ. 180 ಕೋ. ವೆಚ್ಚದಲ್ಲಿ ಮಿಲಿಟರಿ ಶಾಲೆ- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ರಾಜ್ಯ ಸರಕಾರ ರೂ. 180 ಕೋ. ವೆಚ್ಚದಲ್ಲಿ ಬೃಹತ್ ಮಿಲಿಟರಿ  ಶಾಲೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191 ನೇ ಸ್ಮರಣೋತ್ಸವದ ಅಂಗವಾಗಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದರು. ಈ ಮಿಲಿಟರಿ ಶಾಲೆ ಆರಂಭಿಸುವ ಉದ್ದೇಶಕ್ಕಾಗಿ ರೂ. 55 ಕೋ. ಹಣವನ್ನು ಸರಕಾರ ಈಗಾಗಲೇ ಬಿಡುಗಡೆ ಮಾಡಿದೆ.  ಈ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ.  ರಕ್ಷಣಾ ಇಲಾಖೆ […]

ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ- ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ರಿಂದ ಧ್ವಜಾರೋಹಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮಗಳಿಂದ ಆಚರಿಸಲಾಯಿತು. ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿ ನಾನಾ ಪದಾತಿ ದಳಗಳ ಪಥಸಂಚಲನ ವೀಕ್ಷಿಸಿದರು.  ಅಲ್ಲದೇ, ಗೌರವ ವಂದನೆ ಸ್ವೀಕರಿಸಿದರು.  ಅಲ್ಲದೇ, ರಾಜ್ಯಪಾಲ ಥಾವರ್ ಸಿಂಗ್ ಗೆಹ್ಲೋಟ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಆರ್. ಅಶೋಕ ಸೇರಿದಂತೆ […]