ಭಕ್ತಿಯ ಪರಾಕಾಷ್ಠೆ- ಒಂದು ಕಿ. ಮೀ. ಉದ್ದದ ಹಗ್ಗವನ್ನು ಗದ್ದಕ್ಕೆ ತೂತು ಹಾಕಿ ಹೊರಗೆಳೆದ ಪುರವಂತಿಗ

ಮಹೇಶ ವಿ. ಶಟಗಾರ ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಶರಣರ ನಾಡು, ಸೂಫಿ ಸಂತರ ಬೀಡು ಮಾತ್ರವಲ್ಲ ಧಾರ್ಮಿಕ ಆಚರಣೆ, ಪಾರಂಪರಿಕ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬಂದಿರುವುದಕ್ಕೂ ಸಾಕ್ಷಿಯಾಗುತ್ತಲೇ ಬಂದಿದೆ.  ಇಂಥ ಪಾರಂಪರಿಕ ಆಚರಣೆಯ ಸಂದರ್ಭದಲ್ಲಿ ಅನೇಕ ಗಮನಾರ್ಹ ಸಾಧನೆಗಳೂ ಹೊರ ಬರುತ್ತಲೇ ಇವೆ.  ನಗರ ಪ್ರದೇಶಗಳ ಕ್ರೀಡೆಗಳು ಒಂದೆಡೆಯಾದರೆ, ಗ್ರಾಮೀಣ ಸೊಗಡು ಮತ್ತು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಶಕ್ತಿ ಪ್ರದರ್ಶನಕ್ಕೂ ಇಲ್ಲಿನ ಆಚರಣೆಗಳು ಕಾರಣವಾಗುತ್ತಿವೆ. ಇಂಥದ್ದೆ ವಿಶೇಷ ಮತ್ತು ಎಲ್ಲರೂ ಹುಬ್ಬೇರಿಸುವಂಥ ವಿಶಿಷ್ಠ ಸಾಧನೆಯೊಂದು […]

ಸಮಾಜಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಗುತ್ತಿದೆ- ಯಾರೂ ಆತಂಕ ಪಡುವ ಅಗತ್ಯವಿಲ್ಲ- ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಸಮಾಜಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಬೆಳಗಾವಿ ಅಧಿವೇಶ ಆರಂಭವಾಗಲಿದೆ.  ಈಗಾಗಲೇ ಎಲ್ಲಾ ತಯಾರಿ ಮಾಡಿದ್ದೇವೆ.  ಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತೇವೆ.  ಅಧಿವೇಶನದಲ್ಲಿ ಅಭಿವೃದ್ದಿ ಬಗ್ಗೆ ಚರ್ಚೆ ಮಾಡುತ್ತೇವೆ.  ಅಧಿವೇಶನದಲ್ಲಿ ಮತಾಂತರ ನಿಷೇದ ಕಾಯ್ದೆ ಮಂಡನೆ ಮಾಡುತ್ತೇವೆ ಎಂದು ತಿಳಿಸಿದರು. ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳು ಸಂವಿಧಾನಾತ್ಮಕವಾಗಿ ರಚನೆಯಾಗಿವೆ.  ಅವರಿಗೆ […]

ಡಿ. 13 ರಂದು ದಿವ್ಯ ಕಾಶಿ ಭವ್ಯ ಕಾಶಿ ಕಾರ್ಯಕ್ರಮ- ವಿಜಯಪುರದಲ್ಲಿ ವೀಕ್ಷಣೆಗೆ ವ್ಯವಸ್ಥೆ- ಸಂಜಯ ಪಾಟೀಲ ಕನಮಡಿ

ವಿಜಯಪುರ: ಭಾರತದ ಅತೀ ಪ್ರಾಚೀನ ಮತ್ತು ಪೌರಾಣಿಕ ನಗರ ಹಾಗೂ ಗಂಗಾ ನದಿ ತಟದಲ್ಲಿರುವ ಭಗವಾನ ವಿಶ್ವವಿಖ್ಯಾತ ಕಾಶಿ ನಗರದ ಅಭಿವೃದ್ಧಿಗೆ ಕೇಂದ್ರ ಸರಕಾರ ವಿಶೇಷ ಯೋಜನೆ ರೂಪಿಸಿದೆ.  ಭಗವಾನ ವಿಶ್ವನಾಥನ ವಾಸಸ್ಥಳವಾಗಿರುವ ನಗರದಲ್ಲಿ ಡಿ. 13ರಂದು ಭವ್ಯ ಕಾಶಿ, ದಿವ್ಯ ಕಾಶಿ ಕಾರ್ಯಕ್ರಮ ನಡೆಯಲಿದ್ದು, ಈ ದಿನ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಮತ್ತು ದಿವ್ಯ ಕಾಶೀ ಭವ್ಯ ಕಾಶಿ ಕಾರ್ಯಕ್ರಮದ ವಿಜಯಪುರ ಸಂಚಾಲಕ ಸಂಜಯ ಪಾಟೀಲ ಕನಮಡಿ […]

ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿ ಮಾಡದಿದ್ದರೆ- ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ- ಪ್ರಮೋದ ಮುತಾಲಿಕ

ವಿಜಯಪುರ: ಮುಂಬರುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಹಿಂದೆಯೇ ಭರವಸೆ ನೀಡಿದ್ದಾರೆ.  ಬೆಳಗಾವಿ ಅಧಿವೇಶನದಲ್ಲಿ ಅದನ್ನು ಜಾರಿ ಮಾಡದಿದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಒಕ್ಕೂಟದ ಜೊತೆಗೂಡಿ ಹೋರಾಟ ನಡೆಸುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಈಗಾಗಲೇ ಏಳು ರಾಜ್ಯಗಳಲ್ಲಿ ಮತಾಂತರ ತಡೆ ಕಾಯಿದೆ ಜಾರಿಯಲ್ಲಿದ್ದ, ಆ ರಾಜ್ಯಗಳಲ್ಲಿ ಮತಾಂತರ ತಡೆಯಲು ಸಾಕಷ್ಟು ಅನುಕೂಲವಾಗಿದೆ.  ಅದೇ ರೀತಿ ರಾಜ್ಯದಲ್ಲಿಯೂ ಮತಾಂತರ […]

ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಯುವ ಜನಾಂಗ ಹಿಂದೇಟು- ಜಾವೀದ ಜಮಾದಾರ

ವಿಜಯಪುರ: ಭಾರತ ಶ್ರೀಮಂತ ಸಂಸ್ಕೃತಿಯನ್ನು ಪೋಷಿಸುತ್ತ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿನ ಬಿತ್ತರಿಸುತ್ತಿದೆ. ಆದರೆ, ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ ಹಿಂದೇಟು ಹಾಕುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತರ ಫೇಡರೇಶನ್‍ದ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೀದ ಜಮಾದಾರ ವಿಷಾಧ ವ್ಯಕ್ಯಪಡಿಸಿದ್ದಾರೆ. ವಿಜಯಪುರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 2021-22ನೇ ವರ್ಷದ ವಿಜಯಪುರ […]

ಬಸವ ನಾಡಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಆಚರಣೆ

ವಿಜಯಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ 65 ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.     ವಿಜಯಪುರ ನಗತದಲ್ಲಿರುವ ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ಕ್ರೀಡಾಂಗಣ ಆವರಣದಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಪಿ ಎಚ್ . ಡಿ. ಆನಂದಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಣಾಧಿಕಾರಿ ಗೋವಿಂದ […]

ಕೊರೊನಾ ಒಮಿಕ್ರಾನ್ ಆತಂಕ ಹಿನ್ನೆಲೆ- ಮುಮ್ಮಟ್ಟಿಗುಡ್ಡ ಶ್ರೀ ಅಮೋಘಸಿದ್ಧ ಜಾತ್ರೆ ಸರಳವಾಗಿ ಆಚರಣೆಗೆ ನಿರ್ಧಾರ

ವಿಜಯಪುರ: ಕೊರೊನಾ ನಿಬಂಧನೆಗಳ ಹಿನ್ನೆಲೆಯಲ್ಲಿ ಈ ಬಾರಿ ವಿಜಯಪುರ ಜಿಲ್ಲೆಯಲ್ಲ ಮುಮ್ಮಟ್ಟಿಗುಡ್ಡ ಶ್ರೀ ಅಮೋಘಸಿದ್ಧ ಜಾತ್ರೆಯನ್ನು ಸರಳವಾಗಿ ಆಚರಿಸಲು ವಿಜಯಪುರ ಜಿಲ್ಲಾಡಳಿತ ಸೂಚನೆ ನೀಡಿದೆ. ಡಿ. 4 ರಿಂದ ಮೂರು ದಿನಗಳ ಕಾಲ ಮುಮ್ನಟ್ಟಿಗುಡ್ಡ ಶ್ರೀ ಅಮೋಘಸಿದ್ದ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಚನ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅವರು ತಮ್ಮ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಜಾತ್ರೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈಗ ಕೊರೊನಾ ಒಮಿಕ್ರಾನ್ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ […]

ಮಳೆಯಿಂದ ಹಾನಿಗೀಡಾದ ಬೆಳೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಹವಾಮಾನ ವೈಪರಿತ್ಯದಿಂದಾಗಿ ಉಂಟಾದ ಬೆಳೆ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆ. 8ಕ್ಕೆ ಬೆಳೆ ಹಾನಿ ವೀಕ್ಷಣೆಗೆ ತೆರಳಿದ ಜಿಲ್ಲಾಧಿಕಾರಿಗಳು ವಿಜಯಪುರ ತಾಲೂಕಿನ ಅರಕೇರಿ ಎಲ್. ಟಿ.-1, ಅಗಸನಾಳ, ಇಂಡಿ ತಾಲೂಕಿನ ಹೊರ್ತಿ, ಹಳಗುಣಕಿ ಮತ್ತು ಚಡಚಣ ತಾಲೂಕಿನ ನಾನಾ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದರು.  ಅಲ್ಲದೇ, ದ್ರಾಕ್ಷಿ ಮತ್ತು ತೊಗರಿ ಬೆಳೆ ಹಾಳಾಗಿರುವುದನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ […]

ಮತ್ತೆ ನಿಜವಾಯ್ತು ಹೊಳೆಬಬಲಾದಿ ಮಠಾಧೀಶರ ಭವಿಷ್ಯ- ಅವರು ಅಂದು ಹೇಳಿದ್ದೇನು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಕಾರ್ಣಿಕರು ಹೇಳಿದ ಭವಿಷ್ಯ ಮತ್ತೆ ನಿಜವಾಗಿದೆ.  ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿದ್ದೆ ಇಲ್ಲ.  ಈ ಬಾರಿಯೂ ಅವರು ಹೇಳಿದ ಆ ವಿಚಾರ ಈಗ ನಿಜವಾಗಿದೆ.  ಮಹಾಶಿವರಾತ್ರಿ ದಿನದಿಂದ ಐದು ದಿನಗಳ ಕಾಲ ಈ ಮಠದ ಜಾತ್ರೆ ನಡೆಯುತ್ತದೆ.  ಮೊದಲ ದಿನ ಅಭಿಷೇಕ ಮತ್ತು ಉಪಾಸನೆ ನಡೆಯುತ್ತದೆ.  ಎರಡನೇ ದಿನ ರಥೋತ್ಸವ ಇರುತ್ತದೆ.  ಮೂರನೇ ದಿನ ಅನ್ನಸಂತರ್ಪಣೆ […]

ಬುದ್ಧ, ಬಸವ, ಅಂಬೇಡ್ಕರ್, ಮಹಾವೀರರು ಕಾಲಾತೀತರು: ಸಿಎಂ ಬೊಮ್ಮಾಯಿ

ಬೆಂಗಳೂರು: ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾವೀರರು ಸಾರ್ವಕಾಲಿಕರು. ಇವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ಇವರು ಕಾಲಾತೀತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿಲ್ಲಿ ವಿಶ್ವ ಬುದ್ಧ ಧಮ್ಮ ಸಂಘ ಮತ್ರಯ ನಾಗಸೇನಾ ಬುದ್ಧ ವಿಹಾರ ವತಿಯಿಂದ 72 ನೇ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಬೌದ್ಧ ದಾಂಮಾಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಬುದ್ಧನ ಶಕ್ತಿ ಪ್ರಭಾವ, ಶಾಂತಿ ಮತ್ತು ಸಾಧನೆ ಬಹಳ ಮುಖ್ಯ. ಇವರೆಲ್ಲರೂ ಸಾಧಕರು.‌‌ ಸಾವಿನ ನಂತರವೂ ಬದುಕುತ್ತಿದ್ದಾರೆ. ಅವರದ್ದು ತ್ಯಾಗ […]