ಸಾಮರಸ್ಯ, ಸಹಬಾಳ್ವೆ ಸಾರುವ ಮಾನವ ಧರ್ಮಕ್ಕೆ ಜಯವಾಗಲಿ- ಸೋಮನಾಥ ಶಿವಾಚಾರ್ಯರು

ವಿಜಯಪುರ: ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ, ಸರ್ವರಿಗೂ ಒಳಿತನ್ನು ಬಯಸುವ ಮಾನವ ಧರ್ಮಕ್ಕೆ ಜಯವಾಗಲಿ.  ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಜಗದ್ಗುರು ರೇಣುಕಾಚಾರ್ಯರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಕನ್ನೂರಿನ ಸೋಮನಾಥ ಶಿವಾಚಾರ್ಯರು ಹೇಳಿದ್ದಾರೆ. ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗುಡ್ಡಾಪುರದ ಗುರುಪಾದೇಶ್ವರ ಶಿವಾಚಾರ್ಯರು, ಯುವ ಮುಖಂಡ ಗುರುಪಾದಯ್ಯ ಗಚ್ಚಿನಮಠ, ಸಂಜು ಹಿರೇಮಠ, ಚಿದಾನಂದ ಹಿರೇಮಠ, ಸಚೀನ ಬೂದಿಹಾಳಮಠ, ಅಭಿಷೇಕ […]

ಹೆಣ್ಣು ಅಬಲೆಯಲ್ಲ ಸಬಲೆ: ಶೈಲಜಾ ಪಾಟೀಲ

ವಿಜಯಪುರ: ಹೆಣ್ಣು ಅಬಲೆಯಲ್ಲ ಸಬಲೆ ಎಂದು ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ಅಧ್ಯಕ್ಷೆ ಶೈಲಜಾ ಪಾಟೀಲ ಯತ್ನಾಳ ಹೇಳಿದ್ದಾರೆ.  ನಗರದ ಶ್ರೀ ಸಿದ್ಧೇಶ್ವರ ಕಲಾಭವನದಲ್ಲಿ ಸಮಸ್ತ ವಿಜಯಪುರ ಮಹಿಳೆಯರ ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಅಂತeರಾಷ್ಟೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಪುರುಷನಿಗಿಂತ ಒಂದು ಕೈ ಮೇಲೆ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು. ಕಣ್ಮರೆ ಆಗುತ್ತಿರುವ ವಚನ, ಪ್ರವಚನಗಳನ್ನು ಪ್ರಸಕ್ತ ಹಾಗೂ ಮುಂದಿನ […]

ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯಿಂದ ಮಾ. 24 ರಿಂದ ಏ. 7ರ ವರೆಗೆ ಶ್ರೀಶೈಲವರೆಗೆ ಪಾದಯಾತ್ರೆ

ವಿಜಯಪುರ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀಶೈಲ ಮಲ್ಲಯನ ದರ್ಶನಕ್ಕೆ ಪಾದಯಾತ್ರೆ ಪ್ರಾರಂಭಿಸಿದ ಖ್ಯಾತಿಯ ವಿಜಯಪುರ ನಗರದ ಜೋರಾಪುರ ಪೇಠ ಮಲ್ಲಯ್ಯನ ಓಣಿಯ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯ ಕಾರ್ಯಕ್ರಮ ಮಾ. 24 ರಿಂದ ಏ. 7ರ ವರೆಗೆ ನಡೆಯಲಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಮಿತಿಯ ಮುಖಂಡ ರವೀಂದ್ರ ಸಿದ್ದಯ್ಯ ಕರ್ಪೂರಮಠ, 31ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಹೋಳಿ ಹುಣ್ಣಿಮೆಯ ದಿನದಿಂದ ಯುಗಾದಿಯವರೆಗೆ 15 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮಾ. 24 […]

ಹೆಣ್ಣು ಸೃಷ್ಠಿಯ ಮೂಲ- ಸ್ತ್ರೀ ದೇವತೆಯ ಸ್ವರೂಪ- ಬಿಇಓ ಬಸವರಾಜ ತಳವಾರ

ವಿಜಯಪುರ: ಹೆಣ್ಣು ಸೃಷ್ಠಿಯ ಮೂಲ.  ಸ್ತ್ರೀ ದೇವತೆಯ ಸ್ವರೂಪ ಎಂದು ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು. ನಗರದ ನೌಕರರ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ವಿಜಯಪುರ ನಗರ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಚಿಂತನ ಗೋಷ್ಠಿ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿದರು. ಇಂದಿನ ಮಹಿಳೆಯರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.  ಸಮಾಜದಲ್ಲಿ ಹೆಚ್ಚಿನ ಅವರಿಗೆ ಹೆಚ್ಚಿನ ಗೌರವವಿದೆ ಎಂದು ಅವರು ಹೇಳಿದರು. ಡಾ. ಸವಿತಾ ಝಳಕಿ ಮಹಿಳಾ ಅಸ್ಮಿತತೆಯ […]

ಈ ವರ್ಷ ನೇತ್ರಬಾಧೆ ಕಾಡಲಿದೆ- ಕೀಟಕಾಟ ಹೆಚ್ಚಾಗಲಿದೆ- ಜಾತಿಕಲಹ, ಯೋಧರಿಗೆ ನೋವು, ಉತ್ತಮರಿಗೆ ರಾಜಕೀಯ ಲಾಭವಿದೆ- ಹೊಳೆಬಬಲಾದಿ ಕಾರ್ಣಿಕರ ಭವಿಷ್ಯವಾಣಿ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಸ್ಥಾನದ ಕಾರ್ಣಿಕ ಶ್ರೀ ಸಿದ್ಧಾರಮಯ್ಯ ಹೊಳಿಮಠ 2024 ನೇ ವರ್ಷದ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.  ಸದಾಶಿವ ಮುತ್ಯಾರ ಮಠದಲ್ಲಿ ನುಡಿಯಲಾಗುವ ಕಾಲಜ್ಞಾನ ಭವಿಷ್ಯ ನಿಜವಾಗುವುದರಿಂದ ಈ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.  ಅದರಂತೆ ಈ ವರ್ಷದ ಕಾಲಜ್ಞಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಶ್ರೀಮಠದ ಪೀಠಾಧಿಪತಿಗಳು ಮತ್ತು […]

ವೈದ್ಯಕೀಯ ಲೋಕದಲ್ಲೋಂದು ವಿನೂತನ ಪ್ರಯತ್ನ- ಜಾಗತಿಕ ದಾಖಲೆಗಾಗಿ ರಂಗೋಲಿಯಲ್ಲಿ ಅರಳಿದ ಆರೋಗ್ಯದ ಪಠ್ಯಚಿತ್ರಗಳು

ವಿಜಯಪುರ, ಮಾ. 10: ರಂಗೋಲಿಯ ಮೂಲಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮತ್ತು ಜಗತ್ತಿನ ನಾನಾ ದಾಖಲೆ ಪುಟಗಳಲ್ಲಿ ಸೇರಿಸುವ ವಿಶ್ವದ ಮೊದಲ ವಿನೂತನ ಕಾರ್ಯಕ್ರಮಕ್ಕೆ ಬಸವ ನಾಡು ವಿಜಯಪುರದಲ್ಲಿ ನಡೆದಿದ್ದು, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ 1500 ವಿದ್ಯಾರ್ಥಿಗಳು ಸ್ವಾಸ್ಷ್ಟ ಸಂತುಲನ […]

ಮಕ್ಕಳ ಸೂಪ್ತ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ: ಜಿಲ್ಲಾಧಿಕಾರಿ ಟಿ. ಭೂಬಾಲನ್

ವಿಜಯಪುರ: ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಲು ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಮಗುವಿನಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ […]

ಡಾ. ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಯಶಸ್ಸು ನಿಶ್ಚಿತ- ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಅಭಿಮತ

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ನಡೆದು ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ.  ಅದಕ್ಕೆ ನಾನೇ ಜೀವಂತ ಉದಾಹರಣೆ ಎಂದು ಕರ್ನಾಟಕ ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಹೇಳಿದ್ದಾರೆ. ಬೌದ್ಧ ವಿಹಾರ ನಿರ್ಮಾಣ ಸಮಿತಿ ವತಿಯಿಂದ ನಗರದ ಸಾರಿಪುತ್ರ- ಬೋಧಿಧಮ್ಮ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 2016ರಿಂದ ಬುದ್ಧವಿಹಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಅವರು, […]

ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ: ಮಹಾನಗರ ಪಾಲಿಕೆ ಆಯಕ್ತ ಬದ್ರೂದ್ದೀನ್ ಸೌದಾಗರ

ವಿಜಯಪುರ: ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ.  ಎಲ್ಲ ಕಡೆ ಶಿಕ್ಷಣವಂತರಿಗೆ ಮಾತ್ರ ಬೆಲೆಯಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಜೀವನ ರೂಪಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಬಿ. ಎಯ ಸೌದಾಗರ ಹೇಳಿದ್ದಾರೆ. ನಗರದ ಮನಗೂಳಿ ಅಗಸಿ ಹತ್ತಿರದ ಫತ್ಹೇ ದರವಾಜಾ ಮಸೀದಿ ಜಮಾತ್ ವತಿಯಿಂದ ವಕ್ಫ ಸಲಹಾ ಸಮಿತಿ ಪದಾಧಿಕಾರಿಗಳು ಮತ್ತು ಚಿನ್ನದ ಪದಕ ಪಡೆದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ಶಿಕ್ಷಣದಿಂದಲೇ ನಮ್ಮ ಜೀವನ ರೂಪಗೊಳ್ಳುತ್ತದೆ.  ಸಮಾಜದಲ್ಲಿ ಹುದ್ದೆಗಳು […]

ಬಸವ ನಾಡಿನಲ್ಲಿ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಸಚಿವ ಎಂ. ಬಿ. ಪಾಟೀಲ ಚಾಲನೆ

ವಿಜಯಪುರ: ಜಿಲ್ಲೆಯಲ್ಲಿ ಮಾರ್ಚ್ 3 ರಿಂದ 6ವರೆಗೆ ಹಮ್ಮಿಕೊಂಡ ಪೋಲಿಯೋ ಲಸಿಕಾ ಅಭಿಯಾನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಚಾಲನೆ ನೀಡಿದರು. ರವಿವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮೇಯರ್ ಮಹೇಜಬಿನ್ ಅಬ್ದುಲ್ ರಜಾಕ್ ಹೊರ್ತಿ ಜೊತೆ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ  ಮಾತನಾಡಿದರು. ಜಿಲ್ಲೆಯಲ್ಲಿ 0 […]