ಕೊರೊನಾ ಒಮಿಕ್ರಾನ್ ಆತಂಕ ಹಿನ್ನೆಲೆ- ಮುಮ್ಮಟ್ಟಿಗುಡ್ಡ ಶ್ರೀ ಅಮೋಘಸಿದ್ಧ ಜಾತ್ರೆ ಸರಳವಾಗಿ ಆಚರಣೆಗೆ ನಿರ್ಧಾರ
ವಿಜಯಪುರ: ಕೊರೊನಾ ನಿಬಂಧನೆಗಳ ಹಿನ್ನೆಲೆಯಲ್ಲಿ ಈ ಬಾರಿ ವಿಜಯಪುರ ಜಿಲ್ಲೆಯಲ್ಲ ಮುಮ್ಮಟ್ಟಿಗುಡ್ಡ ಶ್ರೀ ಅಮೋಘಸಿದ್ಧ ಜಾತ್ರೆಯನ್ನು ಸರಳವಾಗಿ ಆಚರಿಸಲು ವಿಜಯಪುರ ಜಿಲ್ಲಾಡಳಿತ ಸೂಚನೆ ನೀಡಿದೆ. ಡಿ. 4 ರಿಂದ ಮೂರು ದಿನಗಳ ಕಾಲ ಮುಮ್ನಟ್ಟಿಗುಡ್ಡ ಶ್ರೀ ಅಮೋಘಸಿದ್ದ ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಚನ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅವರು ತಮ್ಮ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಜಾತ್ರೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈಗ ಕೊರೊನಾ ಒಮಿಕ್ರಾನ್ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ […]
ಮಳೆಯಿಂದ ಹಾನಿಗೀಡಾದ ಬೆಳೆ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ಹವಾಮಾನ ವೈಪರಿತ್ಯದಿಂದಾಗಿ ಉಂಟಾದ ಬೆಳೆ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆ. 8ಕ್ಕೆ ಬೆಳೆ ಹಾನಿ ವೀಕ್ಷಣೆಗೆ ತೆರಳಿದ ಜಿಲ್ಲಾಧಿಕಾರಿಗಳು ವಿಜಯಪುರ ತಾಲೂಕಿನ ಅರಕೇರಿ ಎಲ್. ಟಿ.-1, ಅಗಸನಾಳ, ಇಂಡಿ ತಾಲೂಕಿನ ಹೊರ್ತಿ, ಹಳಗುಣಕಿ ಮತ್ತು ಚಡಚಣ ತಾಲೂಕಿನ ನಾನಾ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದರು. ಅಲ್ಲದೇ, ದ್ರಾಕ್ಷಿ ಮತ್ತು ತೊಗರಿ ಬೆಳೆ ಹಾಳಾಗಿರುವುದನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಿದ್ಧರಾಮಯ್ಯ […]
ಮತ್ತೆ ನಿಜವಾಯ್ತು ಹೊಳೆಬಬಲಾದಿ ಮಠಾಧೀಶರ ಭವಿಷ್ಯ- ಅವರು ಅಂದು ಹೇಳಿದ್ದೇನು ಗೊತ್ತಾ?
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಕಾರ್ಣಿಕರು ಹೇಳಿದ ಭವಿಷ್ಯ ಮತ್ತೆ ನಿಜವಾಗಿದೆ. ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿದ್ದೆ ಇಲ್ಲ. ಈ ಬಾರಿಯೂ ಅವರು ಹೇಳಿದ ಆ ವಿಚಾರ ಈಗ ನಿಜವಾಗಿದೆ. ಮಹಾಶಿವರಾತ್ರಿ ದಿನದಿಂದ ಐದು ದಿನಗಳ ಕಾಲ ಈ ಮಠದ ಜಾತ್ರೆ ನಡೆಯುತ್ತದೆ. ಮೊದಲ ದಿನ ಅಭಿಷೇಕ ಮತ್ತು ಉಪಾಸನೆ ನಡೆಯುತ್ತದೆ. ಎರಡನೇ ದಿನ ರಥೋತ್ಸವ ಇರುತ್ತದೆ. ಮೂರನೇ ದಿನ ಅನ್ನಸಂತರ್ಪಣೆ […]
ಬುದ್ಧ, ಬಸವ, ಅಂಬೇಡ್ಕರ್, ಮಹಾವೀರರು ಕಾಲಾತೀತರು: ಸಿಎಂ ಬೊಮ್ಮಾಯಿ
ಬೆಂಗಳೂರು: ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಮಹಾವೀರರು ಸಾರ್ವಕಾಲಿಕರು. ಇವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಹೀಗಾಗಿ ಇವರು ಕಾಲಾತೀತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿಲ್ಲಿ ವಿಶ್ವ ಬುದ್ಧ ಧಮ್ಮ ಸಂಘ ಮತ್ರಯ ನಾಗಸೇನಾ ಬುದ್ಧ ವಿಹಾರ ವತಿಯಿಂದ 72 ನೇ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಬೌದ್ಧ ದಾಂಮಾಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಬುದ್ಧನ ಶಕ್ತಿ ಪ್ರಭಾವ, ಶಾಂತಿ ಮತ್ತು ಸಾಧನೆ ಬಹಳ ಮುಖ್ಯ. ಇವರೆಲ್ಲರೂ ಸಾಧಕರು. ಸಾವಿನ ನಂತರವೂ ಬದುಕುತ್ತಿದ್ದಾರೆ. ಅವರದ್ದು ತ್ಯಾಗ […]
ಹಾಸಿಂಪೀರ ವಾಲಿಕಾರ ಗೆಲ್ಲಿಸಿ ಎಲ್ಲ ವಾದಗಳಿಗೆ ಕಸಾಪ ಚುನಾವಣೆ ಮೂಲಕ ಉತ್ತರ ನೀಡಿದ ಮತದಾರರು
ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಎಲ್ಲಾ ವಾದಿಗಳ ತರ್ಕವನ್ನು ತಲೆಕೆಳಗು ಮಾಡಿದೆ. ಈ ಚುನಾವಣೆಯಲ್ಲಿ ಮತದಾರರು ಪಕ್ಷಾತೀತ, ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಹಾಸಿಂಪೀರ ವಾಲಿಕಾರ ಅವರನ್ನು ಮತ ಹಾಕಿ ಗೆಲ್ಲಿಸುವ ಮೂಲಕ ವಾದಿಗಳಿಗೆ ವ್ಯಾದಿಗೆ ಪರೋಕ್ಷ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ಯಾರಾರು, ಯಾವ್ಯಾವ ಲೆಕ್ಕಾಚಾರ ಹಾಕಿದ್ದರೋ ಅದನ್ನೆಲ್ಲ ಉಲ್ಟಾಪಲ್ಟಾ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಹಾಸಿಂಪೀರ ವಾಲಿಕಾರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ನಿಕಟಪೂರ್ವ ಅಧ್ಯಕ್ಷ ಹಾಗೂ […]
ಕನಕದಾಸ ಜಯಂತಿ ಆಚರಣೆ: ಭಕ್ತಶ್ರೇಷ್ಠರ ಪುತ್ಥಳಿಗೆ ಸಿಎಂ ಪುಷ್ಪನಮನ
ಬೆಂಗಳೂರು: ಕನಕದಾಸ ಜಯಂತಿಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಕನಕದಾಸರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಸುನೀಲಕುಮಾರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯರು ದಶಕಗಳ ಹಿಂದೆ ಹಿಂದೆ ಹೊತ್ತಿದ್ದ ಹಳೆಯ ಹರಕೆಯನ್ನು ತೀರಿಸಿದ ಮುಸ್ಲಿಂ ಕುಟುಂಬ
ವಿಜಯಪುರ: ಇದು ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಬಸವನಾಡಿನಲ್ಲಿ ನಡೆದ ಮನಮುಟ್ಟುವ ಸ್ಟೋರಿ. ಶರಣರ ನಾಡು. ಸೂಫಿ ಸಂತರ ಬೀಡು ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ನಡೆದ ಭಾವೈಕ್ಯೆತೆಗೆ ಸಾಕ್ಷಿಯಾದ ಕಾರ್ಯಕ್ರಮ. ವಿಶೇಷ ಕಾರ್ಯಕ್ರಮ ಎಂದರೂ ತಪ್ಪಲ್ಲ. ಈ ಕಾರ್ಯಕ್ರಮದಲ್ಲಿ ಇಡೀ ಊರಿಗೆ ಊರೇ ಪಾಲ್ಗೋಂಡು ಸಂಭ್ರಮಿಸಿದ್ದು ಈ ಸಮಾರಂಭದ ಮತ್ತೋಂದು ವಿಶೇಷ. ಇಲ್ಲಿ ಮುಸ್ಲಿಂ ಭಕ್ತರು ತಮ್ಮ ಹಿರಿಯರು 50 ವರ್ಷಗಳ ಹಿಂದೆ ಹಿಂದೂ ದೇವರಿಗೆ ಹೊತ್ತಿದ್ದ ಹರಕೆಯನ್ನು ತೀರಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ಈ ಕುಟುಂಬದ […]
ನಮ್ಮ ಮನೆಯಲ್ಲಿ 40 ಆಕಳುಗಳಿವೆ- ಗೋ ಪೂಜೆ ನಮ್ಮ ಸಂಪ್ರದಾಯ- ಸಚಿವ ಗೋವಿಂದ ಕಾರಜೋಳ
ಬೆಂಗಳೂರು: ಜಲಂಸಪನ್ಮೂಲ ಸಚಿವ ಗೋವಿಂದ ಕಾರಜೋಳ ದೀಪಾವಳಿ ಬಲಿಪಾಡ್ಯದ ಅಂಗವಾಗಿ ಗೋವಿಗೆ ಪೂಜೆ ಮಾಡಿ ಆಹಾರ ಹಾಕುವ ಮೂಲಕ ಸಂಪ್ರದಾಯ ನೆರವೇರಿಸಿದ್ದಾರೆ. ಬೆಂಗಳೂರು ನಗರದ ಮಲ್ಲೇಶ್ವರ(ಮಲ್ಲೇಶ್ವರಂ) ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಗೋ ಪೂಜೆ ಸಲ್ಲಿಸಿದ ಅವರು, ಗೋವಿಗೆ ಕರ್ಪೂರ ಬೆಳಗಿ ಬಾಳೆಹಣ್ಣು ಮತ್ತು ಇತರ ಆಹಾರ ಧಾನ್ಯಗಳನ್ನು ತಿನ್ನಿಸುವ ಮೂಲಕ ದೀಪಾವಳಿ ಬಲಿಪಾಡ್ಯವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಬಳಿಕ ಮಾತನಾಡಿದ ಅವರು, ದೀಪಾವಳಿ ಬಲಿಪಾಡ್ಯ ದಿನ ಸರಕಾರ ಆದೇಶ ಮಾಡಿದೆ ಎಂಬ ಕಾರಣಕ್ಕೆ ತಾವು ಗೋವು ಪೂಜೆ ಮಾಡಿಲ್ಲ. […]
ದೀಪಾವಳಿ ಅಂಗವಾಗಿ ಬಿಡದಿ ತೋಟದಲ್ಲಿ ಗೋವಿನ ಪೂಜೆ ನೆರವೇರಿಸಿದ ಎಚ್. ಡಿ. ಕುಮಾರಸ್ವಾಮಿ ದಂಪತಿ
ರಾಮನಗರ: ದೀಪಾವಳಿ ಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಪತ್ನಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಜೊತೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ತಮ್ಮ ತೋಟದಲ್ಲಿ ಗೋವಿನ ಪೂಜೆ ನೆರವೇರಿಸಿದರು. ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿ ದಿನ ಶ್ರೀಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋವು ಸಮೂಹವನ್ನು ರಕ್ಷಿಸಲು ಗೋಪಾಲನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಗೋವು ಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. […]
ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಬೆಳಗಾವಿ: ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿ,ಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು […]