ಮುಂದಿನ ಐದು 5 ವರ್ಷಗಳಲ್ಲಿ ಮಲೈ ಮಹದೇಶ್ವರ ಪ್ರಮುಖ ಯಾತ್ರಾ ಸ್ಥಳವಾಗಲಿದೆ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಮಲೈ ಮಹದೇಶ್ವರ ದಕ್ಷಿಣ ಕರ್ನಾಟಕ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿ ಪ್ರಮುಖ ಯಾತ್ರಾ ಸ್ಥಳವಾಗಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಲೈ ಮಹದೇಶ್ವರ ದಕ್ಷಿಣ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಮೈಸೂರಿನಿಂದ ಬೆಂಗಳೂರಿನವರೆಗೆ ಪ್ರತಿಯೊಬ್ಬರೂ ನಡೆದುಕೊಳ್ಳುವ ಧಾರ್ಮಿಕ ಕ್ಷೇತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಇದರ ಅಭಿವೃದ್ಧಿಗೆ ಚಿಂತನೆ ನಡೆದು ವೇಗವನ್ನೂ ಪಡೆದುಕೊಂಡಿದೆ. ಇದಕ್ಕೆ […]

ಹಿಂದೂಗಳ ದೇವಸ್ಥಾನ ತೆರವು ತಡೆಯಲು ಹಿಂದು ಪ್ರಧಾನಿ, ಹಿಂದು ಸಿಎಂ ಕ್ರಮ ಕೈಗೊಳ್ಳಲಿ- ಮನಗೂಳಿ ಸ್ವಾಮೀಜಿ

ವಿಜಯಪುರ: ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನಗಳನ್ನು ತೆರವುಗೊಳಿಸಲು ಮುಂದಾಗಿರುವ ಅಲ್ಲಿನ ಜಿಲ್ಲಾಡಳಿತದ ಕ್ರಮಕ್ಕೆ ಬಸವ ನಾಡಿನ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭೊನವ ಸಂಗನ ಬಸವ ಶಿವಾಚಾರ್ಯರು ಮೈಸೂರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನ ತೆರವು ಮಾಡುತ್ತಿರುವುದು ಖಂಡನೀಯವಾಗಿದೆ. ಇದು ಇದು ಹಿಂದೂಗಳ ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದುಗಳಾಗಿದ್ದಾರೆ. […]

ಅಧಿಕಾರಿಗಳ ಉತ್ಸಾಹ, ಜನಪ್ರತಿನಿಧಿಗಳ ಸಹಕಾರ- ಗುಮ್ಮಟ ನಗರಿಯಲ್ಲಿರದ ಆ ಒಂದು ವ್ಯವಸ್ಥೆ ಲಿಂಬೆ ನಾಡಿಗೆ ಬಂತು

ವಿಜಯಪುರ: ಅಧಿಕಾರಿಗಳ ಉತ್ಸಾಹ, ಜನಪ್ರತಿನಿಧಿಗಳ ಸಹಕಾರವಿದ್ದರೆ ಜನರಿಗೆ ಹೇಗೆ ಉಪಕಾರವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ವ್ಯವಸ್ಥೆ. ಇದು ಹಿಂದುಳಿದ ಜಿಲ್ಲೆಯ ಹಿಂದುಳಿದ ತಾಲೂಕು ಕೇಂದ್ರದಲ್ಲಿ ಜಾರಿಗೆ ತರಲಾಗಿರುವ ಮುಂದುವರೆದ ತಂತ್ರಜ್ಞಾನದ ಸದ್ಬಳಕೆಗೆ ತಾಜಾ ಉದಾಹರಣೆ ಎಂಬಂತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ಜಿಲ್ಲೆಯ ಲಿಂಬೆ ನಾಡು ಇಂಡಿ ಪುರಸಭೆಯಲ್ಲಿ ಈಗ ಜನರಿಗೋಸ್ಕರ ಅನುಕೂಲವಾಗುವ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ತಾಲೂಕು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಆಗಬೇಕಾಗಿರುವ ಕೆಲಸಗಳ ಕಡೆ […]

ಬೆಸುಗೆ ಕಾಲ ಯಾರನ್ನು ಬೆಸೆಯುತ್ತೋ? ಬೇರ್ಪಡಿಸುತ್ತೋ? ಕತ್ನಳ್ಳಿ ಕಾರ್ಣಿಕರ ಮಾರ್ಮಿಕ ಭವಿಷ್ಯ

ಬಸವ ನಾಡು ವಿಜಯಪುರ- ಎರಡು ವರ್ಷಗಳ ಹಿಂದೆಯೇ ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದ ಬಸವ ನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಈ ಬಾರಿಯೂ ಭವಿಷ್ಯ ನುಡಿದಿದ್ದಾರೆ.ಈ ಹಿಂದೆ ಚಹಾ ಮಾರಾಟ ಮಾಡುವವ ದೇಶದ ಚುಕ್ಕಾಣಿ ಹಿಡಿಯುತ್ತಾನೆ ಎಂದು 2013 ರಲ್ಲಿಯೇ ಭವಿಷ್ಯ ನುಡಿದಿದ್ದ ಸ್ವಾಮೀಜಿ, ಎರಡು ವರ್ಷಗಳ ಹಿಂದೆ ವೈದ್ಯರು ತಲೆಗೆ ಕೈ ಹಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳುವ ಮೂಲಕ ಯಾರಿಗೂ ಗೊತ್ತಿರದ ಕೊರೊನಾ ಬಗ್ಗೆ ಸೂಚ್ಯವಾಗಿ […]

ಸುತ್ತೂರು ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಶಾಸಕ ಯತ್ನಾಳ

ಬಸವ ನಾಡು ವಿಜಯಪುರ- ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸುತ್ತೂರು ಶ್ರೀಗಳು ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ವಿಜಯಪುರ ನಗರದಲ್ಲಿರುವ ಜ್ಞಾನಯೋಗಾಶ್ರದಮಲ್ಲಿ ನಿನ್ನೆಯಿಂದ ತಂಗಿದ್ದ ಇಬ್ಬರೂ ಶ್ರೀಗಳನ್ನು ಯತ್ನಾಳ ಬೆಳಿಗ್ಗೆ ಭೇಟಿ ಮಾಡಿದರು. ಅಲ್ಲದೇ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಯವರನ್ನು ಭೇಟಿ ಮಾಡಿ ಗೌರವಿಸಿ ಆಶೀರ್ವಾದ ಪಡೆದರು. ಅಲ್ಲದೇ, ಇದೇ ಸಂದರ್ಭದಲ್ಲಿ ನಡೆದಾಡುವ ದೇವರು ಎಂದೇ ಹೆಸರಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನೂ ಭೇಟಿ ಮಾಡಿ ನಾನಾ […]

ಎಲ್ಲರ ಚಿತ್ತ ಸ್ವಾಮೀಜಿಯತ್ತ- ಸ್ವಾಮೀಜಿ ದೃಷ್ಠಿ ಪುಟ್ಟ ಬಾಲಕಿಯತ್ತ- ಬಸವ ನಾಡಿನಲ್ಲಿಂದು ಗಮನ ಸೆಳೆದ ಪ್ರಸಂಗ

ಬಸವ ನಾಡು ವಿಜಯಪುರ- ಇದು ಅಪರೂಪದ ಪ್ರಸಂಗ. ಇಂಥ ಘಟನೆಯನ್ನು ನ್ಯೂಸ್ ಸೆನ್ಸ್ ಮೂಲಕ ಸೆರೆ ಹಿಡಿದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕುವ ಮೂಲಕ ಗಮನ ಸೆಳೆದವರು ಪ್ರತಿಷ್ಠಿತ ಬಿ. ಎಲ್. ಡಿ. ಇ. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ.ಡಾ. ಮಹಾಂತೇಶ ಬಿರಾದಾರ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಈ ಘಟನೆ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಮೈಸೂರಿನಿಂದ ಹೊರಟು ಬೀದರ ಜಿಲ್ಲೆಯ ಭಾಲ್ಕಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಂಡು […]

ಬಸವ ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ, ಮಕ್ಕಳ ಸಾಹಿತಿ, ಶರಣು ಚಟ್ಟಿ ರಚಿಸಿರುವ ಯುಗಾದಿ ಕವನ

ಬಸವನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರಕಾರ, ಸಾಹಿತಿ, ಮಕ್ಕಳ ಕವಿ ಮತ್ತು ಶಿಕ್ಷಕರಾಗಿರುವ ಶರಣು ಚಟ್ಟಿ ಹೊಸ ವರ್ಷ ಯುಗಾದಿಯ ಅಂಗವಾಗಿ ರಚಿಸಿರುವ ಕವನವಿದು. ಶರಣು ಚಟ್ಟಿ ಅವರ ಫೇಸ್ ಬುಕ್ ವಾಲ್ ನಿಂದ ಪಡೆದದ್ದು.

ನಾಡಿನ ಜನತೆಗೆ ಯುಗಾದಿಯ ಶುಭಾಷಯ ಕೋರಿದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ- ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನಾಡಿನ ಜನತೆಗೆ ಹೊಸ ವರ್ಷ ಯುಗಾದಿಯ ಶುಭಾಷಯಗಳನ್ನು ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ನಿಮ್ಮೆಲ್ಲರ ಬಾಳಿನಲ್ಲಿ ಸಮೃದ್ಧಿ ಹಾಗೂ ಸಂತೋಷವಿರಲಿ ಎಂದು ಹಾರೈಸುತ್ತೇನೆ. ಕೊರೊನಾ ಸೋಂಕಿನ ಬಗ್ಗೆ ಎಚ್ಚರವಿರಲಿ. ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಿ ಎಂದು ಟ್ವೀಟ್ ಮೂಲಕ ಯುಗಾದಿಯ ಶುಭ ಕೋರಿದ್ದಷ್ಟೇ ಅಲ್ಲದೇ, ಕೊರೊನಾ ಬಗ್ಗೆ ಎಚ್ಚರಿಗೆ ವಹಿಸಲೂ ಕರೆ ನೀಡಿದ್ದಾರೆ.

ಬಸವ ನಾಡಿನ ಕೀರ್ತಿಯನ್ನು ಸಾಹಿತ್ಯದ ಮೂಲಕ ಹೆಚ್ಚಿಸಿದವರು ಮಧುರಚೆನ್ನರು

ಡಾ. ಗೋಪಾಲ ಕಾರಜೋಳ drgopi75@gmail.com ವಿಜಯಪುರ- ಬಸವನಾಡು ವಿಜಯಪುರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದವರು ಸಾವಿರಾರು ಜನ. ಬಸವಣ್ಣನವರಿಂದ ಹಿಡಿದು ಇಂದಿನ ಸಾಹಿತಿಗಳ ವರೆಗೂ ನೂರಾರು ಜನರು ತಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಅವರದೇ ಆದ ಸಾಧನೆಗಳ ಮೂಲಕ ಬಸವನಾಡಿನ ಹೆಸರನ್ನು ಉತ್ತುಂಗಕ್ಕೆ ಒಯ್ದಿದ್ದಾರೆ.ಅಂಥ ಸಾಹಿತಿಗಳಲ್ಲಿ ಮಧುರಚೆನ್ನರೂ ಒಬ್ಬರು. ವಿಜಯಪುರ ಜಿಲ್ಲೆಯ ಗಡಿಭಾಗ ಮತ್ತು ಅತಿ ಹಿಂದುಳಿದ ಪ್ರದೇಶವಾದ ಅವಿಭಜಿತ ಇಂಡಿ ತಾಲೂಕಿನ(ಪ್ರಸ್ತುತ ಚಡಚಣ ತಾಲೂಕಿನಲ್ಲಿದೆ) ಹಲಸಂಗಿ‌ ಗ್ರಾಮದಲ್ಲಿ 1903ರಲ್ಲಿ ಜನಿಸಿದರು. ಬಾಲ್ಯದಲ್ಲಿಯೆ ತುಂಬಾ‌ ಸಾಹಿತ್ಯಾಸಕ್ತರಾಗಿದ್ದ […]

ಶ್ರೀಶೈಲ ಮಲ್ಲಯ್ಯನ ಭಕ್ತಾದಿಗಳಿಗೆ ಸ್ವಾಮೀಜಿ, ಅಧಿಕಾರಿಗಳ ಸಲಹೆ, ಸೂಚನೆ

ವಿಜಯಪುರ, ಮಾ 22- ಭಕ್ತಾದಿಗಳಿಗೆ ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದ್ದ ಆಂಧ್ರ ಪ್ರದೇಶದ ಶ್ರೀಶೈಲದ ಮಲ್ಲಯ್ಯನ ಜಾತ್ರೆಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದ್ದು, ಹಲವಾರು ಕಟ್ಟಳೆಗಳನ್ನು ವಿಧಿಸಲಾಗಿದೆ. ಈ ಬಾರಿ ನಡೆಯಲಿರುವ ಜಾತ್ರೆ ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಶ್ರೀಶೈಲ ಜಗದ್ಗುರುಗಳು ಬಸವನಾಡು ವಿಜಯಪುರದಲ್ಲಿ ಸಭೆ ನಡೆಸಿದ್ದಾರೆ. ಆಂಧ್ರ ಪ್ರದೇಶದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಕೂಡ ಪಾಲ್ಗೋಂಡಿದ್ದ ಈ ಸಭೆಯಲ್ಲಿ ವಿಜಯಪುರ ನಗರದ ನಾನಾ ಸಂಘಟನೆಗಳು ಮತ್ತು ಶ್ರೀಶೈಲಕ್ಕೆ ಪಾದಯಾತ್ರೆ ನಡೆಸುವ ನಾನಾ ಸಂಘಟನೆಗಳ ಮಖಂಡರೂ […]