ಸಮಾಜ ಸೇವಕ ಫಯಾಜ್ ಕಲಾದಗಿಗೆ ನೇಪಾಳ ದೇಶದ ಪ್ರಶಸ್ತಿ- ಯಾವುದು ಗೊತ್ತಾ?

ವಿಜಯಪುರ: ಸಮಾಜ ಸೇವಕ ಫಯಾಜ್ ಕಲಾದಗಿ ಅವರಿಗೆ ನೇಪಾಳ ದೇಶದ ಬಿರಾಟ ನಗರದದ ಸಮತಾ ಸಾಹಿತ್ಯ ಪ್ರತಿಷ್ಠಾನ ಅಂತಾರಾಷ್ಟ್ರೀಯ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಘೋಷಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರವವ ಸಮತಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಶಿವನಾರಾಯಣ ಸಿಂಗ್ಲೆ ಮತ್ತು ಕಾರ್ಯದರ್ಶಿ ಸರಿತಾ ತುಳದಾರ, ಈ ಬಾರಿಯ ಅತ್ಯುತ್ತಮ ಸಮಾಜ ಸೇವಕ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಫಯಾಜ್ ಕಲಾದಗಿ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಫಯಾಜ ಕಲಾದಗಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು […]

ಕಾಖಂಡಕಿಯಲ್ಲಿ ಶ್ರೀಶೈಲ ಜಗದ್ಗುರುಗಳು ಪಲ್ಲಕ್ಕಿ, ಬೆಳ್ಳಿ ಕಂಬಿಯ ಲೋಕಾರ್ಪಣೆ

ವಿಜಯಪುರ: ಶ್ರೀಶೈಲ ಜಗದ್ಗುರುಗಳ ಪಲ್ಲಕ್ಕಿ ಉತ್ಸವ ಮತ್ತು ಮಲ್ಲಯ್ಯನ ದೇವಸ್ಥಾನದ ಬೆಳ್ಳಿ ಕಂಬಿಯ ಲೋಕಾರ್ಪಣೆ ಕಾರ್ಯಕ್ರಮ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆಯಿತು. ಕಾಖಂಡಕಿ ಗ್ರಾಮದ ಹೊರವಲಯದಲ್ಲಿರುವ ಪರಮಹಂಸ ಪೂರ್ವ ಪ್ರಾಥಮಿಕ ಶಾಲೆ ಆವರಣದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸೇವಾ ಸಮಿತಿ ಪಾದಯಾತ್ರೆ ಭಕ್ತರ ವತಿಯಿಂದ 20ನೇ ವರ್ಷದ ಪಾದಯಾತ್ರೆ ಅಂಗವಾಗಿ ಶ್ರೀಶೈಲ ಜಗದ್ಗುರುಗಳು ಪಲ್ಲಕ್ಕಿ ಮಹೋತ್ಸವ ಮತ್ತು ಮಲ್ಲಯ್ಯನ ಭಕ್ತರ ವತಿಯಿಂದ ವಿನೂತನವಾದ ಐದು ಕೆ.ಜಿ ಬೆಳ್ಳಿಯ ಕಂಬಿಯ ಲೋಕಾರ್ಪಣೆ, ಧರ್ಮಸಭೆ, ವರದಾನಿ ಶ್ರೀ ಗುಡ್ಡಾಪುರ ದಾನಮ್ಮ […]

ಭೋವಿ ಸಮಾಜದಿಂದ ನಿರ್ಮಿಸಲಾದ ಶ್ರೀ ಗಜಾನನ ದೇವಸ್ಥಾನ ಉದ್ಘಾಟಿಸಿದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ

ವಿಜಯಪುರ: ನಗರದ ಸ್ಟೇಶನ್ ರಸ್ತೆಯ ಭೋವಿ(ವಡ್ಡರ) ಸಮಾಜದವರಿಂದ ನಿರ್ಮಿಸಲಾದ ಶ್ರೀ ಗಜಾನನ ನೂತನ ದೇವಸ್ಥಾನವನ್ನು ಸಮಾಜದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಉದ್ಘಾಟಿಸಿದರು. ಇದೇ ವೇಳೆ, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ದೇವಸ್ಥಾನದ ಕಳಸಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಮೇಯರ್ ದಿನೇಶ ಹಳ್ಳಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪುತ್ರ ರಾಮನಗೌಡ ಪಾಟೀಲ, ಮಾಜಿ ಕಾರ್ಪೋರೇಟರ್ ಉಮೇಶ ವಂದಾಲ, ನ್ಯಾಯವಾದಿ ಕೆ. ಎಫ್. ಅಂಕಲಗಿ, ಮುಖಂಡರಾದ ಬಸವರಾಜ ಗೊಳಸಂಗಿ, ಪ್ರಶಾಂತ ಲಾಳಸಂಗಿ, […]

ಕಾಖಂಡಕಿಯಲ್ಲಿ ಫೆ. 28 ರಂದು ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇವಸ್ಧಾನದ ನವೀಕರಣವಾದ ಬೆಳ್ಳಿ ಕಂಬಿಯ ಲೋಕಾರ್ಪಣೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿಯ ಗ್ರಾಮದಲ್ಲಿ ಫೆ. 28 ರಂದು ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನವೀಕರಣಗೊಂಡಿರುವ ಬೆಳ್ಳಿಯ ಕಂಬಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ, 20 ನೆಯ ವರ್ಷದ ಶ್ರೀಶೈಲ ಪಾದಯಾತ್ರೆ ಅಂಗವಾಗಿ ಸುಕ್ಷೇತ್ರ ಗುಡ್ಡಾಪುರ ದಾನಮ್ಮದೇವಿಯ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಕೂಡ ನಡೆಯಲಿದೆ.  ಈ ಪ್ರವಚನ ಕಾರ್ಯಕ್ರಮದಲ್ಲಿ ಗುಣದಾಳದ ಕಲ್ಯಾಣ ಮಠದ ಡಾ. ವಿವೇಕಾನಂದ ದೇವರು ಮತ್ತು ಸಂಗೀತ ಸೇವೆ ಕೂಡ ಆಯೋಜಿಸಲಾಗಿದೆ. ಫೆ. 28ರಂದು ಗ್ರಾಮದ ಹೊರವಲಯದಲ್ಲಿರುವ ಪರಮಹಂಸ ಪೂರ್ವ ಪ್ರಾಥಮಿಕ ಶಾಲೆ […]

ದೀಪ ಆರುವ ಮುಂಚೆ ದೊಡ್ಡದಾಗಿ ಉರಿಯುತ್ತದೆ- ಅನಂತಕುಮಾರ ವಿರುದ್ಧ ಲಕ್ಷ್ಮಣ ಸವದಿ ವಾಗ್ದಾಳಿ

ವಿಜಯಪುರ: ದೀಪ ಆರುವ ಮುಂಚೆ ದೊಡ್ಡದಾಗಿ ಉರಿಯುತ್ತದೆ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ವಿರುದ್ಧ ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ ಸವದಿ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಸಂಸದ ಅನಂತಕುಮಾರ ನೀಡಿರುವ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಅನಂತಕುಮಾರ ಹೆಗಡೆ ರಾಜಕೀಯವಾಗಿ ‌ಕಳೆದು ಹೋಗುವ ಮುನ್ನ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾರೆ.  ತಮ್ಮ ಅಸ್ತಿತ್ವವನ್ನು ತಾವೇ ಕಳೆದುಕೊಳ್ಳುತ್ತಿರುವುದು ಪ್ರಾರಂಭವಾಗಿದೆ.  ವಿನಾಶ […]

ಹಾಲುಮತದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ 15ನೆಯ ಧರ್ಮಸಭೆ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯನಾರಳ ಗ್ರಾಮದ ಶ್ರೀ ಮಾಯಮ್ಮ ದೇವಿಯ ಗುಡಿಯ ಆವರಣದಲ್ಲಿ ಹಾಲುಮತದ ಪಟ್ಟದ ಪೂಜಾರಿಗಳ ಹಾಗೂ ಜಡೆತಲೆ ಪೂಜಾರಿಗಳ 15ನೆಯ ಧರ್ಮಸಭೆಯನ್ನು ನಡೆಯಿತು.  ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಯರನಾಳ ಶ್ರೀ ಮಾಯಮ್ಮ ದೇವಿ ದೇವಸ್ಥಾನ ಪೂಜಾರಿ ಶ್ರೀ ಸಂಗಪ್ಪ ಮುತ್ಯಾ ಪೂಜಾರಿ ಜಿಲ್ಲೆಯ ಜಿಲ್ಲೆಗಳ ಪೂಜಾರಿಗಳನ್ನು ಸ್ವಾಗತಿಸಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬೀರಪ್ಪ ಜುಮನಾಳ ಮಾತನಾಡಿ, ಸಂಘಟನೆಯಲ್ಲಿರುವ ಎಲ್ಲಾ ಪಟ್ಟದ ಪೂಜ್ಯರು ಮತ್ತು ಜಡೆತಲೆ ಪೂಜಾರಿಗಳು ಆರಾಧಿಸುವ ದೇವತೆಗಳ ಚರಿತ್ರೆಗಳನ್ನು […]

ವಿಜಯಪುರ ನಗರದಲ್ಲಿ ಏಳು ತಾಯಿ ಮಕ್ಕಳ ದೇವಸ್ಥಾನ ಲೋಕಾರ್ಪಣೆ- ಗಮನ ಸೆಳೆದ ಭವ್ಯ ಕಾರ್ಯಕ್ರಮ

ವಿಜಯಪುರ: ನಗರದ ಎಸ್. ಎಸ್. ಕಾಲೇಜ್ ರಸ್ತೆಯಲ್ಲಿರುವ ಭಜಂತ್ರಿ ಗಲ್ಲಿಯ ಶ್ರೀ ಏಳು ಮಕ್ಕಳ ತಾಯಿಯ ದೇವಸ್ಥಾನ ನೂತನ ಕಟ್ಟಡ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪೂರ್ಣಕುಂಭ ಹೊತ್ತ ಮಹಿಳೆಯರು ನಗರದ ಪ್ರಮುಖ ರಸ್ತೆಗಳಲ್ಲಿ ವಾದ್ಯ ಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.  ಮಧ್ಯಾಹ್ನ ಅನ್ನ ಪ್ರಸಾದ ಸಂಜೆ ಮೂರ್ತಿ ಪ್ರತಿಷ್ಠಾಪನೆನ ಕಾರ್ಯಕ್ರಮ ನಡೆಯಿತು.  ದೇವಾಲಯದ ಆಡಳಿತ ಮಂಡಳಿ ಸದಸ್ಯರು, ನಾನಾ ಸ್ವಾಮೀಜಿಗಳು, ಹಿರಿಯರು, ಸೇರಿದಂತೆ ಸಾವಿರಾರು ಭಕ್ತರು ಈ […]

ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಮಯ ಜೀವನವನ್ನು ಯುವಕರು ಅರಿಯಬೇಕು: ಅಪರ ಜಿಲ್ಲಾದಿಕಾರಿ ಮಹಾದೇವ ಮುರಗಿ

ವಿಜಯಪುರ: ಛತ್ರಪತಿ ಶಿವಾಜಿಯ ಶೌರ್ಯ, ಸಾಹಸ, ರಾಷ್ಟ್ರಭಕ್ತಿ ಹಾಗೂ ಅವರ ಆದರ್ಶ ಅರಿತುಕೊಳ್ಳುವುದರ ಜೊತೆಗೆ, ಅವರ ಜೀವನ ಮೌಲ್ಯಗಳು ಮುಂದಿನ ಜನಾಂಗಕ್ಕೆ ತಿಳಿಸಬೇಕು. ಅವರ ಜೀವನಾದರ್ಶ ಇಂದಿನ ಯುವಕರು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ.  ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಛತ್ರಪತಿ ಶಿವಾಜಿಯ ದೈರ್ಯ, ಸಾಹಸದ […]

ಸಮಾಜ ಕಲ್ಯಾಣ ಇಲಾಖೆ, ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಬರಹದ ಶಬ್ದಗಳು ಬದಲು- ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ

ವಿಜಯಪುರ: ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎಂದು ರಾಷ್ಟ್ರಕವಿ ಕುವೆಂಪು ಅವರು ಮಕ್ಕಳಿಗೆ ಶಾಲೆಗಳ ಬಗ್ಗೆ ಧನ್ಯತಾ ಭಾವ ಬರಲಿ ಎಂದು ಕವನ ರಚಿಸಿದ್ದಾರೆ.  ಬಹುತೇಕ ಶಾಲೆಗಳಲ್ಲಿ ಪ್ರವೇಶ ದ್ವಾರಗಳಲ್ಲಿಯೇ ಈ ಸಾಲುಗಳು ರಾರಾಜಿಸುತ್ತವೆ.  ಅಷ್ಟೇ ಅಲ್ಲ, ಮಕ್ಕಳಲ್ಲಿ ಶಾಲೆ ಮತ್ತು ಅಲ್ಲಿ ವಿದ್ಯೆ ಬೋಧಿಸುವ ಶಿಕ್ಷಕರ ಬಗ್ಗೆ ಗೌರವ ಭಾವನೆಗಳನ್ನು ಹೆಚ್ಚಿಸುತ್ತವೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಾಲೆಗಳ ಪ್ರವೇಶ ದ್ವಾರದ ಮೇಲೆ ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ ಎಂದು […]

ಫೆ.24ರಂದು ಇಂಡಿಯಲ್ಲಿ ಜಿಲ್ಲಾ ಗಾಣಿಗ ಸಮಾವೇಶ- ನೂತನ ಸಭಾಭವನ ಭೂಮಿಪೂಜೆ ಕಾರ್ಯಕ್ರಮ- ಎಂ. ಎಸ್. ಲೋಣಿ

ವಿಜಯಪುರ: ಫೆ. 24ರಂದು ಇಂಡಿಯಲ್ಲಿ ವಿಜಯಪುರ ಜಿಲ್ಲಾ‌ ಗಾಣಿಗ ಸಂಘದ ಬೃಹತ್ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಗಾಣಿಗರ ಸಂಘ ಮತ್ತು ಇಂಡಿ ತಾಲೂಕು‌ ಘಟಕದ ಸಂಯುಕ್ತಾಶ್ರಯದಲ್ಲಿ ಫೆ. 24ರಂದು ಬೆಳಿಗ್ಗೆ 10.30 ಕ್ಕೆ ಇಂಡಿ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿಯ ಗಾಣಿಗ ಸಮಾಜದ ಜಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.  ಈ ಸಂದರ್ಭದಲ್ಲಿ ಶತಮಾನದ ಸಂತ ಶ್ರೀ ಸಿದ್ದೇಶ್ವರ […]