ಓಐಡಿವೈಓ ವತಿಯಿಂದ ನೇತಾಜಿ ಸುಭಾಸಚಂದ್ರ ಬೋಸ ಅವರ 127ನೇ ಜನ್ಮದಿನಾಚರಣೆ
ವಿಜಯಪುರ: ಎಐಡಿವೈಓ ವತಿಯಿಂದ ನಗರದ ಹುತಾತ್ಮ ಸರ್ಕಲ್ ಮತ್ತು ಸರಕಾರಿ ಐಟಿಐ ಕಾಲೇಜ್‌ನಲ್ಲಿ ಎಐಡಿವೈಒ ಸಂಘಟನೆಯ ನೇತೃತ್ವದಲ್ಲಿ ನೇತಾಜಿ ಸುಭಾಸಚಂದ್ರ ಬೋಸ್‌ರವರ 127ನೇ ಜನ್ಮದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಇಂದಿನ ಯುವಜನರಿಗೆ ನೇತಾಜಿಯವರ ಜೀವನ ಚರಿತ್ರೆ ಆದರ್ಶವಾಗಿರಬೇಕು. ನೇತಾಜಿಯವರು ಜೀವನದುದ್ದಕ್ಕೂ ಸಂಧಾನತೀತವಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಎರಡು ಬಾರಿ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿ ಪೂರ್ಣ ಸ್ವರಾಜ್ಯದ ಬಗ್ಗೆ ಹಾಗೂ ಕಾರ್ಮಿಕ ವರ್ಗ ಅಧಿಕಾರಕ್ಕೆ ಬರಬೇಕು ಎಂದು ಸ್ಪಷ್ಟವಾದ […]
ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನಲ್ಲಿ ರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಶ್ರೀರಾಮನಿಗೆ ಪೂಜೆ
ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಡಿ. ಇಜೇರಿ, ನೂರಾರು ವರ್ಷಗಳ ಹಿಂದೆ ಆಗಬೇಕಾಗಿದ್ದ ಶ್ರೀರಾಮ ಮಂದಿರವನ್ನು ಈಗ ಪೂರ್ಣಗೊಳಿಸಿ ಉದ್ಗಾಟಿಸಿರುವುದು ಸಂತಸ ತಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸೌಭಾಗ್ಯ ಎಸ್. ಭೋಗಶೆಟ್ಟಿ, ನಿರ್ದೇಶಕರಾದ ಶಾಂತಪ್ಪ ಎಸ್. ಜತ್ತಿ, ಪ್ರಕಾಶ ಬಗಲಿ, ಗುರುರಾಜ ಗಂಗನಳ್ಳಿ, ಈರಣ್ಣ ಪಟ್ಟಣಶೆಟ್ಟಿ, ಡಾ. […]
ಬಬಲೇಶ್ವರ ಮತಕ್ಷೇತ್ರಾದ್ಯಂತ ನಾನಾ ದೇವಸ್ಥಾನಗಳಲ್ಲಿ ಎಂಬಿಪಿ ಅಭಿಮಾನಿಗಳ ಬಳಗದಿಂದ ವಿಶೇಷ ಪೂಜೆ
ವಿಜಯಪುರ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಸರಕಾರದ ಸುತ್ತೋಲೆಯಂತೆ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ರಾಮ- ಹನುಮಂತದೇವರ ಗುಡಿಗಳು ಹಾಗೂ ಗ್ರಾಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ- ಪ್ರಾರ್ಥನೆ ನೆರವೇರಿಸಲಾಯಿತು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಎಂಬಿಪಿ ಅಭಿಮಾನಿಗಳಿಂದ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತುಅದೇ ರೀತಿ ಶ್ರೀ ಎಂ. ಬಿ. ಪಾಟೀಲ ಅವರ ಅಭಿಮಾನಿಗಳ ಬಳಗದವರು ಕೂಡಾ ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ರಾಮ, ಹನುಮಂತ ಮತ್ತು […]
ದುಬೈನಲ್ಲಿ ಜೈ ಶ್ರೀರಾಮ ಎಂದು ಸಂಭ್ರಮಿಸಿದ ಬಸವನಾಡಿನ ಪ್ರವಾಸಿಗರು
ವಿಜಯಪುರ: ಈಗ ದೇಶಾದ್ಯಂತ ಶ್ರೀರಾಮ ಮಂದಿರದಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಸಂಚಲನ ಸೃಷ್ಠಿಸಿದೆ. ಎಲ್ಲೆಡೆ ಜೈ ಶ್ರೀರಾಮ ಘೋಷಣೆಗಳು ಮೊಳಗುತ್ತಿದ್ದರೆ, ಎಲ್ಲ ಕಡೆ ರಾಮಭಕ್ತರು ನಾನಾ ರೀತಿಯಲ್ಲಿ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದೇ ರೀತಿ, ದುಬೈ ಪ್ರವಾಸದಲ್ಲಿರುವ ಬಸವನಾಡು ವಿಜಯಪುರ ಜಿಲ್ಲೆಯ ಹಲವಾರು ಜನರು ತಾವೀಗ ಪ್ರವಾಸ ಕೈಗೊಂಡಿರುವ ಸ್ಖಳದಲ್ಲಿಯೇ ಕೈಯ್ಯಲ್ಲಿ ಭಗವಾ ಧ್ವಜ ಹಿಡಿದು ರಾಮ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ವಿಜಯಪುರ […]
ವಿಜಯಪುರ ಆದರ್ಶ ನಗರದ ಮಾರುತಿ ಮಂದಿರದಲ್ಲಿ ಶ್ರೀರಾಮನಿಗೆ ಪೂಜೆ
ವಿಜಯಪುರ: ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬಸವನಾಡು ವಿಜಯಪುರ ನಗರದ ಆದರ್ಶ ನಗರದ ಶ್ರೀ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ದೇವಸ್ಥಾನದಲ್ಲಿ ಸೇರಿದ ಬಡಾವಣೆಯ ನಿವಾಸಿಗಳು ಶ್ರೀರಾಮಚಂದ್ರನ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಮನಾಮ ಜಪಿಸಿದರು. ಅಲ್ಲದೇ, ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಅಲ್ಲದೇ, ಪ್ರಸಾದ ಹಂಚಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಶ್ರೀ ಹನುಮಾನ ದೇವಸ್ಥಾನ ಅಧ್ಶಕ್ಷ […]
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ- ಬಸವ ನಾಡಿನಲ್ಲಿ ಝಗಮಗಿಸುತ್ತಿರುವ ರಸ್ತೆಗಳು, ದೇವಸ್ಥಾನಗಳು
ವಿಜಯಪುರ: ಬಹು ನಿರೀಕ್ಷಿತ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಬಸವನಾಡು ವಿಜಯಪುರ ಜಿಲ್ಲೆಯಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡಿದೆ. ಜನೇವರಿ 22 ರಂದು ಸೋಮವಾರ ಗುಮ್ಮಟ ನಗರಿ ವಿಜಯಪುರದಲ್ಲಿ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರಗಳು ಕಣ್ಮನ ಸೆಳೆಯುತ್ತಿವೆ. ನಗರ ಕಲರ್‌ಪುಲ್ ಲೈಟಿಂಗ್ ಮೂಲಕ ಜಗಮಗಿಸುತ್ತಿದೆ. ನಗರದ ಶಿವಾಜಿ ವೃತ್ತದಲ್ಲಿ ಕೇಸರಿ ಬಾವುಟಗಳನ್ನು ಕಟ್ಟಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಗಾಂಧಿಚೌಕ್, ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ್ ಚೌಕ್ ಗಳಲ್ಲಿಯೂ ವಿದ್ಯುತ್ ದೀಪಾಲಂಕಾರ […]
ಅಂಬಿಗರ ಚೌಡಯ್ಯ ಶ್ರೇಷ್ಠ ತತ್ವಜ್ಞಾನಿ, ವಚನಕಾರರು- ಜಿಲ್ಲಾಧಿಕಾರಿ ಟಿ. ಭೂಬಾಲನ್
ವಿಜಯಪುರ: ಬಸವಾದಿ ಶರಣರ ಸಮಕಾಲಿನ ಶರಣರಾದ ಅಂಬಿಗರ ಚೌಡಯ್ಯನವರು ಅಂದಿನ ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವನಿಷ್ಟ ಶ್ರೇಷ್ಟ ತತ್ವಜ್ಞಾನಿ, ವಚನಕಾರರಾಗಿದ್ದರು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ದಾಸೋಹ,ಶಿವಯೋಗ ಸಾಧನೆಯ ಮೂಲಕ […]
1857ರ ಸ್ವಾತಂತ್ರ್ಯ ಸಂಗ್ರಾಮ ರಾಷ್ಟ್ರೀಯತೆ ಬೆಳೆಯಲು ಕಾರಣ- ಶಂಕರಗೌಡ ಸೋಮನಾಳ
ವಿಜಯಪುರ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ರಾಷ್ಟ್ರೀಯತೆ ಬೆಳೆಯಲು ಹಾಗೂ ಸ್ವಾತಂತ್ರ್ಯ ಚಳವಳಿಯಿಂದ ಭಾರತೀಯ ಜನರಲ್ಲಿ ರಾಷ್ಟ್ರೀಯತೆಯ ಮನೋಭಾವ ಬರಲು ಕಾರಣವಾಯಿತು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ಇತಿಹಾಸ ವಿಭಾಗದಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಅಮೋಘವಾಗಿದ್ದು, 1857ರ ಪ್ರಥಮ ಸ್ವಾತಂತ್ರö್ಯ ಸಂಗ್ರಾಮವು ಪ್ರೇರಣೆಯಾಗಿದೆ. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಯ ದೃಷ್ಟಿಕೋನದಿಂದಲೂ ಆಧುನಿಕ ಭಾರತದ […]
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಸರಕಾರದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ ಸಂಗಮೇಶ ಬಬಲೇಶ್ವರ
ವಿಜಯಪುರ: 12ನೇ ಶತಮಾನದ ಸಮಾಜ ಸುಧಾರಕ, ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಸ್ಥಾಪಕ ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದಕ್ಕೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರಕಾರ ಐತಿಹಾಸಿಕ ತೀರ್ಮಾನ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ, ಸಚಿವರಾದ ಶರಣ ಎಂ. ಬಿ. ಪಾಟೀಲ, ರಾಜ್ಯ ಸಚಿವ ಸಂಪುಟದ ಎಲ್ಲ […]
ನಾಗರಾಳೆ ಶಾಲೆ ವಾರ್ಷಿಕೋತ್ಸವ: ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ- ಎಡಿಸಿ ಮಹಾದೇವ ಮುರಗಿ
ವಿಜಯಪುರ: ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾಗರಾಳೆ ಪಬ್ಲಿಕ್ ಸ್ಕೂಲ್ ಕಳೆದ 23 ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತ ಮುಂಚೂಣಿಯಲ್ಲಿರುವುದು ಶ್ಲಾಘನೀಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು. ನಗರದ ಗಚ್ಚಿನಕಟ್ಟಿ ಕಾಲನಿಯಲ್ಲಿರುವ ನಾಗರಾಳೆ ಪಬ್ಲಿಕ್ ಶಾಲೆಯ 23ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳ ಬಗ್ಗೆ ಪ್ರತಿ ತಿಂಗಳು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತ, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. […]