ಮತ್ದೊಂದು ಹೊಸ ರೋಗ ಬರ್ತೈತಾದ್ರ ಕೊರೊನಾದಂಗಲ್ಲ- ಭಾರತ ಪ್ರೀತಿಯಿಂದ ಬೇರೆ ದೇಶ ಆಳ್ತೈತಿ- ರಾಜಕೀಯ ಗೊಂದಲ ಐತಿ- ಕತ್ನಳ್ಳಿ ಕಾರ್ಣಿಕ ಭವಿಷ್ಯ

ವಿಜಯಪುರ: ಕೊರೊನಾ ಬಳಿಕ ವೈದ್ಯರಿಗೆ ತಲೆನೋವು ತರುವ ಮತ್ತೊಂದು ರೋಗಬಾಧೆ ಜನರನ್ನು ಕಾಡಲಿದೆ.  ಆದರೆ, ಇದು ಕೊರೊನಾದಷ್ಟು ಮಾರಕವಾಗಿರಲ್ಲ ಎಂದು ಬಸವನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಮುತ್ಯಾ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.  ಸುಕ್ಷೇತ್ರ ಕತ್ನಳ್ಳಿಯಲ್ಲಿ ಯುಗಾದಿ ಅಂಗವಾಗಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯ ಅಂಗವಾಗಿ ನಡೆದ ಸಾಮೂಹಿಕ ವಿವಾಹದ ಬಳಿಕ ಪ್ರತಿವರ್ಷದಂತೆ ಈ ವರ್ಷವೂ ವರ್ಷದ ಭವಿಷ್ಯ ನುಡಿದ ಅವರು, ಹೊಸ ರೋಗದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಪ್ರಾಣಿ […]

ಈ ವರ್ಷ ಉತ್ತಮ ಮಳೆಯಿದೆ, ಕೊರೊನಾ, ವೃದ್ಧಾಶ್ರಮಗಳು ಕಡಿಮೆಯಾಗಲಿವೆ, ಭೂಕಂಪ, ಪ್ರಳಯದ ಆತಂಕವಿದೆ, ಸೈನಿಕರಿಗೆ ಗೆಲುವಿದೆ- ಬಬಲಾದಿ ಕಾರ್ಣಿಕ ಭವಿಷ್ಯ

ವಿಜಯಪುರ: ಕಾಲಜ್ಞಾನದ ಭವಿಷ್ಯಕ್ಕೆ ಹೆಸರಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದ ಹೊಳೆ ಬಬಲಾದಿ ಶ್ರೀ ಸದಾಶಿವ ಮಠಾಧೀಶ ಶ್ರೀ ಸಿದ್ಧರಾಮಯ್ಯ 2023-24ರ ಭವಿಷ್ಯ ನುಡಿದಿದ್ದು, ಅದರಲ್ಲಿನ ಬಹುತೇಕ ಅಂಶಗಳು ಜನಸಾಮಾನ್ಯರಿಗೆ ನೆಮ್ಮದಿ ತರುವಂತಿವೆ. ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆ ಪ್ರತಿ ವರ್ಷ ಮಹಾಶಿವರಾತ್ರಿಯಂದು ನಡೆಯುತ್ತಿದ್ದ, ಇಲ್ಲಿ ಮದ್ಯಾರಾಧನೆ ತಲೆತಲಾಂತರಗಳಿಂದಲೂ ಮುಂದುವರೆದುಕೊಂಡು ಬಂದಿದೆ.  ಈ ಹಿಂದೆ ಕೊರೊನಾ, ನಾನಾ ಬೆಂಕಿ, ಭೂಕಂಪ, ಜಲಪ್ರಳಯಗಳು, ರಾಜಕೀಯ ಪಲ್ಲಟಗಳ ಕುರಿತು ಇಲ್ಲಿನ ಕಾರ್ಣಿಕರು ನುಡಿದಿದ್ದ […]

ಅಗ್ನಿಸ್ಪರ್ಷ ಮಾಡಿ- ವಿಧಿವಿಧಾನಗಳು ಬೇಡ- ನದಿ, ಸಾಗರದಲ್ಲಿ ಚಿತಾಭಸ್ಮ ವಿಸರ್ಜಿಸಿ- ಸ್ಮಾರಕ ಬೇಡ- ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ- ಶ್ರೀಗಳ ಉಯಿಲು

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ತಮ್ಮ ಅಂತ್ಯಕ್ರಿಯೆಯ ಬಗ್ಗೆಯೂ ಉಯಿಲು(ವಿಲ್) ಬರೆದಿಟ್ಟಿದ್ದಾರೆ.  ವೀರಶೈವ ಲಿಂಗಾಯತ ಸಮುದಾಯದಲ್ಲಿ ಜನಿಸಿದರೂ ಶ್ರೀಗಳು ಆ ಸಂಪ್ರದಾಯದಂತೆ ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಸ್ಪರ್ಷ ಮಾಡಬೇಕು ಎಂದು ಉಯಿಲು ಬರೆದಿಟ್ಟಿದ್ದಾರೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವುದೇ ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ.  ಅಗ್ನಿಸ್ಪರ್ಷದ ನಂತರ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು.  ನನ್ನ ನೆನಪಿನಲ್ಲಿ ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು.  ನಾನು ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ ಎಂದು 2014ರ ಗುರುಪೂರ್ಣಿಮೆಯ ದಿನ ಶ್ರೀಗಳು ತಮ್ಮ ಇಚ್ಛೆಯನ್ನು ದಾಖಲಿಸಿದ್ದಾರೆ.  […]

Journalists Siddheshwar Swamiji: ಪತ್ರಕರ್ತರು ಸಾರ್ವಜನಿಕ ಶಿಕ್ಷಕರು- ಶ್ರೀ ಸಿದ್ಧೇಶ್ವರ ಸ್ಚಾಮೀಜಿ

ವಿಜಯಪುರ: ಪ್ರತಿದಿನ ಹೊಸ ಹೊಸ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರು ಸಾರ್ವಜನಿಕರ ಶಿಕ್ಷಕರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾಡನಾಡಿದರು. ಪತ್ರಿಕೆಗಳಿಗೆ ಓದುಗರ ಮನಸ್ಸು ವಿಕಾಸಗೊಳಿಸುವ, ಮುಖವಿದೆ, ಸರಕಾರದ ನಡೆ, ನುಡಿ ತಿದ್ದುವ ಮುಖವಿದೆ. ‌ಈ ಮುಖದಲ್ಲಿ ಯಾವ ಮುಖವೂ ವಿಮುಖವಾಗಬಾರದು. ಪತ್ರಿಕೆಗಳಲ್ಲಿ ಕ್ರೀಡೆಗಳಿಗೂ ಒಂದು ಪುಟ ಮೀಸಲಿರುತ್ತದೆ. ಯುವಜನತೆಗೆ ಈ […]

Sutturu Seer: ವಿಜಯಪುರ ಜಿಲ್ಲೆಯ ಶರಣರು ಸಾಧಕರನ್ನ ಕೊಂಡಾಡಿದ ಸುತ್ತೂರು ಶ್ರೀಗಳು

ವಿಜಯಪುರ: ಅತ್ಯಂತ ಶ್ರೇಷ್ಠ(Great) ಗುಣಗಳನ್ನು ಏಕವ್ಯಕ್ತಿಯಲ್ಲಿ ಒಟ್ಟಿಗೆ ಕಾಣುವುದಾದರೆ ಅದು ವಿಜಯಪುರ(Vijayapura) ಜ್ಞಾನಯೋಗಾಶ್ರಮದ(Jnanayogashrama) ಪೂಜ್ಯ ಸಿದ್ದೇಶ್ವರ ಶ್ರೀಗಳಲ್ಲಿ(Shree Siddheshwar Swamiji) ಕಾಣುತ್ತೇವೆ ಎಂದು ಸುತ್ತೂರು ಶ್ರೀ ಕ್ಷೇತ್ರದ ಪೂಜ್ಯಶ್ರೀ ಡಾ.‌ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು(Sutturu Shree Deshikendra Swamiji) ಹೇಳಿದರು. ವಿಜಯಪುರ ನಗರದಲ್ಲಿ ಡಾ. ಮಹಾಂತೇಶ ಬಿರಾದಾರ ನಿವಾಸದಲ್ಲಿ ನಡೆದ ಸತ್ಸಂಗದಲ್ಲಿ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಲೋಕದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳು ವಿಜಯಪುರದ ಹೆಸರನ್ನು ಜಗತ್ತಿನಲ್ಲಿ ಬೆಳಗುವಂತೆ ಮಾಡಿದ್ದಾರೆ. ಅವರು ಕೇವಲ ಜ್ಞಾನಕ್ಕಾಗಿ ಪ್ರಸಿದ್ಧಿ ಪಡೆದಿಲ್ಲ. ವೈರಾಗ್ಯದ […]

ವಿಶ್ವದ ಎಲ್ಲ ದೇಶಗಳು ಭಾರತದ ಮಾತು ಕೇಳುವ ಸಮಯ ಬರಲಿದೆ- ಕತ್ಳಳ್ಳಿ ಕಾರ್ಣಿಕ ನುಡಿದ ಭವಿಷ್ಯದಲ್ಲಿ ಮತ್ತೇನೇನಿದೆ ಗೊತ್ತಾ?

ಮಹೇಶ ವಿ. ಶಟಗಾರ ವಿಜಯಪುರ: ಭಾರತದ(India) ಸಂಸ್ಕೃತಿಯನ್ನು(Culture) ಉಳಿಸಿ ಬೆಳೆಸುವ ಕೆಲಸ ಮಾಡಬೇಕು.  ಆಗ ಜಗತ್ತಿನ(World) ಎಲ್ಲ ರಾಷ್ಟ್ರಗಳು(Nations) ಭಾರತದ ಮಾತನ್ನು ಕೇಳುತ್ತವೆ.  ಆ ಸಮಯ(Time) ಬರಲಿದೆ ಎಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತ್ನಳ್ಳಿ(ಕತಕನಹಳ್ಳಿ)ಯ ಶ್ರೀಗುರು ಚಕ್ರವರ್ತಿ ಸದಾಶವಿ ಮಠಾಧೀಶ ಮತ್ತು ಕಾರ್ಣಿಕ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಪ್ರತಿವರ್ಷ ಯುಗಾದಿಯ ಅಂಗವಾಗಿ ಇಲ್ಲಿ ಐದು ದಿನಗಳ ಜಾತ್ರೆ ನಡೆಯುತ್ತಿದ್ದು, ಜಾತ್ರೆಯ ಕೊನೆಯ ದಿನ ಇಲ್ಲಿನ ಕಾರ್ಣಿಕರು ನುಡಿಯುವ ಭವಿಷ್ಯ ಈವರೆಗೂ ನಿಜವಾಗುತ್ತಿರುವುದು ಗಮನಾರ್ಹವಾಗಿದೆ.  ಚಹಾ ಮಾರುವವನ […]

ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಸಮೃದ್ಧಿಯಾಗುತ್ತದೆ- ಶ್ರೀ ಸಿದ್ಧೇಶ್ವರ ಸ್ವಾಮೀಜಿ

ವಿಜಯಪುರ: ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಸಮೃದ್ಧಿಯಾಗುತ್ತದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸುಕ್ಷೇತ್ರ ಉಪ್ಪಲದಿನ್ನಿಯಲ್ಲಿ ಉಪ್ಪಲಗಿರಿ ಸಂಗಮನಾಥ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಗಳು, ಭೂಮಿತಾಯಿ ನಾವೆಲ್ಲರೂ ಸಂತೋಷದಿಂದ ಇರಲು ಬಾಳೆ,  ಕಬ್ಬು, .ಮಾವು, ಲಿಂಬೆ, ಸೇಬು,  ದ್ರಾಕ್ಷಿ, ಬಿಳಿಜೋಳ, ಗೋದಿ,  ತೊಗರಿ, ಹೆಸರು, ಸಜ್ಜೆ, […]

ಮತ್ತೆ ನಿಜವಾಯ್ತು ಹೊಳೆಬಬಲಾದಿ ಮಠಾಧೀಶರ ಭವಿಷ್ಯ- ಅವರು ಅಂದು ಹೇಳಿದ್ದೇನು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾನ ಮಠದ ಕಾರ್ಣಿಕರು ಹೇಳಿದ ಭವಿಷ್ಯ ಮತ್ತೆ ನಿಜವಾಗಿದೆ.  ಈ ಮಠದ ಕಾರ್ಣಿಕರು ನುಡಿಯುವ ಭವಿಷ್ಯಗಳು ಈವರೆಗೂ ಸುಳ್ಳಾಗಿದ್ದೆ ಇಲ್ಲ.  ಈ ಬಾರಿಯೂ ಅವರು ಹೇಳಿದ ಆ ವಿಚಾರ ಈಗ ನಿಜವಾಗಿದೆ.  ಮಹಾಶಿವರಾತ್ರಿ ದಿನದಿಂದ ಐದು ದಿನಗಳ ಕಾಲ ಈ ಮಠದ ಜಾತ್ರೆ ನಡೆಯುತ್ತದೆ.  ಮೊದಲ ದಿನ ಅಭಿಷೇಕ ಮತ್ತು ಉಪಾಸನೆ ನಡೆಯುತ್ತದೆ.  ಎರಡನೇ ದಿನ ರಥೋತ್ಸವ ಇರುತ್ತದೆ.  ಮೂರನೇ ದಿನ ಅನ್ನಸಂತರ್ಪಣೆ […]

ಹಿಂದೂಗಳ ದೇವಸ್ಥಾನ ತೆರವು ತಡೆಯಲು ಹಿಂದು ಪ್ರಧಾನಿ, ಹಿಂದು ಸಿಎಂ ಕ್ರಮ ಕೈಗೊಳ್ಳಲಿ- ಮನಗೂಳಿ ಸ್ವಾಮೀಜಿ

ವಿಜಯಪುರ: ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನಗಳನ್ನು ತೆರವುಗೊಳಿಸಲು ಮುಂದಾಗಿರುವ ಅಲ್ಲಿನ ಜಿಲ್ಲಾಡಳಿತದ ಕ್ರಮಕ್ಕೆ ಬಸವ ನಾಡಿನ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭೊನವ ಸಂಗನ ಬಸವ ಶಿವಾಚಾರ್ಯರು ಮೈಸೂರು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೈಸೂರು ಭಾಗದಲ್ಲಿ ಹಿಂದೂಗಳ ದೇವಸ್ಥಾನ ತೆರವು ಮಾಡುತ್ತಿರುವುದು ಖಂಡನೀಯವಾಗಿದೆ. ಇದು ಇದು ಹಿಂದೂಗಳ ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದುಗಳಾಗಿದ್ದಾರೆ. […]

ಬೆಸುಗೆ ಕಾಲ ಯಾರನ್ನು ಬೆಸೆಯುತ್ತೋ? ಬೇರ್ಪಡಿಸುತ್ತೋ? ಕತ್ನಳ್ಳಿ ಕಾರ್ಣಿಕರ ಮಾರ್ಮಿಕ ಭವಿಷ್ಯ

ಬಸವ ನಾಡು ವಿಜಯಪುರ- ಎರಡು ವರ್ಷಗಳ ಹಿಂದೆಯೇ ಕೊರೊನಾ ಬಗ್ಗೆ ಭವಿಷ್ಯ ನುಡಿದಿದ್ದ ಬಸವ ನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಈ ಬಾರಿಯೂ ಭವಿಷ್ಯ ನುಡಿದಿದ್ದಾರೆ.ಈ ಹಿಂದೆ ಚಹಾ ಮಾರಾಟ ಮಾಡುವವ ದೇಶದ ಚುಕ್ಕಾಣಿ ಹಿಡಿಯುತ್ತಾನೆ ಎಂದು 2013 ರಲ್ಲಿಯೇ ಭವಿಷ್ಯ ನುಡಿದಿದ್ದ ಸ್ವಾಮೀಜಿ, ಎರಡು ವರ್ಷಗಳ ಹಿಂದೆ ವೈದ್ಯರು ತಲೆಗೆ ಕೈ ಹಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳುವ ಮೂಲಕ ಯಾರಿಗೂ ಗೊತ್ತಿರದ ಕೊರೊನಾ ಬಗ್ಗೆ ಸೂಚ್ಯವಾಗಿ […]