ಮಾದರಿ ಅಂಗನವಾಡಿಯಲ್ಲಿದೆ ಚಿಣ್ಣ ಕಲಿಯಲು ಬೇಕಾದ ಜ್ಞಾನದ ಭಂಡಾರ- ಆಟದೊಂದಿಗೆ ಶಿಕ್ಷಕರು ಮಾಡುವ ಪಾಠ ಬಲು ಸುಂದರ
ವಿಜಯಪುರ: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಲಾಖೆ, ಗ್ರಾ. ಪಂ. ಆಡಳಿತ ಮಂಡಳಿ ಮತ್ತು ಶಿಕ್ಷಕರು ಮನಸ್ಸು ಮಾಡಿದರೆ ಹೇಗೆ ಮಾದರಿ ಕೆಲಸ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದೆ ಬಸವ ನಾಡಿನ ಈ ಅಂಗನವಾಡಿ ಕೇಂದ್ರ. ಇಲ್ಲಿ ಮಕ್ಕಳ ಆಟದ ಜೊತೆಗೆ ಪಾಠವನ್ನು ಕಲಿಸಲಾಗುತ್ತಿದ್ದು, ಎಲ್ಲವೂ ಹೊಸ ಶಿಕ್ಷಣ ನೀತಿಯಂತೆ ನಡೆಯುತ್ತಿರುವುದು ಗಮನಾರ್ಹವಾಗಿದೆ. ಯಾವುದೇ ಕಾನ್ವೆಂಟ್ ಗಳಿಗೂ ಕಮ್ಮಿ ಇಲ್ಲ ನಮ್ಮ ಅಂಗನವಾಡಿ ಎಂದು ಅಲ್ಲಿ ಪೋಷಕರೇ ಹೇಳುವುದು ಕುತೂಹಲಕ್ಕ ಕೆರಳಿಸುತ್ತಿದೆ. ಇದು ಬಸವನಾಡು […]
ಗುಮ್ಮಟ ನಗರಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಟಾಂಗಾ ಸವಾರಿ ಮೂಲಕ ರೂಟ್ ಮ್ಯಾಪ್ ರೂಪಿಸಿದ ಡಿಸಿ ಪಿ. ಸುನೀಲ ಕುಮಾರ
ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಪಿ. ಸುನೀಲ ಕುಮಾರ(P Sunil Kumar) ರಜಾ ದಿನಗಳಲ್ಲಿಯೂ ಸಕ್ರೀಯರಾಗಿ(Active) ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯೋಚಿಸುವ ಚಿಂತನಾಶೀಲ ಅಧಿಕಾರಿ. ಸಾರ್ವತ್ರಿಕ ರಜಾ ದಿನಗಳಲ್ಲಿ ನಾನಾ ಕಡೆಗಳಲ್ಲಿ ಸಂಚರಿಸಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ, ಅವುಗಳಿಗೊಂದು ರೂಪ ನೀಡುವುದು ಮತ್ತು ಹೊಸ ಯೋಚನೆ(New Plan) ಜಾರಿಗೆ ಯೋಜನೆ ರೂಪಿಸುವಲ್ಲಿ ನಿಸ್ಸೀಮರು. ಈಗ ಎರಡನೇ ಶನಿವಾರವೂ ಕೂಡ ಅಭಿವೃದ್ಧಿ ಸಂಬಂಧಿಸಿದಂತೆ ಇಂಥದ್ದೆ ಒಂದು ಕಾರ್ಯಕ್ರಮ ಮಾಡುವ ಮೂಲಕ ಮತ್ತೆ ಮತ್ತೆ ಗಮನ ಸೆಳೆದಿದ್ದಾರೆ. ಈ […]
ಹಿರಿಯರು ದಶಕಗಳ ಹಿಂದೆ ಹಿಂದೆ ಹೊತ್ತಿದ್ದ ಹಳೆಯ ಹರಕೆಯನ್ನು ತೀರಿಸಿದ ಮುಸ್ಲಿಂ ಕುಟುಂಬ
ವಿಜಯಪುರ: ಇದು ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಬಸವನಾಡಿನಲ್ಲಿ ನಡೆದ ಮನಮುಟ್ಟುವ ಸ್ಟೋರಿ. ಶರಣರ ನಾಡು. ಸೂಫಿ ಸಂತರ ಬೀಡು ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ನಡೆದ ಭಾವೈಕ್ಯೆತೆಗೆ ಸಾಕ್ಷಿಯಾದ ಕಾರ್ಯಕ್ರಮ. ವಿಶೇಷ ಕಾರ್ಯಕ್ರಮ ಎಂದರೂ ತಪ್ಪಲ್ಲ. ಈ ಕಾರ್ಯಕ್ರಮದಲ್ಲಿ ಇಡೀ ಊರಿಗೆ ಊರೇ ಪಾಲ್ಗೋಂಡು ಸಂಭ್ರಮಿಸಿದ್ದು ಈ ಸಮಾರಂಭದ ಮತ್ತೋಂದು ವಿಶೇಷ. ಇಲ್ಲಿ ಮುಸ್ಲಿಂ ಭಕ್ತರು ತಮ್ಮ ಹಿರಿಯರು 50 ವರ್ಷಗಳ ಹಿಂದೆ ಹಿಂದೂ ದೇವರಿಗೆ ಹೊತ್ತಿದ್ದ ಹರಕೆಯನ್ನು ತೀರಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ಈ ಕುಟುಂಬದ […]
ಅಧಿಕಾರಿಗಳ ಉತ್ಸಾಹ, ಜನಪ್ರತಿನಿಧಿಗಳ ಸಹಕಾರ- ಗುಮ್ಮಟ ನಗರಿಯಲ್ಲಿರದ ಆ ಒಂದು ವ್ಯವಸ್ಥೆ ಲಿಂಬೆ ನಾಡಿಗೆ ಬಂತು
ವಿಜಯಪುರ: ಅಧಿಕಾರಿಗಳ ಉತ್ಸಾಹ, ಜನಪ್ರತಿನಿಧಿಗಳ ಸಹಕಾರವಿದ್ದರೆ ಜನರಿಗೆ ಹೇಗೆ ಉಪಕಾರವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ವ್ಯವಸ್ಥೆ. ಇದು ಹಿಂದುಳಿದ ಜಿಲ್ಲೆಯ ಹಿಂದುಳಿದ ತಾಲೂಕು ಕೇಂದ್ರದಲ್ಲಿ ಜಾರಿಗೆ ತರಲಾಗಿರುವ ಮುಂದುವರೆದ ತಂತ್ರಜ್ಞಾನದ ಸದ್ಬಳಕೆಗೆ ತಾಜಾ ಉದಾಹರಣೆ ಎಂಬಂತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ಜಿಲ್ಲೆಯ ಲಿಂಬೆ ನಾಡು ಇಂಡಿ ಪುರಸಭೆಯಲ್ಲಿ ಈಗ ಜನರಿಗೋಸ್ಕರ ಅನುಕೂಲವಾಗುವ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗಿದೆ. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮ ತಾಲೂಕು ಜಿಲ್ಲಾ ಕೇಂದ್ರವಾಗುವ ನಿಟ್ಟಿನಲ್ಲಿ ಆಗಬೇಕಾಗಿರುವ ಕೆಲಸಗಳ ಕಡೆ […]
ಬಸವ ನಾಡಿನ ಖ್ಯಾತ ವ್ಯಂಗ್ಯ ಚಿತ್ರಕಾರ, ಮಕ್ಕಳ ಸಾಹಿತಿ, ಶರಣು ಚಟ್ಟಿ ರಚಿಸಿರುವ ಯುಗಾದಿ ಕವನ
ಬಸವನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರಕಾರ, ಸಾಹಿತಿ, ಮಕ್ಕಳ ಕವಿ ಮತ್ತು ಶಿಕ್ಷಕರಾಗಿರುವ ಶರಣು ಚಟ್ಟಿ ಹೊಸ ವರ್ಷ ಯುಗಾದಿಯ ಅಂಗವಾಗಿ ರಚಿಸಿರುವ ಕವನವಿದು. ಶರಣು ಚಟ್ಟಿ ಅವರ ಫೇಸ್ ಬುಕ್ ವಾಲ್ ನಿಂದ ಪಡೆದದ್ದು.
ಬಸವ ನಾಡಿನಲ್ಲಿರುವ ಡೀಮ್ಡ್ ವಿವಿ ಇದು.
ವಿಜಯಪುರ ನಗರದಲ್ಲಿರುವ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯವೂ ಸಮಾಜಮುಖಿ ಸೇವೆಗಳ ಮೂಲಕ ಗಮನ ಸೆಳೆಯುತ್ತಿದೆ.
ರಾಜ್ಯದ ಪ್ರಥಮ ಮತ್ತ ಏಕೈಕ ಮಹಿಳಾ ವಿವಿ ಎಲ್ಲಿದೆ ಗೊತ್ತಾ?
12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಶ್ರಮಿಸಿದ ಮಹಾಪುರಷ ಅಣ್ಣ ಬಸವಣ್ಣನವರ ತವರು ಜಿಲ್ಲೆ ವಿಜಯಪುರ ಜಿಲ್ಲೆಯ ತೊರವಿಯಲ್ಲಿದೆ ರಾಜ್ಯದ ಮೊದಲ ಮತ್ತು ಏಕೈಕ ಮಹಿಳಾ ವಿಶ್ವವಿದ್ಯಾಲಯ.