ಬಸವನಾಡಿನ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ, ಜನಪದ ಕಲಾವಿದ ಬಸವರಾಜ ಸಂಗಪ್ಪ ಹಾರಿವಾಳ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ವಿಜಯಪುರ: ಬಸವನಾಡು ವಿಜಯಪುರದ ಡಾ. ಅಶ್ವಿನಿ ಆಸ್ಪತ್ರೆಯ ಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ಮತ್ತು ಬಸವನ ಬಾಗೇವಾಡಿಯ ಜಾನಪದ ಕಲಾವಿದ ಬಸವರಾಜ ಸಂಗಪ್ಪ ಹಾರಿವಾಳ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 1 ರಂದು ಬೆಂಗಳೂರನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಸಚಿವರು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂತಸ ವ್ಯಕ್ತಪಡಿಸಿದ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ತಮಗೆ ಈ ಬಾರಿ […]
ಜ್ಞಾನದಾಹ: 83ನೇ ಇಳಿ ವಯಸ್ಸಿನಲ್ಲಿ 5ನೇ ಎಂ ಎ ಪರೀಕ್ಷೆ ಬರೆದ ಹಿರಿಯ ನಾಗರಿಕ- ಇವರು ಎಲ್ಲರಿಗೂ ಮಾದರಿ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ. ಎಸ್. ಎಸ್. ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಕೇಂದ್ರ ಆಯೋಜಿಸಿರುವ ಎಂ. ಎ. ಇಂಗ್ಲಿಷ್ ಪರೀಕ್ಷೆಗೆ 83 ವರ್ಷ ಮತ್ತು 68 ವರ್ಷದ ಹಿರಿಯರು ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಂಗ್ಲಿಷ್ ಪರೀಕ್ಷೆ ನಡೆಯಿತು. ಈ ವೇಳೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರಿನ 83 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ವಿಜಯಪುರ […]
CBSE Exam: ಶ್ರೀ ಬಿ. ಎಂ. ಪಾಟೀಲ ಸ್ಕೂಲ್ ವಿದ್ಯಾರ್ಥಿ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ
ವಿಜಯಪುರ: ಇತ್ತೀಚೆಗೆ ನಡೆದ ಸಿ.ಬಿ.ಎಸ್.ಸಿ 10 ನೇ ತರಗತಿ ಪರೀಕ್ಷೆಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ಪಬ್ಲಿಕ್ ಶಾಲೆ ವಿದ್ಯಾರ್ಥಿ ಮಿಹೀರ್ ಮಹೇಶ ದೇಶಪಾಂಡೆ ಶೇ.98 ಅಂಕ ಪಡೆದು ವಿಜಯಪುರ ಮತ್ತು ಬಾಗಲಕೋಟೆ ಎರಡು ಜಿಲ್ಲೆಗಳಿಗೆ ದ್ವಿತೀಯ ಗಳಿಸಿದ್ದಾನೆ. ಅಲ್ಲದೇ, ಈ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಪಾಸಾಗುವ ಮೂಲಕ ಶಾಲೆ ಶೇ.100 ರಷ್ಟು ಫಲಿತಾಂಶ ದಾಖಲಿಸಲು ಕಾರಣರಾಗಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಶಾಲೆಯ ಪ್ರಾಚಾರ್ಯ ಬಂದನಾ ಬ್ಯಾನರ್ಜಿ, ಈ ಬಾರಿ […]
SSLC Exam: ಬಿದರಕುಂದಿಯ ಪವಿತ್ರ ಎಂ. ಕೊಣ್ಣೂರ ಜಿಲ್ಲೆಗೆ ಪ್ರಥಮ ಸ್ಥಾನ
ವಿಜಯಪುರ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಸರಕಾರಿ ಶಾಲೆಯ ವಿದ್ಯಾರ್ಥಿನಿ ಪವಿತ್ರ ಮಡಿವಾಳಪ್ಪಗೌಡ ಕೊಣ್ಣೂರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸರಕಾರಿ ಆದರ್ಶ ವಿದ್ಯಾಲಯ ಆರ್.ಎಂ.ಎಸ್.ಎ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿನಿ 625ಕ್ಕೆ 623 ಅಂಕ ಪಡೆದು ಗಮನ ಸೆಳೆದಿದ್ದಾಳೆ. ಸಾಧನೆ ಮಾಡಿರುವ ವಿದ್ಯಾರ್ಥಿನಿಯನ್ನು ಶಾಲೆಯ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
UPSC Exam: ವಿಜಯಪುರ ಮೂಲದ ಯುವತಿ ವಿಜೇತಾ ಭೀಮಸೇನ ಹೊಸಮನಿಗೆ 100ನೇ ರ್ಯಾಂಕ್
ವಿಜಯಪುರ: ಯು.ಪಿ.ಎಸ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯಯಪುರ ಮೂಲದ ಯುವತಿ ವಿಜೇತಾ ಭೀಮಸೇನ ಹೊಸಮನಿಗೆ 100 ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಯುವತಿಯ ಪೋಷಕರು ಈಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಗಳ ಸಾಧನೆಗೆ ಪೋಷಕರ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್. ಕೆ. ಜಿ ಯಿಂದ 5ನೇ ತರಗತಿವರೆ ವಿಜೇಜಾ ಭೀಮಸೇನ ಹೊಸಮನಿ ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಸ್ಕೂಲ್ ನಲ್ಲಿ ಓದಿದ್ದಾರೆ. 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ […]
StarpUp Story: ಉ. ಕ. ದ ಪ್ರಥಮ ಸ್ಟೀಲ್ ರಿಂಗ್ ಯಂತ್ರ: ಕಟ್ಟಡ ನಿರ್ಮಾಪಕರಿಗೆ ವರವಾದ ವಿನೋದ ಪೀರಗೊಂಡರ ವೈಭವಿ ಟ್ರೆಡರ್ಸ್
ಮಹೇಶ ವಿ. ಶಟಗಾರ ವಿಜಯಪುರ: ಮನೆಕಟ್ಟಿ ನೋಡು. ಮದುವೆ ಮಾಡಿ ನೋಡು ಎಂಬುದು ನಾಣ್ಣುಡಿ. ಆದರೆ, ಮನೆ ಕಟ್ಟುವಾಗ ಸಿಕ್ಕ ಅನುಭವವನ್ನೇ ಜೀವನದಲ್ಲಿ ಉದ್ಯಮವಾಗಿಸಿಕೊಂಡು ಯಶಸ್ವಿಯಾದರೆ ಹೇಗಿರಬೇಡ. ಹೌದು. ಈ ರೀತಿ ಮನೆ ಕಟ್ಟುವಾಗ ಎದುರಿಸಿದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ರೂಪಿಸಿದ ಯೋಜನೆಗಳ ಮೇಲೆ ಯುವಕನೊಬ್ಬ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ಸ್ಟೋರಿ ಇದು. ವಿಜಯಪುರ ನಗರದ ಸೋಲಾಪುರ ರಸ್ತೆಯಿಂದ ಶ್ರೀ ಸಿದ್ಧಾರೂಢ ಮಠದ ಕಡೆಗೆ ಹೊರಟರೆ ಸಾಕು ಮೂರ್ನಾಲ್ಕು ಅಂಗಡಿಗಳನ್ನು ದಾಟಿದರೆ ವೈಭವಿ ಟ್ರೇಡರ್ಸ್ […]
ಅಂಧ ಅನಾಥ ವೃದ್ಧೆಯ ಬಾಳಿಗೆ ಬೆಳಕಾದ ಡಾ. ಪ್ರಭುಗೌಡ ಲಿಂಗದಳ್ಳಿ- ಅಜ್ಜಿಗೆ ದೀಪಾವಳಿ ಸಂದರ್ಭದಲ್ಲಿ ದೃಷ್ಠಿ ನೀಡಿದ ವೈದ್ಯ
ವಿಜಯಪುರ: ಕಣ್ಣು ಕಾಣದ ಹಿನ್ನೆಲೆಯಲ್ಲಿ ಸಂಬಂಧಿಕರು ಬಿಟ್ಟುಹೋದ ಅಜ್ಜಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಠಿ ನೀಡುವ ಮೂಲಕ ಬಸವನಾಡಿನ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ ಅನಾಥ ವೃದ್ಧೆಯ ಜೀವದಲ್ಲಿ ದೀಪಾವಳಿ ಬೆಳಕು ಮೂಡಿಸಿದ್ದಾರೆ. ಇದೀಗ ಅಜ್ಜಿ ಚೇತರಿಸಿಕೊಂಡಿದ್ದು, ಆಕೆಯನ್ನು ತವರೂರಿಗೆ ಕಳುಹಿಸಿಕೊಟ್ಟಿರುವ ವೈದ್ಯರ ಮಾನವೀಯತೆ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಡಾ. ಪ್ರಭುಗೌಡ ಲಿಂಗದಳ್ಳಿ ಅವರು ತಮ್ಮ ಆಸ್ಪತ್ರೆಯ ಸಿಬ್ಬಂದಿಯಾದ ದತ್ತನಗೌಡ ಚೋಕಾವಿ ಅವರನ್ನು ಅಜ್ಜಿಯ ಜೊತೆಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಗೆ […]
ಐದು ಚಿನ್ನದ ಪದಕ ಪಡೆದ ಶಿಕ್ಷಕಿಯ ಮಗ- ಹರಿಯಾಣದ ಯುವ ವೈದ್ಯನ ಸಾಧನೆ ಇತರರಿಗೆ ಮಾದರಿ
ವಿಜಯಪುರ: ಶಿಕ್ಷಕಿಯ ಮಗನಿಗೆ ಐದು ಚಿನ್ನದ ಪದಕ ಸೇರಿದಂತೆ ಒಟ್ಟು 349 ವಿದ್ಯಾರ್ಥಿಗಳಿಗೆ ನಾನಾ ವೈದ್ಯಕೀಯ ಪದವಿಗಳನ್ನು ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಪ್ರಧಾನ ಮಾಡಲಾಯಿತು. ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ, ಸಚಿವ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಮುಂತಾದವರು ಪಿ.ಎಚ್.ಡಿ, ಸ್ನಾತಕೋತ್ತರ, ಎಂ.ಬಿ.ಬಿ.ಎಸ್ ಸೇರಿದಂತೆ 349 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ […]
ಬಸವನಾಡಿನಲ್ಲಿ ಪ್ರಕೃತಿ ವಿಸ್ಮಯ- ರಾತ್ರಿ ವೇಳೆ ಆಗಸದಲ್ಲಿ ಮುಸ್ಸಂಜೆ, ನಸುಕಿನ ಜಾವದ ಬೆಳಕಿನ ವಾತಾವರಣ
ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ರಾತ್ರಿ ವೇಳೆ ಆಗಸದಲ್ಲಿ ಭೂಮಿಯಿಂದ ಮುಗಿಲಿಗೆ ಟಾರ್ಚ್ ಲೈಟ್ ಹಿಡಿದಂತೆ ಬೆಳಕು ಕಂಡು ಬಂದಿದೆ. ರಾತ್ರಿ 9.50 ಸುಮಾರಿನಿಂದ ಆಗಸದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯೂ ಬರುತ್ತಿದೆ. ಇದೆಲ್ಲದರ ಮಧ್ಯೆ, ಮುಗಿಲು ನೋಡಿದವರಿಗೆ ಅಚ್ಚರಿ ಕಾದಿತ್ತು. ಆಗಸದ ತುಂಬೆಲ್ಲ ಮುಸ್ಸಂಜೆ ಮತ್ತು ನಸುಕಿನ ಜಾವ ಸೂರ್ಯೋದಯದ ಸಮಯದಲ್ಲಿ ಕಾಣಿಸುವಂತೆ ಆಗಸದಲ್ಲಿ ಬೆಳಕು ಕಂಡಿತು. ಇದನ್ನು ಇದನ್ನು ನೋಡಿದ ಕೆಲವರು ಅಚ್ಚರಿ ಪಟ್ಟರೆ ಮತ್ತೆ ಕೆಲವರು ಆತಂಕ ಕೂಡ ವ್ಯಕ್ತಪಡಿಸಿದರು. ಗುರುರಾಜ […]
ಕಲ್ಪವೃಕ್ಷ ರಕ್ಷಣೆಗಾಗಿ ಆಸ್ಪತ್ರೆ ವಿನ್ಯಾಸ ಬದಲಿಸಿದ ಚಿಕ್ಕಮಕ್ಕಳ ತಜ್ಞ- ಇವರ ಪರಿಸರ ಪ್ರೇಮ ಇತರರಿಗೆ ಮಾದರಿ
ಮಹೇಶ ವಿ. ಶಟಗಾರ ವಿಜಯಪುರ- ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ರಸ್ತೆ ಅಗಲೀಕರಣ, ಕಟ್ಟಡಗಳ ನಿರ್ಮಾಣ, ರೈಲು ಮಾರ್ಗ ನಿರ್ಮಾಣದಂಥ ಸಂದರ್ಭಗಳಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿಸಲಾಗುತ್ತದೆ. ಕಡಿಮೆಯಾಗುತ್ತಿರುವ ಗಿಡ ಮರಗಳನ್ನು ಬೆಳೆಸಲು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯತ್ತಲೇ ಇರುತ್ತವೆ. ಒಂದು ವೃಕ್ಷ ಕಡಿದರೆ 10 ವೃಕ್ಷಗಳನ್ನು ನೆಡಬೇಕು. ಕಡಿಮೆಯಾಗುತ್ತಿರುವ ಅರಣ್ಯವನ್ನು ವೃದ್ಧಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಹಾಗೂ ಆ ಬೇಡಿಕೆಗಳಿಗೆ ಪೂರಕವಾಗಿ ಕೋಟಿ ವೃಕ್ಷ […]