ಬಸವನಾಡಿನ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ, ಜನಪದ ಕಲಾವಿದ ಬಸವರಾಜ ಸಂಗಪ್ಪ ಹಾರಿವಾಳ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ವಿಜಯಪುರ: ಬಸವನಾಡು ವಿಜಯಪುರದ ಡಾ. ಅಶ್ವಿನಿ ಆಸ್ಪತ್ರೆಯ ಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ಮತ್ತು ಬಸವನ ಬಾಗೇವಾಡಿಯ ಜಾನಪದ ಕಲಾವಿದ ಬಸವರಾಜ ಸಂಗಪ್ಪ ಹಾರಿವಾಳ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 1 ರಂದು ಬೆಂಗಳೂರನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಸಚಿವರು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂತಸ ವ್ಯಕ್ತಪಡಿಸಿದ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ತಮಗೆ ಈ ಬಾರಿ […]

ಜ್ಞಾನದಾಹ: 83ನೇ ಇಳಿ ವಯಸ್ಸಿನಲ್ಲಿ 5ನೇ ಎಂ ಎ ಪರೀಕ್ಷೆ ಬರೆದ ಹಿರಿಯ ನಾಗರಿಕ- ಇವರು ಎಲ್ಲರಿಗೂ ಮಾದರಿ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ. ಎಸ್. ಎಸ್. ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಕೇಂದ್ರ ಆಯೋಜಿಸಿರುವ ಎಂ. ಎ. ಇಂಗ್ಲಿಷ್ ಪರೀಕ್ಷೆಗೆ 83 ವರ್ಷ ಮತ್ತು 68 ವರ್ಷದ ಹಿರಿಯರು ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.  ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಂಗ್ಲಿಷ್ ಪರೀಕ್ಷೆ ನಡೆಯಿತು.  ಈ ವೇಳೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರಿನ 83 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ವಿಜಯಪುರ […]

SSLC Exam: ಬಿದರಕುಂದಿಯ ಪವಿತ್ರ ಎಂ. ಕೊಣ್ಣೂರ ಜಿಲ್ಲೆಗೆ ಪ್ರಥಮ‌ ಸ್ಥಾನ

ವಿಜಯಪುರ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಸರಕಾರಿ‌ ಶಾಲೆಯ ವಿದ್ಯಾರ್ಥಿನಿ ಪವಿತ್ರ ಮಡಿವಾಳಪ್ಪಗೌಡ ಕೊಣ್ಣೂರ ಜಿಲ್ಲೆಗೆ ಪ್ರಥಮ‌ ಸ್ಥಾನ ಪಡೆದಿದ್ದಾಳೆ. ಸರಕಾರಿ ಆದರ್ಶ ವಿದ್ಯಾಲಯ ಆರ್.ಎಂ.ಎಸ್.ಎ ಶಾಲೆಯಲ್ಲಿ‌ ಓದುತ್ತಿರುವ ಈ ವಿದ್ಯಾರ್ಥಿನಿ 625ಕ್ಕೆ 623 ಅಂಕ ಪಡೆದು ಗಮನ ಸೆಳೆದಿದ್ದಾಳೆ. ಸಾಧನೆ ಮಾಡಿರುವ ವಿದ್ಯಾರ್ಥಿನಿಯನ್ನು ಶಾಲೆಯ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.

UPSC Exam: ವಿಜಯಪುರ ಮೂಲದ ಯುವತಿ ವಿಜೇತಾ ಭೀಮಸೇನ ಹೊಸಮನಿ‌ಗೆ 100ನೇ ರ್ಯಾಂಕ್

ವಿಜಯಪುರ: ಯು.ಪಿ.ಎಸ್.ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿಜಯಯಪುರ ಮೂಲದ ಯುವತಿ‌ ವಿಜೇತಾ ಭೀಮಸೇನ ಹೊಸಮನಿಗೆ 100 ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಯುವತಿಯ ಪೋಷಕರು‌ ಈಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಗಳ ಸಾಧನೆಗೆ ಪೋಷಕರ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್. ಕೆ. ಜಿ ಯಿಂದ 5ನೇ ತರಗತಿವರೆ ವಿಜೇಜಾ ಭೀಮಸೇನ ಹೊಸಮನಿ ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಸ್ಕೂಲ್ ನಲ್ಲಿ ಓದಿದ್ದಾರೆ. 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್‌ ನ್ಯಾಷನಲ್ ಪಬ್ಲಿಕ್ […]

ಮಾನ್ವಿ ಡಿಪೋ ಕಂಡಕ್ಟರ್, ಡ್ರೈವರ್ ಮಾನವೀಯತೆ- ಮಹಿಳೆಗೆ ಚಿನ್ನದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ

ವಿಜಯಪುರ: ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಕಳೆದುಕೊಂಡಿದ್ದ 5 ಗ್ರಾಂ ಚಿನ್ನಾಭರಣವನ್ನು ಮರಳಿಸುವ ಮೂಲಕ ಸರಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ಬೆಳಿಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಗೆ ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರು ಮಾಂಗಲ್ಯ ಸರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ಈ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕರು ದೇವೇಂದ್ರ ಡಂಬಳ, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ, […]

ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ವ್ಯವಸ್ಥೆ ಮಾಡಿದ ಡಿಸಿ, ಸಿಇಓ

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಯುಗದಲ್ಲಿ ಪ್ರತಿಯೊಂದು ಮಾಹಿತಿಯ ಅರಿವು ಅತ್ಯವಶ್ಯಕ.  ಈ ಎಲ್ಲ ಮಾಹಿತಿ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ 60 ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಜಿ. ಪಂ. ಸಭಾಂಗಣದಲ್ಲಿ ಜಿ. ಪಂ. ಸಿಇಓ ರಾಹುಲ್ ಶಿಂಧೆ ಅವರೊಂದಿಗೆ ಮಕ್ಕಳಿಗೆ ಪ್ರವಾಸ್ ಕಿಟ್ ನೀಡಿ ಕಾರ್ಯಕ್ರಮಕ್ಕೆ […]

ಇಬ್ಬರು ಬಡ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಪಡೆಯಲು ಎಂಬಿಪಿ ನೆರವು- ಚೆಕ್ ವಿತರಿಸಿದ ಎಂಎಲ್‌ಸಿ ಸುನೀಲಗೌಡ ಪಾಟೀಲ

ವಿಜಯಪುರ: ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕರೂ ಶುಲ್ಕ ಭರಿಸಲಾಗದೆ ಪರದಾಡುತ್ತಿದ್ದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಮೂಲಕ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆ. ಪಿ. ಸಿ. ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ. ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸುರೇಶ ಜಿ. ಹಳ್ಳಿ ಮತ್ತು ಕಂಬಾಗಿ ಗ್ರಾಮದ ಬಾಲಪ್ಪ ಎಂ. ಪೂಜಾರಿ ಅವರಿಗೆ ಎಂ. ಬಿ. ಬಿ. ಎಸ್. ಕೋರ್ಸಿನ […]

ರಾಹುಲ್ ಸಿಂಧೆ- ಜಿ. ಪಂ. ಸಿಇಓ ಆಗಿ ಅತ್ಯುತ್ತಮ ಸೇವೆ ರಾಜ್ಯ ಮಟ್ಟದ ಪ್ರಶಸ್ತಿ- ರಾಜ್ಯ ಚುನಾವಣೆ ಆಯೋಗದಿಂದ ಘೋಷಣೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ಹವಣಾಧಿಕಾರಿ ರಾಹುಲ್ ಸಿಂಧೆ ಅವರಿಗೆ ರಾಜ್ಯ ಚುನಾವಣೆ ಆಯೋಗ ಜಿ. ಪಂ. ಸಿಇಓ ಆಗಿ ಅತ್ಯುತ್ತಮ ಸೇವೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದೆ. ವಿಜಯಪುರ ಜಿಲ್ಲೆಯ ಮತದಾರರಲ್ಲಿ ಯಶಸ್ವಿಯಾಗಿ ಜಾಗೃತಿ ಮೂಡಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರನ್ನು ರಾಜ್ಯ ಚುನಾವಣೆ ಆಯೋಗ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲೆಯ ಮತದಾರರಲ್ಲಿ ಮತದಾನದ […]

ಮಾತೃಹೃದಯಿ, ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ವರದಾನವಾಗಿದ್ದಾರೆ ಬಸವನಾಡಿನ ಈ ಶಿಕ್ಷಕಿ- ಇವರ ಕಾಯಕ ಇತರರಿಗೆ ಸ್ಪೂರ್ತಿ

ಮಹೇಶ ವಿ. ಶಟಗಾರ ವಿಜಯಪುರ: ಆರ್ಥಿಕ ಸಮಸ್ಯೆ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಮೆಟ್ರಿಕ್ ಕೂಡ ಮಾಡಲಾಗದೇ ಶಾಲೆಗಳಿಂದ ದೂರವಾಗುತ್ತಿದ್ದ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಬಸವನಾಡಿನ ಶಿಕ್ಷಕಿಯೊಬ್ಬರು ಗಮನ ಸೆಳೆದಿದ್ದಾರೆ. ಈ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಬಹುತೇಕರು ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು.  ಅದರಲ್ಲಿಯೂ ಈ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ಓದುವ ಬಹುತೇಕ ಹೆಣ್ಣು ಮಕ್ಕಳು ನಂತರ 9 ಮತ್ತು 10ನೇ ತರಗತಿಗೆ ಸೇರದೆ ಡ್ರಾಪ್ ಔಡ್ ಆಗುತ್ತಿದ್ದರು.  ಶಾಲೆ ಬಿಟ್ಟು […]

MBP Help: ಬಡ ಕೃಷಿಕನ ಮಗನ ಎಂಬಿಬಿಎಸ್ ಕನಸು ನನಸಾಗಲು ನೆರವಾದ ಕೊಡುಗೈ ದಾನಿ ಎಂ. ಬಿ. ಪಾಟೀಲ

ವಿಜಯಪುರ: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ವೈದ್ಯನಾಗುವ ಕನಸು ನನಸಾಗದು ಎಂದು ಕಣ್ಣೀರು ಹಾಕುತ್ತ ಮನೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ಹಣಕಾಸು ನೆರವು ನೀಡುವ ಮೂಲಕ ಬಿ.ಎಲ್.ಡಿ.ಇ. ಸಂಸ್ಥೆಯ ಹಾಗೂ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ವೈದ್ಯನಾಗುವ ಕನಸು ಹೊಂದಿ ಶ್ರಮಪಟ್ಟು ಓದಿ ನೀಟ್ ಪರೀಕ್ಷೆ ಪಾಸಾಗಿದ್ದರು. ಅಲ್ಲದೇ ಸರಕಾರಿ ಕೋಟಾದಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರ ತಾಲೂಕಿನ ನಾಗಮಂಗಲದ […]