ಮಾನ್ವಿ ಡಿಪೋ ಕಂಡಕ್ಟರ್, ಡ್ರೈವರ್ ಮಾನವೀಯತೆ- ಮಹಿಳೆಗೆ ಚಿನ್ನದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ

ವಿಜಯಪುರ: ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಕಳೆದುಕೊಂಡಿದ್ದ 5 ಗ್ರಾಂ ಚಿನ್ನಾಭರಣವನ್ನು ಮರಳಿಸುವ ಮೂಲಕ ಸರಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ಬೆಳಿಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಗೆ ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರು ಮಾಂಗಲ್ಯ ಸರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ಈ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕರು ದೇವೇಂದ್ರ ಡಂಬಳ, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ, […]

ಡಾ. ರಾಘವೇಂದ್ರ ಕುಲಕರ್ಣಿ ಅವರ ಸಂಶೋಧನೆಗೆ ಭಾರತ ಸರಕಾರದಿಂದ ಪೇಟೆಂಟ್ ಘೋಷಣೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ.‌ ಕುಲಕರ್ಣಿ ಅವರು ಕೈಗೊಂಡ ಸಂಶೋಧನೆಗೆ ಭಾರತ ಸರಕಾರ ಪೇಟೆಂಟ್ ನೀಡಿದೆ. ಫಾರ್ಮಾಸ್ಯೂಟಿಕಲ್ ಕಂಪೊಸಿಷನ್ ಕಾಂಪ್ರೈಸಿಂಗ್ ಫಂಕ್ಷನಲಿ ಮಾಡಿಫೈಡ್ ಪಿಎಚ್- ರಿಸ್ಪಾನ್ಸಿವ್ ಜೆಲ್ಲೆನ್ ಗಮ್ ಗ್ರಾಫ್ಟ್ ಕೊಪಾಲಿಮರ್ ಮೈಕ್ರೊಸ್ಪೀಯರ್ಸ್ ಫಾರ್ ಕೊಲೊನ್ ಕ್ಯಾನ್ಸರ್(PHARMACEUTICAL COMPOSITION COMPRISING FUNCTIONALLY MODIFIED PH-RESPONSIVE GELLEN GRAFT COPOLYMER MICROSPHERES FOR COLON CANCER) ಆವಿಷ್ಕಾರ ಮಾಡಿದ್ದು, ಈ ಸಂಶೋಧನೆಗೆ ಭಾರತ ಸರಕಾರದ ಪೇಟೆಂಟ್ ಪ್ರಮಾಣ ಪತ್ರ […]

ಡಾ. ದೀಪಕಕುಮಾರ ಆರ್. ಚವ್ಹಾಣ ಸಂಶೋಧನೆಗೆ ಭಾರತ ಸರಕಾರದಿಂದ 2ನೇ ಬಾರಿ ಮಾನ್ಯತೆ- ಬಿ.ಎಲ್.ಡಿ.ಇ ಡೀಮ್ಡ್ ವಿವಿಗೆ ಮತ್ತೋಂದು ಗರಿ

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸರ್ಜರಿ ವಿಭಾಗದ ಸಹಪ್ರಾಧ್ಯಾಪಕ ಮತ್ತು ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕಕುಮಾರ ಆರ್. ಚವ್ಹಾಣ ಅವರ ಹೊಸ ಅನ್ವೇಷಣೆಗೆ ಭಾರತ ಸರಕಾರ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ನೀಡಿದೆ.  ಈ ಮೂಲಕ ಡಾ. ದೀಪಕಕುಮಾರ ಚವ್ಹಾಣ ಎರಡನೇ ಬಾರಿಗೆ ಭಾರತ ಸರಕಾರದ ಪೇಟೆಂಟ್ ಪಡೆದ ಹೆಮ್ಮೆಗೆ ಪಾತ್ರರಾಗಿದ್ದಾರೆ. ಅವರು ಮಂಡಿಸಿದ ಕಾರ್ಡಲೆಸ್ ಮೊಬೈಲ್ ಕ್ರಿಟಿಕಲ್ ಕೇರ್ ಮಾನಿಟರಿಂಗ್ ಇಂಟರಆಕ್ಟಿವ್ ಡಿವೈಸ್(Cordless mobile critical care monitoring interactive device) ಸಂಶೋಧನೆಗೆ […]

ಜ್ಞಾನದಾಹ: 81ನೇ ಇಳಿವಯಸ್ಸಿನಲ್ಲಿ 5ನೇ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿರುವ ನಿಂಗಯ್ಯ ಒಡೆಯರ

ವಿಜಯಪುರ: ಮಕ್ಕಳು ಶಾಲೆಗಳನ್ನು ಅರ್ಧಕ್ಕೆ ತೊರೆಯುವುದು, ಯುವಕರು ಕಲಿಕಾಸಕ್ತಿ ಕಡಿಮೆಯಿಂದಾಗಿ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ವರೆಗೆ ಮಾತ್ರ ಓದುವುದು ಹಾಗೂ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದರೂ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವವರೂ ಇರುವ ಇಂದಿನ ದಿನಗಳಲ್ಲಿ 81 ವರ್ಷದ ಹಿರಿಯ ನಿಂಗಯ್ಯ ಒಡೆಯರ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.  ಕಲಿಕೆಗೆ ವಯಸ್ಸು ಎಂಬುದಿಲ್ಲ.  ದೇಹಕ್ಕೆ ವಯಸ್ಸಾಗಬಹುದೇ ಹೊರತು ಕಲಿಕಾಸಕ್ತಿಗೆ ಇಲ್ಲ ಎಂಬುದನ್ನು ನಿಂಗಯ್ಯ ಒಡೆಯರ  ತೋರಿಸಿ ಕೊಟ್ಟಿದ್ದಾರೆ.   ನಗರದ ಪ್ರತಿಷ್ಠಿತ ಬಿ. […]

ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ವ್ಯವಸ್ಥೆ ಮಾಡಿದ ಡಿಸಿ, ಸಿಇಓ

ವಿಜಯಪುರ: ಇಂದಿನ ಸ್ಪರ್ಧಾತ್ಮಕ ಮತ್ತು ವೇಗದ ಯುಗದಲ್ಲಿ ಪ್ರತಿಯೊಂದು ಮಾಹಿತಿಯ ಅರಿವು ಅತ್ಯವಶ್ಯಕ.  ಈ ಎಲ್ಲ ಮಾಹಿತಿ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದ್ದಾರೆ. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ 60 ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಜಿ. ಪಂ. ಸಭಾಂಗಣದಲ್ಲಿ ಜಿ. ಪಂ. ಸಿಇಓ ರಾಹುಲ್ ಶಿಂಧೆ ಅವರೊಂದಿಗೆ ಮಕ್ಕಳಿಗೆ ಪ್ರವಾಸ್ ಕಿಟ್ ನೀಡಿ ಕಾರ್ಯಕ್ರಮಕ್ಕೆ […]

ಚುನಾವಣೆಯಿಂದ ಬಿಡುವು ಪಡೆದು ಮತ್ತೆ ಕುಟುಂಬ ನಿರ್ವಹಣೆಯಲ್ಲಿ ತೊಡಗಿದ ಆಶಾ ಎಂ. ಪಾಟೀಲ

ವಿಜಯಪುರ: ಮತದಾನದ ಬಳಿಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಮತದಾನದ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮತದಾನದ ಪ್ರಮಾಣ ಮತ್ತು ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.  ಇತ್ತ ಅವರ ಪತ್ನಿ ಆಶಾ ಎಂ. ಪಾಟೀಲ ಅವರು, ಮತದಾನದ ಬಳಿಕ ಕುಟುಂಬ ಸದಸ್ಯರ ಕಾಳಜಿಯಲ್ಲಿ ತೊಡಗಿದ್ದಾರೆ.  ಇಷ್ಟು ದಿನ ಪತಿಯ ಪರ ಗ್ರಾಮ ಗ್ರಾಮಗಳಿಗೆ ತೆರಳಿ ಪ್ರಚಾರ ಕೈಗೊಂಡ ಅವರು ಈಗ ಮತದಾನದ ಲೆಕ್ಕಾಚಾರವನ್ನು ಪತಿಗೆ ಬಿಟ್ಟು ಅಡುಗೆ ಮನೆಯಲ್ಲಿ ಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ.  ಮನೆಯಲ್ಲಿ […]

ಬೀರಲಿಂಗೇಶ್ವರ ಮಹಿಮೆ- ಅಕ್ಕಿ ತುಂಬಿದ ಬಿಂದಿಗೆಯಲ್ಲಿ ತಲ್ವಾರ್ ಹಾಕಿ ಇಡೀ ಬಿಂದಿಗೆ ಮೇಲೆತ್ತಿ ಪವಾಡ ಮಾಡಿದ ದೇವಸ್ಥಾನದ ಪೂಜಾರಿ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಜಾತ್ರೆಗಳಿಗೆ ಹೆಸರುವಾಸಿ.  ಇಲ್ಲಿ ನಡೆಯುವ ಆಚರಣೆಗಳು ಮತ್ತು ಸಂಪ್ರದಾಯಗಳ ಪಾಲನೆ ಒಂದಿಲ್ಲೊಂದು ವಿಶೇಷತೆಗಳಿಂದ ಕೂಡಿರುತ್ತದೆ.  ದೇಶದಲ್ಲಿಯೇ ಅತೀ ಹೆಚ್ಚು ಜಾತ್ರೆಗಳು ನಡೆಯುವ ಜಿಲ್ಲೆ ಎಂದೂ ವಿಜಯಪುರ ಖ್ಯಾತಿಯಾಗಿದೆ.  ಈ ಜಿಲ್ಲೆಯಲ್ಲಿ ವರ್ಷವಿಡೀ ಒಂದಿಲ್ಲೊಂದು ಊರಿನಲ್ಲಿ ಒಂದಿಲ್ಲೊಂದು ಜಾತ್ರೆ, ಆಚರಣೆ, ಸಂಪ್ರದಾಯಗಳ ಪಾಲನೆ ಸೇರಿದಂತೆ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಹೊಳೆಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ಮದ್ಯ ನೈವೇದ್ಯ ಮತ್ತು ವರ್ಷದ ಭವಿಷ್ಯ ಹೇಳುವುದಕ್ಕೆ ಹೆಸರಾಗಿದ್ದರೆ, ಸಿಂದಗಿ ಬಿಂದಿಗೆ […]

ವಿಟಿಯು ಪರೀಕ್ಷೆ- ವಿಜಯಪುರ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ಎಂ.ಟೆಕ್ ವಿದ್ಯಾರ್ಥಿಗಳಿಗೆ ರ್ಯಾಂಕ್

ವಿಜಯಪುರ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2021-22ರಲ್ಲಿ ನಡೆಸಿದ ಎಂ.ಟೆಕ್. ಪರೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿವಿಗೆ ರ‌್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಎಂ.ಟೆಕ್(ಡಿಜಿಟಲ ಕಮ್ಯೂನಿಕೆಷನ್ ಮತ್ತು ನೆಟವರ್ಕಿಂಗ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಷನ್ ವಿಭಾಗದದಲ್ಲಿ ಮಾಧುರಿ ಹಜೇರಿ 2ನೇ ಮತ್ತು ಮೇಘ ಚಿಪ್ಪಲಕಟ್ಟಿ 5ನೇ ರ‌್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನಗೆೆ ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತ ಮಂಡಳಿ, […]

ಉತ್ತರ ಕರ್ನಾಟಕ ಶೈಲಿಯ ಸವಿಯೂಟ ಮಾಡಿದ ಸಿದ್ಧರಾಮಯ್ಯ, ಎಂ ಬಿ ಪಾಟೀಲ- ಅಭಿಮಾನಿಗಳಿಂದ ಸಾವಯವ ಬೆಲ್ಲದಿಂದ ತುಲಾಭಾರ, ಒಣದ್ರಾಕ್ಷಿ ಹಾರ ಹಾಕಿ ಗೌರವ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆ ಅತಿಥಿ ಸತ್ಕಾರಕ್ಕೆ ಸದಾ ಮುಂದು.  ಬಸವಾದಿ ಶರಣರ ಕಾಯಕಗಳಿಂದ ಪ್ರಭಾವಿತರಾಗಿರುವ ಇಲ್ಲಿನ ಜನ ತಮಗೆ ಉಪಕಾರ ಮಾಡಿರುವವರನ್ನು ಪ್ರೀತಿ ಮತ್ತು ಆದರಗಳಿಂದ ಆತ್ಮೀಯವಾಗಿ ಸನ್ಮಾನಿಸಿ ಗೊರವಿಸುವುದು ಇಲ್ಲಿನ ಮಣ್ಣಿನ ಗುಣಲಕ್ಷಣವಾಗಿದೆ. ಇದಕ್ಕೆ ಪೂರಕವಾಗಿದ್ದು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರು ಬಬಲೇಶ್ವರದಲ್ಲಿ ಕೈಗೊಂಡ ಪ್ರಜಾಧ್ವನಿ ಯಾತ್ರೆ.  ಈ ಕಾರ್ಯಕ್ರಮದ ಅಂಗವಾಗಿ ಬಬಲೇಶ್ವರಕ್ಕೆ ಬಂದಿದ್ದ ಸಿದ್ಧಾರಾಮಯ್ಯ ಅವರನ್ನು ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ವಿ. ಎಸ್. ಪಾಟೀಲ […]

ಇಬ್ಬರು ಬಡ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಪಡೆಯಲು ಎಂಬಿಪಿ ನೆರವು- ಚೆಕ್ ವಿತರಿಸಿದ ಎಂಎಲ್‌ಸಿ ಸುನೀಲಗೌಡ ಪಾಟೀಲ

ವಿಜಯಪುರ: ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕರೂ ಶುಲ್ಕ ಭರಿಸಲಾಗದೆ ಪರದಾಡುತ್ತಿದ್ದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡುವ ಮೂಲಕ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆ. ಪಿ. ಸಿ. ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ. ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಸುರೇಶ ಜಿ. ಹಳ್ಳಿ ಮತ್ತು ಕಂಬಾಗಿ ಗ್ರಾಮದ ಬಾಲಪ್ಪ ಎಂ. ಪೂಜಾರಿ ಅವರಿಗೆ ಎಂ. ಬಿ. ಬಿ. ಎಸ್. ಕೋರ್ಸಿನ […]