ರಾಹುಲ್ ಸಿಂಧೆ- ಜಿ. ಪಂ. ಸಿಇಓ ಆಗಿ ಅತ್ಯುತ್ತಮ ಸೇವೆ ರಾಜ್ಯ ಮಟ್ಟದ ಪ್ರಶಸ್ತಿ- ರಾಜ್ಯ ಚುನಾವಣೆ ಆಯೋಗದಿಂದ ಘೋಷಣೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ಹವಣಾಧಿಕಾರಿ ರಾಹುಲ್ ಸಿಂಧೆ ಅವರಿಗೆ ರಾಜ್ಯ ಚುನಾವಣೆ ಆಯೋಗ ಜಿ. ಪಂ. ಸಿಇಓ ಆಗಿ ಅತ್ಯುತ್ತಮ ಸೇವೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದೆ. ವಿಜಯಪುರ ಜಿಲ್ಲೆಯ ಮತದಾರರಲ್ಲಿ ಯಶಸ್ವಿಯಾಗಿ ಜಾಗೃತಿ ಮೂಡಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರನ್ನು ರಾಜ್ಯ ಚುನಾವಣೆ ಆಯೋಗ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲೆಯ ಮತದಾರರಲ್ಲಿ ಮತದಾನದ […]

ಮಾತೃಹೃದಯಿ, ಬಡ, ಕೂಲಿ ಕಾರ್ಮಿಕರ ಮಕ್ಕಳಿಗೆ ವರದಾನವಾಗಿದ್ದಾರೆ ಬಸವನಾಡಿನ ಈ ಶಿಕ್ಷಕಿ- ಇವರ ಕಾಯಕ ಇತರರಿಗೆ ಸ್ಪೂರ್ತಿ

ಮಹೇಶ ವಿ. ಶಟಗಾರ ವಿಜಯಪುರ: ಆರ್ಥಿಕ ಸಮಸ್ಯೆ ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಮೆಟ್ರಿಕ್ ಕೂಡ ಮಾಡಲಾಗದೇ ಶಾಲೆಗಳಿಂದ ದೂರವಾಗುತ್ತಿದ್ದ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಬಸವನಾಡಿನ ಶಿಕ್ಷಕಿಯೊಬ್ಬರು ಗಮನ ಸೆಳೆದಿದ್ದಾರೆ. ಈ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಬಹುತೇಕರು ಬಡ ಮತ್ತು ಕೂಲಿ ಕಾರ್ಮಿಕರ ಮಕ್ಕಳು.  ಅದರಲ್ಲಿಯೂ ಈ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ಓದುವ ಬಹುತೇಕ ಹೆಣ್ಣು ಮಕ್ಕಳು ನಂತರ 9 ಮತ್ತು 10ನೇ ತರಗತಿಗೆ ಸೇರದೆ ಡ್ರಾಪ್ ಔಡ್ ಆಗುತ್ತಿದ್ದರು.  ಶಾಲೆ ಬಿಟ್ಟು […]

ಭಕ್ತರ ಮನದಲ್ಲಿ ನೆಲೆಸಿ ನಿಸರ್ಗದಲ್ಲಿ ಲೀನರಾದ ಸಿದ್ದೇಶ್ವರ ಶ್ರೀಗಳು ಚಿಕಿತ್ಸೆ ನಿರಾಕರಿಸಿದ್ದೇಕೆ? ಅಂತ್ಯಕ್ರಿಯೆಗೆ ಅಗ್ನಿಯರ್ಪಿತವನ್ನೇ ಯಾಕೆ ಆಯ್ದುಕೊಂಡರು?

ಮಹೇಶ ವಿ. ಶಟಗಾರ ವಿಜಯಪುರ: ಬಸವನಾಡಿನ ನಡೆದಾಡುವ ದೇವರು ಲಿಂಗೈಕ್ಯರಾಗಿರುವುದು ಕೋಟ್ಯಾಂತರ ಜನರಲ್ಲಿ ದುಃಖವನ್ನುಂಟು ಮಾಡಿದೆ. ಅವರ ಪ್ರವಚನಗಳ ಶಕ್ತಿ ಎಷ್ಟಿತ್ತೆಂದರೆ ಅಂತ್ಯಕ್ರಿಯೆಗೆ ಸಾಗರೋಪಾದಿಯಲ್ಲಿ ಹಗಲಿರುಳು ಹರಿದು ಬಂದ ಜನಸಾಮಾನ್ಯರೇ ಸಾಕ್ಷಿ. ಜನರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿರುವ ಶ್ರೀಗಳು ಅನಾರೋಗ್ಯ ಪೀಡಿತರಾಗಿದ್ದಾಗ ವೈದ್ಯರಿಂದ ಚಿಕಿತ್ಸೆಯನ್ನು ನಿರಾಕರಿಸಿದರು. ಇಂದಿನ ಆಧುನಿಕ ಯುಗದಲ್ಲಿ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿದ್ದರೂ ಅವುಗಳ ಸಹವಾಸವೇ ಬೇಡ ಎಂದು ವಿನಂತಿಪೂರಕವಾಗಿಯೇ ನಿರಾಕರಿಸಿದರು. ಇದನ್ನು ವೈದ್ಯರ ಬಳಿಯೂ ಹೇಳಿಕೊಂಡಿದ್ದರು. ನಿಸರ್ಗಪ್ರೀಯ ಸ್ವಾಮೀಜಿ ನೈಸರ್ಗಿಕವಾಗಿಯೇ ಎಲ್ಲವೂ ಆಗಲಿ ಎಂದು […]

ಶುದ್ಧ ಮನಸ್ಸು, ಶ್ವೇತ ಬಟ್ಟೆ, ಜ್ಞಾನ ದಾಸೋಹದ ಮೂಲಕ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ ವಿಶ್ವಶ್ರೇಷ್ಠ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಮಹೇಶ ವಿ. ಶಟಗಾರ ವಿಜಯಪುರ: ಶುದ್ಧ ಮನಸ್ಸು, ಶ್ವೇತ ಬಟ್ಟೆ, ಸುಂದರ ಸಂದೇಶಗಳನ್ನು ಜ್ಞಾನದಾಸೋಹದ ಮೂಲಕ ಭಕ್ತರಿಗೆ ಉಣಬಡಿಸಿ ಜಾಗೃತಿ ಮೂಡಿಸಿದವರು ನಡೆದಾಡುವ ದೇವರೆಂದೆ ಹೆಸರಾಗಿದ್ದ ಬಸವನಾಡಿನ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ಪಾಲಿಸಿಕೊಂಡು ಬಂದ ತತ್ವಗಳು, ನುಡಿದಿದ್ದಕ್ಕಿಂತಲೂ ಹೆಚ್ಚಾಗಿ ಮಾದರಿ ಜೀವನ ಸಾಗಿಸಿ ಇತರರಿಗೂ ಸ್ಪೂರ್ತಿಯಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಭಕ್ತರು ಭಾರತವಷ್ಟೇ ಅಲ್ಲ, ಸಾಗರದಾಚೆಯ ವಿದೇಶಗಳಲ್ಲಿಯೂ ಇದ್ದಾರೆ.  ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಪರ್ಶಿಯನ್ ಸೇರಿದಂತೆ ಬಹುಭಾಷೆಗಳನ್ನು ಬಲ್ಲವರಾಗಿದ್ದ ಇವರು ಈ ಎಲ್ಲ ಭಾಷೆಗಳಲ್ಲಿ […]

ಜೀವನದ ಪಾಠ ಕಲಿಸಿದ ಗುರುಗಳಿಗೆ ಪಾದಪೂಜೆ ನೆರವೇರಿಸಿ ಧನ್ಯರಾದ ವಿಜಯಪುರ ಜಿಲ್ಲಾಧಿಕಾರಿ, ಸಹಪಾಠಿಗಳು- ಸೈನಿಕ ಶಾಲೆಯಲ್ಲೋಂದು ವಿಶಿಷ್ಠ ಕಾರ್ಯಕ್ರಮ

ವಿಜಯಪುರ: ಸ್ವಲ್ಪ ಅಧಿಕಾರ ಸಿಕ್ಕರೆ ಸಾಕು ಮನೆಯವರನ್ನೇ ಕ್ಯಾರೆ ಎನ್ನದ ಜನ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದರೂ ಅದರ ಬಗ್ಗೆ ಯಾವುದೇ ಹಂಗು ಬಿಂಗಿಲ್ಲದೇ ಪಾಠ ಮಾಡಿದ ಗುರುಗಳ ಪಾದಪೂಜೆ ಮಾಡುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಸಹಪಾಠಿಗಳು ಗಮನ ಸೆಳೆದಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳು ಮೂಲತಃ ಗದಗ ಜಿಲ್ಲೆಯವರು.  ಆದರೆ, ಅವರು ಓದಿದ್ದು ಮಾತ್ರ ರಾಜ್ಯದ ಮೊದಲ ಮತ್ತು ದೇಶಕ್ಕೆ ನಾನಾ ಕ್ಷೇತ್ರಗಳಿಗೆ ನೂರಾರು ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ನೀಡಿದ […]

ದೇಶದಲ್ಲಿ ಶಾಂತಿ, ಸೌಹಾರ್ಧತೆ ಸಂದೇಶ ಸಾರಲು ರಾಜಸ್ಥಾನದಿಂದ ಕನ್ಯಾಕುಮಾರಿಗೆ ಅಬ್ದುಲ್ ಗಫೂರ್ ಸೈಕಲ್ ಯಾತ್ರೆ- 7000 ಕಿ. ಮೀ. ಸಂಚಾರ ಕೈಗೊಂಡಿರುವ ದೇಶಭಕ್ತ

ವಿಜಯಪುರ: ದೇಶದಲ್ಲಿ ಕೋಮು ಸೌಹಾರ್ಧತೆ ಸೂಕ್ಷ್ಮವಾಗಿರುವ ಈ ದಿನಗಳಲ್ಲಿ ಶಾಂತಿ, ಸೌಹಾರ್ಧತೆಯ ಸಂದೇಶ ಸಾರಲು ರಾಜಸ್ತಾನದ ಪೇಂಟರೊಬ್ಬರು ಸೈಕಲ್ ಮೂಲಕ ಭಾರತ ಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾರೆ. ರಾಜಸ್ತಾನದ ಜೋಧಪುರದ ಸೂರ್ಯನಗರಿಯಿಂದ ಸೈಕಲ್ ಯಾತ್ರೆ ಕೊಗೊಂಡಿರುವ 47 ವರ್ಷದ ಅಬ್ದುಲ್ ಗಫೂರ ಬಸವ ನಾಡು ವಿಜಯಪುರಕ್ಕೆ ಆಗಮಿಸಿದ್ದಾರೆ.  ತಮ್ಮ ಸಂಚಾರದುದ್ದಕೂ ಸಿಗುವ ದರ್ಗಾ, ದೇವಸ್ಥಾನ, ಚರ್ಚಗಳಿಗೆ ಭೇಟಿ ನೀಡುವ ರೂಢಿ ಇಟ್ಟುಕೊಂಡಿರುವ ಅಬ್ದುಲ್ ಗಫೂರ ಗುಮ್ಮಟ ನಗರಿ ವಿಜಯಪುರದ ಹಳೆಯ ಐಬಿಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿ ಪ್ರಯಾಣ […]

Parents Yatnal: ಪಾಲಕರನ್ನು ಸರಿಯಾಗಿ ನೋಡದಿದ್ದರೆ ಅವರ ಆಸ್ತಿಯನ್ನು ಕೇಳುವ ಹಕ್ಕು ನಿಮಗಿಲ್ಲ- ಶಾಸಕ ಪಾಟೀಲ ಯತ್ನಾಳ ಚಾಟಿ

ವಿಜಯಪುರ: ನೀವು ಹಿರಿಯರನ್ನು ಅವರ ಮುಪ್ಪಾವಸ್ಥೆಯಲ್ಲಿ ಸರಿಯಾಗಿ ನೋಡಿಕೊಳ್ಳದಿದ್ದರೆ ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕೂ ನಿಮಗಿಲ್ಲ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಚಾಟಿ  ಬೀಸಿದ್ಳಿದಾರೆ. ವಿಜಯಪುರ ಜಿಲ್ಲೆಯ ಅರಕೇರಿ ಎಲ್ ಟಿ ಬಳಿ ನೂತನವಾಗಿ ಆರಂಭವಾಗಿರುವ ವೃದ್ಧಾಶ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳಬೇಕು.  ನಿಮ್ಮ ಕೆಲಸದ ಒತ್ತಡದಲ್ಲಿ ಅವರನ್ನು ನೀವು ಸರಿಯಾಗಿ ಆರೈಕೆ ಮಾಡದಿದ್ದರೆ ಅವರಿಗೆ ನೀವು ನಿಮ್ಮ ನೌಕರಿಯ ಒತ್ತಡದಲ್ಲಿ ನೋಡಲಾಗದಿದ್ದರೆ ಇಂಥ ಓಲ್ಡೇಜ್ […]

MBP Help: ಬಡ ಕೃಷಿಕನ ಮಗನ ಎಂಬಿಬಿಎಸ್ ಕನಸು ನನಸಾಗಲು ನೆರವಾದ ಕೊಡುಗೈ ದಾನಿ ಎಂ. ಬಿ. ಪಾಟೀಲ

ವಿಜಯಪುರ: ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ವೈದ್ಯನಾಗುವ ಕನಸು ನನಸಾಗದು ಎಂದು ಕಣ್ಣೀರು ಹಾಕುತ್ತ ಮನೆಯಲ್ಲಿ ಕುಳಿತಿದ್ದ ವಿದ್ಯಾರ್ಥಿಗೆ ಹಣಕಾಸು ನೆರವು ನೀಡುವ ಮೂಲಕ ಬಿ.ಎಲ್.ಡಿ.ಇ. ಸಂಸ್ಥೆಯ ಹಾಗೂ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ವೈದ್ಯನಾಗುವ ಕನಸು ಹೊಂದಿ ಶ್ರಮಪಟ್ಟು ಓದಿ ನೀಟ್ ಪರೀಕ್ಷೆ ಪಾಸಾಗಿದ್ದರು. ಅಲ್ಲದೇ ಸರಕಾರಿ ಕೋಟಾದಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರ ತಾಲೂಕಿನ ನಾಗಮಂಗಲದ […]

MBP MBBS Help: ಎಂ. ಬಿ. ಪಾಟೀಲ ಸಹಾಯ ಹಸ್ತ- ಬಡ ರೈತ, ಕೃಷಿ ಕಾರ್ಮಿಕನ ಮಕ್ಕಳು ಎಂ ಬಿ ಬಿ ಎಸ್ ಪ್ರವೇಶ ಪಡೆಯಲು ತಲಾ ರೂ. 4 ಲಕ್ಷ ಧನ ಸಹಾಯ

ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಪ್ರವೇಶ ಪಡೆಯಲು ಪರದಾಡುತ್ತಿದ್ದ ರೈತ ಮತ್ತು ಕೃಷಿ ಕಾರ್ಮಿಕನ ಮಕ್ಕಳಿಗೆ ಹಣಕಾಸು ನೆರವು ನೀಡುವ ಮೂಲಕ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹುಬನೂರ ಗ್ರಾಮದ ಚನಬಸು ಮಾಳಿ ಮತ್ತು ಸಿದ್ಧಾಪುರ ಗ್ರಾಮದ ಶೆಮ್ಮಿರ ಜಾತಗಾರ ಎಂ.ಬಿ.ಬಿ.ಎಸ್.ಪ್ರವೇಶ ಪಡೆಯಲು ಹಣಕಾಸಿನ ತೊಂದರೆಯಿಂದಾಗಿ ಪರದಾಡುತ್ತಿದ್ದರು. […]

Drone Carrier Academy: ಬಸವ ನಾಡಿನ ದ್ರೋಣ ಕರಿಯರ್ ಅಕಾಡೆಮಿಯ 27 ವಿದ್ಯಾರ್ಥಿಗಳು ಸೇನಾ ನೇಮಕಾತಿಯಲ್ಲಿ ಆಯ್ಕೆ

ವಿಜಯಪುರ: ಬಸವ ನಾಡು ವಿಜಯಪುರ ನಗರದ ತೊರವಿ ಬಳಿ ಮಹಿಳಾ ವಿಶ್ವವಿದ್ಯಾಲಯದ ಸಮೀಪ ಇರುವ ದ್ರೋಣ ಕರಿಯರ್ ಅಕಾಡೆಮಿಯ 27 ಜನ ಯುವಕರು ಈ ಬಾರಿ ಬೆಂಗಳೂರಿನಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಸಂಸ್ಥಾಪಕ ಮತ್ತು ನಿವೃತ್ತ ಸೈನಿಕ ಕಲ್ಮೇಶ ಆಸಂಗಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅ. 16 ರಂದು ಬೆಂಗಳೂರಿನಲ್ಲಿ ಸೇನಾ ನೇಮಕಾತಿ ನಡೆಯಿತು.  ಈ ಬಾರಿ ದ್ರೋಣ ಅಕಾಡೆಮಿಯಿಂದ ಒಟ್ಟು 63 ಯುವಕರು ವಿದ್ಯಾರ್ಥಿಗಳು […]