Kantara Cinema: ಕಾಂತಾರ ಕ್ರೇಜ್: ಜೀವನದಲ್ಲಿ ಇದೇ ಮೊದಲ ಬಾರಿಗೆ ಟಾಕೀಸಿನಲ್ಲಿ ಸಿನೇಮಾ ನೋಡಿ ಖುಷಿಪಟ್ಟ 6, 9 ವರ್ಷದ ಮಕ್ಕಳು

ವಿಜಯಪುರ: ಈಗ ರಾಜ್ಯವಷ್ಟೇ ಅಲ್ಲ, ಇಡೀ ದೇಶಾದ್ಯಂತ ಕಾಂತಾರ ಸಿನೇಮಾದ್ದೇ ಸದ್ದು.  ಪ್ಯಾನ್ ಇಂಡಿಯಾ ಸಿನೇಮಾವಾಗಿ ದಿನೇ ದಿನೇ ಖ್ಯಾತಿಯಾಗುತ್ತಿರುವ ಕನ್ನಡದ ಈ ಸಿನೇಮಾ ಮತ್ತು ಅದರ ಹಾಡುಗಳು ಈಗ ಎಲ್ಲರ ಬಾಯಿಯಲ್ಲಿ ಕೇಳು ಬರುತ್ತಿದೆ. ಇದೇ ಮೊದಲ ಬಾರಿಗೆ ಟಾಕೀಸಿನಲ್ಲಿ ಸಿನೇಮಾ ನೋಡಿದ ಮಕ್ಕಳು ಈ ಮಧ್ಯೆ, ಆರು ಮತ್ತು ಒಂಬತ್ತು ವರ್ಷಗಳ ಮಕ್ಕಳಿಬ್ಬರು ಇದೇ ಮೊದಲ ಬಾರಿಗೆ ಟಾಕೀಸಿನಲ್ಲಿ ಅದೂ ಕೂಡ  ಕಾಂತಾರ ಸಿನೇಮಾ ನೋಡಿ ಖುಷಿ ಪಟ್ಟಿದ್ದಾರೆ.  ಒಂದನೇ ತರಗತಿಯ ಯಶ(6) ಮತ್ತು […]

Intelligent Girl: ವೋಟ್ ಹಾಕದಿದ್ರೆ ಅಪ್ಪನಿಗೆ ಹೇಳ್ತಿನಿ ಎಂದ ಬಿ. ಎಂ. ಪಾಟೀಲ ಶಾಲೆಯ ಬಾಲಕಿ- ಮಗಳ ಮತಪ್ರಜ್ಞೆಗೆ ಮೆಚ್ಚಿ ಹಕ್ಕು ಚಲಾಯಿಸಿದ ತಾಯಿ

ಮಹೇಶ ವಿ. ಶಟಗಾರ ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೇಶದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಯಾರಿಗೆ ವೋಟು ಹಾಕಿದರೇನು ಬಂತು? ವೋಟಿಂಗ್ ದಿನ ರಜೆಯಲ್ಲಿ ಮನೆಯಲ್ಲಿ ಕಾಲ ಕಳೆದರೆ ಸಾಕು ಎಂದು ಬಹಳಷ್ಟು ಜನ ತಮ್ಮ ಹಕ್ಕು ಚಲಾಯಿಸದೇ ಮನೆಯಲ್ಲಿಯೇ ಕುಳಿತುಕೊಂಡು ಇಲ್ಲವೇ ಬೇರೆ ಕಡೆಗೆ ಪ್ರವಾಸ ಮಾಡುತ್ತ ಎಂಜಾಯ್ ಮಾಡುತ್ತಾರೆ.  ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶೇ. 55.27 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಇನ್ನುಳಿದ ಶೇ. 44. 63 […]

World Scientist: ಡಾ. ಆರ್. ವಿ. ಕುಲಕರ್ಣಿಯವರಿಗೆ ಸತತ 2ನೇ ಬಾರಿಗೆ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ

ವಿಜಯಪುರ: ಔಷಧ ವಿಜ್ಞಾನ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ವಿಜಯಪುರದ ಬಿ.ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಅವರಿಗೆ 2022 ನೇ ಸಾಲಿನ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 2ನೇ ಬಾರಿ ಸ್ಥಾನ ಲಭಿಸಿದೆ. ಅಮೇರಿಕಾದ ಸ್ಟ್ಯಾನಫೆೋರ್ಡ್ ವಿಶ್ವವಿದ್ಯಾಲಯ ಹಾಗೂ ನೆದರಲ್ಯಾಂಡ್ನ ಎಲ್ಸವಿಯರ್ ಪ್ರಕಾಶನ ಸಂಸ್ಥೆಯು ಪ್ರತಿ ವರ್ಷವೂ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಅವರಲ್ಲಿ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ […]

Teacher Felicitated: ಸೇವಾ ನಿವೃತ್ತಿಯಾದ ದೈಹಿಕ ಶಿಕ್ಷಕ- ತೆರೆದ ವಾಹನದಲ್ಲಿ ಮೆರವಣಿಗೆ- ಪ್ರೀತಿಯ ಉಡುಗೊರೆ ನೀಡಿದ ಬಿಜ್ಜರಗಿ ಗ್ರಾಮಸ್ಥರು

ವಿಜಯಪುರ: ಇದು ಸೇವೆಗೆ ಸಂದ ಗೌರವ.  ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಹೇಗೆ ಸ್ಪಂದಿಸುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ.  ತಮ್ಮೂರಿನ ಮಕ್ಕಳ ಕಲ್ಯಾಣಕ್ಕಾಗಿ ಸೇವೆ ದೈಹಿಕ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ನೀಡಿದ ಅದ್ಧೂರಿ ಗೌರವದ ಸ್ಚೋರಿ.  40 ವರ್ಷಗಳ ಕಾಲ ದೈಹಿಕ ಶಿಕ್ಷಕರಾಗಿ ತಮ್ಮೂರಿನ ಮಕ್ಕಳನ್ನು ತಾಲೂಕು, ಜಿಲ್ಲೆ, ವಲಯ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಾನಾ ಕ್ರೀಡಾಕೂಟಗಳಲ್ಲಿ ಪಾಲ್ಗೋಳ್ಳುವಂತೆ ಮಾಡಿದ ಶಿಕ್ಷಕನಿಗೆ ನೀಡಿದ ಪ್ರೀತಿಯ ಕೊಡುಗೆ.  ಇತ್ತೀಚಿನ ದಿನಗಳಲ್ಲಿ ಸೇವೆಯಿಂದ ಮರಳಿದ ಸೈನಿಕರಿಗೆ ಅದ್ಧೂರಿ ಸ್ವಾಗತ ಕೋರುವ […]

JEE Rank: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಕೇಶಕುಮಾರ ಹೊನ್ನಳ್ಳಿ ವಿಜಯಪುರ ಜಿಲ್ಲೆಗೆ ಪ್ರಥಮ- ರವೀಂದ್ರನಾಥ ಠ್ಯಾಗೋರ ಶಾಲೆಯಲ್ಲಿ ಸಂಭ್ರಮ

ವಿಜಯಪುರ: ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬಸವ ನಾಡಿನ ವಿದ್ಯಾರ್ಥಿ ರಾಕೇಶಕುಮಾರ ಹೊನ್ನಳ್ಳಿ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಐಐಟಿ ಸೇರುವುದು ದೊಡ್ಡ ಕನಸಾಗಿರುತ್ತದೆ.  ಭಾರತದ ಪ್ರತಿಷ್ಠಿತ ಐಐಟಿಯಲ್ಲಿ ಓದಲು ನಡೆಸಲಾಗುವ ಪ್ರವೇಶ ಪರೀಕ್ಷೆಯೂ ಅಷ್ಟೇ ಕಠಿಣವಾಗಿರುತ್ತದೆ.  ಈ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪಾಸು ಮಾಡಿದ್ದಷ್ಟೇ ಅಲ್ಲ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ವಿದ್ಯಾರ್ಥಿ ಬಸವ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ […]

NEET Rank: ಸಂಚಾರಿ ಠಾಣೆ ಮುಖ್ಯ ಪೇದೆ ಮಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ- ಡಿವೈಎಸ್ಪಿ ಬಸವರಾಜ ಯಲಿಗಾರ ಅವರಿಂದ ಸನ್ಮಾನ

ಚಿಕ್ಕೋಡಿ: ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮುಖ್ಯಪೇದೆಯಾಗಿರುವ ಲಗ್ಮಣ್ಣ ಭೀಮಪ್ಪ ನಾಯಕ್ ಅವರ ಪುತ್ರಿ ಸ್ನೇಹಾ ಲಗಮಣ್ಣ ನಾಯಕ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಸಿಬ್ಬಂದಿ ಸನ್ಮಾನಿಸಿ ಪ್ರೋತ್ಸಾಹಿಸಿದರು. ಮಾಜಿ ಸೈನಿಕರೂ ಆಗಿರುವ ಚಿಕ್ಕೋಡಿಯ ಲಗ್ಮಣ್ಣ ನಾಯಕ್ ಅವರ ಪುತ್ರಿ ಸ್ನೇಹಾ ನೀಟ್ ಪರೀಕ್ಷೆಯಲ್ಲಿ 720ರ ಪೈಕಿ 691 ಅಂಕಗಳನ್ನು ಗಳಿಸಿ 234ನೇ ಸ್ಥಾನ ಪಡೆದಿದ್ದಾಳೆ.  ಅಷ್ಟೇ ಅಲ್ಲ, ಹಿಂದುಳಿದ ಸಮುದಾಯಕ್ಕೆ ಸೇರಿರುವ ಈ ವಿದ್ಯಾರ್ಥಿನಿ ಓಬಿಸಿಯಲ್ಲಿ […]

Jammu Gold: ಜಮ್ಮುವಿನ ಯುವ ವೈದ್ಯನಿಗೆ ಒಲಿದು ಬಂದ ಆರು ಚಿನ್ನದ ಪದಕಗಳು- ಬಿ ಎಲ್ ಡಿ ಇ ಡೀಮ್ಡ್ ವಿವಿ ಘಟಿಕೋತ್ಸವದ ವಿಶೇಷ

ವಿಜಯಪುರ: ಆತ ಜಮ್ಮುವಿನ ಯುವಕ.  ತಂದೆ ಯೋಗೇಶ ಅರೊರಾ ಎನ್ ಜಿ ಓ ಒಂದರಲ್ಲಿ ಭದ್ರತಾ ವಿಭಾಗದ ಮುಖ್ಯ ಆಡಳಿತಾಧಿಕಾರಿ.  ತಾಯಿ ರೊಮಿಕಾ ಅರೊರಾ ಪ್ರಾಥಮಿಕ ಶಾಲೆಯ ಶಿಕ್ಷಕಿ.  ವೈದ್ಯನಾಗಬೇಕೆಂಬ ಈ ವಿದ್ಯಾರ್ಥಿಯ ಛಲ ಈಗ ಈಡೇರಿದ್ದಷ್ಟೇ, ಅಲ್ಲ, ಎಂಬಿಬಿಎಸ್ ಪದವಿಯೊಂದಿಗೆ ಆರು ಚಿನ್ನದ ಪದಕಗಳು ಈತನಿಗೆ ಬಯಸದೇ ಬಂದಿರುವುದು ವಿಶೇಷ. ಈ ಯುವ ವೈದ್ಯನ ಹೆಸರು ಗೌರವ ಅರೊರಾ.  ಬಸವ ನಾಡು ವಿಜಯಪುರದಲ್ಲಿ ನಡೆದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ […]

NEET Honour: ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ

ವಿಜಯಪುರ: ನೀಟ್(NEET) ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ವಿಜಯಪುರದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ, ವಿದ್ಯಾರ್ಥಿಗಳ ಒಳ್ಳೆಯ ಫಲಿತಾಂಶದ ಹಿಂದೆ ಸತತ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಇರುತ್ತದೆ.  ಅವಕಾಶವಿದ್ದಾಗ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.  ಪಿಯು ಹಂತವು ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖವಾಗಿದೆ.  ಜೀವನದ ಉನ್ನತ ಮಟ್ಟಕ್ಕೆ ಹೋಗುಲು ಹಲವಾರು ಅವಕಾಶಗಳಿದ್ದು, ಈ ಸಾಧನೆಗೆ […]

Teacher Award: ಶಾಲಾಭಿವೃದ್ಧಿ ಮಾಡಿದ ಪರಮೇಶ್ವರನಿಗೆ ಒಲಿದು ಬಂತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ವಿಜಯಪುರ: ಕೇವಲ ಸರಕಾರ ಮತ್ತು ದಾನಿಗಳನ್ನು ನೆಚ್ಚಿಕೊಳ್ಳದೇ ತಾನು ಕೆಲಸ ಮಾಡುತ್ತಿದ್ದ ಶಾಲೆಯನ್ನು ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿದ ಬಸವನ ನಾಡಿನ ಪರಮೇಶ್ವರನಿಗೆ ಈ ಬಾರಿ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಒಲಿದು ಬಂದಿದೆ‌ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಮಹಾರಾಷ್ಟ್ರ ಗಡಿಯಂಚಿನಲ್ಲಿರುವ ಘೋಣಸಗಿ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಇಲ್ಲಿನ ಶಿಕ್ಷಕ ಪರಮೇಶ್ವರ ಗದ್ಯಾಳ ತಮ್ಮ ಸ್ಚಂತ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿದ್ದರು. ಇವರ ಮಕ್ಕಳ ಪರ ಕಾಳಜಿಯನ್ನು ಗಮನಿಸಿ ಅಂದಿನ‌ ಶಿಕ್ಷಣ ಸಚಿವ ಸುರೇಶಕುಮಾರ ಅವರು […]

Tahasildar Yatre: 100 ದಿನ, 24 ರಾಜ್ಯ, ಪ್ರತಿ ದಿನ‌ 400 ಕಿ. ಮೀ. ಬೈಕ್ ಯಾತ್ರೆ- ಹುಬ್ಬಳ್ಳಿ ತಹಸೀಲ್ದಾರಗೆ ಬಸವ ನಾಡಿನಲ್ಲಿ ಸ್ವಾಗತಿಸಿದ ಗಣ್ಯರು

ವಿಜಯಪುರ: ಹುಬ್ಬಳ್ಳಿಯ ತಹಸೀಲ್ದಾರ ಶಶಿಧರ ಮಾಡ್ಯಾಳ ವಿನೂತನ ಯೋಜನೆಯಡಿ 100 ದಿನಗಳ ಬೈಕ್ ಯಾತ್ರೆ ಕೈಗೊಂಡಿದ್ದಾರೆ. ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ಆರಂಭವಾದ ಈ ಯಾತ್ರೆಗೆ ವಿಜಯಪುರದಲ್ಲಿ ಉದ್ಯಮಿ ಬಾಬುಗೌಡ ಬಿರಾದಾರ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮ ಆಯೋಜಿಸಿ ಸ್ವಾಗತ ಕೋರಿ ಶುಭ ಹಾರೈಸಿದರು. ವಿಜಯಪುರ ನಗರದ ಹೊಟೇಲ್ ಮಧುವನ ಇಂಟರ ನ್ಯಾಶನಲ್ ಗೆ ಆಗಮಿಸಿದ ಶಶಿಧರ ಮಾಡ್ಯಾಳ ಮತ್ತು ಅವರ ಸ್ನೇಹಿತ ವಿಶ್ವ ಧಢೇಸೂರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು. […]