Seniors Honour: 75 ವರ್ಷ ಮೇಲ್ಪಟ್ಟ 75 ಜನಸಾಮಾನ್ಯರಿಗೆ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿನೂತನ ಸನ್ಮಾನ
ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿ. ಎಲ್. ಡಿ. ಇ. ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಸ್ವಾತಂತ್ರ್ಯ ದಿನವನ್ನು ವಿನೂತನವಾಗಿ ಆಚರಿಸಲಾಯಿತು. 75 ವರ್ಷ ಮೇಲ್ಪಟ್ಟ 75 ಜನ ಹಿರಿಯ ನಾಗರಿಕರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. 75 ವರ್ಷ ಮೇಲ್ಪಟ್ಟ ನಿವೃತ್ತ ಅಧಿಕಾರಿಗಳು, ಸಿಬ್ಬಂದಿ, ರೈತರು, ಜನಸಾಮಾನ್ಯರನ್ನು ಅದರಲ್ಲೂ 20ಕ್ಕೂ ಹೆಚ್ಚು ಮಹಿಳೆಯರನ್ನು ಗುರುತಿಸಿ ಗೌರವಿಸಿದ್ದು ವಿಶೇಷವಾಗಿತ್ತು. ಸ್ವಾತಂತ್ರ್ಯ […]
Babaleshwar Tiranga: ಬಬಲೇಶ್ವರದಲ್ಲಿ ತಿರಂಗಾ ಯಾತ್ರೆ- ಎಂ ಎಲ್ ಸಿ ಸುನೀಲಗೌಡ ಪಾಟೀಲ ಚಾಲನೆ
ವಿಜಯಪುರ: ಬಬಲೇಶ್ವರ ಪಟ್ಟಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆ ನಡೆಯಿತು. 300 ಮೀ. ಉದ್ದದ ತ್ರಿವರ್ಣ ಧ್ವಜ ಮೆರವಣಿಗೆಗೆ ವಿಧಾನ ಪರಿಷತ ಕಾಂಗ್ರೆಸ್ ಶಾಸಕ ಸುನೀಲಗೌಡ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವಿರಾರು ಜನರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟದಟ ಮಾರ್ಗದಲ್ಲಿ ನಡೆದಾಗ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ತಿರಂಗಾ ಯಾತ್ರೆ ಬಬಲೇಶ್ವರ ಪಟ್ಟಣದ ಶಾಂತವೀರ ಸರ್ಕಲ್ ನಿಂದ ಆರಂಭವಾದ […]
Rural Talents: ಚಿಕ್ಕರೂಗಿ ಗ್ರಾಮದ ಯುವಕ ಮೈನವಿರೇಳಿದ ಸಾಧನೆ- ಇವರ ಸಾಹಸ ಮೆಚ್ಚುವಂಥದ್ದು
ವಿಜಯಪುರ ಬಸವನಾಡು ವಿಜಯಪುರ ಜಿಲ್ಲೆಯ ಯುವಕರಿಬ್ಬರು ಮಾಡಿರುವ ಸಾಧನೆ ಈಗ ಗಮನ ಸೆಳೆದಿದೆ. ಇಬ್ಬರೂ ಯುವಕರು ಒಂದೇ ಊರಿನವರಾಗಿದ್ದು ಇವರ ಸಾಧನೆಗಳು ಮಾತ್ರ ವಿಭಿನ್ನ ಮತ್ತು ವಿಶಿಷ್ಠವಾಗಿವೆ. ಈ ಹಳ್ಳಿ ಹೈದರ ಶಕ್ತಿ ಸಾಮರ್ಥವನ್ನು ಅವರ ಸಾಧನೆಹಳು ಅನಾವರಣಗೊಳಿಸಿವೆ. ಓರ್ವ ಯುವಕ ಮೂರು ಕಿ. ಮೀ. ವರೆಗೆ ನಡೆದು ಸಾಧನೆ ಮಾಡಿದರೆ, ಮತ್ತೂರ್ವ ಯುವಕ 11 ಕಿ. ಮೀ. ಸಂಚರಿಸಿ ಜನಮೆಚ್ಚುವ ಸಾಧನೆ ಮಾಡಿದ್ದಾರೆ. ಅಂದ ಹಾಗೆ ಇವರಿಬ್ಬರು ಬಸವ ನೋಡುವ ವಿಜಯಪುರ ಜಿಲ್ಲೆಯ ದೇವರು ದೇವರ […]
Fellowship Award: ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಇನಾಮದಾರ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಫೆಲೋಶಿಪ್ ಪ್ರದಾನ
ವಿಜಯಪುರ: ನಗರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಉಪಕುಲಪತಿ ಡಾ. ಅರುಣ ಇನಾಮದಾರ ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಆವಿಷ್ಕಾರ ಮತ್ತು ಕೋಡುಗೆಗಳನ್ನು ಪರಿಗಣಿಸಿ ಪ್ರತಿ ವರ್ಷ ರಾಜ್ಯದ ನಾನಾ ಕ್ಷೇತ್ರಗಳ ಗಣ್ಯ ವಿಜ್ಞಾನಿಗಳಿಗೆ ಕೊಡ ಮಾಡುವ ಪ್ರಶಸ್ತಿ ಇದಾಗಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ 2022ನೇ ವರ್ಷದ ಪ್ರಶಸ್ತಿಯನ್ನು ಚರ್ಮರೋಗ ಖ್ಯಾತ ವೈದ್ಯರೂ ಆಗಿರುವ ಡಾ. ಅರುಣ ಇನಾಮದಾರ ಅವರಿಗೆ ಪ್ರದಾನ […]
KV Awarded: ವಿಜಯಪುರ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಚ್ಛ ವಿದ್ಯಾಲಯ ಪುರಸ್ಕಾರ ರಾಜ್ಯ ಪ್ರಶಸ್ತಿ- ರಾಷ್ಟ್ರ ಮಟ್ಟಕ್ಜೆ ಆಯ್ಕೆಯಾದ ಶಾಲೆ
ವಿಜಯಪುರ: ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಚ್ಛ ವಿದ್ಯಾಲಯ ಪುರಸ್ಕಾರ 2022-23 ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ. ಅಲ್ಲದೇ, ರಾಷ್ಟ್ರಮಟ್ಟದ ಸ್ಪರ್ಧೆಗೂ ಶಾಲೆ ಆಯ್ಕೆಯಾಗಿದೆ. ಇದನ್ನೂ ಓದಿ: ವಿಜಯಪುರ ಕೇಂದ್ರಿಯ ವಿದ್ಯಾಲಯಕ್ಕೆ ಪ್ಲಾಸ್ಟಿಕ್ ಮುಕ್ತ ಶಾಲೆ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಪ್ರಾಚಾರ್ಯ ಸೆಬಿ ಸೆಬಾಸ್ಟಿಯನ್ ಅವರ ಪರವಾಗಿ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರಮೇಶ ಚವ್ಹಾಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: Kendriya Vidyalaya: ಶಾಲಾ ಸಂಸತ್ತು ಪದಗ್ರಹಣ ಸಮಾರಂಭ- ಡಿಸಿ ಡಾ. ವಿಜಯಮಹಾಂತೇಶ […]
CA Pass: ಕೃಷ್ಣಾ ತೀರದ ರೈತ ಕುಟುಂಬದ ಯುವತಿ ಸಿಎ ಪರೀಕ್ಷೆ ಪಾಸ್
ವಿಜಯಪುರ: ಬಸವ ನಾಡಿನ ಯುವತಿ ಸಿಎ ಪರೀಕ್ಷೆ ಪಾಸು ಮಾಡುವ ಮುಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಹೊಸದಿಲ್ಲಿಯ ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆ ನಡೆಸಿದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಅಂತಿಮ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಣಮಾಪುರದ ಯುವತಿ ಸೌಮ್ಯಾ ಪಾಟೀಲ ಉತ್ತೀರ್ಣರಾಗಿದ್ದಾಳೆ. ವಿಜಯಪುರ ನಗರದ ವಜ್ರಹನುಮಾನ ನಗರದಲ್ಲಿ ವಾಸಿಸುವ ಯುವತಿಯದಯ ರೈತರ ಕುಟುಂಬ. ತಂದೆ ಬೇಸಾಯ ಮಾಡುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. ವಿಜಯಪುರ ನಗರದ ಸುಭಾಸ ಪಾಟೀಲ ಆ್ಯಂಡ್ ಕಂಪನಿಯಲ್ಲಿ ಸಿಎ ಆಗಿರುವ ಶರಣಗೌಡ .ಬಿ. […]
Foreign Love Marriage: ಫಾರಿನ್ ವಧು ಇಂಡಿಯನ್ ವರ ಬಸವ ನಾಡಿನಲ್ಲಿ ಹಿಂದೂ ಸಂಪ್ರದಾಯದಂತೆ ನಡೆದ ಲವ್ ಕಮ್ ಅರೆಂಜ್ ಮ್ಯಾರೇಜ್
ವಿಜಯಪುರ: ಪ್ರೀತಿ, ಪ್ರೇಮ ಅವರುಸಿರಾಗಿತ್ತು. ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಗೆ ಹಿರಿಯರೂ ಕೂಡ ಯಾವುದೇ ಪ್ರತಿರೋಧ ತೋರಿಸದೇ ಒಪ್ಪಿಗೆ ಸೂಚಿಸಿದ್ದೂ ಗಮನಾರ್ಹವಾಗಿತ್ತು. ಇದು ಸಪ್ತಸಾಗರದಾಚೆ ನಡೆದ ಲವ್ ಸ್ಟೋರಿಯ ಕಥೆ. ಒಂದೇ ಊರಿನಲ್ಲಿ ಪರಸ್ಪರ ಪ್ರೀತಿಸುತ್ತಿದ್ದರೂ ನಾನಾ ಕಾರಣಗಳಿಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಧ್ಯವಾಗದೇ ಪ್ರೇಮ, ಪ್ರೀತಿ ಮದುವೆಗೂ ಮುಂಚೆಯೇ ಮುರಿದು ಬಿದ್ದಿರುವ ಹಲವಾರು ಘಟನೆಗಳ ಮಧ್ಯೆಯೇ ಈ ವಿವಾಹ ಗಮನ ಸೆಳೆಯಿತು. ವರ ಭಾರತದ ಬಸವ ನಾಡಿನವನಾಗಿದ್ದಾರೆ, ವಧು ಸಪ್ತಸಾಗರದಾಚೆಯ ಕೆನೆಡಾ ಮೂಲದವಳಾಗಿದ್ದಾಳೆ. ಬಸವ […]
PUC Rank: ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆಗೆ ನಾನಾ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದ ಎಂ. ಬಿ. ಪಾಟೀಲ
ವಿಜಯಪುರ: ವಿಜಯಪುರ, 19: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಿರುವ ಬಿ ಎಲ್ ಡಿ ಇ ಸಂಸ್ಥೆಯ ನಾನಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಸನ್ಮಾನಿಸಿ ಗೌರವಿಸಿದರು. ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿ ಯಶವರ್ಧನ ಶಹಾ ಒಟ್ಟು […]
PUC 1st Rank: ಭೀಮಾ ತೀರದ ಯುವತಿ ಶ್ವೇತಾ ಭೀಮಾಶಂಕರ ಭೈರಗೊಂಡ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ
ವಿಜಯಪುರ: ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ಶೇ. 100 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ಭೀಮಾ ತೀರದ(Bheema Shore) ಯುವತಿ ಪಿಯುಸಿ ಪರೀಕ್ಷೆಯಲ್ಲಿ(PUC Exam) ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ(1st Rank To State) ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಯುವತಿ ಶ್ವೇತಾ […]
Land Donate: ಊರಿನ ಉಪಕಾರಕ್ಕಾಗಿ 3.40 ಎಕರೆ ಜಮೀನನ್ನು ಪಂಚಾಯಿತಿಗೆ ದಾನ ಮಾಡಿ ಮಾದರಿಯಾದ ಬಸವ ನಾಡಿನ ಬಗಲಿ ದಂಪತಿ
ವಿಜಯಪುರ: ತಮ್ಮೂರಿನ ಜನರ ಉಪಕಾರಗಕಾಗಿ ಬಸವ ನಾಡಿನ ದಂಪತಿ ತಮ್ಮ 3.40 ಎಕರೆ ಜಮೀನನ್ನು ಪಂಚಾಯಿತಿಗೆ ದಾನವಾಗಿ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ವಿಜಯಪುರ ತಾಲೂಕಿನ ಐನಾಪುರ ಗ್ರಾಮದ ಕುಟುಂಬವೊಂದು ಸರಕಾರಕ್ಕೆ ದಾನ ರೂಪವಾಗಿ ನೀಡಿದ ಜಮೀನೊಂದನ್ನು ಪಂಚಾಯಿತಿಗೆ ದಾನವಾಗಿ ನೀಡುವ ಕರಾರು ಒಪ್ಪಂದ ಪ್ರಕ್ರಿಯೆಯ ವಿಜಯಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಹಾಗೂ ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜೂ. 10ರಂದು, […]