Kumani Honour: 49ನೇ ವಯಸ್ಸಿನಲ್ಲಿ ಸರಕಾರಿ ನೌಕರಿ ಗಿಟ್ಟಿಸಿದ ಕುಮಾನಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ನಗರದ ಜಲನಗರ ನಿವಾಸಿ ಮತ್ತು ಗುತ್ತಿಗೆದಾರರಾಗಿದ್ದ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಅವರು ಈಗ 49ನೇ ವಯಸ್ಸಿನಲ್ಲಿ ಸರಕಾರಿ ನೌಕರಿ ಗಿಟ್ಟಿಸಿದ್ದಾರೆ.   2007ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ಬರೆದಿದ್ದ ಅವರು ಪಾಸಾಗಿದ್ದರೂ, ಅಂದಿನ ಆಡಳಿತ ಮಾಡಿದ ತಪ್ಪಿನಿಂದಾಗಿ ನೌಕರಿಯಿಂದ ವಂಚಿತರಾಗಿದ್ದರು.  ಈ ಹಿನ್ನೆಲೆಯಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಅವರು ನೌಕರಿ ಪಡೆಯಲು ಹೋರಾಟ ನಡೆಸಿದ್ದರು.  2021ರಲ್ಲಿ ಹೈಕೋರ್ಟ್ ಈ ಪ್ರಕರಣ ಇತ್ಯರ್ಥಗೊಳಿಸಿ ಅಂದಿನ ಆಡಳಿತ ಮಾಡಿದ ತಪ್ಪನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜಕುಮಾರ ಸಿದ್ರಾಮಪ್ಪ ಕುಮಾನಿ ಸೇರಿದಂತೆ […]

Govt Job@49: ಆತ್ಮೀಯ ರಾಜಕುಮಾರನನ್ನು ಪ್ರೀತಿಯಿಂದ ಸನ್ಮಾನಿಸಿ ಸಂತಸಪಟ್ಟ ಸ್ನೇಹಿತರು

ವಿಜಯಪುರ: ಇದು ವ್ಯಕ್ತಿಯಲ್ಲಿರುವ ಒಳ್ಳೆಯತನ, ಪರೋಪಕಾರಕ್ಕೆ ಹಿತೈಷಿಗಳ ಶುದ್ಧ ಮನಸ್ಸಿನ ಶುಭ ಹಾರೈಕೆಗಳು ಹಾಗೂ ತಾಯಿಯ ಶುಭಾಶಿರ್ವಾದಕ್ಕೆ ಸಿಕ್ಕ ತಕ್ಕ ಪ್ರತಿಫಲ. ಸದಾ ಪರೋಪಕಾರದಲ್ಲಿ ಸಂತಸ ಕಾಣುತ್ತ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತಚಾಗಿ ಸ್ನೇಹಿತರ ಬಳಗವನ್ನು ಸಂಪಾದಿಸಿರುವ ವ್ಯಕ್ತಿಗೆ ದಶಕದ ನಂತರ ಸಿಕ್ಕ ಸರಕಾರಿ ಕೆಲಸದ ಸಂಭ್ರಮಾಚರಣೆ ಎಂದರೂ ತಪ್ಪಲ್ಲ. ಇಂಥ ಅಪರೂಪದ ಮತ್ತು ಪ್ರೀತಿಯ ಚಿಕ್ಕದಾದ ಕಾರ್ಯಕ್ರಮ ಬಸವ ನಾಡು ವಿಜಯಪುರ ನಗರದ ಜಲನಗರದಲ್ಲಿರುವ ಶಿವಶರಣೆ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆಯಿತು. ಜಲನಗರ ಗೆಳೆಯರು […]

Mother Temple: ತಾಯಿಯ ಹೆಸರಿನಲ್ಲಿ ಅಮ್ಮನ ಮಂದಿರ ನಿರ್ಮಿಸಿದ ಬಸವ ನಾಡಿನ ಕುಮಾನಿ ಕುಟುಂಬದ ಕುಡಿಗಳು

ಮಹೇಶ ವಿ. ಶಟಗಾರ ವಿಜಯಪುರ: ಅವ್ವ, ಅಮ್ಮ, ತಾಯಿ(Mother) ಈ ಒಂದು ಶಬ್ದ ಮಕ್ಕಳಲ್ಲಿ(Children) ಚೈತನ್ಯ ತುಂಬುತ್ತದೆ. ಪ್ರತಿಯೊಬ್ಬ ಮಕ್ಕಳ ಯಶಸ್ಸಿನಲ್ಲಿ(Success) ತಾಯಿಯೇ ಮೊದಲ ಗುರುವಾಗಿರುತ್ತಾಳೆ(Teacher). ಸದಾ ಮಕ್ಕಳ ಶ್ರೇಯೋಭಿವೃದ್ಧಿ(Welfare) ಬಯಸುವ ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ತಮ್ಮ ಜೀವನ ರೂಪಿಸಿದ ತಾಯಿಯ ನೆನಪಿನಲ್ಲಿ ಆಕೆಯ ಮಕ್ಕಳು ಸೇರಿಕೊಂಡು ಪಿರಾಮಿಡ್ ಮಾದರಿಯಲ್ಲಿ ಅಮ್ಮನ ಮಂದಿರ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಅಮ್ಮನ ಮಂದಿರ ನಿರ್ಮಾಣವಾಗಿರುವುದು ಬಸವ ನಾಡು ವಿಜಯಪುರ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ. ವಿಜಯಪುರ […]

Green Apartment Honour: ಬೆಂಗಳೂರಿನ ಪ್ರಾವಿಡೆಂಡ್ ಸನ್ವರ್ಥ್ ಅಪಾರ್ಟಮೆಂಟ್ ಗೆ ಗ್ರೀನ್ ಅಪಾರ್ಟಮೆಂಟ್ ಗೌರವ

ಬೆಂಗಳೂರು: ಬೆಂಗಳೂರಿನ(Bengaluru) ಪ್ರಾವಿಡೆಂಟ್(Provident) ಸನ್ಬರ್ಥ್(Sunworth) ಅಪಾರ್ಟಮೆಂಟ್ ಗೆ ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ+Pollution Control Board) ಗ್ರೀನ್ ಅಪಾರ್ಟಮೆಂಟ್(Green Apartment) ಪ್ರಶಂಸಾ ಪತ್ರ ನೀಡಿ ಗೌರವಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಮೈಸೂರು ರಸ್ತೆಯಲ್ಲಿರುವ ಕೆಂಗೇರಿ ಹೋಬಳಿಯ ವೆಂಕಟಾಪುರ ವ್ಯಾಪ್ತಿಯಲ್ಲಿ ಬರುವ ಈ ಅಪಾರ್ಟಮೆಂಟ್ 2017ರಲ್ಲಿ ಆರಂಭವಾಗಿದೆ. 56 ಎಕರೆ ವಿಶಾಲವಾದ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಿಸಲಾಗಿದ್ದು, ಬೆಂಗಳೂರು ಆರ್ಕಿಟೆಕ್ಟ್ ವೆಂಕಟರಮಣನ್ ಅಸೋಸಿಯೇಟ್ಸ್ ಈ ಅಪಾರ್ಟಮೆಂಟ್ ವಿನ್ಯಾಸ ರೂಪಿಸಿದೆ. ಇಲ್ಲಿ 2800 ಮನೆಗಳನ್ನು ನಿರ್ಮಿಸಲಾಗಿದ್ದು ಸುಶಿಕ್ಷಿತ ಮತ್ತು […]

Ganayogi Work: ಗಬ್ಬೆದ್ದು ಹೋಗಿದ್ದ ನೀರಿನ ಟ್ಯಾಂಕುಗಳಿಗೆ ಬಣ್ಣದ ಬಳಿದು ರಾಷ್ಟ್ರ ನಾಯಕರ ಚಿತ್ರ ಬಿಡಿಸಿ ಗಮನ ಸೆಳೆದ ಗಾನಯೋಗಿ ಸಂಘ

ವಿಜಯಪುರ: ಈ ಯುವಕರ ಸಂಘ(Youth Association) ಒಂದಿಲ್ಲೊಂದು ಸಮಾಜಕ್ಕೆ(Society) ಪೂರಕವಾಗುವ ಕಾರ್ಯಗಳನ್ನು(Works) ಮಾಡುವ ಮೂಲಕ ಆಗಾಗ ಗಮನ ಸೆಳೆಯುತ್ತಲೇ ಇರುತ್ತದೆ.  ಈ ಹಿಂದೆ ಪಾಳುಬಿದ್ದ ಭಾವಿಯನ್ನು(Ruined Well) ಸ್ವಚ್ಛಗೊಳಿಸಿ ನೀರನ್ನೂ ಶುದ್ಧ(Cleaned) ಮಾಡಿತ್ತು.  ನಂತರ ಪ್ರಯಾಣಿಕರು ನಿಂತುಕೊಳ್ಳಲು ಅಸಹ್ಯ ಪಡುತ್ತಿದ್ದ ಬಸ್ ತಂಗುದಾಣಗಳನ್ನು ಸುಣ್ಣ ಬಣ್ಣ ಬಳಿದು ಅದಕ್ಕೋಂದು ಆಕರ್ಷಣೆ ಬರುವಂತೆ ಮಾಡಿತ್ತು.  ನಂತರ ಮಾರುಕಟ್ಟೆಯಲ್ಲಿ ಜನ ಪ್ರವೇಶಿಸುವ ದ್ವಾರಗಳು ಗಬ್ಬೆದ್ದು ನಾರುವುದನ್ನು ಗಮನಿಸಿ ಅಲ್ಲಿಯೂ ಉತ್ತಮ ಸಂದೇಶಗಳನ್ನು ಬರೆಯುವ ಮೂಲಕ ಭೇಷ್ ಎನಿಸಿಕೊಂಡಿತ್ತು. ಈಗ ಇದೇ […]

SSLC Rank: ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಏಳು ವಿದ್ಯಾರ್ಥಿಗಳನ್ನು ಗೌರವಿಸಿದ ಸಚಿವ ಕಾರಜೋಳ

ವಿಜಯಪುರ: ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ(Exam) ಅದ್ವೀತಿಯ ಸಾಧನೆ(Good Performance) ಮಾಡಿದ ಏಳು ವಿದ್ಯಾರ್ಥಿಗಳನ್ನು(Seven) ಜಲಸಂಪನ್ನೂಲ ಸಚಿವ ಗೋವಿಂದ ಕಾರಜೋಳ(Irrigation Minister Govind Karjol) ವಿಜಯಪುರದಲ್ಲಿ ಸನ್ಮಾನಿಸಿದರು. 625ಕ್ಕೆ 625 ಅಂಕ ಪಡೆದ ಎಲ್ಲ ಏಳು ಜನ ವಿದ್ಯಾರ್ಥಿಗಳನ್ನು ತಮ್ಮ ನಿವಾಸಕ್ಕೆ ಬರ ಮಾಡಿಕೊಂಡ ಸಚಿವ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಮೈಸೂರ ಪೇಟ ತೊಡಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವರು, ವಿಜಯಪುರ ಜಿಲ್ಲೆ ಪ್ರತಿಭಾನ್ವಿತರ ತವರೂರು. ಈ ಜಿಲ್ಲೆಗೆ […]

Cow Care: ಉರಿ ಬಿಸಿಲಿನಲ್ಲಿ ಮಗನ ಜೊತೆ ಸೇರಿ ಗೋಮಾತೆಯ ಬಾಯಾರಿಕೆ ನೀಗಿಸಿದ ತಾಯಿ

ವಿಜಯಪುರ: ಬೇಸಿಗೆಯ(Summer) ಬಿಸಿಲು(Heat) ಜೋರಾಗುತ್ತಿದೆ. ಬಿಸಿಲಿನ ಝಳಕ್ಕೆ ಮೇಲೆ ತಲೆ ಸುಡುತ್ತಿದ್ದ ಕೆಳಗೆ ಇಳೆ(Earth) ಕಾಯುತ್ತಿದೆ. ಎಷ್ಟೇ ನೀರು(Water) ಕುಡಿದರೂ ಕಡಿಮೆ ಎನಿಸುವುದು ಉರಿ ಬಿಸಿಲಿನ ವಿಶೇಷ. ಇಂಥ ಪರಿಸ್ಥಿತಿಯಲ್ಲಿ(Situation) ಜಾನುವಾರುಗಳ ಪಾಡಂತೂ ಹೇಳತೀರದು. ರೈತರು ಸಾಕಿರುವ ಜಾನುವಾರುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಜೋಪಾನ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಮೇವು ಹಾಕಿ, ನೀರು ಕುಡಿಸುತ್ತಾರೆ. ಆದರೆ, ಬೇಸಿಗೆಯಲ್ಲಿ ಬಿಡಾಡಿ ದನಗಳ ಪಾಡಂತೂ ಹೇಳತೀರದು. ಜಲಕ್ಕಾಗಿ ಅವುಗಳು ಪರದಾಡುವ ಪರಿಸ್ಥಿತಿ ಎಂಥವರಲ್ಲೂ ಕರುಣೆ ಮೂಡಿಸುತ್ತದೆ.  ಇಂಥ ಬೀಡಾಡು ಆಕಳ ಪರಿಸ್ಥಿತಿ […]

Dual Party System: ದ್ವಿಪಕ್ಷ ಪದ್ಧತಿ ಜಾರಿಗೆ ಆಗ್ರಹ: 42 ದಿನ 1500 ಕಿ. ಮೀ. ದೆಹಲಿಗೆ ಪಾದಯಾತ್ರೆ ಕೈಗೊಂಡು ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದ ಬಸವ ನಾಡಿನ ಹಿರಿಯ ಮುತ್ಸದ್ದಿ

ವಿಜಯಪುರ: ದೇಶದಲ್ಲಿ ದ್ವಿಪಕ್ಷ ಪದ್ಧತಿ(Dual Party System) ಜಾರಿಯಾಗಬೇಕು.  ಮತ್ತು ಚಲಾವಣೆಯಾದ ಮತಗಳಲ್ಲಿ(Casted Votes) ಶೇ. 50ಕ್ಕಿಂತಲೂ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು(Candidate) ಮಾತ್ರ ವಿಜಯಿ(Winner) ಎಂದು ಘೋಷಿಸುವಂತೆ ಆಗ್ರಹಿಸಿ ಬಸವ ನಾಡಿನ(ಬಸವ ನಾಡು) ಹಿರಿಯ ಮುತ್ಸದ್ದಿಯೊಬ್ಬರು 1500 ಕಿ. ಮೀ. ಪಾದಯಾತ್ರೆ ನಡೆಸಿ ಸಂಸದ ರಮೇಶ ಜಿಗಜಿಣಗಿ ಸಮ್ಮುಖದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಎಲ್ಲ ಪಕ್ಷದವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ 62 ವರ್ಷದ […]

DC Office: ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದ ವಿಜಯಪುರ ಡಿಸಿ ಕಚೇರಿ- ಗಮನ ಸೆಳೆದ ನಿರ್ಗಮಿತ ಡಿಸಿ ಪಿ ಸುನೀಲ ಕುಮಾರ ನಡೆ

ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ(Vijayapura Deputy Commissioner) ಕಚೇರಿ(Office) ಶುಕ್ರವಾರ(Friday) ಅಪೂರ್ವ ಕ್ಷಣಗಳಿಗೆ(Memorable Moments) ಸಾಕ್ಷಿಯಾಯಿತು.  ಈ ಸಂದರ್ಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ನಡೆ ಕೂಡ ಇತರರಿಗೆ ಮಾದರಿ(Model) ಎಂಬಂತಿತ್ತು.  ವಿಜಯಮಹಾಂತೇಶ ಬಿ. ದಾನಮ್ಮನವರ ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.  ಈ ಸಂದರ್ಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಉಪಸ್ಥಿತರಿದ್ದದ್ದು […]

ಆರಕ್ಷಕನ ಸಮಯಪ್ರಜ್ಞೆ- ಕಾಲುವೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ

ವಿಜಯಪುರ: ಬಸವ ನಾಡಿನ(Basava Nadu) ಆರಕ್ಷಕರೊಬ್ಬರ(Police) ಸಮಯ ಪ್ರಜ್ಞೆ(Time Sense) ಮೆರೆದಿದ್ದು ಕಾಲುವೆಯಲ್ಲಿ(Canal) ಮುಳುಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸಹೋದರರಿಬ್ಬರ ಸಹಾಯದೊಂದಿಗೆ ಸೇರಿ ರಕ್ಷಣೆ(Secure) ಮಾಡಿದ್ದಾರೆ. ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಠಾಣೆಯ ಆರಕ್ಷಕ ಎಸ್. ಎಸ್. ಅಂಗಡಗೇರಿ ಮತ್ತು ನಿಡಗುಂದಿ ಪಟ್ಟಣದ ಸಹೋದರರಾದ ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಜೊತೆ ಸೇರಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯ ಪೇದೆ ಎಸ್. ಎಸ್. ಅಂಗಡಗೇರಿ […]