ಸಾಮಾಜಿಕ ಕಾರ್ಯದ ಮೂಲಕ ಸ್ವಚ್ಛತೆ ಗಾನ ಪಸರಿಸುತ್ತಿರುವ ನಿಜವಾದ ರೀಲ್ಸ್ ಕಲಾವಿದರು
ಮಹೇಶ ವಿ. ಶಟಗಾರ ವಿಜಯಪುರ: ಇದು ರೀಲ್ಸ್ ಕಲಾವಿದರ ರಿಯಲ್ ಸ್ಟೋರಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವ ಮೂಲಕ ಜನಮನ ಸೆಳೆಯುತ್ತಿರುವ ಈ ಕಲಾವಿದರು ಈಗ ರಿಯಲ್ ಜೀವನದಲ್ಲಿ ರೋಲ್ ಮಾಡೆಲ್ ಕೆಲಸ ಮಾಡುವ ಮೂಲಕ ತಮ್ಮ ಛಾಪು ಮೂಡಿಸುತ್ತಿದ್ದಾರೆ. ವಿಜಯಪುರ ನಗರದ ಗಾನಯೋಗಿ ಸಂಘದ ಯುವಕರು ಕಳೆದ ಹಲವಾರು ವರ್ಷಗಳಿಂದ ನಾನಾ ರೀತಿಯ ಕಿರು ವಿಡಿಯೋ ಮಾಡುವ ಮೂಲಕ ರೀಲ್ಸ್ ನಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ, ಸಮಾಜಮುಖಿ ಕೆಲಸಗಳ ಮೂಲಕವೂ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಈ ಹಿಂದೆ […]
ಶಾಲೆಗೆ ಶಿಕ್ಷಕನಾಗಿ ಬಂದ ಪರಮೇಶ್ವರ- ವಿದ್ಯಾ ದೇಗುಲದ ಕಲಿಕಾ ವಾತಾವರಣವನ್ನೇ ಬದಲಿಸಿದ
ಮಹೇಶ ವಿ. ಶಟಗಾರ ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹಿಂದುಳಿದ ಮತ್ತು ಗಡಿಗೆ ಹೊಂದಿಕೊಂಡಿರುವ ಲಂಬಾಣಿ ತಾಂಡಾವೊಂದರಲ್ಲಿ ಸರಕಾರಿ ಶಾಲೆಯ ಶಿಕ್ಷಕ ಮಾಡಿರುವ ಕಾರ್ಯ ಈಗ ಮನೆ ಮಾತನಾಗಿದೆ. ಸರಕಾರಿ ಶಾಲೆಗಳು ಮತ್ತು ಸರಕಾರಿ ಶಾಲೆಗಳ ಶಿಕ್ಷಕರೆಂದರೆ ಟೀಕೆ ಮಾಡುವವರಿಗೆ ಇಂಥವರೂ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರಾ? ಅವರು ಹೀಗೂ ಅಭಿವೃದ್ಧಿ ಮಾಡುತ್ತಾರಾ ಎಂಬುದಕ್ಕೆ ಸಾಕ್ಷಿಯಾಗಿದೆ ದ್ರಾಕ್ಷಿ ನಾಡಿನ ಈ ಶಿಕ್ಷಕನ ಕಾರ್ಯ. ಲಾಕಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ತಾನು ಕೆಲಸ ಮಾಡುತ್ತಿರುವ ಶಾಲೆಯಲ್ಲಿ ಈ ಶಿಕ್ಷಕ […]
ಬಸವ ನಾಡಿನಲ್ಲಿ ಹೃದಯಸ್ಪರ್ಷಿ ಘಟನೆ- ಕಲಿಸಿದ ಗುರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೋಟ್ಟ ಮಕ್ಕಳು
ಮಹೇಶ ವಿ. ಶಟಗಾರ ವಿಜಯಪುರ: ಗುರು-ಶಿಷ್ಯರ ಸಂಬಂಧ ಈ ಹಿಂದಿನಂತಿಲ್ಲ ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಆದರೆ, ಗುರುಗಳೆಂದರೆ ಗುರುಗಳೇ. ಶಿಷ್ಯಂದಿರಿಗೆ ತಮ್ಮ ಗುರುಗಳ ಬಗ್ಗೆ ಈಗಲವೂ ಅದೇಷ್ಟು ಗೌರವ, ಪ್ರೀತಿ, ಭಾವನಾತ್ಮಕ ಸಂಬಂಧ ಇದೆ ಎಂಬುದಕ್ಕೆ ಸಾಕ್ಷಿ ಎಂಬಂತಿದೆ ಬಸವ ನಾಡಿನಲ್ಲಿ ನಡೆದ ಈ ಘಟನೆ. ಶಿಕ್ಷಕರೊಬ್ಬರು ಕಾರ್ಯಕ್ರಮ ನಂತರ ಮುಂದಿನ ಪಯಣಕ್ಕೆ ಸಜ್ಜಾಗಿ ತಮ್ಮ ಬೈಕ್ ಹತ್ತಿ ಹೊರಡಲು ಸಿದ್ಧರಾಗಿದ್ದರು. ಆಗ, ಸುತ್ತಮುತ್ತಲಿದ್ದ ವಿದ್ಯಾರ್ಥಿಗಳ ಭಾವೋದ್ವೇಗ ತಡೆಯಲಾರದೇ ಬಿಕ್ಕಿ ಬಿಕ್ಕಿ ಅಳಳಾರಂಭಿಸಿದರು. […]
ರಾಜಕೀಯಕ್ಕಿಂತ ಮೀಗಿಲಾದುದು ಸ್ನೇಹ, ಸಂಬಂಧ, ಮಾನವೀಯ ಮೌಲ್ಯಗಳು ಎಂಬುದಕ್ಕೆ ಸಾಕ್ಷಿ ಈ ಪ್ರಸಂಗ
ವಿಜಯಪುರ: ಇದು ಚುನಾವಣೆ ಮತ ಎಣಿಕೆ ಬಿಸಿ ಬಿಸಿ ಸಂದರ್ಭದಲ್ಲಿಯೂ ಭಾರತೀಯರಲ್ಲಿ ರಾಜಕೀಯಕ್ಕಿಂತಲೂ ಸ್ನೇಹ, ಸಂಬಂಧ ಮತ್ತು ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆಯಿದೆ ಎಂಬುದಕ್ಕೆ ಕೈಗನ್ನಡಿ ಪ್ರಸಂಗ. ದೇಶದಲ್ಲಿ ಇಂದಿಗೂ ಇಂತಹ ಮೌಲ್ಯಗಳು ಉಳಿದಿವೆ ಎಂಬುದಕ್ಕೆ ಸಾಕ್ಷಾತ್ ನಿದರ್ಶನ. ಇಲ್ಲಿ ಕಾಂಗ್ರೆಸ್-ಬಿಜೆಪಿ ಎಂಬ ಭೇದ ಭಾವ ಇರಲಿಲ್ಲ. ಗತಕಾಲದ ಕ್ಷಣಗಳು, ವರ್ತಮಾನದ ವಿದ್ಯಮಾನಗಳಿಗೆ ಸಾಕ್ಷಿಯಾದ ಈ ಘಟನೆ ನಡೆದಿದ್ದು ವಿಜಯಪುರ ನಗರದಲ್ಲಿ. ಅದು ಕೂಡ ಮತ ಎಣಿಕೆ ಕೇಂದ್ರದಲ್ಲಿ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ […]
ಅಪ್ಪನ ಬದಲು ಚಿಕ್ಕಪ್ಪನಿಗೆ ಚಿನ್ನದ ಪದಕ ಅರ್ಪಿಸಿದ ಯುವತಿ, ತಂದೆ ತಾಯಿಗಳ ಪ್ರೋತ್ಸಾಹ ನೆನೆದು ಕಣ್ಣೀರಿಟ್ಟ ಚಿನ್ನದ ಯುವತಿ- ಮಹಿಳಾ ವಿವಿ ಘಟಿಕೋತ್ಸವದ ವಿಶೇಷ
ವಿಜಯಪುರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಸಾಧನೆಗೆ ಪ್ರೋತ್ಸಾಹಿಸಿದವರ ನೆನಪಿರಬೇಕು. ಇದು ಈ ಬಾರಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ತಲಾ ಮೂರು ಚಿನ್ನದ ಪದಕ ಪಡೆದ ಯುವತಿಯರು ಮಾಡಿದ ಸಾಧನೆಗೆ ಸಾಕ್ಷಿಯಾಗಿದೆ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿರುವ ಕರ್ನಾಚಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಹೊರವಲಯದ ತೊರವಿ ಜ್ಞಾನಶಕ್ತಿ ಆವರಣದಲ್ಲಿ ನಡೆಯಿತು. ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಘಟಿಕೋತ್ಸವದಲ್ಲಿ ಪಾಲ್ಗೋಂಡರು. ಸಂಪ್ರದಾಯದಂತೆ ರಾಜ್ಯಪಾಲರನ್ನು […]
ಬಿ ಎಲ್ ಡಿ ಇ ಸಂಸ್ಥೆಯ ಡಾ. ಆರ್. ಎಸ್. ಮುಧೋಳ ಅವರಿಗೆ ಗೌರವ ಫೆಲೋಶಿಪ್, ಡಾ. ಆರ್. ವಿ. ಕುಲಕರ್ಣಿ ಅವರಿಗೆ ಶ್ರೇಷ್ಠ ವಿಜ್ಞಾನಿ ಗೌರವ
ವಿಜಯಪುರ 8. ಡಾ. ಆರ್. ಎಸ್. ಮುಧೋಳ ಮತ್ತು ಡಾ. ಆರ್. ವಿ. ಕುಲಕರ್ಣಿ ಅವರ ಸಾಧನೆ ಬಿಎಲ್‍ಡಿಇ ಸಂಸ್ಥೆಗೆ ಮುಕುಟಪ್ರಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಬಿಎಲ್‍ಡಿಇ ಸಂಸ್ಥೆಯ ನಿರ್ದೇಶಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಬಿಎಲ್‍ಡಿಇ ಸಂಸ್ಥೆಯಲ್ಲಿ ಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಆರ್. ಎಸ್. ಮುಧೋಳ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಗೌರವ ಫೆಲೊಶಿಪ್ ನೀಡಿ ಗೌರವಿಸಿದೆ. ಅಲ್ಲದೆ ಡಾ. […]
ವಿಜಯಪುರ ಕೇಂದ್ರಿಯ ವಿದ್ಯಾಲಯಕ್ಕೆ ಪ್ಲಾಸ್ಟಿಕ್ ಮುಕ್ತ ಶಾಲೆ ಪ್ರಶಸ್ತಿ
ವಿಜಯಪುರ: ವಿಜಯಪುರದ ಪ್ರತಿಷ್ಠಿತ ಕೇಂದ್ರೀಯ ವಿದ್ಯಾಲಯಕ್ಕೆ ಪ್ಲಾಸ್ಟಿಕ್ ಮುಕ್ತ ಶಾಲೆ ಪ್ರಶಸ್ತಿ ಲಭಿಸಿದೆ.ಆ ಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಾಲೆಯ ಪ್ರಾಚಾರ್ಯರ ಪರವಾಗಿ ಕಂಪ್ಯೂಟರ್ ಶಿಕ್ಷಕ ಬಸವರಾಜ ಹೂಗಾರ ಪ್ರಶಸ್ತಿ ಸ್ವೀಕರಿಸಿದರು. ವಿಜಯಪುರ ನಗರದಲ್ಲಿರುವ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರಗವಹಣಾಧಿಕಾರಿ ಗೋವಿಂದರೆಡ್ಡಿ ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ […]
ಖ್ಯಾತ ನಟ ಸೋನು ಸೂದ್ ಗಮನ ಸೆಳೆದ ಬಸವ ನಾಡಿನ ಧ್ರುವತಾರೆ- ಈ ವಿದ್ಯಾರ್ಥಿ ಮಾಡಿರುವ ಸಾಧನೆಗೆ ಜಗಮೆಚ್ಚುಗೆ
ವಿಜಯಪುರ: ಖ್ಯಾತ ನಟ ಸೋನು ಸೂದ್ ಯಾರಿಗೆ ತಾನೆ ಗೊತ್ತಿಲ್ಲ. ಇವರು ಕೊರೊನಾ ಮತ್ತು ಲಾಕಡೌನ್ ಆರಂಭವಾದಾಗಿನಿಂದ ತಮ್ಮ ತನು, ಮನ ಮತ್ತು ಧನದಿಂದ ಲಕ್ಷಾಂತರ ಜನರಿಗೆ ನಾನಾ ರೀತಿಯಲ್ಲಿ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ. ಇಂಥ ಖ್ಯಾತ ನಟ ಬಸವ ನಾಡು ವಿಜಯಪುರದ ವಿದ್ಯಾರ್ಥಿಯೊಬ್ಬರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸುವ ಮೂಲಕ ಈ ವಿದ್ಯಾರ್ಥಿಯ ಬೆನ್ನು ತಟ್ಟಿದ್ದಾರೆ. ಆ ವಿದ್ಯಾರ್ಥಿಯ ಕಾರ್ಯವನ್ನು ಎಲ್ಲರೂ ಬೆಂಬಲಿಸುವಂತೆಯೂ ಸೋನು ಸೂದ್ ಮನವಿಯನ್ನೂ ಮಾಡಿದ್ದಾರೆ. ಅಂದ ಹಾಗೆ ಆ ವಿದ್ಯಾರ್ಥಿ ಬೇರಾರೂ […]