CA Pass: ಕೃಷ್ಣಾ ತೀರದ ರೈತ ಕುಟುಂಬದ ಯುವತಿ ಸಿಎ ಪರೀಕ್ಷೆ ಪಾಸ್

ವಿಜಯಪುರ: ಬಸವ ನಾಡಿನ ಯುವತಿ ಸಿಎ ಪರೀಕ್ಷೆ ಪಾಸು ಮಾಡುವ ಮುಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಹೊಸದಿಲ್ಲಿಯ ಭಾರತೀಯ ಲೆಕ್ಕಪರಿಶೋಧನಾ ಸಂಸ್ಥೆ ನಡೆಸಿದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಅಂತಿಮ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ‌ ಹಣಮಾಪುರದ ಯುವತಿ ಸೌಮ್ಯಾ ಪಾಟೀಲ ಉತ್ತೀರ್ಣರಾಗಿದ್ದಾಳೆ. ವಿಜಯಪುರ ನಗರದ ವಜ್ರಹನುಮಾನ‌ ನಗರದಲ್ಲಿ ವಾಸಿಸುವ ಯುವತಿಯದಯ ರೈತರ ಕುಟುಂಬ. ‌ತಂದೆ ಬೇಸಾಯ ಮಾಡುತ್ತಿದ್ದರೆ ತಾಯಿ ಗೃಹಿಣಿಯಾಗಿದ್ದಾರೆ. ವಿಜಯಪುರ ನಗರದ ಸುಭಾಸ ಪಾಟೀಲ ಆ್ಯಂಡ್ ಕಂಪನಿಯಲ್ಲಿ ಸಿಎ ಆಗಿರುವ ಶರಣಗೌಡ .ಬಿ. […]

PUC Rank: ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ, ಜಿಲ್ಲೆಗೆ ನಾನಾ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದ ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ, 19: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಿರುವ ಬಿ ಎಲ್ ಡಿ ಇ ಸಂಸ್ಥೆಯ ನಾನಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಸನ್ಮಾನಿಸಿ ಗೌರವಿಸಿದರು. ದ್ವಿತೀಯ ಪಿಯುಸಿ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿದ್ಯಾರ್ಥಿ ಯಶವರ್ಧನ ಶಹಾ ಒಟ್ಟು […]

PUC 1st Rank: ಭೀಮಾ ತೀರದ ಯುವತಿ ಶ್ವೇತಾ ಭೀಮಾಶಂಕರ ಭೈರಗೊಂಡ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ವಿಜಯಪುರ: ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ಶೇ. 100 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆಯ ಕ್ಷಣಗಳು ಇನ್ನೂ ಹಸಿರಾಗಿರುವಾಗಲೇ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ ಭೀಮಾ ತೀರದ(Bheema Shore) ಯುವತಿ ಪಿಯುಸಿ ಪರೀಕ್ಷೆಯಲ್ಲಿ(PUC Exam) ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ(1st Rank To State) ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾಳೆ. ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಯುವತಿ ಶ್ವೇತಾ […]

Govt Job@49: ಆತ್ಮೀಯ ರಾಜಕುಮಾರನನ್ನು ಪ್ರೀತಿಯಿಂದ ಸನ್ಮಾನಿಸಿ ಸಂತಸಪಟ್ಟ ಸ್ನೇಹಿತರು

ವಿಜಯಪುರ: ಇದು ವ್ಯಕ್ತಿಯಲ್ಲಿರುವ ಒಳ್ಳೆಯತನ, ಪರೋಪಕಾರಕ್ಕೆ ಹಿತೈಷಿಗಳ ಶುದ್ಧ ಮನಸ್ಸಿನ ಶುಭ ಹಾರೈಕೆಗಳು ಹಾಗೂ ತಾಯಿಯ ಶುಭಾಶಿರ್ವಾದಕ್ಕೆ ಸಿಕ್ಕ ತಕ್ಕ ಪ್ರತಿಫಲ. ಸದಾ ಪರೋಪಕಾರದಲ್ಲಿ ಸಂತಸ ಕಾಣುತ್ತ ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತಚಾಗಿ ಸ್ನೇಹಿತರ ಬಳಗವನ್ನು ಸಂಪಾದಿಸಿರುವ ವ್ಯಕ್ತಿಗೆ ದಶಕದ ನಂತರ ಸಿಕ್ಕ ಸರಕಾರಿ ಕೆಲಸದ ಸಂಭ್ರಮಾಚರಣೆ ಎಂದರೂ ತಪ್ಪಲ್ಲ. ಇಂಥ ಅಪರೂಪದ ಮತ್ತು ಪ್ರೀತಿಯ ಚಿಕ್ಕದಾದ ಕಾರ್ಯಕ್ರಮ ಬಸವ ನಾಡು ವಿಜಯಪುರ ನಗರದ ಜಲನಗರದಲ್ಲಿರುವ ಶಿವಶರಣೆ ನೆಲ್ಲೂರು ನಿಂಬೆಕ್ಕ ಸಮುದಾಯ ಭವನದಲ್ಲಿ ನಡೆಯಿತು. ಜಲನಗರ ಗೆಳೆಯರು […]

ಅರುಣಾಶ್ವಿನಿ ಜೋಡಿಗೀಗ 28ನೇ ವ್ಯಾಲೆಂಟೈನ್ ಸಂಭ್ರಮ- ಬಸವತತ್ವ ಪಾಲನೆ ಇವರ ಯಶೋಗಾಥೆಗೆ ಕಾರಣ

ಮಹೇಶ ವಿ. ಶಟಗಾರ ವಿಜಯಪುರ: ವ್ಯಾಲೆಂಟೈನ್ ಡೆ ಪ್ರೇಮಿಗಳ ಪಾಲಿಗೆ ಸಂಭ್ರಮದ ದಿನ. ಈ ದಿನಕ್ಕಾಗಿ ಕಾಯುವ ಪ್ರೇಮಿಗಳಲ್ಲಿ ಪ್ರತಿ ವರ್ಷ ಹೊಸ ಹೊಸ ಜೋಡಿಗಳು ಪ್ರಣಯದ ಹಕ್ಕಿಗಳಾದರೆ, ಈಗಾಗಲೇ ಪ್ರೇಮ ವಿವಾಹವಾದ ದಂಪತಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸುತ್ತಾರೆ. ವ್ಯಾಲೆಂಟೈನ್ ಜೋಡಿಗಳಲ್ಲಿ ಹಲವಾರು ಜೋಡಿಗಳು ಜೀವನಪೂರ್ತಿ ಜೊತೆಯಾಗಿರದೇ ಬೇರ್ಪಟ್ಟಿರುವ ಉದಾಹರಣೆಗಳೂ ಹಲವಾರು. ಆದರೆ, ಅನೇಕ ಜೋಡಿಗಳು ಪ್ರಥಮ ವ್ಯಾಲೆಂಟೈನ್ ದಿನದಿಂದ ಹಿಡಿದು ಇಂದಿನವರೆಗೂ ಯಶಸ್ವಿ ಸಂಸಾರ ನಡೆಸುತ್ತಿದ್ದಾರೆ. ಮೊದಲ ಆಚರಣೆ ದಿನಗಿಂತಲೀ ಈಗ ಇನ್ನೂ ಹೆಚ್ಚೆಚ್ಚು ತಮ್ಮ […]

ಚುನಾವಣೆ ಪ್ರಕ್ರಿಯೆಯಲ್ಲಿ ಉತ್ತಮ ಕಾರ್ಯಕ್ಷಮತೆ: ವಿಜಯಪುರ ಡಿಸಿ, ಸಿಇಓ, ಇಂಡಿ ಎಸಿಗೆ, ತಿಕೋಟಾದ ಶ್ರೀ ಎ. ಬಿ. ಜತ್ತಿ ಪಿಯು ಕಾಲೇಜಿಗೆ ಪ್ರಶಸ್ತಿ

ವಿಜಯಪುರ: ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ವಿಜಯಪುರ ಜಿಲ್ಲೆಗೆ ನಾಲ್ಕು ಪ್ರಶಸ್ತಿಗಳು ದೊರೆತಿವೆ.  ಚುನಾವಣೆ ಪ್ರಕ್ರಿಯೆಯಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ ರಾಜ್ಯ ಮಟ್ಟದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ.  ಬೆಂಗಳೂರಿನಲ್ಲಿ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿಯಾದ ಬೆಸ್ಟ್ ಫರ್ಮಾಮೆನ್ಸ್ ಇನ್ ಎಲೆಕ್ಟ್ರೋಲ್ ಪ್ರ್ಯಾಕ್ಟಿಸಿಸ್‍ಗಾಗಿ ಈ ಪ್ರಶಸ್ತಿ ನೀಡಲಾಗಿದ್ದು, ಪಿ. ಸುನೀಲ […]

ಅಪ್ಪನ ಬದಲು ಚಿಕ್ಕಪ್ಪನಿಗೆ ಚಿನ್ನದ ಪದಕ ಅರ್ಪಿಸಿದ ಯುವತಿ, ತಂದೆ ತಾಯಿಗಳ ಪ್ರೋತ್ಸಾಹ ನೆನೆದು ಕಣ್ಣೀರಿಟ್ಟ ಚಿನ್ನದ ಯುವತಿ- ಮಹಿಳಾ ವಿವಿ ಘಟಿಕೋತ್ಸವದ ವಿಶೇಷ

ವಿಜಯಪುರ: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ.  ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು.  ಸಾಧನೆಗೆ ಪ್ರೋತ್ಸಾಹಿಸಿದವರ ನೆನಪಿರಬೇಕು.  ಇದು ಈ ಬಾರಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ತಲಾ ಮೂರು ಚಿನ್ನದ ಪದಕ ಪಡೆದ ಯುವತಿಯರು ಮಾಡಿದ ಸಾಧನೆಗೆ ಸಾಕ್ಷಿಯಾಗಿದೆ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿರುವ  ಕರ್ನಾಚಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಹೊರವಲಯದ ತೊರವಿ ಜ್ಞಾನಶಕ್ತಿ ಆವರಣದಲ್ಲಿ ನಡೆಯಿತು.  ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಘಟಿಕೋತ್ಸವದಲ್ಲಿ ಪಾಲ್ಗೋಂಡರು.  ಸಂಪ್ರದಾಯದಂತೆ ರಾಜ್ಯಪಾಲರನ್ನು […]