ಇದು ಹೊಸ ಸ್ಪರ್ಧೆ- ಜಗ್ಗಾಟವಾದರೂ ಹಗ್ಗ ಜಗ್ಗಾಟವಲ್ಲ- ಮತ್ತೇನು?
ವಿಜಯಪುರ: ಉತ್ತರ ಕರ್ನಾಟಕದಲ್ಲಿ ಜಾತ್ರೆಗಳು ಬಂತೆಂದರೆ ಸಾಕು ತರಹೇವಾರಿ ಗ್ರಾಮೀಣ ಸಾಹಸ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತವೆ. ಅದರಲ್ಲೂ ಶ್ರಾವಣ ಮಾಸದ ಸಂದರ್ಭದಲ್ಲಿ ಈ ಜಾತ್ರೆಗಳು ಯುವಜನತೆಯಲ್ಲಿರುವ ಚಾಕಚಕ್ಯತೆಗೆ ಸಾಕ್ಷಿಯಾಗುತ್ತೆ. ಇಂಥದ್ದೆ ಒಂದು ಜಾತ್ರೆ ಮತ್ತು ಅದರ ಅಂಗವಾಗಿ ನಡೆದ ಈ ಸ್ಪರ್ಧೆಯೊಂದು ನೆರೆದ ಜನ ಸೋಜಿಗದಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಅಂದಹಾಗೆ, ಈ ಜಾತ್ರೆ ನಡೆದಿದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ. ಸಾಮಾನ್ಯವಾಗಿ ಇಂದು ವಿಷಯ ಅಥವಾ ಕೆಲಸದಲ್ಲಿ ಚರ್ಚೆ, ವಿಮರ್ಶೆ […]
ಹೊನಲು ಬೆಳಕಿನಲ್ಲಿ ಬ್ಯಾಟ್ ಬೀಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಅಲ್ಲಿ ಸೇರಿದ್ದು ಕೆಲವೇ ಕೆಲವು ಜನ. ಪ್ರೇಕ್ಷಕರೂ ಇರಲಿಲ್ಲ. ಹಾಲಿ ಆಟಗಾರರೂ ಬಂದಿರಲಿಲ್ಲ. ಆದರೆ, ಅಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾತ್ರಿ ವೇಳೆ ತೆರಳಿ ಹೊನಲು ಬೆಳಕಿನಲ್ಲಿ ಬ್ಯಾಟ್ ಬೀಸಿಯೇ ಬಿಟ್ಟರು. ಈ ಅಪರೂಪದ ಘಟನೆ ನಡೆದಿದ್ದು ರಾಜದಾನಿ ಬೆಂಗಳೂರಿನ ಕೆ ಎಸ್ ಸಿ ಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯೂನಿಪೋಲ್ ಫ್ಲಡ್ ಲೈಟಿಂಗ್ ಟವರ್ ಗಳನ್ನು ಅಳವಡಿಸಲಾಗಿದೆ. ಈ ಫ್ಲಡ್ ಲೈಟಿಂಗ್ ಟವರ್ ಗಳನ್ನು ಮುಖ್ಯಮಂತ್ರಿಗಳು ರಾತ್ರಿ ವೇಳೆ ಲೋಕಾರ್ಪಣೆ ಮಾಡಿದರು. ಬಳಿಕ […]
ಭಾರತ ಹಾಕಿ ಮಹಿಳಾ ತಂಡದ ಕೋಚ್ ಅಂಕಿತಾ ಅವರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ
ಬೆಂಗಳೂರು: ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಓಲಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದೆ. ಈ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ ಹೇಳಿದರು. ಅಂಕಿತ […]