ಸೈನಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ

ವಿಜಯಪುರ: ನಗರದಲ್ಲಿರುವ ರಾಜ್ಯದ ಪ್ರಥಮ ಸೈನಿಕ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಅವರ ಪತ್ನಿ ಶ್ವೇತಾ ಎಂ. ದಾನಮ್ಮನವರ ಚಾನೆ ನೀಡಿದರು. ಇದಕ್ಕೂ ಮೊದಲು ಅಶ್ವಾರೂಡ ವಿದ್ಯಾರ್ಥಿಗಳು ಅತಿಥಿಗಳ:್ನು ಕ್ರೀಡಾಂಗಣಕ್ಕೆ ವೈಭವದ ಸ್ವಾಗತ ನೀಡಿ ಕರೆತಂದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಳು ಕ್ರೀಡೆಗಳು ಮನಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುತ್ತವೆ.  ಎಲ್ಲ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕುಯ ಈ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು. […]

ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಮ್ ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ ಡಾ. ದಾನಮ್ಮನವರ

ವಿಜಯಪುರ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ yf. ದಾನಮ್ಮನವರ ಅವರು  ವಿಜಯಪುರ ನಗರದ ಭೂತನಾಳ ಗ್ರಾಮದ ಹತ್ತಿರ ನಿರ್ಮಾಣದ ಹಂತದಲ್ಲಿರುವ ಸೈಕ್ಲಿಂಗ್ ವೆಲೊಡ್ರೋಮ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದರು.   ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಾಣದಿಂದ ರಾಷ್ಟ್ರೀಯ ಮತ್ತು ಅಂತಾರರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ಏರ್ಪಡಿಸಲು ಹಾಗೂ ಸೈಕ್ಲಿಸ್ಟಗಳಿಗೆ ದೈನಂದಿನ ತರಬೇತಿಗಾಗಿ ಅನುಕೂಲವಾಗಲಿದ್ದು, ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿಯನ್ನು ಈ ಮಾಸಾಂತ್ಯಕ್ಕೆ ಪೂರ್ಣಗೊಳಿಸಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಹಸ್ತಾಂತರಿಸುವಂತೆ ಗುತ್ತಿಗೆದಾರರಿಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ […]

ಮಹಿಳೆಯರು ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟಗಳಲ್ಲಿ ಪಾಲ್ಗೊಳ್ಳಬೇಕು- ಸಿ. ಬಿ. ದೇವರಮನಿ

ವಿಜಯಪುರ: ನಮ್ಮ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಮಹತ್ವಪೂರ್ಣ ಗೌರವ ನೀಡಲಾಗುತ್ತಿದೆ. ಮಹಿಳೆ ತಾನು ಕುಟುಂಬಕ್ಕೆ ಮಾತ್ರ ಸಿಮೀತವಾಗದೇ, ಸಾಂಸ್ಕೃತಿಕವಾಗಿ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾ ಸಾಧನೆಯ ಮೆರೆಯುವ […]

ಜಿಲ್ಲಾ ಮಟ್ಟದ ಮಹಿಳಾ ಕ್ರಿಕೆಟ್ ಮತ್ತು ಚೆಸ್ ಪಂದ್ಯಾವಳಿಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಚಾಲನೆ

ವಿಜಯಪುರ: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಮಹಿಳೆಯರ ಕ್ರಿಕೆಟ್ ಮತ್ತು ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಈ ಪಂದ್ಯಾವಳಿಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಕೇವಲ ಪಠ್ಯಗಳಿಗೆ ಸೀಮಿತರಾಗದೆ ಉತ್ತಮ ಆರೋಗ್ಯದ ಹಿತದೃಷ್ಟಿಯಿಂದ ಕ್ರೀಡಾ ಮನೋಭಾವನೆಯನ್ನೂ ಅಳವಡಿಸಿಕೊಳ್ಳಬೇಕು.  ಅಲ್ಲದೇ, ಕ್ರೀಡೆಯಲ್ಲಿ ಪಾಲ್ಗೋಂಡು ಜಿಲ್ಲಾ ಮತ್ತು ರಾಜ್ಯ […]

ಲಡಾಖ್ ನಲ್ಲಿ -25°C ತಾಪಮಾನ, ಹೆಪ್ಪುಗಟ್ಟಿದ ಸರೋವರದ ಮೇಲೆ 21 ಕಿ. ಮೀ. ಮ್ಯಾರಾಥನ್: ರಾಜ್ಯದ ಸಿಪಿಐ ಮಹಾಂತೇಶ ಧಾಮಣ್ಣವರ ಮತ್ತೀತರರು ಭಾಗಿ

ವಿಜಯಪುರ: ಲಡಾಖ್ ನಲ್ಲಿ ನಡೆದ ಮೊದಲ ಫ್ರೋಜನ್ ಲೇಕ್ ಮ್ಯಾರಾಥಾನ್ ನಲ್ಲಿ ಕರ್ನಾಟಕದ ಪೊಲೀಸ್ ಅಧಿಕಾರಿ ಸಿಪಿಐ‌ ಮಹಾಂತೇಶ ಧಾಮಣ್ಣವರ ಸೇರಿ 15 ಜನ ಭಾಗಿಯಾಗಿದ್ದು, ಈ ಟ್ರಯಲ್ ರನ್ನಿಂಗ್ ಸ್ಪರ್ಧೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ. ಸಮುದ್ರ ಮಟ್ಟದಿಂದ 13,852 ಕಿ. ಮೀ. ಎತ್ತರದಲ್ಲಿ ಮತ್ತು -25°C ತಾಪಮಾನ ಅಂದರೆ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಈ ಸ್ಪರ್ಧೆ ನಡೆಸಿದೆ. ಅದರಲ್ಲೂ ಭಾರತ ಮತ್ತು ಚೀನಾ ಗಡಿಯಲ್ಲಿರುವ ಪ್ಯಾಂಗಾಂಗ್ ಸರೋವರ ಸುಮಾರು 700 […]

ಪದಾರ್ಪಣೆ ಪಂದ್ಯದಲ್ಲಿಯೇ ಗೋವಾಕ್ಕೆ ಪಂಚ್ ನೀಡಿದ ಬಸವನಾಡಿನ ಬಾಲಕ ಸಮರ್ಥ ಕುಲಕರ್ಣಿ- ಐದು ವಿಕೆಟ್ ಪಡೆದು ಸಾಧನೆ

ವಿಜಯಪುರ: ಬಸವನಾಡಿನ ಯುವ ಪ್ರತಿಭೆ ಸಮರ್ಥ ಕುಲಕರ್ಣಿ ಕೇರಳದಲ್ಲಿ ನಡೆದಿರುವ ದಕ್ಷಿಣ ವಲಯ 14 ವರ್ಷದೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪದಾರ್ಪಣೆ ಪಂದ್ಯದಲ್ಲಿಯೇ ತಮ್ಮ ಲೆಗ್ ಸ್ಪಿನ್ ಮಾಂತ್ರಿಕತೆಯ ಮೂಲಕ ಐದು ವಿಕೆಟ್ ಪಡೆದು ವಿನೂತನ ಸಾಧನೆ ಮಾಡಿದ್ದಾರೆ. ವಿಜಯಪುರ ಮೂಲದ ಬಿ ಎಂ ಆರ್‌ ಸಿಯಲ್ಲಿ ಅಧಿಕಾರಿಯಾಗಿರುವ ಮತ್ತು ಈ ಹಿಂದೆ ಕ್ರಿಕೆಟ್ ನಲ್ಲಿ ರಾಯಚೂರು ವಲಯವನ್ನು ಪ್ರತಿನಿಧಿಸಿರುವ ವಿನಯ ಕುಲಕರ್ಣಿ ಅವರ ಪುತ್ರ ಸಮರ್ಥ ಕುಲಕರ್ಣಿ ಈಗ ವಿನೂತನ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. […]

ಪ್ಲಾಸ್ಟಿಕ್ ಬಳಕೆ ಇಡೀ ಭೂಮಂಡಲಕ್ಕೆ ಅಪಾಯ ತಂದೊಡ್ಡುವ ಅಣ್ವಸ್ತ್ರವಾಗಿದೆ- ಬ್ರಿಜೇಶ ಶರ್ಮಾ

ವಿಜಯಪುರ: ಪ್ಲಾಸ್ಟಿಕ್ ಬಳಕೆ ಕೇವಲ ಮನುಕುಲಕ್ಕೆ ಮಾತ್ರವಲ್ಲ. ಇಡೀ ಭೂಮಂಡಲದ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುವ ಅಣ್ವಸ್ತ್ರವಾಗಿದೆ. ಇದನ್ನು ನಿಲ್ಲಿಸದಿದ್ದರೆ, ಎಲ್ಲವು ನಾಶವಾಗಲಿದೆ ಅದಕ್ಕೆ ಪ್ಲಾಸ್ಟಿಕ್ ಬಳಕೆ ಬೇಡ ಎಂದು ಕಳೆದ ಮೂರು ವರ್ಷಗಳಿಂದ ಸೈಕಲ್ ಜಾಗೃತಿ ಜಾಥಾ ನಡೆಸುತ್ತಿರುವ ಮಧ್ಯಪ್ರದೇಶದ ಬ್ರಿಜೇಶ ಶರ್ಮಾ ಹೇಳಿದರು. ಬಿ. ಎಲ್. ಡಿ. ಇ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಹಿಂದಿನಿಂದ ಹಿರಿಯರು ವಿವಿಧ ಮಣ್ಣಿನ ನಂತರದಲ್ಲಿ ಲೋಹದ ಪಾತ್ರೆ, ಸರಂಜಾಮುಗಳನ್ನು ಬಳಸುತ್ತಿದ್ದರು. […]

ಶ್ರೀ ಬಿ. ಎಂ. ಪಾಟೀಲ U-16 ಕ್ರಿಕೆಟ್ ಟೂರ್ನಿ- ವಿಜಯಪುರ ಟೈಗರ್ಸ್ ಚಾಂಪಿಯನ್ಸ್- ಪ್ರಶಸ್ತಿ ವಿತರಿಸಿದ ಅರ್ಜುನ ರಾಠೋಡ

ವಿಜಯಪುರ: ನಗರದ ಬಿ. ಎಲ್. ಡಿ. ಕ್ರೀಡಾಂಗಣದಲ್ಲಿ ನಡೆದ 16 ವರ್ಷದೊಳಗಿನವರ ಶ್ರೀ. ಬಿ. ಎಂ. ಪಾಟೀಲ ಕ್ರಿಕೆಟ್ ಟ್ರೋಫಿಯನ್ನು ವಿಜಯಪುರ ಟೈಗರ್ಸ್ ತಂಡ ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಈ ತಂಡ ವಿಜಯಪುರ ಚಾಂಪಿಯನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.  ವಿಜೇತ ತಂಡದ ಪರ ಬಾಬಾಗೌಡ ಪಾಟೀಲ ಮತ್ತು ರನ್ನರ್ ಅಪ್ ತಂಡದ ಪರ ಅರ್ಪಿತ ನಾಗಾನಂದ ಪ್ರಶಸ್ತಿ ಸ್ವೀಕರಿಸಿದರು. ಈ ಪಂದ್ಯದಲ್ಲಿ ರಾಹುಲ ಲಮಾಣಿ ಪ್ರಥಮ ಪಂದ್ಯ ಪುರುಷ ಪ್ರಶಸ್ತಿ ಪಡೆದರೆ, ರಿಯಾಜ ಇನಾಮದಾರ ದ್ವಿತೀಯ […]

ಸ್ವಸಾಮರ್ಥ್ಯದಿಂದ ರಾಹುಲ್ ದ್ರಾವಿಡ್ ಪುತ್ರನ ನೇತೃತ್ವದ ಕರ್ನಾಟಕ ಕಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಸವ ನಾಡಿನ ಸಮರ್ಥ ಕುಲಕರ್ಣಿ

ಮಹೇಶ ವಿ. ಶಟಗಾರ, ವಿಜಯಪುರ: ಪ್ರತಿಭೆಯಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಸವನಾಡಿನ ಬಾಲಕ ಸಾದಿಸಿ ತೋರಿಸಿದ್ದಾನೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಮತ್ತು ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಸಾರಥ್ಯದ ಕರ್ನಾಟಕದ 14 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಈ ಬಾಲಕ ಕ್ರಿಕೆಟ್ ನಲ್ಲಿ ತಂದೆಗಿಂತಲೂ ಹೆಚ್ಚಿನ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ವಿಜಯಪುರ ನಗರ ಮೂಲದ ಸಮರ್ಥ ವಿನಯ ಕುಲಕರ್ಣಿ ಈಗ ಬೆಂಗಳೂರಿನ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಲೂಲ್ ನಲ್ಲಿ […]

ಹಿರಿಯ ವಯಸ್ಸಿನಲ್ಲಿಯೂ ಕಬ್ಬಿಣದ ಗುಂಡೆಸೆತ- ನಾನು ವೇಟ್ ಲಿಫ್ಟರ್ ಆಗಿದ್ದೆ- ಕ್ವಿಂಟಲ್ ಜೋಳ ಎತ್ತುತ್ತಿದ್ದೆ ಎಂದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕ್ರೀಡಾಸ್ಪೂರ್ತಿಯೊಂದಿದ್ದರೆ ಸಾಕು.  ಅದರಲ್ಲಿ ಪಾಲ್ಗೋಳ್ಳಲು ಮನಸ್ಸು ಹಾತೊರೆಯುತ್ತಿರುತ್ತದೆ.  ಇದಕ್ಕೆ ಸಾಕ್ಷಿ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ.  ವಿಜಯಪುರ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆರಂಭವಾದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಮೂರು ದಿನಗಳ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. […]