ತಿಕೋಟಾ ನರ್ಸಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜೀವ ಗಾಂಧಿ ವಿವಿ ಕಬಡ್ಡಿ ತಂಡಕ್ಕೆ ಆಯ್ಕೆ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ತಿಕೋಟಾ ನರ್ಸಿಂಗ್ ಕಾಲೇಜಿನ ಬಿ.ಎಸ್ಸಿ ನರ್ಸಂಗ್ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಕುಮಾರ ಸಾನ್ವಿ ಮತ್ತು ಐಶ್ವರ್ಯ ಪಾರೆ ಅವರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ, ಇದೇ ಕಾಲೇಜಿನ ದೈಹಿಕ ನಿರ್ದೇಶಕ ಭೀಮರಾವ ದೇಸಾಯಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಇನ್ನು ಮುಂದೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕಬಡ್ಡಿಯಲ್ಲಿ ಪ್ರತಿನಿಧಿಸಲಿದ್ದಾರೆ.   ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಗೆಯಾದ […]

ಪದಾರ್ಪಣೆ ಪಂದ್ಯದಲ್ಲಿಯೇ ಗೋವಾಕ್ಕೆ ಪಂಚ್ ನೀಡಿದ ಬಸವನಾಡಿನ ಬಾಲಕ ಸಮರ್ಥ ಕುಲಕರ್ಣಿ- ಐದು ವಿಕೆಟ್ ಪಡೆದು ಸಾಧನೆ

ವಿಜಯಪುರ: ಬಸವನಾಡಿನ ಯುವ ಪ್ರತಿಭೆ ಸಮರ್ಥ ಕುಲಕರ್ಣಿ ಕೇರಳದಲ್ಲಿ ನಡೆದಿರುವ ದಕ್ಷಿಣ ವಲಯ 14 ವರ್ಷದೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪದಾರ್ಪಣೆ ಪಂದ್ಯದಲ್ಲಿಯೇ ತಮ್ಮ ಲೆಗ್ ಸ್ಪಿನ್ ಮಾಂತ್ರಿಕತೆಯ ಮೂಲಕ ಐದು ವಿಕೆಟ್ ಪಡೆದು ವಿನೂತನ ಸಾಧನೆ ಮಾಡಿದ್ದಾರೆ. ವಿಜಯಪುರ ಮೂಲದ ಬಿ ಎಂ ಆರ್‌ ಸಿಯಲ್ಲಿ ಅಧಿಕಾರಿಯಾಗಿರುವ ಮತ್ತು ಈ ಹಿಂದೆ ಕ್ರಿಕೆಟ್ ನಲ್ಲಿ ರಾಯಚೂರು ವಲಯವನ್ನು ಪ್ರತಿನಿಧಿಸಿರುವ ವಿನಯ ಕುಲಕರ್ಣಿ ಅವರ ಪುತ್ರ ಸಮರ್ಥ ಕುಲಕರ್ಣಿ ಈಗ ವಿನೂತನ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ. […]

ಸ್ವಸಾಮರ್ಥ್ಯದಿಂದ ರಾಹುಲ್ ದ್ರಾವಿಡ್ ಪುತ್ರನ ನೇತೃತ್ವದ ಕರ್ನಾಟಕ ಕಿರಿಯರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಸವ ನಾಡಿನ ಸಮರ್ಥ ಕುಲಕರ್ಣಿ

ಮಹೇಶ ವಿ. ಶಟಗಾರ, ವಿಜಯಪುರ: ಪ್ರತಿಭೆಯಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಬಸವನಾಡಿನ ಬಾಲಕ ಸಾದಿಸಿ ತೋರಿಸಿದ್ದಾನೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಮತ್ತು ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಸಾರಥ್ಯದ ಕರ್ನಾಟಕದ 14 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಈ ಬಾಲಕ ಕ್ರಿಕೆಟ್ ನಲ್ಲಿ ತಂದೆಗಿಂತಲೂ ಹೆಚ್ಚಿನ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ವಿಜಯಪುರ ನಗರ ಮೂಲದ ಸಮರ್ಥ ವಿನಯ ಕುಲಕರ್ಣಿ ಈಗ ಬೆಂಗಳೂರಿನ ಹೆಬ್ಬಾಳದಲ್ಲಿರುವ ಜೈನ್ ಹೆರಿಟೇಜ್ ಸ್ಲೂಲ್ ನಲ್ಲಿ […]

Corporator Help: ಪ್ರೇಮಾನಂದ ಬಿರಾದಾರ ಸಹಾಯ ಹಸ್ತ- ಥಾಯ್ಲೆಂಡ್ ಗೆ ತೆರಳಲು ಸಿದ್ಧಳಾದ ಸಿಸ್ಟೋಬಾಲ್ ಕ್ರೀಡಾಪಟು

ವಿಜಯಪುರ: ಪ್ರತಿಭೆಯಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿದೇಶದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ತೆರಳಲು ಪರದಾಡುತ್ತಿದ್ದ ಯುವ ಆಟಗಾರ್ತಿಗೆ ಬಿಜೆಪಿ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ವಿಜಯಪುರ ನಗರದ ಎಸ್. ಆರ್. ಕಾಲನಿಯ ನಿವಾಸಿ ಅಕ್ಷತಾ ತಾರಾಪುರ ನಗರದ ನವಬಾಗ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿದ್ದಾರೆ. ಸಿಸ್ಟೋಬಾಲ್ ಆಟಗಾರ್ತಿಯಾಗಿರುವ ಈಕೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿರುವ ಅಕ್ಷತಾ ತಾರಾಪುರ ಥಾಯ್ಲೆಂಡ್ ದೇಶದ ಬ್ಯಾಂಕಾಕಿನಲ್ಲಿ ಡಿ.1 ರಿಂದ […]

Cricket Doctorate: ಭಾರತೀಯ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕವಾಡಗ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ

ವಿಜಯಪುರ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಬಸವ ನಾಡು ವಿಜಯಪುರ ನಗರದ ರಾಜೇಶ್ವರಿ ಗಾಯಕವಾಡ ಅವರಿಗೆ ರಾಜಸ್ಥಾನದ ಉದಯಪುರ ಎಸ್. ಪಿ. ಎಸ್. ಯು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇತ್ತೀಚೆಗೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಸ್. ಪಿ, ಎಸ್. ಯು ಅಧ್ಯಕ್ಷ ಡಾ. ಪದ್ಮಕಲಿ ಬ್ಯಾನರ್ಜಿ ಮತ್ತು ಡಾ. ನಿಧಿಪತಿ ಸಿಂಗಾನಿಯಾ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿಯೊಬ್ಬರಿಗೆ ಇದೇ ಮೊದಲ ಬಾರಿಗೆ […]

Women Cricketer Honoured: ಕ್ರಿಕೆಟ್ ಆಟಗಾರ್ತಿ ಅನ್ನಪುರ್ಣ ಭೋಸಲೆಗೆ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸನ್ಮಾನ

ವಿಜಯಪುರ: ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಬಸವ ನಾಡಿನ ಪ್ರತಿಭಾನ್ವಿತ ಯುವ ಆಟಗಾರ್ತಿ ಅನ್ನಪೂರ್ಣ ಭೋಸಲೆ ಅವರನ್ನು ವಿಜಯಪುರದಲ್ಲಿ ಸನ್ಮಾನಿಸಿ ಗೌರವಿಸಿದರು. ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ಅವರ ವಾಯು ವಿಹಾರಿಗಳ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರ್ಯಾಕ್ಟೀಸ್ ಮಾಡಿರುವ ನೂರಾರು ಯುವಕರು ರಾಜ್ಯ, […]

Cycling Help: ಯುವ ಸೈಕ್ಲಿಸ್ಟ್ ಭಾವನೆಗಳಿಗೆ ಸ್ಪಂದಿಸಿದ ಎಂ. ಬಿ. ಪಾಟೀಲ- ರೂ. 3 ಲಕ್ಷ ಆರ್ಥಿಕ ನೆರವು

ವಿಜಯಪುರ: ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸೈಕ್ಲಿಂಗ್ ಕ್ರೀಡಾಪಟುವಿಗೆ ನೆರವಾಗುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಶಾಸಕ ಎಂ. ಬಿ. ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದ ಭಾವನಾ ಪಾಟೀಲ ಸೈಕ್ಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದು, ಸೈಕ್ಲಿಂಗ್ ಕ್ರೀಡಾ ಕೂಟಗಳಲ್ಲಿ ಸ್ವಂತ ಸೈಕಲ್ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಎಂ. ಬಿ. ಪಾಟೀಲ ಅವರು ಭಾವನಾ ಪಾಟೀಲ ಅವರಿಗೆ ರೂ. 3 ಲಕ್ಷ ಆರ್ಥಿಕ […]

Commonwealth Bronze: ಕನ್ನಡಿಗ ಪಿ. ಗುರುರಾಜ ಗೆ ಕಾಮನವೆಲ್ತ್ ಗೇಮ್ಸ್ ನಲ್ಲಿ ಕಂಚು- ಪಿಎಂ, ಸಿಎಂ ಅಭಿನಂದನೆ

ವಿಜಯಪುರ: ಕನ್ನಡಿಗ ಗುರುರಾಜ ಬರ್ಮಿಂಗಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಎರಡನೇ ಪದಕ ಗೆಲ್ಲಿಸಿ ಕೊಟ್ಟಿದ್ದಾರೆ. 61 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ ಪೂಜಾರಿ ಕಂಚಿನ ಪದಕ ಜಯಿಸಿ ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ ಎರಡನೇ ಮೆಡಲ್ ಗೆಲ್ಲಿಸಿ ಕೊಟ್ಟಿದ್ದಾರೆ. ಕನ್ನಡಿಗ ವೇಟ್ ಲಿಫ್ಟರ್ ಸ್ನ್ಯಾಚ್ ವಿಭಾದಲ್ಲಿ 118 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್ ವಿಭಾಗದಲ್ಲಿ 151 […]

ಬಸವ ನಾಡಿನ ಕ್ರಿಕೆಟ್ ಆಟಗಾರ್ತಿಯ ಸಾಧನೆಗೆ ಆಧುನಿಕ ಭಗೀರಥನ ಶುಭ ಹಾರೈಕೆ- ಬಿ ಎಲ್ ಡಿ ಇ ಸಂಸ್ಥೆಯಿಂದ ಸಕಲ ನೆರವಿನ ಭರವಸೆ

ವಿಜಯಪುರ: ರಾಜಸ್ಥಾನದಲ್ಲಿ ಸೆ. 28 ರಿಂದ ಅ. 4ರ ವರೆಗೆ 19 ವರ್ಷದೊಳಗಿನ ಮಹಿಳೆಯರ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಅನ್ನಪೂರ್ಣ ಜಿ. ಭೋಸಲೆ ಅವರ ಸಾಧನೆಗೆ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಬಿ ಎಲ್ ಡಿ ಇ ಸಂಸ್ಥೆಯ ಎಸ್. ಎಸ್. ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುನಲ್ಲಿ ವಾಣಿಜ್ಯ ಶಾಸ್ತ್ರ ಓದುತ್ತಿರುವ ಅನ್ನಪೂರ್ಣ ಭೋಸಲೆ […]

ಭಾರತ ಹಾಕಿ ಮಹಿಳಾ ತಂಡದ ಕೋಚ್ ಅಂಕಿತಾ ಅವರನ್ನು ಸನ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ

ಬೆಂಗಳೂರು: ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಅಂಕಿತಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಓಲಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ‌ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದೆ. ಈ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ‌ ಹೇಳಿದರು. ಅಂಕಿತ […]