ಭೂತ್ನಾಳ ಕೆರೆ, ಬೇಗಂ ತಾಲಾಬ್ ಗಳಿಗೆ ಸಚಿವ ಎಂ. ಬಿ. ಪಾಟೀಲ ಭೇಟಿ- ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ
ವಿಜಯಪುರ: ಭೂತ್ನಾಳ ಕೆರೆ ಮತ್ತು ಬೇಗಂ ತಾಲಾಬ್ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶನಿವಾರ ಬೆಳಿಗ್ಗೆ ಕರಾಡದೊಡ್ಡಿ ಮಾನವ ನಿರ್ಮಿತ ಅರಣ್ಯ ಪ್ರದೇಶ, ಭೂತನಾಳ ಕೆರೆ, ಐತಿಹಾಸಿಕ ಬೇಗಂ ಕೆರೆಗಳಿಗೆ ಅವರು ಭೇಟಿ ನೀಡಿದರು. ಮೊದಲಿಗೆ ಭೂತ್ನಾಳ ಕೆರೆಯ ಹಿಂಭಾಗದಲ್ಲಿರುವ ಕರಾಡದೊಡ್ಡಿ ಮಾನವ […]
ಐತಿಹಾಸಿಕ ಸುರಂಗ ಬಾವಡಿ ಸ್ವಚ್ಛ ಮಾಡಿದ ಪ್ರವಾಸೋದ್ಯಮ, ಎಎಸ್ಐ, ಮಹಾನಗರಪಾಲಿಕೆ, ಜಲ ಬಿರಾದಾರಿ ಸಂಸ್ಥೆ
ವಿಜಯಪುರ: ನಗರದ ಐತಿಹಾಸಿಕ ಸುರಂಗ ಬಾವಡಿ ಭಾವಿಯನ್ನು ಸ್ವಚ್ಛ ಮಾಡುವ ಮೂಲಕ ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಜಲ ಬಿರಾಧಾರಿ ಸಂಸ್ಥೆ ಗಮನ ಸೆಳೆದಿವೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಜಲಬಿರಾದಾರಿ ಸಂಸ್ಥೆಯ ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರ, ಅಮೀತ ಹುದ್ದಾರ, ಸತೀಶ ದೇಶಮುಖ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ಸೌರಶಕ್ತಿ ವಿದ್ಯುತ್ ದೀಪಾಂಲಕಾರಕ್ಕೆ ಕ್ರಮ ಕೈಗೊಳ್ಳಿ- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ
ವಿಜಯಪುರ: ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ಸೌರಶಕ್ತಿ ದೀಪಾಲಂಕಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗೋಳಗುಮ್ಮಟಕ್ಕೆ ಭೇಟಿ ನೀಡಿದ ಅವರು, ಪ್ರವಾಸಿಗರ ಅನುಕೂಲಕ್ಕಾಗಿ ಕಲ್ಪಿಸಲಾಗಿರುವ ಮೂಲಭೂತ ಸೌಲಭ್ಯಗಳು ಮತ್ತು ದೀಪಾಲಂಕಾರ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವಿಖ್ಯಾತ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ನೋಡುಗರಿಗೆ ಆಕರ್ಷಕಗೊಳಿಸಲು ಸ್ಮಾರಕದ ನಾಲ್ಕೂ ದಿಕ್ಕಿನಲ್ಲಿ ದೀಪಾಂಲಕಾರ ಮಾಡಬೇಕು. ರಿನಿವ್ ಎನರ್ಜಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಸಿಎಸ್‍ಆರ್ ಅನುದಾನದಡಿ ಸೌರಶಕ್ತಿ […]
ಜಿಲ್ಲಾ ಪ್ರವಾಸಿ ತಾಣಗಳಲ್ಲಿ ಬುದ್ಧವಿಹಾರ ಸೇರ್ಪಡೆ- ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ- ಸಚಿವ ಎಚ್. ಕೆ. ಪಾಟೀಲ ವಾಗ್ದಾನ
ವಿಜಯಪುರ: ಜಿಲ್ಲಾ ಪ್ರವಾಸದಲ್ಲಿರುವ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಅವರು ನಗರದ ಸಾರಿಪುತ್ರ- ಬೋಧಿಧಮ್ಮ ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಸಚಿವ ಎಚ್.ಕೆ. ಪಾಟೀಲ ಅವರು, ಭಂತೆ ಬೋಧಿಧಮ್ಮ ಅವರಿಂದಆಶೀರ್ವಾದ ಪಡೆದು ಮಾತನಾಡಿದರು. ಬಳಿಕ ಮಾತನಾಡಿದ ಅವರು ಹೃದಯ ಭಾಗದಲ್ಲಿರುವ ಬುದ್ಧ ವಿಹಾರವನ್ನು ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಸುವುದಲ್ಲದೆ ವಿಹಾರದ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿದರು. ಅಲ್ಲದೇ, ಯಾತ್ರಿ ನಿವಾಸದ […]
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿ- ಎಚ್. ಕೆ. ಪಾಟೀಲ
ವಿಜಯಪುರ: ಐತಿಹಾಸಿಕ ತಾಣಗಳಿಂದ ಕೂಡಿರುವ ವಿಜಯಪುರ ಜಿಲ್ಲೆಯಲ್ಲಿರುವ ಸ್ಮಾರಕಗಳ ರಕ್ಷಣೆ, ಸಂರಕ್ಷಣೆ ಸೇರಿದಂತೆ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಕ್ರಮವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್. ಕೆ. ಪಾಟೀಲ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಭಾರತೀಯ ಪುರಾತತ್ವ ಇಲಾಖೆ, ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು. ಸ್ಮಾರಕಗಳ ರಕ್ಷಣೆಗೆ ಒತ್ತು ನೀಡಿ, ಸ್ಮಾರಕಗಳಲ್ಲಿ ಸ್ವಚ್ಛತೆಗೆ […]
ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದ ಸಚಿವ ಎಚ್. ಕೆ. ಪಾಟೀಲ
ವಿಜಯಪುರ: ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಅವರು ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಬಸ್‌ನ ಮೂಲಕ ಪ್ರವಾಸ ಕೈಗೊಂಡು ವಿಜಯಪುರ ಜಿಲ್ಲೆಯ ನಾನಾ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು. ಈ ಸ್ಮಾರಕಗಳಲ್ಲಿ ಅಳವಡಿಸಲಾಗಿರುವ ಕಲೆ, ಶಿಲ್ಪಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲೆಯನ್ನು ವೀಕ್ಷಿಸಿ, ಐತಿಹಾಸಿಕ ಸ್ಮಾಕರಗಳ ಸಂರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಳಿಗ್ಗೆ ಮುತ್ತಗಿಯಲ್ಲಿರುವ ಸ್ಮಾರಕ ಹಾಗೂ ದೇವಾಲಯಗಳ ವೀಕ್ಷಣೆ ನಡೆಸಿ, ವಿಜಯಪುರಕ್ಕೆ ಆಗಮಿಸಿದ ಸಚಿವರು, […]
ಕುಮಟಗಿ ಬೇಸಿಗೆ ಅರಮನೆ ಕೆರೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ, ಪರಿಶೀಲನೆ
ವಿಜಯಪುರ: ಆದಿಲ್ ಷಾಹಿ ಕಾಲದಲ್ಲಿ ನಿರ್ಮಿಸಲಾಗಿರುವ ಮತ್ತು ಬೇಸಿಗೆ ಅರಮನೆ ಕೆರೆ ಎಂದೇ ಖ್ಯಾತವಾಗಿರುವ ಕುಮಟಗಿ ಕೆರೆ ಮತ್ತು ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುಮಟಗಿ ಬೇಸಿಗೆ ಅರಮನೆ ಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅವರು ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸರಕಾರದ ಜಮೀನುಗಳನ್ನು ಗುರುತಿಸಿ ನಕ್ಷೆ ಸಿದ್ಧಪಡಿಸಿ ಸಲ್ಲಿಸಲು ಕಂದಾಯ ನಿರೀಕ್ಷಕರಿಗೆ ಮತ್ತು ಸ್ಮಾರಕ ಸುತ್ತಮುತ್ತಲಿನ ಕಸ-ಕಂಟಿಗಳನ್ನು ಸ್ವಚ್ಛಗೊಳಿಸುವ ಕ್ರಮಕ್ಕಾಗಿ ಭಾರತೀಯ […]
ಐತಿಹಾಸಿಕ ಗೋಳಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡುವಂತೆ ಪ್ರಧಾನಿಗೆ ಸಂಸದ ರಮೇಶ ಜಿಗಜಿಣಗಿ ಪತ್ರ
ವಿಜಯಪುರ: ನಗರದ ವಿಶ್ವವಿಖ್ಯಾತ ಗೋಳಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಸಂಸದ ರಮೇಶ ಜಿಗಜಿಣಗಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿರೆ. ಐತಿಹಾಸಿಕ ವಿಜಯಪುರವು 80ಕ್ಕೂ ಹೆಚ್ಚು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ(ಎಎಸ್‌ಐ) ಸಂರಕ್ಷಿತ ಸ್ಮಾರಕಗಳನ್ನು ಹೊಂದಿದೆ. ಅತೀ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಭಾರತದ ಅತಿ ದೊಡ್ಡ ಪ್ರವಾಸಿ ಕೇಂದ್ರವಾಗಿದೆ. ರೋಮ್‌ನ ಸೇಂಟ್ ಪೀಟರ್ಸ್ ಬೆಸಿಲಿಕಾದ ನಂತರದ ಗಾತ್ರದಲ್ಲಿ ಇದುವರೆಗೆ ನಿರ್ಮಿಸಲಾದ ಎರಡನೇ ಅತಿದೊಡ್ಡ ಗುಮ್ಮಟ […]
ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಜಿಲ್ಲೆಯಲ್ಲಿ ಪ್ರವಾಸೊದ್ಯಮ ಅಭಿವೃದ್ದಿಗೆ ಒತ್ತು ನೀಡಲಾಗುವುದು- ಟಿ. ಭೂಬಾಲನ
ವಿಜಯಪುರ: ಜಿಲ್ಲೆಯ ಐತಿಹಾಸಿಕ ಸ್ಮಾರಕಗಳಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ ಅವರು ಹೇಳಿದ್ದಾರೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರೋಟರಿ ಕ್ಲಬ್-ಮಾನ್ಯುಮೆಂಟಲ್ ಹೆರಿಟೇಜ್ ಸಿಟಿ, ಆರ್. ಕೆ. ಎಂ ಆಯರ್ವೇದ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ಮತ್ತು ಪಿಜಿ ರಿಸರ್ಚ ಸೆಂಟರ್ ಇವರ ಸಹಯೋಗದಲ್ಲಿ ನಗರದ […]
ಬಸವನಾಡಿನಿಂದ ಕಾಫಿನಾಡಿನ ಮೂಲಕ ಧರ್ಮಸ್ಥಳಕ್ಕೆ ಸ್ಲೀಪರ್ ಬಸ್- ಸಾರಿಗೆ ಸಚಿವರಿಗೆ ಡಾ. ಎಲ್. ಎಚ್. ಬಿದರಿ ಮನವಿ ಪತ್ರ ಸಲ್ಲಿಕೆ
ವಿಜಯಪುರ: ಬಸವನಾಡು ವಿಜಯಪುರದಿಂದ ಕಾಫಿನಾಡು ಚಿಕ್ಕಮಗಳೂರು ಮಾರ್ಗವಾಗಿ ಸುಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿನಿತ್ಯ ಒಂದು ಸ್ಲೀಪರ್ ಇಲ್ಲವೆ ವೊಲ್ವೊ ಬಸ್ ಸೇವೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ನಗರದ ಚಿಕ್ಕಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ಅವರು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವರನ್ನು ಭೇಟಿ ಮಾಡಿದ ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಮತ್ತು ಸಮಗ್ರ ಅಭಿವೃದ್ಧಿ ವೇದಿಕೆ ಸಂಚಾಲಕರೂ ಆಗಿರುವ ಡಾ. ಎಲ್. ಎಚ್. ಬಿದರಿ […]