ಅಂದವಾದ ಬಣ್ಣ ಹಚ್ಚಿ ಕನಕದಾಸ ಬಡಾವಣೆ ಸಿಟಿ ಬಸ್ ನಿಲ್ದಾಣ ಚಂದ ಮಾಡಿದ ಗಾನಯೋಗಿ ಸಂಘದ ಯುವಕರು

ವಿಜಯಪುರ: ಗಾನಯೋಗಿ ಸಂಘದ ಯುವಕರು ವಿಜಯಪುರ ನಗರದ ಕನಕದಾಸ ಬಡಾವಣೆಯ ಸಿಟಿ ಬಸ್ ಸ್ಟಾಪ್ ಸ್ವಚ್ಛಗೊಳಿಸಿ ಬಸ್ ಸ್ಟಾಪ್ ಗೋಡೆಗಳಿಗೆ ಅಂದವಾಗಿ ಬಣ್ಣ ಹಚ್ಚಿ ಚಂದ ಮಾಡಿ ಗಮನ ಸೆಳೆದಿದ್ದಾರೆ.  ಅಷ್ಟೇ ಅಲ್ಲ, ಈ ಬಸ್ ನಿಲ್ದಾಣದಲ್ಲಿ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾಗಿ ವೀರ ಯೋಧರ ಹೆಸರುಗಳನ್ನು ಬರೆದಿದ್ದಾರೆ.  ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ., ಕನಕದಾಸ ಬಡಾವಣೆಯ ಸಿಟಿ ಬಸ್ ನಿಲ್ದಾಣ ಗಲೀಜಾಗಿದ್ದು, ನೋಡಲು ತುಂಬಾ ಮುಜುಗರವಾಗಿತ್ತು.  ಬಸ್ ಸ್ಟಾಪ್ ನಲ್ಲಿ ಜನರು […]

ಬಸವ ನಾಡಿನಲ್ಲಿ ಜನಮೆಚ್ಚುವ ಕಾಯಕದ ಮೂಲಕ ಸ್ವಚ್ಛತೆಯ ಕಂಪು ಪಸರಿಸುತ್ತಿರುವ ಗಾನಯೋಗಿ ಸಂಘದ ಯುವಕರು

ವಿಜಯಪುರ: ಕಳೆದ ಸುಮಾರು ಒಂದು ವರ್ಷಗಳಿಂದ ಯುವಕರ ತಂಡವೊಂದು ಬಸವ ನಾಡು ವಿಜಯಪುರದಲ್ಲಿ ಗಮನ ಸೆಳೆಯುವ ಕೆಲಸ ಮಾಡುವ ಮೂಲಕ ಮನೆ ಮಾತಾಗುತ್ತಿದೆ.  ಮನೆಯಲ್ಲಿಯೇ ತಂತಮ್ಮ ಕೆಲಸ ಮಾಡುವ ಜನರು ಕಡಿಮೆ ಇರುವ ಇಂದಿನ ದಿನಗಳಲ್ಲಿ ಈ ಯುವಕರ ತಂಡ ಮಹಾನಗರ ಪಾಲಿಕೆ ಮಾಡಬೇಕಾದ ಕಾರ್ಯವನ್ನು ಸ್ವಂತ ಖರ್ಚಿನಲ್ಲಿ ಮಾಡುತ್ತ ನಗರದ ಸೌಂದರ್ಯ ಹೆಚ್ಚಾಗಲು ಕಾರಣವಾಗುತ್ತಿದೆ. ‘ಕಳೆದ ವರ್ಷ ಪಾಳು ಬಿದ್ದಿದ್ದ ಆದಿಲ್‌ ಶಾಹಿ ಕಾಲದ ಪುರಾತನ ಭಾವಿಯನ್ನು ಪ್ರಕಾಶ ಆರ್. ಕೆ. ನೇತೃತ್ವದ ಗಾಯನೋಗಿ ಸಂಘದ […]

ಐತಿಹಾಸಿಗ ನಗರದಲ್ಲಿರುವ ಪ್ರಾಚೀನ ಸ್ಮಾರಕಗಳನ್ನು ವೀಕ್ಷಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋಟ

ವಿಜಯಪುರ: ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಎರಡು ದಿನಗಳ ವಿಜಯಪುರ ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ ಐತಿಹಾಸಿಕ ವಿಜಯಪುರ ನಗರಕ್ಕೆ ಭೇಟಿ ನೀಡಿದ ಅವರು, ವಿಶ್ವವಿಖ್ಯಾತ ಗೋಳಗುಮ್ಮಟವನ್ನು ವೀಕ್ಷಿಸಿದರು.  ಗೋಳಗುಮ್ಮಟ ಆವರಣದಲ್ಲಿರುವ ವಸ್ತು ಸಂಗ್ರಹಾಲಯ ವೀಕ್ಷಿಸಿದ ಅವರು ಟೂರಿಸ್ಟ್ ಗೈಡ್ ರಾಜಶೇಖರ ಕಲ್ಯಾಣಮಠ ಅವರಿಂದ ಮಾಹಿತಿ ಪಡೆದರು. ಬಳಿಕ ಬಾರಾ ಕಮಾನ್ ಸ್ಮಾರಕ್ಕೆ ಭೇಟಿ ನೀಡಿದ ಅವರು, ಈ ಸ್ಮಾರಕದ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಪಿ., ಎಸ್ಪಿ ಎಚ್. […]

ತ್ರಿವರ್ಣ ವಿದ್ಯುತ್ ದೀಪಾಲಂಕಾರದಲ್ಲಿ ಝಗಮಗಿಸುತ್ತಿರುವ ಐತಿಹಾಸಿಕ ಗೋಳಗುಮ್ಮಟ

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿರುವ ಗೋಳಗುಮ್ಮಟ ಪ್ರಾಚೀನ ಸ್ಮಾರಕಕ್ಕೆ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆ ಝಗಮಗಿಸುತ್ತಿದೆ.  ಆಜಾದಿ ಕಾ ಅಮೃತ ಮಹೋತ್ಸವ ಮತ್ತು ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ 100 ಕೋಟಿ ತಲುಪಿದ ಹಿನ್ನೆಲೆಯಲ್ಲಿ ಈಗ ಐತಿಹಾಸಿಕ ಗೋಳಗುಮ್ಮಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಎಸ್ಪಿ ಎಚ್. ಡಿ. ಆನಂದ ಕುಮಾರ ಐತಿಹಾಸಿಕ […]

ಗಾನಯೋಗಿ ಸಂಘದ ವಿನೂತನ ಕಾರ್ಯ- ಮಹಾತ್ಮಾ ಗಾಂಧಿ ಕಲ್ಪನೆಗೆ ಮೆರಗು ನೀಡಿದ ಯುವಕರು

ವಿಜಯಪುರ: ಮಹಾತ್ಮಾ ಗಾಂಧಿ ಅವರ ಕನಸುಗಳಿಗೆ ನೀರೆಯುವ ಮೂಲಕ ಬಸವ ನಾಡಿನ ಗಾನಯೋಗಿ ಸಂಘದ ಯುವಕರ ತಂಡ ವಿನೂತನವಾಗಿ ಸಮಾಜ ಸೇವೆ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.  ಇದು ಯಾರೂ ಊಹಿಸದ ಮತ್ತು ಮಾಡದ ಕೆಲಸ. ಈ ಯವಕರು ಮಾಡಿದ ಕೆಲಸಕ್ಕೆ ಎಂಥವರೂ ಭೇಷ ಎನ್ನದೇ ಇರಲಾರರು. ಬಸವ ನಾಡಿನ ಈ ಯುವಕರು ಈ ಹಿಂದೆ ಪುರಾತನ ಭಾವಿಗೊಂದು ರೂಪ ನೀಡಿ ಭಲೇ ಹುಡುಗರು ಎನಿಸಿಕೊಂಡಿದ್ದರು. ಈಗ ಮಾಡಿರುವ ಕಾರ್ಯ ಆ ಭಾಗದಲ್ಲಿ ತಿರುಗಾಡುವವರೇ ಅಸಹ್ಯ ಪಟ್ಟುಕೊಳ್ಳುವಂತಿತ್ತು. ಆದರೆ, […]

ಬಸವ ನಾಡಿನ ವಿಮಾನ ನಿಲ್ದಾಣದ ಟರ್ಮಿನಲ್ ಹೇಗಿರಲಿದೆ ಗೊತ್ತಾ? ಅದರ ವಿನ್ಯಾಸದ ಚಿತ್ರಗಳು ಇಲ್ಲಿವೆ ನೋಡಿ

ವಿಜಯಪುರ: ಬಸವ ನಾಡಿನ ಜನರ ಬಹುದಿನಗಳ ಗಗನಯಾನದ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದ್ದು, ಬುರಣಾಪುರ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಶೇ. 80ರಷ್ಟು ಪೂರ್ಣವಾಗಿತ್ತಿದ್ದು, ರನ್ ವೇ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮಾಜಿ ಡಿಸಿಎಂ ಮತ್ತು ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಈ ಕಾಮಗಾರಿಯ ಬಗ್ಗೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದು, ಆಗಾಗ ಭೇಟಿ ನೀಡುವ ಮೂಲಕ ಕಾಮಗಾರಿ […]

ಬಸವ ನಾಡಿನಲ್ಲಿದೆ ಸ್ವಾತಂತ್ರ್ಯ ಸಂಗ್ರಾಮದ ಕುರುಹು- ದೇಶಕ್ಕಾಗಿ ಹುತಾತ್ಮರಾದ ದೇಶಮುಖ ಕುಟುಂಬದ ಇತಿಹಾಸ ಹೇಳುತ್ತಿರುವ ಈ ಕೋಟೆ ಎಲ್ಲಿದೆ ಗೊತ್ತಾ?

ವಿಜಯಪುರ: ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಸ್ಧಳ ಶಸ್ತ್ರಾಸ್ತ್ರಗಳ ಸಂಗ್ರಹಗಾರವಾಗಿತ್ತು. ಆದಿಲ್ ಶಾಹಿಗಳ ಕಾಲದಿಂದಲೂ ಸೇನಾ ಕೇಂದ್ರವಾಗಿದ್ದ ಈ ಗ್ರಾಮದ ಮುಖಂಡರು ತಮ್ಮ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದಿದ್ದೇ ತಡ. ಬ್ರಿಟೀಷರು ದಾಳಿ ನಡೆಸಿ ಅವರನ್ನು ಗಲ್ಲಿಗೇರಿಸುವ ಮೂಲಕ ಸೇಡು ತೀರಿಸಿಕೊಂಡರು. ಅಲ್ಲದೇ, ಅವರ ಸಾಕ್ಷ್ಯಗಳನ್ನೂ ನಾಶ ಮಾಡಿದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕರ್ನಾಟಕದಲ್ಲಿ ಹುತಾತ್ಮರಾದ ಮೊದಲಿಗರಲ್ಲಿ ಈ ಕುಟುಂಬದವರೂ ಸೇರಿರುವುದು ವಿಶೇಷ. ಐತಿಹಾಸಿಕ ಸ್ಮಾರಕಗಳಿಗೆ ಹೆಸರಾಗಿರುವ ಈ ಜಿಲ್ಲೆ ಇತಿಹಾಸದಲ್ಲಿಯೂ ನಾನಾ […]

ಟೋಕಿಯೋ ಓಲಂಪಿಕ್ಸ್ ಗೆ ಭಾರತೀಯ ತಂಡಕ್ಕೆ ಶುಭ ಕೋರಿದ ಸಂಸದ, ಡಿಸಿ, ಜಿ. ಪಂ. ಸಿಇಓ

ವಿಜಯಪುರ: ಜಪಾನಿನ ಟೋಕಿಯೋದಲ್ಲಿ 2020ರ ಓಲಂಪಿಕ್ಸ್ ನಡೆಯುತ್ತಿದೆ. ಈ ಓಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳೂ ಕೂಡ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಶುಭಾಷಯ ಕೋರಿದ್ದಾರೆ. ವಿಜಯಪುರದಲ್ಲಿ ನಿಲ್ಲಿಸಲಾಗಿರುವ ನಾನು 2020-2021ನೇ ಸಾಲಿನ ಟೋಕಿಯೋ ಓಲಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತ ಕ್ರೀಡಾ ತಂಡಕ್ಕೆ ಶುಭ ಕೋರುತ್ತೇನೆ. I#Cheef4India TOKYO 2020 ಫ್ಲೇಕ್ಸ್ ಫ್ರೇಮ್ ನಲ್ಲಿ ನಿಂತು ಮೂರು […]

ದಣಿವರಿಯದ ಜಿಲ್ಲಾಧಿಕಾರಿಗಳಿಂದ ರಜೆಯ ದಿನವೂ 2ನೇ ಬಾರಿ ಹೆರಿಟೇಜ್ ವಾಕ್

ಬಸವ ನಾಡು ವಿಜಯಪುರ- ಸದಾ ಕ್ರಿಯಾಶೀಲರಾಗಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ರಜೆಯ ದಿನವಾಗಿದ್ದರೂ ವಿಶ್ರಾಂತಿ ಪಡೆಯದೇ 2ನೇ ಬಾರಿಗೆ ಹೆರಿಟೇಜ್ ವಾಕ್ ನಡೆಸಿದ್ದಾರೆ.ಬೆಳ್ಳಂಬೆಳಿಗ್ಗೆ ಗುಮ್ಮಟ ನಗರಿಯ ಐತಿಹಾಸಿಕ ಆದಿಲ್ ಶಾಹಿ ಕಾಲದ ನಾನಾ ಸ್ಮಾರಕಗಳಿಗೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಒಟ್ಟು ಏಳು ಐತಿಹಾಸಿಕ ಪಾರಂಪರಿಕ ಸ್ಮಾರಕಗಳಿಗೆ ಭೇಟಿ ನೀಡಿದರು. ನಗರದ ಸಾಟ್ ಖಬರ್, ಸುರಂಗ ಬೌಡಿ, ಜಿಲ್ಲಾ ಆಸ್ಪತ್ರೆ ಹತ್ತಿರದ ನಿತ್ಯ ನವ್ರಿ ಸ್ಮಾರಕ, ಚಾಂದ್ ಬಾವಡಿ, ಇಬ್ರಾಹಿಂ […]

ರಾಜ್ಯದ ಪ್ರಥಮ ಮತ್ತ ಏಕೈಕ ಮಹಿಳಾ ವಿವಿ ಎಲ್ಲಿದೆ ಗೊತ್ತಾ?

12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಶ್ರಮಿಸಿದ ಮಹಾಪುರಷ ಅಣ್ಣ ಬಸವಣ್ಣನವರ ತವರು ಜಿಲ್ಲೆ ವಿಜಯಪುರ ಜಿಲ್ಲೆಯ ತೊರವಿಯಲ್ಲಿದೆ ರಾಜ್ಯದ ಮೊದಲ ಮತ್ತು ಏಕೈಕ ಮಹಿಳಾ ವಿಶ್ವವಿದ್ಯಾಲಯ.