ಜಗತ್ತಿಗೆ ಹಬ್ಬಗಳನ್ನು ಪರಿಚಯಿಸಿದವರು ಭಾರತೀಯರು- ಪ್ರೊ. ಎಸ್. ಜಿ ರೋಡಗಿ

ವಿಜಯಪುರ: ಜಾಗತಿಕರಣ(Globalisation), ಆಧುನಿಕರಣದ(Modernisation) ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿ(Culture) ಮತ್ತು ಆಚಾರಗಳನ್ನು ಮರೆಯಬಾರದು.  ಜಗತ್ತಿಗೆ ಸಂಸ್ಕೃತಿಯನ್ನು ಮತ್ತು ಹಬ್ಬಗಳ(Festival) ವಿಶೇಷತೆಯನ್ನು(Speciality) ಪರಿಚಯಿಸಿದವರು ಭಾರತೀಯರು.  ನಮ್ಮ ಹಬ್ಬಗಳನ್ನು ವಿದೇಶಿಗರೂ ಕೂಡಾ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಜಿ. ರೋಡಗಿ ಹೇಳಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಮಹಿಳಾ ವೇದಿಕೆಗಳು ಎ ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಯುಗಾದಿ ಉತ್ಸವ-2022  ಕಾರ್ಯಕ್ರಮವನ್ನ […]