BJP Kuchabal: ಪ್ರತಿಪಕ್ಷಗಳು ಉಚಿತ ಯೋಜನೆ ಘೋಷಣೆ ಮಾಡಿ ಜನರ ಬಲ ಕುಂದಿಸುತ್ತವೆ- ಆರ್. ಎಸ್. ಪಾಟೀಲ ಕೂಚಬಾಳ

ವಿಜಯಪುರ: ಪ್ರತಿಪಕ್ಷಗಳು ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಜನರ ಬಲವನ್ನು ಕುಂದಿಸುವ ಕೆಲಸ ಮಾಡುತ್ತಿವೆ.  ಆದರೆ, ಬಿಜೆಪಿ ಮಾತ್ರ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಬಿಜೆಪಿ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತವಾಡಿದರು. ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಕೇವಲ ಚುನಾವಣೆ ದೃಷ್ಠಿಕೋನದಿಂದ ಉಚಿತ ಯೋಜನೆಗಳ ದುಂಬಾಲು ಬಿದ್ದು ಆ ರಾಜ್ಯಗಳನ್ನು […]

MLC Election Campaign: ಎಂ ಎಲ್ ಸಿ ಚುನಾವಣೆ: ರಮೇಶ ಜಿಗಜಿಣಗಿ, ಅಪ್ಪು ಪಟ್ಟಣಶೆಟ್ಟಿ ಜಂಟಿ ಪ್ರಚಾರ

ವಿಜಯಪುರ: ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates) ಮತಕ್ಷೇತ್ರಕ್ಕೆ(Cosntituency) ನಡೆಯುತ್ತಿರುವ ಚುನಾವಣೆ ಪ್ರಚಾರ ಜೋರಾಗಿದ್ದು, ವಿಜಯಪುರ ನಗರದಲ್ಲಿ ಸಂಸದ ರಮೇಶ ಜಿಗಜಿಣಗಿ(MP Ramesh Jigajinagi) ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಜಂಟಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಬೆಳಿಗ್ಗೆ ವಿಜಯಪುರ ನಗರದ ಸುಕೂನ ಕಾಲನಿ ಬಳಿ ಇರುವ ಪ್ರಕೃತಿ ಕಾಲನಿಯಲ್ಲಿ ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ ಮತ್ತು ಅಪ್ಪು ಪಟ್ಟಣಶೆಟ್ಟಿ ಬಿಜೆಪಿ ಅಭ್ಯರ್ಥಿಗಳಾದ ಅರುಣ ಶಹಾಪುರ(ಶಿಕ್ಷಕರ ಮತಕ್ಷೇತ್ರ) ಮತ್ತು ಹಣಮಂತ ರುದ್ರಪ್ಪ ನಿರಾಣಿ(ಪದವೀಧರ ಮತಕ್ಷೇತ್ರ) […]

Football Glory: ಬಸವ ನಾಡಿನಲ್ಲಿ ಫುಟಬಾಲ್ ಕ್ರೀಡೆಯನ್ನು ಗತವೈಭವಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ(Vijayapura District) ಫುಟವಬಾಲ್(Foot Ball) ಒಂದು ಕಾಲದಲ್ಲಿ ಎಲ್ಲ ಕ್ರೀಡೆಗಳಿಗಿಂತ ಹೆಚ್ಚು ಜನಪ್ರೀಯವಾಗಿತ್ತು.  ಇಲ್ಲಿನ ಪಂದ್ಯಗಳನ್ನು ನೋಡಲು ಬೇರೆ ಕಡೆಗಳಿಂದ ಫುಟಬಾಲ್ ಅಭಿಮಾನಿಗಳು(Fans) ಬರುತ್ತಿದ್ದರು.  ಅಷ್ಟರ ಮಟ್ಟಿಗೆ ಫುಟಬಾಲ್ ಕ್ರೇಜ್(Craze) ಜನರಲ್ಲಿತ್ತು.  ಆ ಗತವೈಭವವನ್ನು ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಮತ್ತು ಫುಟಬಾಲ ಸಂಸ್ಥೆಯ ವಿಜಯಪುರ ಜಿಲ್ಲಾಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ. ವಿಜಯಪುರ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ […]

Shivabasava Jayatni: ಶಿವಬಸವ ಜಯಂತಿ ಅಂಗವಾಗಿ ಬಸವ ನಾಡಿನಲ್ಲಿ ಶೋಭಾಯಾತ್ರೆ- ಬಿಜೆಪಿ ಸೇರಿ ನಾನಾ ಮುಖಂಡರು ಭಾಗಿ

ವಿಜಯಪುರ: ಶಿವಬಸವ ಜಯಂತಿ(Shiva Basava Jayanti) ಅಂಗವಾಗಿ ಬಸವ ನಾಡು(Basava Nadu) ವಿಜಯಪುರ ನಗರದಲ್ಲಿ(Vijayapura City) ಶೋಭಾಯಾತ್ರೆ(Shobha Yatre) ನಡೆಯಿತು.  ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ತಿಲಕ ಚೌಕಿನಿಂದ(Tilak Chowk) ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.  ಈ ಮೆರವಣಿಗೆಯಲ್ಲಿ ಬಸವೇಶ್ವರ ಮತ್ತು ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, […]

ಉಕ್ರೇನಿನಿಂದ ಬಂದ ವಿವಿಧಾಳನ್ನು ಭೇಟಿ ಕುಶಲೋಪರಿ ವಿಚಾರಿಸಿದ ಅಪ್ಪು ಪಟ್ಟಣಶೆಟ್ಟಿ ಮತ್ತೀತರರು

ವಿಜಯಪುರ: ಉಕ್ರೇನಿನಲ್ಲಿ(Ukraine) ಯುದ್ಧ ಪೀಡಿತ(War Hit) ಪ್ರದೇಶದಲ್ಲಿ ಸಿಲುಕಿ ಯಾತನೆ ಅನುಭವಿಸಿದ್ದ ವಿಜಯಪುರದ(Vijayapura) ವಿವಿಧಾ(Vividha) ಮಲ್ಲಿಕಾರ್ಜನಮಠ(Mallikarjunamath) ತವರಿಗೆ(Motherland) ವಾಪಸ್ಸಾಗಿದ್ದಾರೆ. ರಾತ್ರಿ ವಿಜಯಪುರಕ್ಕೆ ಬಂದ ವಿವಿಧಾ ಮಲ್ಲಿಕಾರ್ಜುನಮಠ ಅವರ ಮನೆಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕ ರಮೇಶ ಬಿದನೂರ, ಬಿಜೆಪಿ ಮುಖಂಡ ಕಾಶೀನಾಥ ಮಸಬಿನಾಳ, ಮಲ್ಲಿಕಾರ್ಜುನಮಠ ಕುಟುಂಬದ ಸ್ನೇಹಿತರಾದ ಶಿವಾನಂದ ಭುಂಯ್ಯಾರ, ಶರಣು ಸಬರದ, ಸಂಪತ ಕೊವಳ್ಳಿ, ವಿವಿಧಾ ಚಿಕ್ಕಪ್ಪ […]

ಬಿಜೆಪಿ ಕಾರ್ಯಕರ್ತರು ಹಾಲಿನ ಮೇಲಿನ ಸತ್ವ ಹೆಚ್ಚಿಸುವ ಕೆನೆಯಿದ್ದಂತೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಬಿಜೆಪಿ ಎಂದರೆ ಹಾಲಿದ್ದಂತೆ. ಪಕ್ಷದ ಕಾರ್ಯಕರ್ತರು ಹಾಲಿನ ಸತ್ವ ಹಾಗೂ ಮಹತ್ವ ಹೆಚ್ಚಿಸುವ ಕೆನೆಯಿದ್ದಂತೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ನಗರದ ಉಕ್ಕಲಿ ರಸ್ತೆಯಲ್ಲಿರುವ ಶ್ರೀ ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳದ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷ ಮತ್ತು ಕಾರ್ಯಕರ್ತರಿಲ ಮಧ್ಯೆ ಅವಿನಾಭಾವ ಸಂಬಂಧವಿದೆ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಿದ್ದಂತೆ. ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. […]

ಬಬಲೇಶ್ವರ ತಾಲೂಕಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ

ವಿಜಯಪುರ: ಬಬಲೇಶ್ವರ ತಾಲೂಕಗಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ ವಿಜಯಪುರ ನಗರದ ಸ್ಟೇಶನ ರಸ್ತೆಯಲ್ಲಿರುವ ಶ್ರೀ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.  ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಾಡಿನಲ್ಲಿ ಸರಳತೆ, ಸೌಮ್ಯ, ಶಿಸ್ತಿನಿಂದ ದಿನನಿತ್ಯ ಸ್ವಪ್ರಯತ್ನದೊಂದಿಗೆ ಉದ್ಯೋಗ ಜೊತೆಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಬಣಜಿಗ ಸಮಾಜದ ಜನತೆ ಎಲ್ಲ ಸಮುದಾಯದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಾರೆ ಎಂದು ಹೇಳಿದರು. ಶತಮಾನಗಳ ಹಿಂದೆ ನಮ್ಮ ಪೂರ್ವಜರ ತಪಸ್ಸಿನ ಫಲದಿಂದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ, […]

ಮಾತು ಕೇಳಿಸದ ಸ್ವಪ್ನಾಳ ಬಾಳಿಗೆ ಬೆಳಕಾದ ವಿನಾಯಕ- ಮುಗ್ದಜೋಡಿಯ ದಾಂಪತ್ಯ ಜೀವನದ ಕನಸು ನನಸಾಗಿಸಿದ ಪೋಷಕರು

ಮಹೇಶ ವಿ. ಶಟಗಾರ ವಿಜಯಪುರ(Vijayapura): ಅಲ್ಲಿ ಸಂತಸದ ಕ್ಷಣಗಳು ಕಣ್ತುಂಬುವಂತಿದ್ದವು.  ಸ್ವಪ್ನಾ(Sapna) ಅಷ್ಟೇ ಅಲ್ಲ ವಿನಾಯಕ(Vinayak) ಅವರ ಪೋಷಕರ(Parents) ಕಣ್ಣುಗಳಲ್ಲೂ ಆನಂದಭಾಷ್ಪ(Happiness) ಸುರಿಯುತ್ತಿದ್ದವು.  ಈ ಘಟನೆಗೆ ಸಾಕ್ಷಿಯಾಗಿದ್ದು ಬಸವ ನಾಡು ವಿಜಯಪುರ. ಅಲ್ಲಿಗೆ ಬಂದಿದ್ದ ಅತಿಥಿಗಳೂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು.  ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಖುದ್ದಾಗಿ ಇಡೀ ಕಾರ್ಯಕ್ರಮ ಮುಗಿಯುವ ವರೆಗೆ ಸ್ಥಳದಲ್ಲಿಯೇ ಇದ್ದು ಶುಭ ಹಾರೈಸಿದರು. ಇದು ಯುವತಿ ಸ್ವಪ್ನಾ ವಿನಾಯಕನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭ ಘಳಿಗೆಯ […]