Bus MB Patil: ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಿಗೆ ಹೆಚ್ಚುವರಿ ಬಸ್ ಸೇವೆ ಆರಂಭ- ಎಂ. ಬಿ. ಪಾಟೀಲ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದ ಶಿರಬೂರ, ಬಬಲಾದಿ, ಕೊಟಬಾಗಿ, ಹಂಚಿನಾಳ, ಮಂಗಳೂರು, ಮಮದಾಪುರ ಗ್ರಾಮಗಳಿಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು‌ ಶಾಸಕ‌ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತಮ್ಮ‌ ಗ್ರಾಮಗಳಿಗೆ ಸೂಕ್ತ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಮತ್ತು ಕೆಲವು ಬಸ್ಸುಗಳ ಮಾರ್ಗ ಬದಲಾವಣೆ ಮಾಡುವಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತಮಗೆ ಮನವಿ ಮಾಡಿದ್ದರು.  ಅದರಂತೆ […]

MLC Sunilgouda: ಬಬಲೇಶ್ವರ, ದೇವರಗೆಣ್ಣೂರ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಸುನೀಲಗೌಡ ಪಾಟೀಲ

ವಿಜಯಪುರ: ಬಬಲೇಶ್ವರ ಮತ್ತು ದೇವರಗೆಣ್ಣೂರ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ತ ಸದಸ್ಯ ಸುನೀಲಗೌಡ ಪಾಟೀಲ ಚಾಲನೆ ನೀಡಿದರು. ಬಬಲೇಶ್ವರ ಪಟ್ಟಣದಲ್ಲಿ ನಿರ್ಮಿತಿ ಕೇಂದ್ರ ರೂ.10 ಲಕ್ಷ ವೆಚ್ಚದಲ್ಲಿ ಸರಕಾರಿ ಹೆಣ್ಣು ಮಕ್ಕಳ ಶಾಲೆ ಮತ್ತು  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಕೊಠಡಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ವಿ.ಎಸ್.ಪಾಟೀಲ, ಸುಜಾತಾ ಕಳ್ಳೀಮನಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಜಾತ ಜಂಗಮಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ಮುಖಂಡರಾದ ಬಿ.ಜಿ.ಬಿರಾದಾರ, […]

MLC Bhumipuje: ತಿಕೋಟಾ, ಬಬಲೇಶ್ವರ ತಾಲೂಕಿನ ನಾನಾ ಗ್ರಾಮಗಳಲ್ಲಿ ನೀರು ಸರಬರಾಜು ಯೋಜನೆಗೆ ಸುನೀಲಗೌಡ ಪಾಟೀಲ ಭೂಮಿ ಪೂಜೆ

ವಿಜಯಪುರ: ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತ ಸದಸ್ಯ ಸುನೀಲಗೌಡ ಪಾಟೀಲ ಅವರು ಬಬಲೇಶ್ವರ ಮತಕ್ಷೇತ್ರದ ತಿಕೋಟಾ ಮತ್ತು ಬಬಲೇಶ್ವರ ತಾಲೂಕಿನ ನಾನಾ ಗ್ರಾಮಗಳಲ್ಲಿ ಜೆ.ಜೆ.ಎಂ. ಯೋಜನೆಯಡಿ ಮನೆ– ಮನೆಗೆ ನಳದ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ತಿಕೋಟಾ ತಾಲೂಕಿನ ಅತಾಲಟ್ಟಿ ಎಲ್.ಟಿ. ರೂ. 67.75ಲಕ್ಷ ವೆಚ್ಚದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನಾನು ರಾಠೋಡ, […]

Sweet Potateo: ಅಬ್ಬಾ, ಈ ಗೆಣಸು ಎಷ್ಟು ಬೆಳೆದಿದೆ ನೋಡಿ- ಇದಕ್ಕೆಲ್ಲ ಎಂ. ಬಿ. ಪಾಟೀಲ ಮಾಡಿದ ನೀರಾವರಿ ಕಾರಣ ಎಂದು ಗುಣಗಾನ ಮಾಡಿದ ರೈತ

ವಿಜಯಪುರ: ಅಬ್ಬಾ(Wow)! ಈ ಗೆಣಸು(Sweet Potateo) ಬೆಳೆದ(Height) ಪರಿ ನೋಡಿದರೆ ಎಲ್ಲರೂ(Everyone) ಅಚ್ಚರಿ(Wonder) ಪಡುವುದು ಗ್ಯಾರಂಟಿ.  ಈ ಕೆಂಗೆಣಸನ್ನು ಕಂಡು ಸ್ವತಃ ರೈತನೇ ಹೈರಾಣಾಗಿದ್ದಾನೆ.  ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಸಿದ್ರಾಮಯ್ಯ ದಾ ರೋಣಿಹಾಳಮಠ ಅವರ ತೋಟದಲ್ಲಿ ಬೆಳೆದಿರುವ ಈ ಗೆಣಸು ಅನ್ನದಾತರನ್ನಷ್ಟೇ ಅಲ್ಲ, ಎಲ್ಲರನ್ನೂ ಅಚ್ಚರಿ ಉಂಟು ಮಾಡಿದೆ.  ಇದಕ್ಕೆಲ್ಲ ಇಲ್ಲಿಯ ಭೂಮಿಯ ಫಲವತ್ತತೆ ಕಾರಣ.  ಈ ಭೂಮಿ ಇಷ್ಟೋಂದು ಫಲವತ್ತಾಗಲು ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಸಂಪನ್ಮೂಲ […]

Farmers Chariot: ಒಂದು ಗಂಟೆಯಲ್ಲಿ ಹಣ ಸಂಗ್ರಹ, ಒಂದು ವರ್ಷದಲ್ಲಿ ನಿರ್ಮಾಣ, ಈಗ ಲೋಕಾರ್ಪಣೆಗೆ ಸಜ್ಜುಗೊಂಡ ಸಂಗಾಪುರ ಎಸ್. ಎಚ್. ಗ್ರಾಮದ ರಥ

ಮಹೇಶ ವಿ. ಶಟಗಾರ ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ(District) ಬಬಲೇಶ್ವರ ತಾಲೂಕಿನ(Babaleshwar Taluku) ಸಂಗಾಪುರ (ಎಸ್.ಎಚ್)(Sangapur S H) ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ರೈತರ ರಥ(Chariot) ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ ೨೫ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ರಥೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ರಥ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಸಂಗಾಪುರ ಎಸ್.ಎಚ್.ಗ್ರಾಮದ ರೈತರೆ ಭರಿಸಿರುವುದು […]

ಅಗಸನಹಳ್ಳಿ ವಿಠೋಬಾ- ಮಾರುತಿ ದೇವಾಲಯ ಆವರಣದಲ್ಲಿ ಧರ್ಮಸಭೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಕಾಖಂಡಕಿ ಬಳಿ ಇರುವ ಅಗಸನಹಳ್ಳಿ(Agasanahalli) ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ(Vithal-Rukmini) ಮೂರ್ತಿ ಪ್ರತಿಷ್ಛಾಪನೆ(Statue Installation) ಅಂಗವಾಗಿ ಕಳಸಾರೋಹಣ ಹಾಗೂ ಜ್ಞಾನೋಬ, ತುಕಾರಾಮ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಮತ್ತು ಶ್ರೀ ಗ್ರಂಥ ರಾಜ ಜ್ಞಾನೇಶ್ವರ ಪುರಾಣದ ಕಾರ್ಯಕ್ರಮ ನಡೆಯಿತು.  ಶ್ರೀ ವಿಠ್ಠಲ ಮಂದಿರ ದೇವಾಲಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲಗೂರ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ಮತ್ತು ಬಬಲೇಶ್ವರ ಬ್ರಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿದರು. ಪಂಡರಪುರದ ಶ್ರೀ ವಿಠಲನ ದೇವರ ಸ್ಮರಣೆಯೊಂದಿಗೆ […]

ಬಬಲೇಶ್ವರ ತಾಲೂಕಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ

ವಿಜಯಪುರ: ಬಬಲೇಶ್ವರ ತಾಲೂಕಗಿನ ಬಣಜಿಗ ಸಮಾಜದ ಪದಾಧಿಕಾರಿಗಳ ಪೂರ್ವಭಾವಿ ಸಭೆ ವಿಜಯಪುರ ನಗರದ ಸ್ಟೇಶನ ರಸ್ತೆಯಲ್ಲಿರುವ ಶ್ರೀ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.  ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಾಡಿನಲ್ಲಿ ಸರಳತೆ, ಸೌಮ್ಯ, ಶಿಸ್ತಿನಿಂದ ದಿನನಿತ್ಯ ಸ್ವಪ್ರಯತ್ನದೊಂದಿಗೆ ಉದ್ಯೋಗ ಜೊತೆಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಬಣಜಿಗ ಸಮಾಜದ ಜನತೆ ಎಲ್ಲ ಸಮುದಾಯದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದಾರೆ ಎಂದು ಹೇಳಿದರು. ಶತಮಾನಗಳ ಹಿಂದೆ ನಮ್ಮ ಪೂರ್ವಜರ ತಪಸ್ಸಿನ ಫಲದಿಂದ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ, […]