ಮಕ್ಕಳ ಏರಲಿಫ್ಟ್ ವಿಳಂಬ ಆರೋಪ- ಬಸವ ನಾಡಿನಲ್ಲಿ ಪೋಷಕರ ಆಕ್ರೋಶ- ಕೇಂದ್ರ ಸಚಿವರು ಸಂಸದರ ವಿರುದ್ಧ ವಾಗ್ದಾಳಿ

ವಿಜಯಪುರ: ಉಕ್ರೇನಿನ(Ukrain) ಮೇಲೆ ರಷ್ಯಾ(Russia) ಯುದ್ಧ ಸಾರಿದ್ದು(War Declared), ಭಾರತ, ಕರ್ನಾಟಕ (India, Karnataka) ಮತ್ತು ವಿಜಯಪುರದ ಅನೇಕ ಜನ ವಿದ್ಯಾರ್ಥಿಗಳು ಇನ್ನೂ ಖಾರ್ಕಿವ್ ನಲ್ಲಿಯೇ(Kharkiv) ಸಿಲುಕಿಕೊಂಡಿದ್ದಾರೆ.  ದಿನೇ ದಿನೇ ರಷ್ಯಾ ಧಾಳಿ(Attack) ತೀವ್ರಗೊಂಡಿದ್ದು, ಅಲ್ಲಿರುವ ವಿದ್ಯಾರ್ಥಿಗಳ ಆತಂಕವೂ(Students Tense) ಹೆಚ್ಚಾಗಿದೆ.  ಇದು ವಿದ್ಯಾರ್ಥಿಗಳ ಪೋಷಕರಲ್ಲಿ ದುಗುಡು ಹೆಚ್ಚಾಗುವಂತೆ ಮಾಡಿದೆ.  ಕೇಂದ್ರ ಸರಕಾರ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರ ಏರಲಿಫ್ಟ್ ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ, ಪೂರ್ವ ಉಕ್ರೇನಿನಲ್ಲಿ ಸಿಲುಕಿರುವವರ ಬಗ್ಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಾರ್ಹವಾಗಿದೆ.  […]

ಉಕ್ರೇನ್ ನಲ್ಲಿ ಬಸವ ನಾಡಿನ 24ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪರದಾಟ- ಪೋಷಕರಲ್ಲಿ ಧರ್ಮಸಂಕಟ

ಮಹೇಶ ವಿ. ಶಟಗಾರ ವಿಜಯಪುರ: ಯುಕ್ರೇನ್Ukrain) ಮೇಲೆ ರಷ್ಯಾ ಸಮರ(Russia War) ಸಾರಿರುವ ಹಿನ್ನಲೆಯಲ್ಲಿ ಯುಕ್ರೇನ್ ಈಶಾನ್ಯ(East Ukrain) ಭಾಗದಲ್ಲಿ ವಿಜಯಪುರದ ಹಲವಾರು ವಿದ್ಯಾರ್ಥಿಗಳು(Vijayapura Students)ಸಿಲುಕಿಕೊಂಡಿದ್ದಾರೆ.(Stranded)ಬಾಂಬ್ ಸ್ಪೋಟಗಳ ಶಬ್ದದ ನಡುವೆ ಈ ವಿದ್ಯಾರ್ಥಿಗಳು ಆತಂಕ ಎದುರಿಸುತ್ತಿದ್ದಾರೆ  ವಿಜಯಪುರ ಜಿಲ್ಲೆಯ ವಿವಿಧಾ ಮಲ್ಲಿಕಾರ್ಜುನಮಠ, ಅಮನ ಮಮದಾಪುರ ಸೇರಿದಂತೆ ಸುಮಾರು 24 ಹೆಚ್ಚು ವಿದ್ಯಾರ್ಥಿಗಳು ನಾನಾ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ.  ಈ ಕುರಿತು ಕೆ ಎಸ್ ಎನ್ ಎಂ ಡಿ ಸಿ ರಾಜ್ಯದ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡಿದೆ. ಉಕ್ರೇಸ್ ಈಶಾನ್ಯದಲ್ಲಿರುವ […]

ದ್ರಾಕ್ಷಿ ನಾಡು ತಿಕೋಟಾ ತಾಲೂಕು, ವಿಜಯಪುರ ನಗರದ ನಾನಾ ಕಡೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ, ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ವಿಜಯಪುರ ಜಿಲ್ಲೆಯ ದ್ರಾಕ್ಷಿ ನಾಡು ತಿಕೋಟಾ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.    ತಿಕೋಟಾ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಕಂದಾಯ ಇಲಾಖೆಯ ಸಂಬಂಧಪಟ್ಟ ನಾನಾ ಕೆಲಸ ಕಾರ್ಯಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು.  ತಿಕೋಟಾದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಾಮಗಾರಿಯನ್ನು ವೀಕ್ಷಿ,ಸಿದರು. ಕನಮಡಿ ಗ್ರಾಮದಲ್ಲಿ 2016-17 ನೇ ಆರ್ಥಿಕ ವರ್ಷದಲ್ಲಿ ಎಸ್ಟಿ ಸಮುದಾಯದ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು […]

ಗುಮ್ಮಟ ನಗರಿಯ ರಸ್ತೆಗಳಿಗೆ ಆದಿಲಶಾಹಿ ಬಾದಷಹರು, ಸೂಫಿ ಸಂತರು, ಇತರ ಮಹನೀಯರ ಹೆಸರಿಡಲು ದಿ ಬಿಜಾಪುರ ಹೆರಿಟೇಜ್ ಫೌಂಡೇಶನ್ ಆಗ್ರಹ

ವಿಜಯಪುರ: ವಿಜಯಪುರ ನಗರದ ಕೆಲವು ಮಾರ್ಗ ಮತ್ತು ವೃತ್ತಗಳಿಗೆ ಆದಿಲ್‍ಶಾಹಿ ದೊರೆಗಳ, ಸೂಫಿ ಸಂತರ ಹಾಗೂ ಇತರೆ ಮಹನೀಯರ ನಾಮಕರ ಮಾಡಬೇಕು ಎಂದು ಒತ್ತಾಯಿಸಿ ದಿ ಬಿಜಾಪುರ ಹೆರಿಟೇಜ್ ಪೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫೌಂಜೇಶನ್ ಸಂಸ್ಥಾಪಕ ಅನೀಸ ಮನೀಯಾರ ಮತ್ತು ಹಮ್ಜಾ ಮಹಿಬೂಬ, ವಿಜಯಪುರ ನಗರವು ಜಗತ್ತಿನ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದೆ.  ಇಲ್ಲಿ ಅನೇಕ ಮಹಾ ಪುರುಷರು, ಸಮಾಜ ಸುಧಾರಕರು ಹಾಗೂ ಐತಿಹಾಸಿಕ ವ್ಯಕ್ತಿಗಳು […]

ಜನಪದ ಕಲೆಗಳು ಜನರ ಜೀವನಾಡಿ-ಕೆಬಿಜೆಎನ್ಎಲ್ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

ವಿಜಯಪುರ: ಶ್ರಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ಜಾನಪದ ಕಲೆಗಳು ಗ್ರಾಮೀಣ ಜನರ ಅನುಭವದ ಭಾವಬಿಂಬಗಳಾಗಿವೆ. ಹಳ್ಳಿಗರ ಬದುಕಿನೊಂದಿಗೆ ಬೆಸೆದುಕೊಂಡಿರುವ ಜನಪದ ಕಲೆಗಳು ಭಾರತದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಭಿಪ್ರಾಯಪಟ್ಟಿದ್ದಾರೆ.  ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ, ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿ ಗೌಡ್ತಿ ಪಾಟೀಲ್ ಜಾನಪದ ಪ್ರತಿಷ್ಠಾನ ಹಾಗೂ ವಿಜಯಪುರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಲಕ್ಷ್ಮೀದೇವಿ ಜಾತ್ರಾ […]

ಸ್ವಾತಂತ್ರ್ಯ ಮಹೋತ್ಸವ ಭಿತ್ತಿಚಿತ್ರ ಸ್ಪರ್ಧೆ- ನಾನಾ ಶಾಲೆಗಳ 40 ವಿದ್ಯಾರ್ಥಿಗಳು ಭಾಗಿ

ವಿಜಯಪುರ: ಇಂಟ್ಯಾಚ್ ವಿಜಯಪುರ ಚಾಪ್ಟರ್ ಮತ್ತು ವಿಜಯಪುರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ಮಹೋತ್ಸವ ಬಿತ್ತಿ ಚಿತ್ರ ಸ್ಪರ್ಧೆಯನ್ನು ಆಯೋಜಿಲಾಯಿತು.  ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಸೋಮಶೇಖರ ವಾಲಿ ಮಾತನಾಡಿ, ಈಸ್ಟ ಇಂಡಿಯಾ ಕಂಪನಿ ಮೂಲಕ ಆಗಮಿಸಿದ್ದ ಬ್ರಿಟೀಷರು ಭಾರತಾದ್ಯಂತ ತಮ್ಮ ಪಾರುಪತ್ಯ ಸ್ಥಾಪಿಸಿ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ದಿದ್ದರು.  ಆದರೆ, ನಮ್ಮ ರಾಷ್ಟ್ರದ ನಾಯಕರು […]

ಛತ್ರಪತಿ ಶಿವಾಜಿ ವೇಷದಲ್ಲಿ ಗಮನ ಸೆಳೆದ ಗುಮ್ಮಟ ನಗರಿಯ ಮಕ್ಕಳು

ವಿಜಯಪುರ: ಭಾರತದಲ್ಲಿ ಪುರಾತನ ಕಾಲದಿಂದಲೂ ಸಾವಿರಾರು ವೀರರು, ಯೋಧರು, ಸಾಹಸಿಗಳು ಗಮನ ಸೆಳೆದಿದ್ದಾರೆ. ಶಿಷ್ಠರ ರಕ್ಷಣೆಗಾಗಿ ಯುದ್ಧಗಳನ್ನೂ ಮಾಡಿದ್ದಾರೆ. ಖಡ್ಗ ಝಳಪಿಸಿ ವಿಜಯಶಾಲಿಯೂ ಆಗಿದ್ದಾರೆ. ಹಲವರು ಹುತಾತ್ಮರೂ ಆಗಿದ್ದಾರೆ. ಇಂಥ ಹೋರಾಟಗಾರರಲ್ಲಿ ಇಂದಿಗೂ ಜನಜನಿತರಾಗಿರುವವರು ಛತ್ರಪತಿ ಶಿವಾಜಿ. ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ನಾನಾ ಕಡೆಗಳಲ್ಲಿ ತಮ್ಮ ಕಾಲದಲ್ಲಿ ತಮ್ಮ ವೀರಗುಣಗಳಿಂದ ಗಮನ ಸೆಳೆದವರು ಛತ್ರಪತಿ ಶಿವಾಜಿ ಮಹಾರಾಜರು. ತಾಯ್ನಾಡಿನ ರಕ್ಷಣೆಗಾಗಿ ಮೊಘಲರೊಂದಿಗೆ ಇವರು ನಡೆಸಿದ ಹೋರಾಟ ಇಂದಿಗೂ ಸ್ಮರಣೀಯವಾಗಿದೆ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು […]

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಿಂದಗಿ ತಾಲೂಕಿನ ಮಲಘಾಣದಲ್ಲಿ ಕಾರ್ಯಕ್ರಮ ಆರಂಭ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವಿಜಯಪುರ(Vijayapura District) ಜಿಲ್ಲೆಯ ಸಿಂದಗಿ(Sindagi) ತಾಲೂಕಿನ ಮಲಘಾಣ(Malaghan) ಗ್ರಾಮದಲ್ಲಿ(Village) ಆರಂಭವಾಗಿದೆ. ಮಲಘಾಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಆರಂಭವಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸ್ವೀಕರಿಸಿದ ಅರ್ಜಿಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಇಂಡಿ ಉಪವಿಭಾಗ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ದೇಶ ಕುರಿತು ಮಾಹಿತಿ ನೀಡಿದರು. ಜಿ. ಪಂ. ಮುಖ್ಯ ಕಾರ್ಯ ನಿರ್ವಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, […]