Datti Upanyas: ಶರಣರ ಆಶಯದಂತೆ ಬದುಕು ರೂಪಿಸಿಕೊಳ್ಳಿ-ರಾಜೇಂದ್ರಕುಮಾರ ಬಿರಾದಾರ

ವಿಜಯಯಪುರ: 12ನೇ ಶತಮಾನ ಬದಲಾವಣೆಯ ಯುಗ.  ಕ್ರಾಂತಿಯ ಪರ್ವ.  ಅಂದಿನ ಶರಣರು ಮಾಡಿದ ಮಹಾಕಾರ್ಯಗಳನ್ನು ಶಿಲಾಲಿಪಿಗಳಲ್ಲಿ ಬರೆಸಲಿಲ್ಲ.  ಇತಿಹಾಸವನ್ನು ರಚಿಸಲಿಲ್ಲ.  ಆದರೆ ಅಂದಿನ ಕ್ರಾಂತಿಗೆ ಶರಣ-ಶರಣೆಯರು ರಚಿಸಿದ ವಚನಗಳೇ ಎಲ್ಲದಕ್ಕೂ ಆಧಾರ ಮತ್ತು ನಂತರ ಕವಿ, ಸಾಹಿತಿಗಳ ರಚಿಸಿದ ಕಾವ್ಯಗಳು ಸಹ ಉಪಯುಕ್ತ ಮಾಹಿತಿಯಾಗಿದೆ ಎಂದು ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆ ಹಾಗೂ ದರ್ಬಾರ ಕಲಾ, ವಾಣಿಜ್ಯ, ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಶರಣೆ ಅಕ್ಕ […]