ವಿಜಯಪುರ ಹೊಸ ಡಿಸಿ ವಿಜಯಮಹಾಂತೇಶ ಬಿ.‌ದಾನಮ್ಮನವರ ಅಧಿಕಾರ ಸ್ವೀಕಾರ- ಶುಭ ಕೋರಿದ ನಿರ್ಗಮಿತ ಡಿಸಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ(Vijayapura) ನೂತನ‌(New) ಜಿಲ್ಲಾಧಿಕಾರಿಯಾಗಿ(Deputy Commissioner) ವಿಜಯಮಹಾಂತೇಶ ಬಿ. ದಾನಮ್ಮನವರ+Vijayamahantesh B. Danammanavar) ಅಧಿಜಾರ ಸ್ವೀಕರಿಸಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರ ಹಸ್ತಾಂತರಿಸಿದರು. ಪಿ. ಸುನೀಲ ಕುಮಾರ ಅವರು ವಿಜಯಪುರ ಜಿಲ್ಲಾಧಿಕಾರಿಯಾಗಿ ಸುಮಾರು ಒಂದು ವರ್ಷ ಎಂಟು ತಿಂಗಳು ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಮುಂದೆ ವಿಜಯಮಹಾಂತೇಶ ಬಿ. ದಾನಮ್ಮನವರ ವಿಜಯಪುರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಯುಕ್ರೇನ್ ಯುದ್ಧ ಹಿನ್ನೆಲೆ- ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಸಹಾಯವಾಣಿ ತೆರೆದ ವಿಜಯಪುರ ಜಿಲ್ಲಾಡಳಿತ

ವಿಜಯಪುರ: ಯುಕ್ರೆನ್ ವಿರುದ್ಧ ರಷ್ಯಾ ಯುದ್ಧ ಸಾರಿದೆ‌. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ. ಉಕ್ರೇನ್ ದೇಶದಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ವಾಸವಾಗಿರುವ ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಭಾರತದ ಪ್ರಜೆಗಳ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ. ಉಕ್ರೇನ್ ನಲ್ಲಿ ವಾಸವಿರುವ ವಿಜಯಪುರ ಜನರ ಮಾಹಿತಿಯನ್ನು ನೀಡಲು ಮತ್ತು ಪಡೆಯಲು ವಿಜಯಪುರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ. ಕಂಟ್ರೋಲ್ ರೂಂ.ಸಂಖ್ಯೆ-1077 ಮತ್ತು 08352-221261 ಹಾಗೂ ರಾಕೇಶ್ ಜೈನಾಪುರ ಅವರ ಮೊಬೈಲ್ – […]

ದ್ರಾಕ್ಷಿ ನಾಡು ತಿಕೋಟಾ ತಾಲೂಕು, ವಿಜಯಪುರ ನಗರದ ನಾನಾ ಕಡೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ, ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ವಿಜಯಪುರ ಜಿಲ್ಲೆಯ ದ್ರಾಕ್ಷಿ ನಾಡು ತಿಕೋಟಾ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.    ತಿಕೋಟಾ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಕಂದಾಯ ಇಲಾಖೆಯ ಸಂಬಂಧಪಟ್ಟ ನಾನಾ ಕೆಲಸ ಕಾರ್ಯಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು.  ತಿಕೋಟಾದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಾಮಗಾರಿಯನ್ನು ವೀಕ್ಷಿ,ಸಿದರು. ಕನಮಡಿ ಗ್ರಾಮದಲ್ಲಿ 2016-17 ನೇ ಆರ್ಥಿಕ ವರ್ಷದಲ್ಲಿ ಎಸ್ಟಿ ಸಮುದಾಯದ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು […]

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ- ಪರಿಣಾಮಕಾರಿ ಆಯೋಜಿಸಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ: ವಿಜಯಪುರ{(Vijayapura) ಜಿಲ್ಲಾದ್ಯಂತ ಫೆ.27 ರಿಂದ ಮಾ. 2ರ ವರೆಗೆ ಪಲ್ಸ್ ಪೋಲಿಯೋ(Pulse) Polio) ಲಸಿಕಾ(Vaccination) ಕಾರ್ಯಕ್ರಮವನ್ನು(Programme) ಪರಿಣಾಮಕಾರಿ ಹಾಗೂ ಯಶಸ್ವಿಯಾಗಿ ಆಯೋಜಿಸುವ ಮೂಲಕ ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ(DC) ಪಿ. ಸುನೀಲ ಕುಮಾರ(Similar Kumar) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪಲ್ಸ್ ಪೋಲಿಯೋ, ಇಂದ್ರಧನುಷ್ ಐಎಮ್ಐ 4.0 ಲಸಿಕಾ ಕಾರ್ಯಕ್ರಮದ ಜಿಲ್ಲಾ ಟಾಸ್ಕ್ ಫೋರ್ಸ್ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪಲ್ಸ್ […]

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಿಂದಗಿ ತಾಲೂಕಿನ ಮಲಘಾಣದಲ್ಲಿ ಕಾರ್ಯಕ್ರಮ ಆರಂಭ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವಿಜಯಪುರ(Vijayapura District) ಜಿಲ್ಲೆಯ ಸಿಂದಗಿ(Sindagi) ತಾಲೂಕಿನ ಮಲಘಾಣ(Malaghan) ಗ್ರಾಮದಲ್ಲಿ(Village) ಆರಂಭವಾಗಿದೆ. ಮಲಘಾಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಆರಂಭವಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸ್ವೀಕರಿಸಿದ ಅರ್ಜಿಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಇಂಡಿ ಉಪವಿಭಾಗ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ದೇಶ ಕುರಿತು ಮಾಹಿತಿ ನೀಡಿದರು. ಜಿ. ಪಂ. ಮುಖ್ಯ ಕಾರ್ಯ ನಿರ್ವಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, […]