Monsoon Festivals: ವಿಜಯಪುರ ಜಿಲ್ಲೆಯಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ ಗೋಂಧಳಿ ಸಮಾಜದ ದುರ್ಗಾದೇವಿ ಜಾತ್ರೆ ಬಲು ಅಂದ

ವಿಜಯಪುರ: ಮುಂಗಾರು ಆರಂಭವಾದರೆ ಸಾಕು ಬಸವ ನಾಡು ವಿಜಯಪುರದಲ್ಲಿ ಸಾಲು ಸಾಲು ಹಬ್ಬಗಳು ಒಂದೊಂದಾಗಿಯೇ ಬರುತ್ತವೆ.  ಇಲ್ಲಿನ ಜನರೂ ಅಷ್ಟೇ, ಈ ಹಬ್ಬಗಳನ್ನು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸುತ್ತಾರೆ.  ಬಹುಷಃ ಇಡೀ ಕರ್ನಾಟಕದಲ್ಲಿ ವರ್ಷವಿಡೀ ಪ್ರತಿದಿನ ಒಂದಿಲ್ಲೋಂದು ಊರಲ್ಲಿ ಆಚರಣೆ, ಉತ್ಸವ, ಜಾತ್ರೆ ನಡೆಯುವ ಜಿಲ್ಲೆ ಎಂದರೆ ಅದು ವಿಜಯಪುರ ಎಂಬ ಮಾತಿದೆ.  ಅದಕ್ಕೆ ತಕ್ಕಂತೆ ಇಲ್ಲಿ ಆಚರಣೆಗಳೂ ನಡೆಯುವೆ.  ಆಷಾಢ ಮಾಸ ಆರಂಭವಾಗುತ್ತಿದ್ದಂತೆ ದೇವತೆಗಳ ಜಾತ್ರೆಗಳು ಸಾಲು ಸಾಲಾಗಿ ಬರುತ್ತವೆ.  ದುರ್ಗಾದೇವಿ, ಮರಗಮ್ಮ, ಹುಲಿಗೆಮ್ಮ, ಕೊಂತೆಮ್ಮ […]