Earthquake Damage: ಭೂಕಂಪನ ಎಫೆಕ್ಟ್- ಬತ್ತಿದ ಭಾವಿ, ತಿಕೋಟಾ, ಇಂಡಿ ತಾಲೂಕುಗಳಲ್ಲಿ 48 ಮನೆಗಳಿಗೆ ಹಾನಿ
ವಿಜಯಪುರ: ಬೆಳಿಗ್ಗೆ ಸಂಭವಿಸಿದ ಭೂಕಂಪನ ದಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಇಂಡಿ ತಾಲೂಕುಗಳಲ್ಲಿ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ತಿಕೋಟಾ ತಾಲೂಕಿನ ಅರಕೇರಿ ಮತ್ತು ಅರಕೇರಿ ತಾಂಡಾಗಳಲ್ಲಿ ಭೂಕಂಪನದಿಂದ ಹಾನಿಯಾಗಿದೆ. ಹಿರಿಯ ಭೂ ವಿಜ್ಞಾನಿ, ತಿಕೋಟಾ ಕಂದಾಯ ನಿರೀಕ್ಷಕರು ಮತ್ತು ಅರಕೇರಿ ಗ್ರಾಮ ಲೆಕ್ಕಾಧಿಕಾರಿ ಅವರು ತಹಸೀಲ್ದಾರ ಅವರ ಸಮ್ಮುಖದಲ್ಲಿ ಜಂಟಿಯಾಗಿ ಹಾನಿಯಾದ ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಅರಕೇರಿ ಮತ್ತು ಅರಕೇರಿ ತಾಂಡಾದಲ್ಲಿ ಎರಡು ಹಳೆಯ ಮನೆಗಳ ಹಿಂಭಾಗದ ಭಾಗವು […]
Earthquake DC: ವಿಜಯಪುರ ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ: ಭಯಭೀತರಾಗದಂತೆ ಸಾರ್ವಜನಿಕರಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನವಿ
ವಿಜಯಪುರ: ಜಿಲ್ಲೆಯ ಕನ್ನೂರ ಸೇರಿದಂತೆ ನಾನಾ ಕಡೆ ಬೆಳಿಗ್ಗೆ ಸಂಭವಿಸಿದ 4.4 ತೀವ್ರತೆಯ ಲಘು ಭೂಕಂಪನ ಕುರಿತು ಖಚಿತ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಭಯಪಡಬಾರದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. ಭೂಕಂಪನದ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರ ಬೆಂಗಳೂರಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಭೂಕಂಪನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪ್ರದೇಶದ ಗಡಿ ಪ್ರದೇಶದ ವಿವಿಧೆಡೆ ಈ ಲಘು ಭೂಕಂಪನ ಸಂಭವಿಸಿದೆ. ಜುಲೈ 9ರಂದು ಬೆಳಗಿನ 6.22ರ ಸುಮಾರಿನ […]
ಬಸವ ನಾಡಿನಲ್ಲಿ ಮತ್ತೆ ಕಂಪಿಸಿದ ಭೂಮಿ- ಎಲ್ಲಿ? ಎಷ್ಟು ತೀವ್ರತೆ? ಯಾವಾಗ ಗೊತ್ತಾ?
ವಿಜಯಪುರ: ಬಸವ(Basava) (ನಾಡು) ವಿಜಯಪುರ(vijayapura) ಜಿಲ್ಲೆಯಲ್ಲಿ(District) ಮತ್ತೆ ಲಘು(Mild) ಭೂಕಂಪದ(Earthquake) ಅನುಭವವಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದರ ಅನುಭವವಾಗಿದೆ. ಉಕ್ಕಲಿ ಗ್ರಾಮದ ಬಸವೇಶ್ವರ ನಗರದ ಉತ್ತರಪೂರ್ವ ಭಾಗದಲ್ಲಿ 1.3 ಕಿ. ಮೀ. ದೂರದಲ್ಲಿ ಈ ಭೂಕಂಪದ ಕೇಂದ್ರ ದಾಖಲಾಗಿದೆ. ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ. ಶನಿವಾರ ರಾತ್ರಿ 7.50 ನಿಮಷಕ್ಕೆ ಲಘು ಭೂಕಂಪವಾಗಿದ್ದು, ಭೂಮಯಿ 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ಅದರ ಅನುಭವ ಉಕ್ಕಲಿ ಮತ್ತು ಇತರ […]
ಬಸವ ನಾಡಿನಲ್ಲಿ ಭೂಕಂಪ ಪ್ರಕರಣ- ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲು- ಕೇಂದ್ರ ಬಿಂದು ಎಲ್ಲಿ? ಎಷ್ಟು ಆಳದಲ್ಲಿ ಗೊತ್ತಾ?
ವಿಜಯಪುರ: ಬಸವನ ನಾಡು(Basacanadu) ವಿಜಯಪುರ(Vijayapura) ಜಿಲ್ಲೆಯ(District) ಕೆಲವು ಭಾಗಗಳಲ್ಲಿ( ಭೂಮಿ ಕಂಪಿಸಿದ(Earthquake) ಅನುಭವವಾಗಿದೆ. ಈ ಭೂಕಂಪದ ತೀವ್ರತೆ ಮತ್ತು ಕೇಂದ್ರ ಬಿಂದು ರಾಜ್ಯ ವಿಪತ್ತು ನಿರ್ವಹಣೆ ಕೇಂದ್ರದಲ್ಲಿ(Epicentre) ದಾಖಲಾಗಿದೆ. ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಈ ಭೂಕಂಪದ ಕೇಂದ್ರ ಬಿಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಶ್ಚಿಮೋತ್ತರ ಭಾಗದಲ್ಲಿ ಪತ್ತೆಯಾಗಿದೆ. ಭೂಮಿಯಿಂದ ಸುಮಾರು 10 ಕಿ. ಮೀ. ಆಳದಲ್ಲಿ […]
ಕೈ ಬಳೆ ಒಡೆದಾವು… ಕಣ್ಣೀರು ಉದಿರಾವು… ಕಲಿಪುರುಷನ ಆಟ ಬಹಳ ಕೆಟ್ಟದಾಗಿದೆ ಎಂದು ಭವಿಷ್ಯ ನುಡಿದ ಹೊಳೆಬಬಲಾದಿ ಸದಾಶಿವ ಮಠದ ಕಾರ್ಣಿಕ
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮಠದ ಕಾರ್ಣಿಕ ನುಡಿದರುವ ಭವಿಷ್ಯ ಮತ್ತೆ ಜನರನ್ನು ಸಂತಸ ಮತ್ತು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಡೆಯುವ ಜಾತ್ರೆಯ ಅಂಗವಾಗಿ ಕಾರ್ಣಿಕ ಪ್ರತಿವರ್ಷ ಕಾಲಜ್ಞಾನದ ಹೊತ್ತಿಗೆ ಹೊತ್ತಿಗೆಯಲ್ಲಿರುವ ಭವಿಷ್ಯವಾಣಿಯನ್ನು ಪ್ರತಿ ವರ್ಷ ಒಂದೊಂದು ಪುಟ ತೆರೆದು ಹೇಳುವುದು ಗಮನಾರ್ಹವಾಗಿದೆ. ಈ ಕಾರ್ಣಿಕ ಇದುವರೆಗೆ ನುಡಿದಿರುವ ಎಲ್ಲ ಭವಿಷ್ಯಗಳು ನಿಜವಾಗಿವೆ. ಕೊರೊನಾ, ಭೂಕಂಪ, ಅಗ್ನಿ ಅನಾಹುತ, ಯುದ್ಧ, ಅತೀವೃಷ್ಠಿ, ಜಲಪ್ರಳಯ ಕುರಿತು ನುಡಿದ […]