Commercial Crop: ವಾಣಿಜ್ಯ ಬೆಳೆಗೆ ಆದ್ಯತೆ ನೀಡಲು ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಸಲಹೆ

ವಿಜಯಪುರ: ವಾಣಿಜ್ಯ ಬೆಳೆಗಳಾದ(Commercial Crop) ಲಿಂಬೆ(Lemon), ದಾಳಿಂಬೆ(Pomegranate), ಸೀತಾಫಲ(Custard Apple), ದ್ರಾಕ್ಷಿಯಂತಹ(Grapes) ಬೆಳೆಗಳನ್ನು ಹೆಚ್ಚಾಗಿ ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ವಿ.ಕತ್ತಿ ರೈತರಿಗೆ ಸಲಹೆ ನೀಡಿದ್ದಾರೆ. ವಿಜಯಪುರ ನಗರದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಲಿಂಬೆ ಉತ್ಸವ-2022 ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು […]

ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ

ಮಹೇಶ ವಿ. ಶಟಗಾರ ವಿಜಯಪುರ: ಒಣಗಿ ಹೋಗಿರುವ ಭೂಮಿ.  ಅಲ್ಲಲ್ಲಿ ಸೀಳಿದಂತೆ ಕಾಣುವ ಮಣ್ಣಿನ ದೃಶ್ಯಗಳು.  ಇವು ಯಾವುದೇ ಕೆರೆ ಅಥವಾ ಭಾವಿಯದಲ್ಲ.  ಇಲ್ಲಿಗೆ ಬಂದರೆ ಸಾಕು ಸಾಲು ಸಾಲಾಗಿ ಅಗೆಯಲಾಗಿರುವ ಕುಣಿಗಳು ಅಂದರೆ ಸಣ್ಣ ಸಣ್ಣ ಖಡ್ಡಾಗಳು ಕಾಣಿಸುತ್ತವೆ.  ಆ ಕುಣಿಗಳಲ್ಲಿ ಇಳಿಬಿಟ್ಟಿರುವ ಪೈಪುಗಳು, ಅವುಗಳ ಅಣತಿ ದೂರದಲ್ಲಿರುವ ಪಂಪಸೆಟ್ ಗಳು ಇಲ್ಲಿನ ಸಧ್ಯದ ಪರಿಸ್ಥಿತಿಯನ್ನು ತೆರೆದಿಡುತ್ತಿವೆ. ಮೇಲ್ಗಡೆ ಸೂರ್ಯನ ಪ್ರಖರ ಬಿಸಿಲು, ಕುಣಿಯ ಒಳಗೆ ಕಾಣುವ ಅಲ್ಪಸ್ವಲ್ಪ ನೀರು.  ಆ ನೀರನ್ನೇ ವಿದ್ಯುತ್ ಬಂದಾಗ […]