Ukraine Students: ಪೋಷಕರಿಂದ ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಆಕ್ರೋ಼ಶ- ಯಾಕೆ ಗೊತ್ತಾ?

ವಿಜಯಪುರ: ರಷ್ಯಾ ಸಮರ ಸಾರಿದ ಹಿನ್ನೆಲೆಯಲ್ಲಿ ಉಕ್ರೇನಿನಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಈಗಾಗಾಲೇ ತಾಯ್ನಾಡಿಗೆ ಮರಳಿದ್ದಾರೆ. ಇವದನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನ ತಮಗೆಲ್ಲ ಗೊತ್ತೆ ಇದೆ. ಅಂದು ಅತಂತ್ರರಾಗಿ ಭಾರತಕ್ಕೆ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬಸವ ನಾಡು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಕೇಂದ್ರ ಅಧ್ಯಯನ ಮಾಡಿಕೊಡುವ ಮೂಲಕ ಈ ರೀತಿ ಸ್ಪಂದಿಸಿದ […]

ಪ್ರಧಾನಿಗೆ ಪತ್ರ ಬರೆದ ಎಂ. ಬಿ. ಪಾಟೀಲ-ಉಕ್ರೇನಿನಿಂದ ಮರಳಿರುವ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹ

ವಿಜಯಪುರ: ಯುದ್ಧಪೀಡಿತ(War Hit) ಉಕ್ರೇನಿನಿಂದ(Ukraine) ಸ್ವದೇಶಕ್ಕೆ ಹಿಂತಿರುಗಿರುವ(Returned) ವೈದ್ಯಕೀಯ ವಿದ್ಯಾರ್ಥಿಗಳMedical Students) ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ(Prime Minister Narendra Midi) ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಅವರು ಪತ್ರ ಬರೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಯುದ್ಧ ಪೀಡಿತ ಉಕ್ರೇನಿನಿಂದ ಸ್ವದೇಶಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಬಗೆ ಹರಿಸುವಂತೆ ಕೋರಿ […]

ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ನಾನಾ ಸ್ವಾಮೀಜಿಗಳು

ವಿಜಯಪುರ: 11 ಜನ ಸ್ವಾಮೀಜಿಗಳು(11 Swamijis) ರಕ್ತದಾನ(Blood Donated) ಮಾಡುವ ಮೂಲಕ ಮನುಕುಲಕ್ಕೆ(Mankind) ಒಳಿತಾಗುವ(Help) ಉತ್ತಮ ಸಂದೇಶ(Good Message) ನೀಡಿದ್ದಾರೆ.  ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 11 ಜನ ಸ್ವಾಮೀಜಿಗಳು ಮತ್ತು 76 ಜನ ಸಾರ್ವಜನಿಕರು ಕೂಡ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ವಿಜಯಪುರದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ವಿಜಯಪುರದ ಬಿ ಎಲ್ […]

ಮಗನ ಚಿಕಿತ್ಸೆಗಾಗಿ ಮತಾಂತರಕ್ಕೆ ಮುಂದಾದ ಬಸವ ನಾಡಿನ ದಂಪತಿ- ಇವರಿಗೆ ಸಹಾಯ ಮಾಡಬೇಕಾದರೆ ಇಲ್ಲಿದೆ ಮಾಹಿತಿ

ವಿಜಯಪುರ: ಈ ಕುಟುಂಬಕ್ಕೆ(Family) ಬಡತನ(Poverty) ಎಂಬುದು ಶಾಪವಾಗಿ ಪರಿಣಮಿಸಿದೆ.  ಇದರಿಂದ ಬೇಸತ್ತ ದಂಪತಿ(Couple) ಪರಿಪರಿಯಾಗಿ ನೆರವು(Help) ಕೇಳಿದರೂ(Requedt) ಸ್ಪಂದಿಸದ ಹಿನ್ನೆಲೆಯಲ್ಲಿ ಈಗ ಕೈಗೊಂಡಿರವವ ನಿರ್ಧಾರ(Decision) ಎಂಥವರ ಮನಸ್ಸನ್ನೂ ಮರಗಿಸುವಂತಿದೆ.  ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ  ಈರಣ್ಣ ನಾಗೂರ ಮತ್ತು ಸವಿತಾ ನಾಗೂರ ಕುಟುಂಬದ ಹೃದಯವಿದ್ರಾವಕ ಸ್ಟೋರಿ.  ಸಂತೋಷವಾಗಿರಬೇಕಿರುವ ಕುಟುಂಬವಿಗ ತಮ್ಮ ಮಗುವಿನ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಯಾರು ತಮಗೆ ಸಹಾಯ ಮಾಡುತ್ತಾರೋ ಅವರ ಧರ್ಮಕ್ಕೆ ಮತಾಂತರವಾಗಲು ಮುಂದಾಗಿದೆ. ಈರಣ್ಣ ನಾಗೂರ ಢಾಭಾವೊಂದರಲ್ಲಿ ಸಪ್ಲೈಯರ್ ಆಗಿ […]

ಆಧುನಿಕ ಭಗೀರಥನ ಸಹಾಯ ಹಸ್ತ- ನನಸಾಗುತ್ತಿದೆ ವೈದ್ಯನಾಗುವ ಕಡುಬಡವ ವಿದ್ಯಾರ್ಥಿಯ ಕನಸು

ವಿಜಯಪುರ: ಆಧುನಿಕ ಭಗೀರಥ(Adhunika Bhagiratha), ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(Campaign Committee Chairman) ಎಂ. ಬಿ. ಪಾಟೀಲ(M B Patil) ಬಡವರಿಗೆ ಸಹಾಯ ಹಸ್ತ(Help) ಚಾಚುವಲ್ಲಿ ಸದಾ ಸಿದ್ಧಹಸ್ತರು.  ಕಳೆದ ಹಲವು ದಿನಗಳ ಹಿಂದೆ ನೀಟ್ ಪಾಸಾಗಿ ಎಂಬಿಬಿಎಸ್ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರಿಗೆ ಅವರು ಕೋರ್ಸ್ ಮುಗಿಸುವ ತನಕ ಪೂರ್ಣ ಆರ್ಥಿಕ ನೆರವನ್ನು ನೀಡುವ ಮೂಲಕ ಜಗಮೆಚ್ಚುವ ಕೆಲಸ ಮಾಡಿದ್ದರು. ಎಂ. ಬಿ. ಪಾಟೀಲ ಈಗ […]

ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ನೀಡುವ ಬಜೆಟ್- ಗೋವಿಂದ ಕಾರಜೋಳ

ಬೆಂಗಳೂರು: ಗ್ರಾಮೀಣ ಕರ್ನಾಟಕಕ್ಕೆ ಅರ್ಥಚೈತನ್ಯ ತುಂಬುವ ಗಟ್ಟಿ ಧ್ವನಿ ಈ ಮುಂಗಡ ಪತ್ರ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ಇಂದಿನ ಮುಂಗಡ ಪತ್ರ ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಗ್ರಾಮೀಣ ಕರ್ನಾಟಕದ ಉದ್ಯಮಗಳಾದ ಹೈನೋದ್ಯಮ, ಮತ್ಸ್ಯೋದ್ಯಮ ಮುಂತಾದ ಉದ್ಯಮಗಳ ಆರ್ಥಿಕ ಸಬಲೀಕರಣಕ್ಕೆ ಈ ಬಜೆಟ್ ನಾಂದಿ […]

ಉಕ್ರೇನಿನಿಂದ ಬರುವ ಕನ್ನಡಿಗರನ್ನು ಅವರವರ ಊರುಗಳಿಗೆ ಕಳುಹಿಸಲು ನೆರವು- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಂಬೈ ಅಥವಾ ದಿಲ್ಲಿಗೆ ರಾತ್ರಿ ಉಕ್ರೇನಿನಿಂದ ಆಗಮಿಸಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆ ತಂದು ಅವರವರ ಊರುಗಳಿಗೆ ಕಳುಹಿಸಲು ಸಹಾಯ ಸಹಕಾರವನ್ನು ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ದಿಲ್ಲಿಯಲ್ಲಿರುವ ಮುಖ್ಯ ಆಯುಕ್ತರಿಗೂ ಉಕ್ರೇನಿನಿಂದ ಬರುವವರಿಗೆ ಸಾರಿಗೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ. ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ನನಡೆಸಿರುವ ಯುದ್ಧದಲ್ಲಿ ಉಕ್ರೇನಿನಿಂದ ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಬಗ್ಗೆ ಶುಕ್ರವಾರ ಕೇಂದ್ರ ವಿದೇಶಾಂಗ […]

ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ

ಮಹೇಶ ವಿ. ಶಟಗಾರ ವಿಜಯಪುರ: ಒಣಗಿ ಹೋಗಿರುವ ಭೂಮಿ.  ಅಲ್ಲಲ್ಲಿ ಸೀಳಿದಂತೆ ಕಾಣುವ ಮಣ್ಣಿನ ದೃಶ್ಯಗಳು.  ಇವು ಯಾವುದೇ ಕೆರೆ ಅಥವಾ ಭಾವಿಯದಲ್ಲ.  ಇಲ್ಲಿಗೆ ಬಂದರೆ ಸಾಕು ಸಾಲು ಸಾಲಾಗಿ ಅಗೆಯಲಾಗಿರುವ ಕುಣಿಗಳು ಅಂದರೆ ಸಣ್ಣ ಸಣ್ಣ ಖಡ್ಡಾಗಳು ಕಾಣಿಸುತ್ತವೆ.  ಆ ಕುಣಿಗಳಲ್ಲಿ ಇಳಿಬಿಟ್ಟಿರುವ ಪೈಪುಗಳು, ಅವುಗಳ ಅಣತಿ ದೂರದಲ್ಲಿರುವ ಪಂಪಸೆಟ್ ಗಳು ಇಲ್ಲಿನ ಸಧ್ಯದ ಪರಿಸ್ಥಿತಿಯನ್ನು ತೆರೆದಿಡುತ್ತಿವೆ. ಮೇಲ್ಗಡೆ ಸೂರ್ಯನ ಪ್ರಖರ ಬಿಸಿಲು, ಕುಣಿಯ ಒಳಗೆ ಕಾಣುವ ಅಲ್ಪಸ್ವಲ್ಪ ನೀರು.  ಆ ನೀರನ್ನೇ ವಿದ್ಯುತ್ ಬಂದಾಗ […]