ಯುದ್ಧ ಪೀಡಿತ ಉಕ್ರೇನಿನಿಂದ ವಾಪಸ್ಸಾದ ಬಸವ ನಾಡಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ಎಂ. ಬಿ. ಪಾಟೀಲ

ವಿಜಯಪುರ: ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ(M B Patil) ಇತ್ತೀಚೆಗಷ್ಟೇ ಇಬ್ಬರು ಎಂಬಿಬಿಎಸ್ ಮತ್ತು ಓರ್ವ ಬಿಎಎಂಎಸ್ ವಿದ್ಯಾರ್ಥಿಗಳು(MBBS Students) ಪ್ರವೇಶ ಮತ್ತು ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ನೆರವಿನ ಸಹಾಯ ಹಸ್ತ ಚಾಚಿದ್ದರು.  ಈಗ ಇದೇ ಎಂ. ಬಿ. ಪಾಟೀಲ ಮತ್ತೋಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ.  ಯುದ್ಧ ಪೀಡಿತ(War Hit) ಉಕ್ರೇನಿನಿಂದ ಮರಳಿರುವ(Ukraine Returned) ವಿಜಯಪುರ ಜಿಲ್ಲೆಯ 16 ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ(Medical Students) ನೆರವಿಗೆ […]

ಉಕ್ರೇನಿನಲ್ಲಿ ಬಾಕಿ ಉಳಿದಿದ್ದ ಬಸವ ನಾಡಿನ ನಾಲ್ಕು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮನ

ಬೆಂಗಳೂರು: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ವಿಜಯಪುರ ಜಿಲ್ಲೆಯ(Vijayapura District) ಉಳಿದ(Remaining) ನಾಲ್ಕು ಜನ ವಿದ್ಯಾರ್ಥಿಗಳು(Four Students) ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಾಲ್ಕೂ […]

ವಿಶ್ವವಿದ್ಯಾಲಯ ಮಾತ್ರವಲ್ಲ ಖಾರ್ಕಿವ್ ನಲ್ಲಿ ಎಲ್ಲ ನಾಶವಾಗಿದೆ- ಮನೆಗೆ ಬಂದ ಸಂತಸದ ಮಧ್ಯೆಯೂ ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ

ಮಹೇಶ ವಿ. ಶಟಗಾರ ವಿಜಯಪುರ: ಮಗಳು(Daughter) ಮನೆಗೆ ಬಂದಿದ್ದೆ ತಡ ಬಿಗಿದಪ್ಪಿಕೊಂಡ ಪೋಷಕರು(Parents Hugged) ಮುದ್ದಾಡಿ ದೇವರಿಗೆ ಧನ್ಯವಾದ(Thanked God) ತಿಳಿಸಿದರು.  ತಮ್ಮ ಮಗಳು ಸುರಕ್ಷಿತವಾಗಿ(Safely) ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi), ನಗರದ ನಾನಾ ಸಮುದಾಯದ(Various Community) ಜನರ ಪ್ರಾರ್ಥನೆಗಳು(Prayers) ಕಾರಣ ಎಂದು ಭಾವುಕರಾದರು. ಇದು ಯುದ್ಧ ಪೀಡಿತ ಉಕ್ರೇನಿನಲ್ಲಿ ಬಂಕರಿನಲ್ಲಿ ಐದು ದಿನ ಆತಂಕದಲ್ಲಿಯೇ ಕಳೆದು ಅಂತೂ ಇಂತೂ ರೈಲು ಹಿಡಿದು ಪೋಲಂಡ ತಲುಪಿ ಸುರಕ್ಷಿತವಾಗಿ ಬಸವ ನಾಡು ತಲುಪಿದ ವೈದ್ಯಕೀಯ […]

ಉಕ್ರೇನಿನಿಂದ ಸುರಕ್ಷಿತವಾಗಿ ಬಸವ ನಾಡು ತಲುಪಿದ ವಿವಿಧಾ ಮಲ್ಲಿಕಾರ್ಜುನಮಠ ಗೆ ನಾಗರಿಕರಿಂದ ಸನ್ಮಾನ

ವಿಜಯಪುರ: ಉಕ್ರೇನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಅತಂತ್ರರಾಗಿದ್ದ ವಿದ್ಯಾರ್ಥಿಗಳಲ್ಲಿ ಓರ್ವರಾದ ವಿಜಯಪುರ ನಗರದ ವಿವಿಧಾ ಮಲ್ಲಿಕಾರ್ಜುನಮಠ ಈಗ ಸುರಕ್ಷಿತವಾಗಿ ತವರು ಜಿಲ್ಲೆ  ತಲುಪಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಹುಂಡೈ ಶೋರೂಂ ಬಳಿ ವಿವಿಧಾ ಮಲ್ಲಿಕಾರ್ಜುನಮಠ ತನ್ನ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಮ್ಮ ಜೈವಿಹಾನ ಮಲ್ಲಿಕಾರ್ಜುನಮಠ ಜೊತೆ ಆಗಮಿಸಿದಾಗ ಅಲ್ಲಿದ್ದ ಸ್ನೇಹಿತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸೋಮು ಸೂಳಿಭಾವಿ, ಸ್ನೇಹಿತರಾದ ಸಂಪತ ಕೋವಳ್ಳಿ, ಬಿಜೆಪಿ ಮಾಧ್ಯಮ ಪ್ರಮುಖ […]

ಉಕ್ರೇನಿನನಿಂದ ವಿಜಯಪುರ ಜಿಲ್ಲೆಯ 10 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್, 6 ಜನ ಇನ್ನೂ ಬರಬೇಕಿದೆ- ಡಿಸಿ ಪಿ ಸುನಿಲಕುಮಾರ

ವಿಜಯಪುರ: ಯುದ್ಧಪೀಡಿತ ಯುಕ್ರೇನಿನಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆಯ ಒಟ್ಟು 16 ವಿದ್ಯಾರ್ಥಿಗಳಲ್ಲಿ 10 ಜನರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನಿಲಕುಮಾರ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಇಬ್ಬರು ವಿದ್ಯಾರ್ಥಿಗಳು ಬುಡಾಪೆಸ್ಟ್ ವಿಮಾನ ನಿಲ್ದಾಣದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ನಾಲ್ಕು ಜನ ವಿದ್ಯಾರ್ಥಿಗಳು ಉಕ್ರೇನಿನಿಂದ ರೊಮೇನಿಯಾ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ ರೊಮೇನಿಯ ತಲುಪಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.

ಯುದ್ಧ ಪೀಡಿತ ಉಕ್ರೇನಿನಿಂದ ಬಸವ ನಾಡಿಗೆ ಬಂದ ಮಗನನ್ನು ದೃಷ್ಠಿ ತೆಗೆದು ಸ್ವಾಗತಿಸಿದ ಪೋಷಕರು

ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(War Hit Ukraine) ಇನ್ನೂ ಹಲವಾರು ಭಾರತೀಯರು ಸಿಲುಕಿರುವ(Stranded) ಆತಂಕದ ಮಧ್ಯೆಯೇ ಉಕ್ರೇನಿನಿಂದ ವೈದ್ಯಕೀಯ ವಿದ್ಯಾರ್ಥಿಯೋರ್ವ(Medical Student) ಸುರಕ್ಷಿತವಾಗಿ(Safe) ತಾಯ್ನಾಡು ಬಸವ ನಾಡು(Basava Nadu) ತಲುಪಿದ್ದಾನೆ(Returned). ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್ ನಿಂದ ವಾಪಸ್ಸಾಗಿ ಸುರಕ್ಷಿತವಾಗಿ ಮನೆ ಸೇರಿದ್ದಾನೆ.  ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದ ಸಿದ್ದು ಪೂಜಾರಿ ಗ್ರಾಮಕ್ಕೆ ಬರುತ್ತಿದ್ದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾರ ಹಾಕಿದ ಪೋಷಕರು ಮತ್ತು ಸಂಬಂಧಿಕರು […]