Scouts And Guide Camp: ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸಲು ಸ್ಕೌಡ್ಸ್, ಗೈಡ್ಸ್ ಅಗತ್ಯವಾಗಿದೆ- ಸಹಜಾನಂದ ದಂಧರಗಿ

ವಿಜಯಪುರ: ಮಕ್ಕಳಲ್ಲಿ(Children) ಶಿಸ್ತು(Discipline) ಮತ್ತು ದೇಶಪ್ರೇಮ(Patriotism) ಮೂಡಿಸಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್(Scouts And Guides) ಅವಶ್ಯಕವಾಗಿದೆ ಎಂದು ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೋಶಾಧ್ಯಕ್ಷ ಸಹಜಾನಂದ ದಂದರಗಿ (Sahajanand Dandharagi) ಹೇಳಿದರು. ನಗರದ ಬಿ ಎಲ್ ಡಿ ಈ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಕಾಲೇಜು ಯುವ ರೆಡ್ ಕ್ರಾಸ್ ಘಟಕ ಹಾಗೂ ಏನ್ ಎಸ್ ಎಸ್ ಘಟಕದ ಅಡಿಯಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ ಆ್ಯಂಡ್ ಗೈಡ್ಸ್ ತರಬೇತಿ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ವರ್ಗಕೋಣೆಯು ನಮ್ಮ ಬದುಕಿನ ಒಂದು ಭಾಗವಾಗಬೇಕು.  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.  ಇಂದಿನ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬೆಳೆಸುವುದು ನಮ್ಮೆಲ್ಲರ ಗುರುತರ  ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಭಾರತಿ. ವೈ. ಖಾಸನೀಸ ಮಾತನಾಡಿ, ಶಿಕ್ಷಕರನ್ನು ಮಾನಸಿಕವಾಗಿ ಬಲಿಷ್ಟಗೊಳಿಸುವ ತರಬೇತಿ ಇದಾಗಿದೆ.  ಮಕ್ಕಳಿಗೆ ಹಲವಾರು ಚಟುವಟಿಕೆಗಳ ಕುರಿತು ತರಬೇತಿ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಮಕ್ಕಳನ್ನು ತರುವುದು […]

BJP: ಬಿಜೆಪಿಯ ಜನಪರ, ದೇಶಾಭಿಮಾನದ ನಿಲುವು ಜನರ ಮೆಚ್ಚುಗೆ ಗಳಿಸಲು ಕಾರಣವಾಗಿದೆ- ಚಂದ್ರಶೇಖರ ಕವಟಗಿ

ವಿಜಯಪುರ: ಬಿಜೆಪಿ(BJP) ಹೊಂದಿರುವ(Stand) ಜನಪರ(Public Oriented) ಮತ್ತು ದೇಶಾಭಿಮಾನದ(Patriotism) ನಿಲುವಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿಯತ್ತ ಒಲವು ಬೆಳೆಸಿಕೊಳ್ಳುವಂತೆ(Attracting People) ಮಾಡಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಹೇಳಿದ್ದಾರೆ. ವಿಜಯಪುರ ನಗರದ ಶುಭಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಈ ಮುಂಚೆ ಹೊಂದಿದ್ದ ಮತ ಗಕೆ ಪ್ರಮಾಣ ಶೇ.2 ರಿಂದ ಈಗ ಶೇ.38 ಕ್ಕೆ ಏರಿಕೆಯಾಗಿದೆ.  ಇದು ಗಮನಾರ್ಹವಾಗಿದ್ದು, ಶೇ.51 ರಷ್ಟು ಮತಗಳಿಕೆಗೆ ಗುರಿ ಹೊಂದಲಾಗಿದೆ […]