Earthquake DC: ವಿಜಯಪುರ ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ: ಭಯಭೀತರಾಗದಂತೆ ಸಾರ್ವಜನಿಕರಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮನವಿ

ವಿಜಯಪುರ: ಜಿಲ್ಲೆಯ ಕನ್ನೂರ ಸೇರಿದಂತೆ ನಾನಾ ಕಡೆ ಬೆಳಿಗ್ಗೆ ಸಂಭವಿಸಿದ 4.4 ತೀವ್ರತೆಯ ಲಘು ಭೂಕಂಪನ ಕುರಿತು ಖಚಿತ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಭಯಪಡಬಾರದು ಎಂದು ಜಿಲ್ಲಾಧಿಕಾರಿ  ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ. ಭೂಕಂಪನದ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರ ಬೆಂಗಳೂರಿನ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಭೂಕಂಪನ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ವಿಜಯಪುರ ಮತ್ತು ಮಹಾರಾಷ್ಟ್ರ ಪ್ರದೇಶದ ಗಡಿ ಪ್ರದೇಶದ ವಿವಿಧೆಡೆ ಈ ಲಘು ಭೂಕಂಪನ ಸಂಭವಿಸಿದೆ. ಜುಲೈ 9ರಂದು ಬೆಳಗಿನ 6.22ರ ಸುಮಾರಿನ […]

ಬಸವ ನಾಡಿನಲ್ಲಿ ಕಂಪಿಸಿದ ಭೂಮಿ- ಜನರಲ್ಲಿ ತಳಮಳ

ವಿಜಯಪುರ: ಬಸವನ ನಾಡು(Basacanadu) ವಿಜಯಪುರ(Vijayapura) ಜಿಲ್ಲೆಯ(District) ಕೆಲವು ಭಾಗಗಳಲ್ಲಿ(Some Srea) ಭೂಮಿ ಕಂಪಿಸಿದ(Earthquake) ಅನುಭವವಾಗಿದೆ. ಬೆ. 11:21ರ ಸುಮಾರಿಗೆ ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ನಾನಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದವರಿಗೂ ಇದು ಅನುಭವಕ್ಕೆ ಬಂದಿದೆ. ವಿಜಯಪುರ ಗ್ರಾಮೀಣ ಭಾಗದ ಜುಮನಾಳ, ಹೊನಗನಹಳ್ಳಿ ಮತ್ತಿತರ ಕಡೆಗಳಲ್ಲಿರುವ ಭೂಕಂಪದ ಅನುಭವವಾಗಿದ್ದು ಜನ ಹೊರಗಡೆ ಬಂದಿದ್ದಾರೆ. ಅಲ್ಲದೇ, ಅಕ್ಕಪಕ್ಕದವರ ಜೊತೆ ತಮ್ಮ‌ ಅನುಭವ ಹಂಚಿಕೊಂಡಿದ್ದಾರೆ. […]

ಉಕ್ರೇನಿನಿಂದ ಸುರಕ್ಷಿತವಾಗಿ ಬಸವ ನಾಡು ತಲುಪಿದ ವಿವಿಧಾ ಮಲ್ಲಿಕಾರ್ಜುನಮಠ ಗೆ ನಾಗರಿಕರಿಂದ ಸನ್ಮಾನ

ವಿಜಯಪುರ: ಉಕ್ರೇನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಅತಂತ್ರರಾಗಿದ್ದ ವಿದ್ಯಾರ್ಥಿಗಳಲ್ಲಿ ಓರ್ವರಾದ ವಿಜಯಪುರ ನಗರದ ವಿವಿಧಾ ಮಲ್ಲಿಕಾರ್ಜುನಮಠ ಈಗ ಸುರಕ್ಷಿತವಾಗಿ ತವರು ಜಿಲ್ಲೆ  ತಲುಪಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಹುಂಡೈ ಶೋರೂಂ ಬಳಿ ವಿವಿಧಾ ಮಲ್ಲಿಕಾರ್ಜುನಮಠ ತನ್ನ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಮ್ಮ ಜೈವಿಹಾನ ಮಲ್ಲಿಕಾರ್ಜುನಮಠ ಜೊತೆ ಆಗಮಿಸಿದಾಗ ಅಲ್ಲಿದ್ದ ಸ್ನೇಹಿತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸೋಮು ಸೂಳಿಭಾವಿ, ಸ್ನೇಹಿತರಾದ ಸಂಪತ ಕೋವಳ್ಳಿ, ಬಿಜೆಪಿ ಮಾಧ್ಯಮ ಪ್ರಮುಖ […]

ಬಸವ ನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ಶಿವಾರಾಧನೆ ಮಹಾಶಿವರಾತ್ರಿಗೆ ಹರಿದು ಬರುತ್ತಿರುವ ಜನಸಾಗರ

ವಿಜಯಪುjರ: ದೇಶಾದ್ಯಂತ ಪರಮಾತ್ಮ(Lord Shiva) ಆರಾಧನೆಯಾದ ಮಹಾ ಶಿವರಾತ್ರಿ(Maha Shivaratri) ಸಂಭ್ರಮ ಮನೆ ಮಾಡಿದೆ.  ಮಹಾ ಶಿವರಾತ್ರಿ ಅಂಗವಾಗಿ ಬಸವ ನಾಡು ವಿಜಯಪುರ(Vijayapura) ಜಿಲ್ಲೆಯಲ್ಲಿಯೂ ಭಕ್ತರು ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿ ಆಚರಣೆಯಲ್ಲಿ(Celebration) ತೊಡಗಿದ್ದಾರೆ. ವಿಜಯಪುರ ನಗರ ಮತ್ತು ಹೊರ ಭಾಗಗಳಲ್ಲಿರುವ ನಾನಾ ಶಿವನ ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರು ನಮನ ಸಲ್ಲಿಸುತ್ತಿದ್ದಾರೆ.  ವಿಜಯಪುರ ನಗರದಲ್ಲಿರುವ ಅಡವಿ ಶಂಕರಲಿಂಗ ದೇವಸ್ಥಾನ, 770 ಸುಂದರೇಶ್ವರ ದೇವಸ್ಥಾನ, ಲಿಂಗದ ಗುಡಿ, ನಾನಾ ಶಿವಾಲಯಗಳು, ಶಿವಗಿರಿಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ಬಿರು […]

ಉಕ್ರೇನ್ ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಮನವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಉಕ್ರೇನ್(Ukrain)ನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ(Center) ವಿದೇಶಾಂಗ(MEA) ಸಚಿವರಲ್ಲಿ(Minister) ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ(CM) ಬಸವರಾಜ ಬೊಮ್ಮಾಯಿ (Basavaraj Bommayi) ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಆರ್. ಟಿ. ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಬೆಳಿಗ್ಗೆ ಕೇಂದ್ರ ವಿದೇಶಾಂಗ ಸಚಿವರ ಜೊತೆ ಚರ್ಚಿಸಲಾಗಿದೆ.  ಕೇಂದ್ರ ಸರಕಾರ ಭಾರತೀಯರ ವಾಪಸಾತಿಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.  ವಿಮಾನಯಾನ ಸ್ಥಗಿತಗೊಂಡಿರುವ ಕಾರಣ ಭೂ ಸಾರಿಗೆ ಮೂಲಕ ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ.  ಉಕ್ರೇನ್ ನ […]

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ: ಸಿಂದಗಿ ತಾಲೂಕಿನ ಮಲಘಾಣದಲ್ಲಿ ಕಾರ್ಯಕ್ರಮ ಆರಂಭ

ವಿಜಯಪುರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವಿಜಯಪುರ(Vijayapura District) ಜಿಲ್ಲೆಯ ಸಿಂದಗಿ(Sindagi) ತಾಲೂಕಿನ ಮಲಘಾಣ(Malaghan) ಗ್ರಾಮದಲ್ಲಿ(Village) ಆರಂಭವಾಗಿದೆ. ಮಲಘಾಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಆರಂಭವಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಸ್ವೀಕರಿಸಿದ ಅರ್ಜಿಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಇಂಡಿ ಉಪವಿಭಾಗ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ದೇಶ ಕುರಿತು ಮಾಹಿತಿ ನೀಡಿದರು. ಜಿ. ಪಂ. ಮುಖ್ಯ ಕಾರ್ಯ ನಿರ್ವಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, […]