ಪ್ರಿಪೇರ್ ಎಜುಟೆಕ್: ಇಂಗ್ಲಿಷ್ ಕಷ್ಟ ಎನ್ನುವವರಿಗೆ ಕನ್ನಡದಲ್ಲಿಯೇ ಕಲಿಸುವ ತಾಣ
ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ ಕಷ್ಟಪಡುವುದುಂಟು. ಈ ಲೆಕ್ಚರರ್ ಕನ್ನಡದಲ್ಲಿ ಒಂದೂ ವರ್ಡ್ ಹೇಳೋದಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರು. ಕನ್ನಡ ವಿದ್ಯಾರ್ಥಿಗಳೇ ಭಯಬೇಡ ಆರಂಭಿಕ ಶಿಕ್ಷಣದಲ್ಲಿ […]