ಕನ್ಡಡ ಭಾಷೆಯಲ್ಲಿ ವೃತ್ತಿಪರ ಕೋರ್ಸುಗಳನ್ನು ಸೃಷ್ಠಿಸಿ ಉದ್ಯೋಗದಲ್ಲಿ ಶೇ. 5 ರಷ್ಟು ಮೀಸಲಾತಿ ನೀಡಿ- ಕಸಾಸ ಸಮ್ಮೇಳನಾಧ್ಯಕ್ಷೆ ಭುವನೇಶ್ವರಿ ಮೇಲಿನಮಠ
ವಿಜಯಪುರ: ಕನ್ನಡ ಭಾಷೆಯಲ್ಲಿ(Kannada Language) ವೃತ್ತಿಪರ ಕೋರ್ಸುಗಳನ್ನು(Professional Courses) ಸೃಷ್ಠಿಸಿ ಶೇ. 5 ರಷ್ಯು ಉದ್ಯೋಗಳನ್ನು(Jobs) ಕನ್ನಡ ಮಾಧ್ಯಮದವರಿಗೆ(Kannada Medium) ಉದ್ಯೋಗದಲ್ಲಿ ಮೀಸಲಾತಿ(Job Reservation) ನೀಡಬೇಕು. ಈ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ವಿಜಯಪುರ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ಭುವನೇಶ್ವರಿ ಮೇಲಿನಮಠ(ಮಲ್ಲಿಕಾರ್ಜುನಮಠ)(Bhuvaneshwari Melinamath) ಹೇಳಿದ್ದಾರೆ. ವಿಜಯಪುರದಲ್ಲಿ ಆರಂಭವಾಗಿರುವ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಕ್ಷರ ಭಾಷಣ ಮಾಡಿದ ಕಂಪ್ಯೂಟರ ಕನ್ನಡತಿ ಎಂದೇ ಹೆಸರಾಗಿರುವ ಅವರು, ಮಕ್ಕಳನ್ನು ಬಾಲ್ಯದಿಂದಲೇ ಆಂಗ್ಲ […]