ಧರ್ಮದ ಕುರಿತು ಸಂಘ ಪರಿವಾರ, ಬಿಜೆಪಿಯವರು ನೀಡುವ ಪ್ರಚೋದನೆಗೆ ಒಳಗಾಗಬಾರದು ಎಂದು ಅಲ್ಪಸಂಖ್ಯಾತರಿಗೆ ಕರೆ ನೀಡಿದ ಎಸ್. ಎಂ. ಪಾಟೀಲ ಗಣಿಹಾರ
ವಿಜಯಪುರ: ಧರ್ಮದ ವಿಚಾರದಲ್ಲಿ(Religion Issue) ಸಂಘ ಪರಿವಾರ(Sangha Pariwar) ಮತ್ತು ಬಿಜೆಪಿಯವರು ನೀಡುವ ಪ್ರಚೋದನೆಗೆ(Provocation) ಒಳಗಾಗಬಾರದು ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ(S M Patil Ganihar) ಮುಸ್ಲಿನರಿಗೆ ಮನವಿ ಮಾಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯ ಮುಗಿಯುವವರೆಗೆ ಸಂಘ ಪರಿವಾರ ಮತ್ತು ಬಿಜೆಪಿ ಮುಸ್ಲಿಮರನ್ನು ಪ್ರಚೋದಿಸಲಿವೆ. ಈ ಹಿನ್ನೆಲೆಯಲ್ಲಿ ಯಾರೂ ಪ್ರಚೋದನೆಗೆ ಒಳಗಾಗಬಾರದು. ಸಂವಿಧಾನದ ಮೇಲೆ ವಿಶ್ವಾಸವಿಟ್ಟು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. […]
ಧ್ವನಿವರ್ಧಕಗಳ ಬಳಕೆ ಮಾನದಂಡ ಎಲ್ಲ ಸಮುದಾಯದವರಿಗೂ ಒಂದೇ ಆಗಿರಲಿ- ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ
ವಿಜಯಪುರ: ಆಜಾಂ(Azan) ಹೆಸರಿನಲ್ಲಿ(Name) ಧ್ವನಿವರ್ಧಕಗಳ(Loud Speakers) ಬಳಕೆ(Use) ಕುರಿತು ಸರಕಾರ(Government) ಅನುಸರಿಸುತ್ತಿರುವ ಮಾನದಂಡ ಎಲ್ಲ ಸಮುದಾಯದವರ ಲೌಡ್ ಸ್ಪೀಕರ್ ಬಳಕೆಗೂ ಅನ್ವಯಿಸಬೇಕು ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆಯೇರಿಕೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಮುಖಂಡರು ವಿನಾಕಾರಣ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು. ಧ್ವನಿವರ್ಧಕಗಳಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದ್ದರೆ ಯಾವುದೇ ಧರ್ಮದವರಾಗಲಿ ಲೌಡ್ ಸ್ಪೀಕರ್ ಧ್ವನಿಯನ್ನು ಕಡಿಮೆ ಮಾಡುವ ಮೂಲಕ ಸಹಬಾಳ್ವೆ […]