MB Patil: ಪಠ್ಯಪುಸ್ತಕ ಪರಿಷ್ಕ ರಣೆ ರದ್ದು ಪಡಿಸಲಿ- ವಿಪ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಗೆಲುವು ಖಚಿತ ಎಂ. ಬಿ. ಪಾಟೀಲ
ವಿಜಯಪುರ: ಕೇವಲ ಪಠ್ಯ ಪುಸ್ತಕ+Syllabus) ಪರಿಷ್ಕರಣೆ ಸಮಿತಿ ವಿಸರ್ಜನೆ ಮಾತ್ರ ಸಾಲದು. ಪರಿಷ್ಕರಣೆ ಪಠ್ಯವನ್ನೂ ರದ್ದು(Cancel) ಮಾಡಬೇಕು ಎಂದು ಕೆಪಿಸಿಸಿ(KPCC) ಪ್ರಚಾರ ಸಮಿತಿ ಅಧ್ಯಕ್ಷ(CX campaign Committee Chairman) ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಢಿಯಲ್ಲಿ ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೆರಿ ಮತ್ತು ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನಿಲ ಸಂಖ ಪರ ಪ್ರಚಾರ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೂರ್ಯ ಚಂದ್ರರು ಇರುವವರೆಗೆ ಬಸವಣ್ಣನವರು, […]
Syllabus Arrest: ಪರಿಷ್ಕೃತ ಪಠ್ಯದಲ್ಲಿ ಬಸವೇಶ್ವರರ ಬಗ್ಗೆ ತಪ್ಪು ಮಾಹಿತಿ ನೀಡಲು ಕಾರಣರಾದವರನ್ನು ಬಂಧಿಸಿ- ಸಂಗಮೇಶ ಬಬಲೇಶ್ವರ
ವಿಜಯಪುರ: ಸಮಾಜ ಸುಧಾರಕ(Social Reformer) ಮತ್ತು ತಮ್ಮ ವಚನಗಳ(Vachanas) ಮೂಲಕ ಸಮಾಜದ(Society) ಓರೆಕೋರೆಗಳನ್ನು ತಿದ್ದಿದ ಸಮಾನತೆಯ ಹರಿಕಾರ ಬಸವಣ್ಣನವರ(Basavanna) ಬಗೆಗೆ ಪರಿಷ್ಕೃತ ಪಠ್ಯದಲ್ಲಿ(Syllabus) ತಪ್ಪು ಮಾಹಿತಿಗಳನ್ನು ಅಳವಡಿಸಿ ವಿಶ್ವದ ಬಸವಾಭಿಮಾನಿಗಳ ಆಸ್ಮಿತೆಯನ್ನು ಕೆಣಕಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಬೇಕು ಎಂದು ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೈಜತೆಯನ್ನು ತಿರುಚುವುದು, ನಾಡಿನ ಮಕ್ಕಳ ತಲೆಯಲ್ಲಿ […]
Syllabus Warn: ಪಠ್ಯಪುಸ್ತಕ ವಿಚಾರದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಬಸವಣ್ಣ ಸರ್ಕಲ್ ನಲ್ಲಿ ಉಳಿಯಬೇಕಾಗುತ್ತದೆ- ಡಾ ಮಹಾಂತೇಶ ಬಿರಾದಾರ ಎಚ್ಚರಿಕೆ
ವಿಜಯಪುರ: ಕನ್ನಡದ(Kannada) ಸಾಕ್ಷಿ ಪ್ರಜ್ಞೆಯ ಪ್ರತೀಕದಂತಿರುವ ಬಸವಣ್ಣ(Baavanna), ಕುವೆಂಪುರವರು(Kuvempu) ನೀಡಿದ ಪರಂಪರೆಯನ್ನು(Traditon) ಒಡೆಯುವ ಪ್ರಯತ್ನಗಳನ್ನು ಕೇಶವ ಕೃಪಾ ಪೋಷಿತ ಮಂಡಳಿ ನಡೆಸುತ್ತಿದ್ದಾರೆ ಎಂದು ಚಿಂತಕ ಡಾ. ಮಹಾಂತೇಶ ಬಿರಾದಾರ(Dr Mahantesh Biradar) ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಸವಣ್ಣ ಮತ್ತು ಕುವೆಂಪು ಅವರು ನೀಡಿದ ಪರಂಪರೆಯನ್ನು ಒಡೆಯುವುದಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ವಿಶ್ವಮಾನವ ಕುವೆಂಪು ಇಂದು ಒಕ್ಕಲಿಗೆ ಜನಾಂಗಕ್ಕೆ ಸೀಮಿತವಾಗಿರುವುದು ಇಡೀ ಮನುಕುಲಕ್ಕೆ ನಾಚಿಕೆಗೇಡು. ಆದರೂ ಆ ಸಮುದಾಯದ ಆದಿಚುಂಚನಗಿರಿ ಮಠಾಧೀಶರು ಪ್ರಥಮ […]
Syllabus Issue: ಪಠ್ಯಪುಸ್ತಕ ಸಮಿತಿ ರದ್ದುಪಡಿಸಲು ಆಗ್ರಹಿಸಿ ಬಸವಣ್ಣನವರ ಜನ್ಮಸ್ಥಳದಲ್ಲಿ ಪ್ರತಿಭಟನೆ
ವಿಜಯಪುರ: ಒಂಬತ್ತನೇ ತರಗತಿಯ(Ninth Standard) ಪಠ್ಯದಲ್ಲಿ(Syllabus) ಅಣ್ಣ ಬಸವಣ್ಣನವರನ್ನು(Anna Basavanna) ವೈದಿಕ ಗೊಳಿಸಲಾಗಿದೆ ಎಂದು ಆರೋಪಿಸಿ ಮತ್ತು ಪಠ್ಯಪುಸ್ತಕ ಸಮಿತಿ ರದ್ದು(Cancel) ಮಾಡುವಂತೆ ಒತ್ತಾಯಿಸಿ ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ(Basavanadu Bagewadi) ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಂಕರಗೌಡ ಬಿರಾದಾರ ಮಾತನಾಡಿದರು. ಬಸವಣ್ಣನವರನ್ನು ವೀರಶೈವರನ್ನಾಗಿ ಚಿತ್ರಿಸಿದ್ದು ಖಂಡನೀಯ. ಬಸವಣ್ಣನವರು […]
No Groupism: ಬಿಜೆಪಿಯಲ್ಲಿ ಗುಂಪುಗಾರಿಕೆಯಿಲ್ಲ ಬಿಜೆಪಿ ಸೇರ್ಪಡೆ ಅಸಮಧಾನ ವ್ಯಕ್ತಪಡಿಸಿಲ್ಲ ಎಂದ ಚಿವ ಎಂಟಿಬಿ ನಾಗರಾಜ
ವಿಜಯಪುರ: ಪಠ್ಯಪುಸ್ತದಲ್ಲಿ(Syllabus) ಹೆಗ್ಡೆವಾರ(Hegdewar) ಭಾಷಣ (Speech) ಸೇರ್ಪಡೆಗೆ ವಿರೋಧ ವಿಚಾರ ಕುರಿತು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು(CM and Education Minister) ತೀರ್ಮಾನ ಮಾಡಲಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ(MTB Nagaraj) ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಕುರಿತು ಸಿಎಂ ಮತ್ತು ಶಿಕ್ಷಣ ಸಚಿವರು ಅಂತಿಮ ತೀರ್ನಾನ ಮಾಡುತ್ತಾರೆ ಎಂದು ಹೇಳಿದರು. ಬಿಜೆಪಿಯಲ್ಲಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿ. ಎಲ್. ಸಂತೋಷ ಮಧ್ಯೆ ಗುಂಪುಗಾರಿಕೆ ನಡೆಯುತ್ತಿದೆ ಎಂಬುದರ ಕುರಿತು ಪ್ರತಿಕ್ರಿಯೆ […]
ಈ ಸಲ ಪಠ್ಯಕ್ರಮ ಸ್ವಲ್ಪ ಮಾಡಿಫೈ ಮಾಡುತ್ತೇವೆ- ಬದಲಾಯಿಸಲ್ಲ ಎಂದ ಶಿಕ್ಷಣ ಸಚಿವ ಬಿ. ಸಿ. ನಾಗೇಶ
ವಿಜಯಪುರ: ಈ ಬಾರಿ ಪಠ್ಯಕ್ರಮದಲ್ಲಿ(Syllabus) ಸ್ವಲ್ಪ ಮಾಡಿಫೈ(Modify) ಮಾಡುತ್ತೇವೆ. ಬದಲಾವಣೆ ಮಾಡಲ್ಲ(No Change) ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ. ಸಿ. ನಾಗೇಶ(Educaiton Minister B C Nagesh) ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣವನ್ನು ಹೆಚ್ಚಿಸಬೇಕು ಎಂಬ ವಿಚಾರ ಇದೆ. ಈ ಹಿಂದೆ ಶಾಲೆಗಳಲ್ಲಿ ನೈತಿಕ ಶಿಕ್ಷಣದ ತರಗತಿಗಳು ನಡೆಯುತ್ತಿದ್ದವು. ರಾಮಾಯಣ, ಮಹಾಭಾರತ, ಮಹಾತ್ಮಾ ಗಾಂಧಿ ಅವರ ಬಗ್ಗೆ ಪಾಠಗಳನ್ನು ಹೇಳಿಕೊಡಲಾಗುತ್ತಿತ್ತು. […]