Ukraine Students: ಪೋಷಕರಿಂದ ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಆಕ್ರೋ಼ಶ- ಯಾಕೆ ಗೊತ್ತಾ?
ವಿಜಯಪುರ: ರಷ್ಯಾ ಸಮರ ಸಾರಿದ ಹಿನ್ನೆಲೆಯಲ್ಲಿ ಉಕ್ರೇನಿನಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಈಗಾಗಾಲೇ ತಾಯ್ನಾಡಿಗೆ ಮರಳಿದ್ದಾರೆ. ಇವದನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನ ತಮಗೆಲ್ಲ ಗೊತ್ತೆ ಇದೆ. ಅಂದು ಅತಂತ್ರರಾಗಿ ಭಾರತಕ್ಕೆ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬಸವ ನಾಡು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಕೇಂದ್ರ ಅಧ್ಯಯನ ಮಾಡಿಕೊಡುವ ಮೂಲಕ ಈ ರೀತಿ ಸ್ಪಂದಿಸಿದ […]
ಯುದ್ಧ ಪೀಡಿತ ಉಕ್ರೇನಿನಿಂದ ವಾಪಸ್ಸಾದ ಬಸವ ನಾಡಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದ ಎಂ. ಬಿ. ಪಾಟೀಲ
ವಿಜಯಪುರ: ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ. ಬಿ. ಪಾಟೀಲ(M B Patil) ಇತ್ತೀಚೆಗಷ್ಟೇ ಇಬ್ಬರು ಎಂಬಿಬಿಎಸ್ ಮತ್ತು ಓರ್ವ ಬಿಎಎಂಎಸ್ ವಿದ್ಯಾರ್ಥಿಗಳು(MBBS Students) ಪ್ರವೇಶ ಮತ್ತು ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ನೆರವಿನ ಸಹಾಯ ಹಸ್ತ ಚಾಚಿದ್ದರು. ಈಗ ಇದೇ ಎಂ. ಬಿ. ಪಾಟೀಲ ಮತ್ತೋಂದು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಯುದ್ಧ ಪೀಡಿತ(War Hit) ಉಕ್ರೇನಿನಿಂದ ಮರಳಿರುವ(Ukraine Returned) ವಿಜಯಪುರ ಜಿಲ್ಲೆಯ 16 ಜನ ವೈದ್ಯಕೀಯ ವಿದ್ಯಾರ್ಥಿಗಳಿಗೆ(Medical Students) ನೆರವಿಗೆ […]
ಯುದ್ಧಭೂಮಿಯಿಂದ ಸುರಕ್ಷಿತವಾಗಿ ಬಸವ ನಾಡಿಗೆ ಮರಳಿದ ಕೊನೆಯ ನಾಲ್ಕು ವಿದ್ಯಾರ್ಥಿಗಳು- ಅಮನ್ ಮನೆಯಲ್ಲಿ ಸಂಭ್ರಮ
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡಿನ ಒಟ್ಟು 16 ವಿದ್ಯಾರ್ಥಿಗಳಲ್ಲಿ ಕೊನೆಯ ನಾಲ್ಕು ಜನ ವಿದ್ಯಾರ್ಥಿಗಳು ರಾತ್ರಿ ವಿಜಯಪುರ ತಲುಪಿದ್ದಾರೆ. ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ಮಂಗಳವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನಿಂದ ಬೆಳಿಗ್ಗೆ ಹೊರಟ […]
ಉಕ್ರೇನಿನಲ್ಲಿ ಬಾಕಿ ಉಳಿದಿದ್ದ ಬಸವ ನಾಡಿನ ನಾಲ್ಕು ಜನ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮನ
ಬೆಂಗಳೂರು: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ವಿಜಯಪುರ ಜಿಲ್ಲೆಯ(Vijayapura District) ಉಳಿದ(Remaining) ನಾಲ್ಕು ಜನ ವಿದ್ಯಾರ್ಥಿಗಳು(Four Students) ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸೋಮವಾರ ರಾತ್ರಿ ರೋಮೆನಿಯಾದಿಂದ ಹೊರಟಿದ್ದ ವಿಜಯಪುರ ನಗರದ ನಗರದ ಆದರ್ಶ ನಗರದ ಅಮನ ಧರ್ಮರಾಯ ಮಮದಾಪುರ, ಮಾನಸಾ ರೆಸಿಡೆನ್ಸಿಯ ಹರ್ಷ ವಿದ್ಯಾಧರ ನ್ಯಾಮಗೊಂಡ, ತಾಳಿಕೋಟೆಯ ಮಹ್ಮದ ಇಸ್ಮಾಯಿಲ್ ಉರ್ಫ್ ಅಫ್ತಾಬ್ ನಾಗೂರ ಮತ್ತು ವಿಜಯಪುರ ನಗರದ ಐಶ್ವರ್ಯ ನಗರದ ಕಾರ್ತಿಕ ಕಾಶೀನಾಥ ಇಟ್ಟಂಗಿಹಾಳ ತಡರಾತ್ರಿ ಬೆಂಗಳೂರಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಾಲ್ಕೂ […]
ವಿಶ್ವವಿದ್ಯಾಲಯ ಮಾತ್ರವಲ್ಲ ಖಾರ್ಕಿವ್ ನಲ್ಲಿ ಎಲ್ಲ ನಾಶವಾಗಿದೆ- ಮನೆಗೆ ಬಂದ ಸಂತಸದ ಮಧ್ಯೆಯೂ ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ
ಮಹೇಶ ವಿ. ಶಟಗಾರ ವಿಜಯಪುರ: ಮಗಳು(Daughter) ಮನೆಗೆ ಬಂದಿದ್ದೆ ತಡ ಬಿಗಿದಪ್ಪಿಕೊಂಡ ಪೋಷಕರು(Parents Hugged) ಮುದ್ದಾಡಿ ದೇವರಿಗೆ ಧನ್ಯವಾದ(Thanked God) ತಿಳಿಸಿದರು. ತಮ್ಮ ಮಗಳು ಸುರಕ್ಷಿತವಾಗಿ(Safely) ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi), ನಗರದ ನಾನಾ ಸಮುದಾಯದ(Various Community) ಜನರ ಪ್ರಾರ್ಥನೆಗಳು(Prayers) ಕಾರಣ ಎಂದು ಭಾವುಕರಾದರು. ಇದು ಯುದ್ಧ ಪೀಡಿತ ಉಕ್ರೇನಿನಲ್ಲಿ ಬಂಕರಿನಲ್ಲಿ ಐದು ದಿನ ಆತಂಕದಲ್ಲಿಯೇ ಕಳೆದು ಅಂತೂ ಇಂತೂ ರೈಲು ಹಿಡಿದು ಪೋಲಂಡ ತಲುಪಿ ಸುರಕ್ಷಿತವಾಗಿ ಬಸವ ನಾಡು ತಲುಪಿದ ವೈದ್ಯಕೀಯ […]
ಉಕ್ರೇನಿನಿಂದ ಸುರಕ್ಷಿತವಾಗಿ ಬಸವ ನಾಡು ತಲುಪಿದ ವಿವಿಧಾ ಮಲ್ಲಿಕಾರ್ಜುನಮಠ ಗೆ ನಾಗರಿಕರಿಂದ ಸನ್ಮಾನ
ವಿಜಯಪುರ: ಉಕ್ರೇನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಅತಂತ್ರರಾಗಿದ್ದ ವಿದ್ಯಾರ್ಥಿಗಳಲ್ಲಿ ಓರ್ವರಾದ ವಿಜಯಪುರ ನಗರದ ವಿವಿಧಾ ಮಲ್ಲಿಕಾರ್ಜುನಮಠ ಈಗ ಸುರಕ್ಷಿತವಾಗಿ ತವರು ಜಿಲ್ಲೆ ತಲುಪಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಹುಂಡೈ ಶೋರೂಂ ಬಳಿ ವಿವಿಧಾ ಮಲ್ಲಿಕಾರ್ಜುನಮಠ ತನ್ನ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಮ್ಮ ಜೈವಿಹಾನ ಮಲ್ಲಿಕಾರ್ಜುನಮಠ ಜೊತೆ ಆಗಮಿಸಿದಾಗ ಅಲ್ಲಿದ್ದ ಸ್ನೇಹಿತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸೋಮು ಸೂಳಿಭಾವಿ, ಸ್ನೇಹಿತರಾದ ಸಂಪತ ಕೋವಳ್ಳಿ, ಬಿಜೆಪಿ ಮಾಧ್ಯಮ ಪ್ರಮುಖ […]
ಉಕ್ರೇನ್ ಗಡಿದಾಟಿ ರೊಮೇನಿಯಾ ತಲುಪಿದ ಬಸವ ನಾಡಿನ ಕೊನೆಯ ನಾಲ್ಕು ವಿದ್ಯಾರ್ಥಿಗಳು- ರೋಮೆನಿಯಾದಿಂದ ಭಾರತದತ್ತ ಪಯಣ
ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಲ್ಲಿ(Ukraine) ಸಿಲುಕಿದ್ದ(Stranded) ಬಸವ ನಾಡಿನ(Basava Nadu) ಒಟ್ಟು 16 ಜನರಲ್ಲಿ ಎಲ್ಲರೂ ಈಗ ಸುರಕ್ಷಿತವಾಗಿ(Safely) ಉಕ್ರೇನ್ ಗಡಿ(Border) ದಾಟಿದ್ದಾರೆ. ಒಟ್ಟು 16 ಜನರಲ್ಲಿ ಈಗಾಗಲೇ ಮೂರು ಜನ ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ. ಇನ್ನುಳಿದ 8 ಜನ ಈಗಾಗಲೇ ನವದೆಹಲಿ ಮತ್ತು ಬೆಂಗಳೂರು ತಲುಪಿದ್ದಾರೆ. ಸುರಕ್ಷಿತ ಸ್ಥಳ ತಲುಪಲು ಹರಸಾಹಸಪಟ್ಟ ನಾಲ್ಕು ವಿದ್ಯಾರ್ಥಿಗಳು ಉಕ್ರೇನಿನಲ್ಲಿಯೇ ಸಿಲುಕಿದ್ದ ನಾಲ್ಕು ಜನ ವಿದ್ಯಾರ್ಥಿಗಳಾದ ಅಮನ ಧರ್ಮರಾಯ ಮಮದಾಪುರ, ಹರ್ಷ ವಿದ್ಯಾಧರ ನ್ಯಾಮಗೊಂಡ, ಮೊಹ್ಮದ್ ಇಸ್ಮಾಯಿಲ್ ಉರ್ಫ್ ಅಫ್ತಾಬ್ […]
ಉಕ್ರೇನಿನಿಂದ ಬೆಂಗಳೂರಿಗೆ ಬಂದ ಬಸವ ನಾಡಿನ ವಿವಿಧಾ ಮಲ್ಲಿಕಾರ್ಜುನಮಠ
ಬೆಂಗಳೂರು: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡು ವಿಜಯಪುರದ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಬೆಂಗಳೂರು ತಲುಪಿದ್ದಾರೆ. ಯುದ್ಧ ಪೀಡಿತ ಪೂರ್ವ ಉಕ್ರೇನಿನ ಖಾರ್ಕಿವನಲ್ಲಿ ಬಂಕರ್ ನಲ್ಲಿ ರಕ್ಷಣೆ ಪಡೆದಿದ್ದ ವಿವಿಧಾ ಮಲ್ಲಿಕಾರ್ಜುನಮಠ ಪೊಲಂಡ ಮೂಲಕ ರವಿವಾರ ನವದೆಹಲಿಗೆ ಆಗಮಿಸಿದ್ದರು. ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವಿವಿಧಾ ಮಲ್ಲಿಕಾರ್ಜುನಮಠ ಅವರನ್ನು ತಂದೆ ಅಲ್ಲನಪ್ರಭು ಮಲ್ಲಿಕಾರ್ಜುನಮಠ, ತಾಯಿ ಭುವನೇಶ್ವರಿ, ತಮ್ಮ ಜೈವಿಹಾನ, ಸೋದರ ಮಾವ ಬಸವರಾಜ ಮೇಲಿನಮಠ ಮುಂತಾದವರು ಸ್ವಾಗತಿಸಿ ಬರಮಾಡಿಕೊಂಡರು. ಮಗಳ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮನದಿಂದ ತಾಯಿ ಭುವನೇಶ್ವರಿ […]
ಉಕ್ರೇನಿನನಿಂದ ವಿಜಯಪುರ ಜಿಲ್ಲೆಯ 10 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್, 6 ಜನ ಇನ್ನೂ ಬರಬೇಕಿದೆ- ಡಿಸಿ ಪಿ ಸುನಿಲಕುಮಾರ
ವಿಜಯಪುರ: ಯುದ್ಧಪೀಡಿತ ಯುಕ್ರೇನಿನಲ್ಲಿ ಸಿಲುಕಿದ್ದ ವಿಜಯಪುರ ಜಿಲ್ಲೆಯ ಒಟ್ಟು 16 ವಿದ್ಯಾರ್ಥಿಗಳಲ್ಲಿ 10 ಜನರು ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನಿಲಕುಮಾರ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಇಬ್ಬರು ವಿದ್ಯಾರ್ಥಿಗಳು ಬುಡಾಪೆಸ್ಟ್ ವಿಮಾನ ನಿಲ್ದಾಣದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ನಾಲ್ಕು ಜನ ವಿದ್ಯಾರ್ಥಿಗಳು ಉಕ್ರೇನಿನಿಂದ ರೊಮೇನಿಯಾ ಗಡಿಯತ್ತ ಪ್ರಯಾಣ ಬೆಳೆಸಿದ್ದಾರೆ. ಕೆಲವೇ ಗಂಟೆಗಳಲ್ಲಿ ರೊಮೇನಿಯ ತಲುಪಲಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.
ಯುದ್ಧ ಪೀಡಿತ ಉಕ್ರೇನಿನಿಂದ ಬಸವ ನಾಡಿಗೆ ಬಂದ ಮಗನನ್ನು ದೃಷ್ಠಿ ತೆಗೆದು ಸ್ವಾಗತಿಸಿದ ಪೋಷಕರು
ವಿಜಯಪುರ: ಯುದ್ಧ ಪೀಡಿತ ಉಕ್ರೇನಿನಲ್ಲಿ(War Hit Ukraine) ಇನ್ನೂ ಹಲವಾರು ಭಾರತೀಯರು ಸಿಲುಕಿರುವ(Stranded) ಆತಂಕದ ಮಧ್ಯೆಯೇ ಉಕ್ರೇನಿನಿಂದ ವೈದ್ಯಕೀಯ ವಿದ್ಯಾರ್ಥಿಯೋರ್ವ(Medical Student) ಸುರಕ್ಷಿತವಾಗಿ(Safe) ತಾಯ್ನಾಡು ಬಸವ ನಾಡು(Basava Nadu) ತಲುಪಿದ್ದಾನೆ(Returned). ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್ ನಿಂದ ವಾಪಸ್ಸಾಗಿ ಸುರಕ್ಷಿತವಾಗಿ ಮನೆ ಸೇರಿದ್ದಾನೆ. ಉಕ್ರೇನ್ ನ ಪಶ್ಚಿಮ ಭಾಗದಲ್ಲಿದ್ದ ಸಿದ್ದು ಪೂಜಾರಿ ಗ್ರಾಮಕ್ಕೆ ಬರುತ್ತಿದ್ದಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಾರ ಹಾಕಿದ ಪೋಷಕರು ಮತ್ತು ಸಂಬಂಧಿಕರು […]