ಹೋಳಿ ಹಬ್ಬದ ವಿಶೇಷ: ಬಸವ ನಾಡಿನ ಪರಡಿ ತುಂಬುವ ಕಾರ್ಯಕ್ರಮ
ವಿಜಯಪುರ: ಬಸವ ನಾಡು(Basavanadu) ವಿಜಯಪುರ(Vijayapura) ಜಿಲ್ಲೆ ತರಹೇವಾರಿ+Unique) ಸಂಸ್ಕೃತಿ(Culture), ಪರಂಪರೆ(Tradition) ಮತ್ತು ಪುರಾತನ ಆಚರಣೆಗಳಿಗೆ(Celebration) ಹೆಸರುವಾಸಿಯಾಗಿದೆ. ಅದರಲ್ಲೂ ಹೋಳಿ ಹಬ್ಬ ಬಂತೆಂದರೆ ಸಾಕು. ಈ ಭಾಗದಲ್ಲಿ ಜಾತ್ಯತೀತವಾಗಿ ಜನ ಸಾಮರಸ್ಯದಿಂದ ಆಚರಣೆಯಲ್ಲಿ ತೊಡಗುತ್ತಾರೆ. ಹೋಳಿ ಹುಣ್ಣಿಮೆಯ ದಿನ ಕಾಮ ದಹನ ಮಾಡುವ ಮೂಲಕ ಅಂದೃ ಮನುಷ್ಯನ ಅರಿಷಡ್ವರ್ಗ ಗುಣಗಳಲ್ಲಿ ಒಂದಾದ ಕಾಮಕ್ಕೆ ಕಾಮಣ್ಣನ ಮೂರ್ತಿ ರೂಪ ನೀಡಿ ದಹಿಸುತ್ತಾರೆ. ಅಷ್ಟೇ ಅಲ್ಲ, ಹಿಂದೂಗಳ ಪಾಲಿಗೆ ಹೊಸ ವರ್ಷ ಯುಗಾದಿಯ ಸ್ವಾಗತಕ್ಕಾಗಿ ಹೋಳಿ ಹುಣ್ಣಿಮೆ ಪೂರ್ವ ತಯಾರಿ ಎಂದರೆ […]