DC Journalism: ಟಿ ಆರ್ ಪಿ, ಪ್ರಸರಣ ಸಂಖ್ಯೆಯನ್ನು ಹೆಚ್ಚಿಸಲು ಸುದ್ದಿಗಳ ವೈಭವೀಕರಣ ಸಲ್ಲದು- ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ
ವಿಜಯಪುರ: ಟಿ ಆರ್ ಪಿ ಮತ್ತು ಪ್ರಸರಣ ಸಂಖ್ಯೆ ಹೆಚ್ಚಿಸಲು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಸುದ್ದಿಗಳ ವೈಭವೀಕರಣ ಮಾಡಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕಿವಿಮಾತು ಹೇಳಿದ್ದಾರೆ. ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆ, ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ರು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಲೇಖನಿ ಖಡ್ಗಕ್ಕಿಂತ ಹರಿತವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿವೆ. ಸಾರ್ವಜನಿಕರ ಕಣ್ಣು ಮತ್ತು ಕಿವಿಯಾಗಿ ಪತ್ರಿಕೆಗಳು ಕೆಲಸ ಮಾಡುತ್ತಿವೆ. ಸರಕಾರದ ಲೋಪದೋಷಗಳನ್ನು […]
Street Business: ವಿಜಯಪುರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಭ್ರಮಾಚರಣೆಯ ಸ್ವನಿಧಿ ಮಹೋತ್ಸವ: ವಿಜಯಪುರದಲ್ಲಿ ಯಶಸ್ವಿ
ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ, ಐತಿಹಾಸಿಕ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಮುಖ ನಗರವಾಗಿ ಆಯ್ಕೆಯಾದ, ಐತಿಹಾಸಿಕ ಹಿನ್ನೆಲೆಯ ವಿಜಯಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೌಶಲಾಭಿವೃದ್ಧಿ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಸ್ವನಿಧಿ ಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕೇಂದ್ರ ಸರಕಾರದ ಮಹತ್ವದ ಈ ಸ್ವನಿಧಿ ಮಹೋತ್ಸವಕ್ಕೆ ರಾಷ್ಟ್ರ ಮಟ್ಟದ 75 ನಗರಗಳು ಹಾಗೂ ಕರ್ನಾಟಕ ರಾಜ್ಯ ಮಟ್ಟದ ಮೂರು ನಗರಗಳ ಪೈಕಿ ವಿಜಯಪುರ ನಗರ ಕೂಡ ಆಯ್ಕೆಯಾಗಿದ್ದರಿಂದ ನಗರದ ಕಂದಗಲ್ ಶ್ರೀ […]
BJP Mutalik: ಬಿಜೆಪಿ, ಪಿಎಫ್ಐ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ ಮುತಾಲಿಕ್ ಕಾಂಗ್ರೆಸ್ ಹೇಳಿಕೆಗೆ ಬೆಂಬಲ ನೀಡಿದ್ದೇಕೆ ಗೊತ್ತಾ?
ವಿಜಯಪುರ: ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪ ಶೇ. 100 ರಷ್ಟು ಸತ್ಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದ್ದಾರೆ. ವಿಜಯಪುರದಲ್ಲಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೆರೂರು ಕೋಮು ಗಲಭೆ ಸಂಬಂಧ ಬಂಧಿತರಾಗಿರುವ ಆರೋಪಿಗಳನ್ನು ಭೇಟಿ ಮಾಡಿದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ಸಿನ ಮುಸ್ಲಿಂ ಓಟ್ ಬ್ಯಾಂಕ್ ಒಡೆಯೋದು ಎಸ್ ಡಿ ಪಿ ಐ ಪ್ಲ್ಯಾನ್ […]
Congress Protest: ಕೇಂದ್ರದಿಂದ ಇಡಿ ಮೂಲಕ ಸೋನಿಯಾ ಗಾಂಧಿಗೆ ಕಿರುಕುಳ ಆರೋಪ- ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ವಿಜಯಪುರ: ಕೇಂದ್ರ ಸರಕಾರ ಇಡಿ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ವಿಜಯಪುರ ನಗರದಲ್ಲಿ ಗಾಂಧಿಚೌಕಿನನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ನಡೆಯನ್ನು ಖಂಡಿಸಿದರು. ನಂತರ ಗಾಂಧಿ ಚೌಕಿನಿಂದ ಅಂಬೇಡ್ಕರ್ ಚೌಕ್ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ […]
BJP Kuchabal: ಪ್ರತಿಪಕ್ಷಗಳು ಉಚಿತ ಯೋಜನೆ ಘೋಷಣೆ ಮಾಡಿ ಜನರ ಬಲ ಕುಂದಿಸುತ್ತವೆ- ಆರ್. ಎಸ್. ಪಾಟೀಲ ಕೂಚಬಾಳ
ವಿಜಯಪುರ: ಪ್ರತಿಪಕ್ಷಗಳು ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಜನರ ಬಲವನ್ನು ಕುಂದಿಸುವ ಕೆಲಸ ಮಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗುರಿ ಹೊಂದಿದೆ ಎಂದು ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಹೇಳಿದ್ದಾರೆ. ವಿಜಯಪುರದಲ್ಲಿ ನಡೆದ ಬಿಜೆಪಿ ಜಿಲ್ಲಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತವಾಡಿದರು. ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳು ಆಳ್ವಿಕೆ ನಡೆಸಿದ ರಾಜ್ಯಗಳಲ್ಲಿ ಕೇವಲ ಚುನಾವಣೆ ದೃಷ್ಠಿಕೋನದಿಂದ ಉಚಿತ ಯೋಜನೆಗಳ ದುಂಬಾಲು ಬಿದ್ದು ಆ ರಾಜ್ಯಗಳನ್ನು […]
Monsoon Festivals: ವಿಜಯಪುರ ಜಿಲ್ಲೆಯಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ ಗೋಂಧಳಿ ಸಮಾಜದ ದುರ್ಗಾದೇವಿ ಜಾತ್ರೆ ಬಲು ಅಂದ
ವಿಜಯಪುರ: ಮುಂಗಾರು ಆರಂಭವಾದರೆ ಸಾಕು ಬಸವ ನಾಡು ವಿಜಯಪುರದಲ್ಲಿ ಸಾಲು ಸಾಲು ಹಬ್ಬಗಳು ಒಂದೊಂದಾಗಿಯೇ ಬರುತ್ತವೆ. ಇಲ್ಲಿನ ಜನರೂ ಅಷ್ಟೇ, ಈ ಹಬ್ಬಗಳನ್ನು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸುತ್ತಾರೆ. ಬಹುಷಃ ಇಡೀ ಕರ್ನಾಟಕದಲ್ಲಿ ವರ್ಷವಿಡೀ ಪ್ರತಿದಿನ ಒಂದಿಲ್ಲೋಂದು ಊರಲ್ಲಿ ಆಚರಣೆ, ಉತ್ಸವ, ಜಾತ್ರೆ ನಡೆಯುವ ಜಿಲ್ಲೆ ಎಂದರೆ ಅದು ವಿಜಯಪುರ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಇಲ್ಲಿ ಆಚರಣೆಗಳೂ ನಡೆಯುವೆ. ಆಷಾಢ ಮಾಸ ಆರಂಭವಾಗುತ್ತಿದ್ದಂತೆ ದೇವತೆಗಳ ಜಾತ್ರೆಗಳು ಸಾಲು ಸಾಲಾಗಿ ಬರುತ್ತವೆ. ದುರ್ಗಾದೇವಿ, ಮರಗಮ್ಮ, ಹುಲಿಗೆಮ್ಮ, ಕೊಂತೆಮ್ಮ […]
Ukraine Students: ಪೋಷಕರಿಂದ ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಆಕ್ರೋ಼ಶ- ಯಾಕೆ ಗೊತ್ತಾ?
ವಿಜಯಪುರ: ರಷ್ಯಾ ಸಮರ ಸಾರಿದ ಹಿನ್ನೆಲೆಯಲ್ಲಿ ಉಕ್ರೇನಿನಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಈಗಾಗಾಲೇ ತಾಯ್ನಾಡಿಗೆ ಮರಳಿದ್ದಾರೆ. ಇವದನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನ ತಮಗೆಲ್ಲ ಗೊತ್ತೆ ಇದೆ. ಅಂದು ಅತಂತ್ರರಾಗಿ ಭಾರತಕ್ಕೆ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬಸವ ನಾಡು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಕೇಂದ್ರ ಅಧ್ಯಯನ ಮಾಡಿಕೊಡುವ ಮೂಲಕ ಈ ರೀತಿ ಸ್ಪಂದಿಸಿದ […]
SP Life: ವೃತ್ತಿ, ವೈಯಕ್ತಿಕ ಜೀವನದ ಮಧ್ಯೆ ಸಮತೋಲನವಿದ್ದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ- ಎಸ್ಪಿ ಎಚ್. ಡಿ. ಆನಂದಕುಮಾರ
ವಿಜಯಪುರಛ ಜೀವನ ಶಾಶ್ವತವಲ್ಲ. ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಕಾಪಾಡಿಕೊಂಡಾಗ ಮಾತ್ರ ಯಶಸ್ವಿ ಜೀವನ ಸಾಗಿಸಲು ಸಾಧ್ಯ ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಹೇಳಿದ್ದಾರೆ. ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲಸ ಮತ್ತು ವೈಯಕ್ತಿಕ ಜೀವನದ ಮಧ್ಯೆ ಕಾಯ್ದುಕೊಳ್ಳಬೇಕು. ಬಹಳಷ್ಟು ಹೆಸರಾಂತ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳು ಒತ್ತಡ, ಖಿನ್ನತೆ, ಕೌಟುಂಬಿಕ […]
Students Exhibition: ಜು. 16ರ ರಂದು ಬಿ ಎಲ್ ಡಿ ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್- ಡಾ. ವಿ. ಜಿ. ಸಂಗಮ
ವಿಜಯಪುರ: ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಪ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜು. 16 ರಂದು ಒಪನ್ ಡೆ ಪ್ರಾಜೆಕ್ಟ್ ಎಕ್ಸಿಬಿಷನ್ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕಾಲೇಜಿನ ನಾನಾ ವಿಷಯಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸೃಜನಶಿಲತೆ ಮತ್ತು ನಾವಿನ್ಯತೆಯ ಅವಿಷ್ಕಾರದೊಂದಿಗೆ ಸಿದ್ಧಪಡಿಸಲಾದ ಪ್ರಾಜೆಕ್ಟ್ ಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು, ಈ […]
Krishna Puje: ಉತ್ತರ ಕರ್ನಾಟಕದ ಜೀವನಾಡಿ- ಕೃಷ್ಣಾ ಸೇರಿ ಪಂಚ ನದಿಗಳ ಉಗಮಸ್ಥಾನ ಮಹಾಬಳೇಶ್ವರದಲ್ಲಿ ಪೂಜೆ ಸಲ್ಲಿಸಿದ ಬಸವ ನಾಡಿನ ರೈತರು
ಮಹೇಶ ವಿ. ಶಟಗಾರ ವಿಜಯಪುರ: ಕೃಷ್ಣಾ ಉತ್ತರ ಕರ್ನಾಟಕದ ಜೀವನದಿ. ಉತ್ತರ ಕರ್ನಾಟಕದಲ್ಲಿ ಮಳೆಯಾಗದಿದ್ದರೂ ಈ ನದಿ ರೈತರು, ಜನಜಾನುವಾರುಗಳಿಗೆ ಪ್ರತಿವರ್ಷ ನೀರೊದಗಿಸುತ್ತದೆ. ಈ ಬಾರಿಯೂ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಅಷ್ಟಕ್ಕಷ್ಟೆಯಾಗಿದ್ದರೂ, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ತಮಗೆ ಜೀವಜಲ ನೀಡುವ ಕೃಷ್ಣಾ ನದಿಯ ಉಗಮಸ್ಥಾನ ಮಹಾರಾಷ್ಟ್ರದಲ್ಲಿ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನತಾದರು ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ […]